- Home
- Entertainment
- TV Talk
- ಕರ್ನಾಟಕದ ಜನ ಯಾವುದಕ್ಕೂ ಕಾದಿದ್ದು ಚರಿತ್ರೆಯಲ್ಲೇ ಇಲ್ಲ: ಬಿಗ್ ಬಾಸ್ ಶೋಗಾಗಿ ಕಾಯ್ತಾರೆ; ಕಿಚ್ಚ ಸುದೀಪ್ ಫಸ್ಟ್ ಪ್ರೋಮೋ ಔಟ್
ಕರ್ನಾಟಕದ ಜನ ಯಾವುದಕ್ಕೂ ಕಾದಿದ್ದು ಚರಿತ್ರೆಯಲ್ಲೇ ಇಲ್ಲ: ಬಿಗ್ ಬಾಸ್ ಶೋಗಾಗಿ ಕಾಯ್ತಾರೆ; ಕಿಚ್ಚ ಸುದೀಪ್ ಫಸ್ಟ್ ಪ್ರೋಮೋ ಔಟ್
ಕಿಚ್ಚ ಸುದೀಪ್ ನಿರೂಪಣೆಯ ಬಿಗ್ ಬಾಸ್ ಕನ್ನಡ 13ರ ಲಾಂಚ್ ಪ್ರೋಮೋ ಬಿಡುಗಡೆಯಾಗಿದ್ದು, ಕಾರ್ಯಕ್ರಮದ ಕೌಂಟ್‌ಡೌನ್ ಅಧಿಕೃತವಾಗಿ ಆರಂಭವಾಗಿದೆ. ಸೆಪ್ಟೆಂಬರ್ 5ರಿಂದ ಆರಂಭವಾಗಲಿರುವ ಈ ಸೀಸನ್‌ನಲ್ಲಿ ಹೊಸ ಸ್ಪರ್ಧಿಗಳ ಜೊತೆಗೆ ಸಾಮಾನ್ಯ ವ್ಯಕ್ತಿಗೂ ಅವಕಾಶ ನೀಡಲಾಗುತ್ತಿರುವುದು ವಿಶೇಷವಾಗಿದೆ.

ಕನ್ನಡ ಕಿರುತೆರೆಯ (Kannada Television) ಅತ್ಯಂತ ಜನಪ್ರಿಯ ರಿಯಾಲಿಟಿ ಶೋ (Reality Show) ಬಿಗ್ ಬಾಸ್ ಕನ್ನಡ 13 (Bigg Boss Kannada 13) ಅಧಿಕೃತವಾಗಿ ಕೌಂಟ್‌ಡೌನ್ ಆರಂಭಿಸಿದೆ. ಕಾರ್ಯಕ್ರಮದ ನಿರೂಪಕ (Host) ಕಿಚ್ಚ ಸುದೀಪ್ (Kiccha Sudeep) ಅಭಿನಯದ ಮೊದಲ ಲಾಂಚ್ ಪ್ರೋಮೋ (Launch Promo) ಬಿಡುಗಡೆಯಾಗಿದ್ದು, ಕೆಲವೇ ನಿಮಿಷಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ (Social Media) ವೈರಲ್ (Viral) ಆಗಿದೆ.
ಪ್ರೋಮೋದಲ್ಲಿ ‘ನಮಸ್ತೆ ಕರ್ನಾಟಕ, The Bigg Wait is Over!’ ಎಂಬ ಸಾಲಿನೊಂದಿಗೆ ಕಿಚ್ಚ ಸುದೀಪ್ ಎಂಟ್ರಿ ನೀಡಿದ್ದು, ‘ಕರ್ನಾಟಕದ ಜನ ಯಾವತ್ತೂ ಯಾರಿಗೂ ಕಾದಿದ್ದು ಚರಿತ್ರೆಯಲ್ಲೇ ಇಲ್ಲ. ಆದರೆ ವರ್ಷಕ್ಕೆ ಒಂದು ಸಲ ಕಾಯ್ತಾರೆ. ಒಂದೇ ಮನೆ (One House), ಒಂದು ಅವಕಾಶ (One Opportunity), ಕೋಟಿ ಕನಸುಗಳು (Million Dreams)... ಮತ್ತೆ ಶುರು ಮಾಡೋಣ್ವಾ?’ ಎಂಬ ಡೈಲಾಗ್ ವೀಕ್ಷಕರ ಗಮನ ಸೆಳೆದಿದೆ.
ಅಧಿಕೃತ ಮಾಹಿತಿಯಂತೆ ಬಿಗ್ ಬಾಸ್ ಕನ್ನಡ 13 (Bigg Boss Kannada 13) ಸೆಪ್ಟೆಂಬರ್ 5ರಿಂದ ಆರಂಭವಾಗಲಿದೆ. ಇನ್ನೂ ಒಂದು ತಿಂಗಳ ನಂತರ ಮತ್ತೊಮ್ಮೆ ದೊಡ್ಮನೆಯ (Bigg Boss House) ಗಂಟೆ ಮೊಳಗಲಿದ್ದು, ಹೊಸ ಸ್ಪರ್ಧಿಗಳು (Contestants), ಹೊಸ ಟಾಸ್ಕ್‌ಗಳು (Tasks), ಹೊಸ ತಿರುವುಗಳು (Twists) ಹಾಗೂ ಸಾಕಷ್ಟು ಮನರಂಜನೆ (Entertainment) ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿವೆ.
ಕನ್ನಡದ (Kannada) ಅತಿ ದೊಡ್ಡ ರಿಯಾಲಿಟಿ ಶೋ ಎಂದೇ ಹೆಸರು ಪಡೆದಿರುವ ಬಿಗ್ ಬಾಸ್ (Bigg Boss) ಪ್ರತಿ ಸೀಸನ್‌ನಲ್ಲೂ ಡ್ರಾಮಾ (Drama), ಸ್ನೇಹ (Friendship), ಪ್ರೀತಿ (Love), ಸ್ಪರ್ಧೆ (Competition), ಭಿನ್ನಾಭಿಪ್ರಾಯ (Conflict) ಮತ್ತು ಭಾವನಾತ್ಮಕ ಕ್ಷಣಗಳ (Emotional Moments) ಮೂಲಕ ಕೋಟ್ಯಂತರ ವೀಕ್ಷಕರ ಮನ ಗೆದ್ದಿದೆ. ಕಳೆದ ಸೀಸನ್‌ನ ಹೈ-ವೋಲ್ಟೇಜ್ (High Voltage) ಘಟನೆಗಳ ಬಳಿಕ ಈ ಬಾರಿ ಯಾವ ಸೆಲೆಬ್ರಿಟಿಗಳು (Celebrities) ಸ್ಪರ್ಧಿಗಳಾಗಿ ಎಂಟ್ರಿ ಕೊಡಲಿದ್ದಾರೆ ಎಂಬ ಕುತೂಹಲ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.
ಈ ಬಾರಿಯ ಮತ್ತೊಂದು ವಿಶೇಷ ಆಕರ್ಷಣೆ ಕಾಮನ್ ಮ್ಯಾನ್ (Common Man) ಎಂಟ್ರಿ. ಈಗಾಗಲೇ ಸಾಮಾನ್ಯ ಜನರಿಗಾಗಿ ಆಡಿಷನ್ (Audition) ಪ್ರಕ್ರಿಯೆ ಪೂರ್ಣಗೊಂಡಿದ್ದು, ಸಾವಿರಾರು ಅಭ್ಯರ್ಥಿಗಳು ತಮ್ಮ ಪ್ರತಿಭೆಯನ್ನು ತೋರಿಸುವ ವಿಡಿಯೋಗಳನ್ನು ಕಳುಹಿಸಿದ್ದಾರೆ. ಇವರಲ್ಲಿ ಯಾರಿಗೆ ಬಿಗ್ ಬಾಸ್ ಮನೆಯೊಳಗೆ (Bigg Boss House) ಪ್ರವೇಶಿಸುವ ಅದೃಷ್ಟ ಸಿಗಲಿದೆ ಎಂಬುದನ್ನು ಲಾಂಚ್ ದಿನವೇ ಬಹಿರಂಗಪಡಿಸಲಾಗುತ್ತದೆ.
ಪ್ರೋಮೋ ಬಿಡುಗಡೆಯಾದ ಕೆಲವೇ ಹೊತ್ತಿನಲ್ಲಿ ಲಕ್ಷಾಂತರ ವೀಕ್ಷಣೆ (Views) ಹಾಗೂ ಸಾವಿರಾರು ಪ್ರತಿಕ್ರಿಯೆಗಳನ್ನು (Comments) ಪಡೆದುಕೊಂಡಿದ್ದು, #BiggBossKannada13 ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ (Trend) ಆಗುತ್ತಿದೆ. ಮನರಂಜನೆ ಪ್ರಿಯರು ಈಗ ಸೆಪ್ಟೆಂಬರ್ 5ರ ಗ್ರ್ಯಾಂಡ್ ಪ್ರೀಮಿಯರ್ (Grand Premiere)ಗಾಗಿ ಕಾತರದಿಂದ ಕಾಯುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

