- Home
- Entertainment
- TV Talk
- BBK 12: ಆಚೆ ಬಂದ್ರೆ ಫ್ರೆಂಡ್‌ಶಿಪ್ ಉಳಿಯಲ್ಲ, ಈ ಲವ್ವೆಲ್ಲಾ ಕಬ್ಬನ್ ಪಾರ್ಕ್‌ಗೆ ಸೀಮಿತ ಎಂದ Prashanth Sambargi
BBK 12: ಆಚೆ ಬಂದ್ರೆ ಫ್ರೆಂಡ್‌ಶಿಪ್ ಉಳಿಯಲ್ಲ, ಈ ಲವ್ವೆಲ್ಲಾ ಕಬ್ಬನ್ ಪಾರ್ಕ್‌ಗೆ ಸೀಮಿತ ಎಂದ Prashanth Sambargi
ಮಾಜಿ ಬಿಗ್‌ಬಾಸ್ ಸ್ಪರ್ಧಿ ಪ್ರಶಾಂತ್ ಸಂಬರಗಿ, ಬಿಗ್‌ಬಾಸ್ ಮನೆಯೊಳಗಿನ ಸ್ನೇಹ ಮತ್ತು ಪ್ರೀತಿಯ ಸಂಬಂಧಗಳು ಶಾಶ್ವತವಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಸೀಸನ್ 12ರ ಗಿಲ್ಲಿ ನಟ ಮತ್ತು ಕಾವ್ಯಾ ಜೋಡಿಯ ಬಗ್ಗೆ ಮಾತನಾಡುತ್ತಾ, ಮನೆಯಿಂದ ಹೊರಬಂದ ಮೇಲೆ ಈ ಸಂಬಂಧಗಳು ಮುಂದುವರಿಯುವುದಿಲ್ಲ ಎಂದು ಹೇಳಿದ್ದಾರೆ.

ಪ್ರಶಾಂತ್ ಸಂಬರಗಿ
ಕನ್ನಡ ಬಿಗ್‌ಬಾಸ್ ಸೀಸನ್ 8 ಮತ್ತು 9ರ ಸ್ಪರ್ಧಿಯಾಗಿದ್ದ ಪ್ರಶಾಂತ್ ಸಂಬರಗಿ ಸಂದರ್ಶನವೊಂದರಲ್ಲಿ ಆಚೆ ಬಂದ್ರೆ ಫ್ರೆಂಡ್‌ಶಿಪ್ ಉಳಿಯಲ್ಲ, ಈ ಲವ್ವೆಲ್ಲಾ ಕಬ್ಬನ್ ಪಾರ್ಕ್‌ಗೆ ಸೀಮಿತ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸೀಸನ್ 12ರ ಗಿಲ್ಲಿ ನಟ ಮತ್ತು ಕಾವ್ಯಾ ಸ್ನೇಹದ ಕುರಿತು ಮಾತನಾಡುವ ಸಂದರ್ಭದಲ್ಲಿ ಹೊರಗೆ ಬಂದ್ಮೇಲೆ ಯಾವುದೂ ಮುಂದುವರಿಯಲ್ಲ ಎಂದಿದ್ದಾರೆ.
ಮದುವೆ
ನಮ್ಮ ಸೀಸನ್‌ನಲ್ಲಿಯೀ ಅರವಿಂದ್ ಮತ್ತು ದಿವ್ಯಾ ಇದ್ರು. ಐದು ವರ್ಷ ಆಯ್ತು, ಮದುವೆ ಆಗಿದೆಯಾ ಇಲ್ಲ. ಹಾಗೆ ಗಾಯಕ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಜೀವನದಲ್ಲಿ ಏನಾಗ್ತಿದೆ ಅಂತ ಎಲ್ಲರಿಗೂ ಗೊತ್ತಿದೆ. ಹಾಗೆಯೇ ದೀಪಿಕಾ ದಾಸ್-ಶೈನ್ ಶೆಟ್ಟಿ ಇದ್ರು ಎಂದು ಪ್ರಶಾಂತ್ ಸಂಬರಗಿ ಹೇಳಿದರು.
ಕೆಮಿಸ್ಟ್ರಿ
ಬಿಗ್‌ಬಾಸ್ ಮನೆಯಲ್ಲಿ ಅನೇಕ ಕೆಮಿಸ್ಟ್ರಿಗಳು ಬೆಳವಣಿಗೆ ಆಗುತ್ತವೆ. ಆ ಎಲ್ಲಾ ಕೆಮಿಸ್ಟ್ರಿಗಳು ಕೇವಲ ನೂರು ದಿನಕ್ಕೆ ಮಾತ್ರ ಸೀಮಿತವಾಗಿರುತ್ತವೆ. ಒಂದು ಕೆಮಿಸ್ಟ್ರಿ ಆಚೆ ಮತ್ತು ಒಂದು ಸ್ಟುಡಿಯೋದಲ್ಲಿ ಆಗೋದಕ್ಕೆ ತುಂಬಾ ವ್ಯತ್ಯಾಸವಿದೆ. ಬಿಗ್‌ಬಾಸ್ ಮನೆ ಅನ್ನೋದು ಸ್ಟುಡಿಯೋ ಎಂದು ಹೇಳಿದರು.
ಫ್ರೆಂಡ್‌ಶಿಪ್
ಬಿಗ್‌ಬಾಸ್ ಮನೆಯಲ್ಲಿ ರಚನೆಯಾಗುವ ಫ್ರೆಂಡ್‌ಶಿಪ್ ಸಹ ಅಷ್ಟೆ, ನಾವು ಒಬ್ಬರಿಗೊಬ್ಬರು ಸಂಪರ್ಕದಲ್ಲಿರಬಹುದು. ಆ ಸ್ನೇಹ ಮುಂದುವರಿಯುವ ಸಾಧ್ಯತೆಗಳು ಕಡಿಮೆ ಇರುತ್ತವೆ. ಡೀಪ್ ಫ್ರೆಂಡ್‌ಶಿಪ್ ಆಗಬೇಕೆಂದ್ರೆ ಹೊರಗೆ ಅದರೊಂದಿಗೆ ಹೋಗಬೇಕು. ಇಲ್ಲಿ ಉಂಟಾಗುವ ಸ್ನೇಹ ತೇಲಿಕೊಂಡು ಹೋಗುತ್ತೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಇದನ್ನೂ ಓದಿ: BBK 12: ಅಶ್ವಿನಿ ಗೌಡ -ಜಾನ್ವಿ ಸ್ನೇಹಕ್ಕೆ ಕುತ್ತು? Bigg Boss ಮನೆಯಲ್ಲಿ 200 ದಿನ ಕಳೆದ ಸ್ಪರ್ಧಿಯ ವಿಶ್ಲೇಷಣೆ
ನಟ ಮತ್ತು ಕಾವ್ಯಾ ಒಳ್ಳೆಯ ಜೋಡಿ
ಬಿಗ್‌ಬಾಸ್ ಮನೆಯಲ್ಲಿ ಗಿಲ್ಲಿ ನಟ ಮತ್ತು ಕಾವ್ಯಾ ಒಳ್ಳೆಯ ಜೋಡಿ. ಒಬ್ಬರಿಗೊಬ್ಬರು ತಮ್ಮ ವ್ಯಕ್ತಿತ್ವ ಬಿಟ್ಟುಕೊಡದೇ ಚೆನ್ನಾಗಿ ಆಟವಾಡುತ್ತಿದ್ದಾರೆ. ಇಬ್ಬರು ಸಹ ಟಾಪ್ 5ನಲ್ಲಿರುವ ಸ್ಪರ್ಧಿಗಳು. ಕಾವ್ಯಾ ಸಹ ಚೆನ್ನಾಗಿ ಆಟವಾಡುತ್ತಿದ್ದಾರೆ. ಅದ್ಯಾವುದು ಲವ್ ಅಲ್ಲ ಅನ್ನೋ ಸ್ಪಷ್ಟನೆಯಲ್ಲಿದ್ದಾರೆ ಎಂದರು.
ಇದನ್ನೂ ಓದಿ: BBK 12: ಕೋಲು ಕೊಟ್ಟು ಹೊಡೆಸಿಕೊಂಡ 'ರಜತ್' ಪೇಮೆಂಟ್ ತೊಗೊಂಡು ಮಾತಾಡಿದ್ದು ಎಂದ ಮಾಜಿ ಸ್ಪರ್ಧಿ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

