Bigg Boss Kannada 12: ಈ ವಾರ ಮನೆಯಿಂದ ಹೊರಗಡೆ ಬರೋ ಘಟಾನುಘಟಿ ಯಾರು?
BBK 12 Updates: ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಈಗಾಗಲೇ 50 ದಿನಗಳು ಕಳೆದಿವೆ. ಈಗ ಮನೆಯಲ್ಲಿ 14 ಸದಸ್ಯರು ಇದ್ದಾರೆ. ಕಳೆದ ವಾರ ಘಟಾನುಘಟಿ ಕಾಕ್ರೋಚ್ ಸುಧಿ ಅವರು ಹೊರಗಡೆ ಬಂದಿದ್ದರು. ಈ ವಾರವೂ ಎಲಿಮಿನೇಶನ್ ಆಗಿದೆ. ಹಾಗಾದರೆ ಈ ವಾರ ಯಾರು ಎಲಿಮಿನೇಟ್ ಆದರು?

ಕಿಚ್ಚನ ಪಂಚಾಯಿತಿ ನಡೆದಿದೆ
ಅಂದಹಾಗೆ ಈ ವಾರ ಶುಕ್ರವಾರವೇ ಕಿಚ್ಚ ಸುದೀಪ್ ಅವರ ಕಿಚ್ಚನ ಪಂಚಾಯಿತಿ ಶೂಟಿಂಗ್ ನಡೆದಿದೆ. ಶನಿವಾರ ಬೆಳ್ಳಂಬೆಳಗ್ಗೆ ಎಪಿಸೋಡ್ ಪ್ರೋಮೋ ಔಟ್ ಆಗಿದೆ. ಅಶ್ವಿನಿ ಗೌಡ ಅವರ ವುಮೆನ್ ಕಾರ್ಡ್ ಡ್ರಾಮಾಕ್ಕೆ ಸುದೀಪ್ ಬೆಂಡೆತ್ತಿದ್ದಾರೆ.
ನಾಮಿನೇಟ್ ಆದವರು ಯಾರು?
ಅಶ್ವಿನಿ ಗೌಡ, ಜಾಹ್ನವಿ, ಧ್ರುವಂತ್, ಮಾಳು ನಿಪನಾಳ, ರಕ್ಷಿತಾ, ಸ್ಪಂದನಾ ಸೋಮಣ್ಣ, ರಿಷಾ ಗೌಡ, ಸೂರಜ್ ಸಿಂಗ್, ರಾಶಿಕಾ ಶೆಟ್ಟಿ, ಅಭಿಷೇಕ್ ಶ್ರೀಕಾಂತ್ ಅವರು ಈ ವಾರ ನಾಮಿನೇಟ್ ಆಗಿದ್ದರು. ಇವರಲ್ಲಿ ಒಬ್ಬರು ಮನೆಯಿಂದ ಹೊರಗಡೆ ಹೋಗೋದು ಪಕ್ಕಾ.
ಎಲಿಮಿನೇಶನ್‌ನಲ್ಲಿ ಚಮಕ್ ಕೊಟ್ರು
ಒಮ್ಮೊಮ್ಮೆ ಎಲಿಮಿನೇಶನ್ ಎಂದು ಬಿಗ್ ಬಾಸ್ ಚಮಕ್ ಕೊಡ್ತಾರೆ. ಇನ್ನೊಮೆ ಡಬಲ್ ಎಲಿಮಿನೇಶನ್ ಕೂಡ ಆಗುವುದು. ಇನ್ನೊಮ್ಮೆ ಮಿಡ್ ವೀಕ್ ಎಲಿಮಿನೇಶನ್ ಕೂಡ ಇರುವುದು. ರಾತ್ರಿ ಮಲಗಿದ್ದವರನ್ನು ಎಬ್ಬಿಸಿ ಮನೆಗೆ ಕಳಿಸಿದ್ದೂ ಇದೆ. ಈ ವಾರ ಎಲಿಮಿನೇಶನ್ ಅಂತೂ ಆಗಿದೆ ಎನ್ನಲಾಗುತ್ತಿದೆ.
14 ಸದಸ್ಯರಿದ್ದಾರೆ
ಇನ್ನು 55 ದಿನಗಳು ಉಳಿದಿವೆ. ಈಗ ಇರುವ 14 ಸದಸ್ಯರಲ್ಲಿ ಫಿನಾಲೆಯಲ್ಲಿ ಐವರು ಇರುತ್ತಾರೆ. ಹೀಗಾಗಿ ಎಲಿಮಿನೇಶನ್ ಆಗಲೇಬೇಕಿದೆ. ಸದ್ಯ ಘಟಾನುಘಟಿಗಳೇ ಬಿಗ್ ಬಾಸ್ ಮನೆಯಲ್ಲಿದ್ದಾರೆ. ಹೀಗಾಗಿ ಯಾರು ಔಟ್ ಆಗ್ತಾರೆ ಎಂದು ಕಾದು ನೋಡಬೇಕಿದೆ.
ಯಾರು ಎಲಿಮಿನೇಟ್ ಆಗ್ತಾರೆ?
ಅಭಿಷೇಕ್ ಶ್ರೀಕಾಂತ್ ಕ್ಯಾಪ್ಟನ್ ಆಗಿರೋದಿಕ್ಕೆ ಅವರು ಎಲಿಮಿನೇಶನ್‌ನಿಂದ ಪಾರಾಗಿದ್ದಾರೆ. ಸದ್ಯಕ್ಕಂತೂ ಅಶ್ವಿನಿ ಗೌಡ, ಜಾಹ್ನವಿ, ಧ್ರುವಂತ್, ರಾಶಿಕಾ ಶೆಟ್ಟಿ ಅವರು ಹೊರಗಡೆ ಬರೋದಿಲ್ಲ. ಹಾಗಾದರೆ ಉಳಿದವರಲ್ಲಿ ಒಬ್ಬರು ಎಲಿಮಿನೇಟ್ ಆಗ್ತಾರೆ. ಜನರಿಗೆ ಯಾರು ಇಷ್ಟ ಆಗೋದಿಲ್ಲವೋ ಅವರು ಹೊರಬರುತ್ತಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

