ಯಜಮಾನ ಸೀರಿಯಲ್ ನಟಿ ಮಧುಶ್ರೀ, ರಾಘು ಮೇಲೆ ಸೌತೆಕಾಯಿ ಪ್ರಯೋಗ ಮಾಡಿದ್ದಾರೆ. ಸೌತೆಕಾಯಿ ಜೊತೆ ಸಕ್ಕರೆ ತಿಂದ ರಾಘು, ರಾಯ್ ರಿಯಾಕ್ಷನ್ ಹೇಗಿತ್ತು ಗೊತ್ತಾ? ಟೆಸ್ಟ್ ಮಾಡೋ ಮೊದಲು ಝಾನ್ಸಿ ಪ್ರತಿಕ್ರಿಯೆ ತಿಳಿದ್ಕೊಳ್ಳಿ.

ಸೋಶಿಯಲ್ ಮೀಡಿಯಾದಲ್ಲಿ ಸದ್ಯ ಸೌತೆಕಾಯಿ ಟ್ರೆಂಡ್ (Cucumber trend) ನಡೀತಿದೆ. ಸೌತೆಕಾಯಿ ಜೊತೆ ಸಕ್ಕರೆ ಸೇರಿಸಿ ತಿಂದ್ರೆ ಕಲ್ಲಂಗಡಿ ಹಣ್ಣು ತಿಂದ ಅನುಭವ ಆಗುತ್ತಂತೆ. ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗ್ತಿರುವ ಯಜಮಾನ ಸೀರಿಯಲ್ ಝಾನ್ಸಿ ಅಲಿಯಾಸ್ ಮಧುಶ್ರೀ ಭೈರಪ್ಪ (Madhushree Bhairappa) ಇದನ್ನು ಟೆಸ್ಟ್ ಮಾಡಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಮಧುಶ್ರೀ ಭೈರಪ್ಪ ಸಖತ್ ಆಕ್ಟಿವ್ ಆಗಿದ್ದಾರೆ. ರೀಲ್ಸ್ ಮೂಲಕವೇ ಯಜಮಾನ ಸೀರಿಯಲ್ ನಲ್ಲಿ ನಟಿಸಲು ಛಾನ್ಸ್ ಗಿಟ್ಟಿಸಿಕೊಂಡವರು ಮಧುಶ್ರೀ. ಈಗ ಯಜಮಾನ ಸೀರಿಯಲ್ ಸಕ್ಸಸ್ ಆಗಿ ಓಡ್ತಿದೆ. ಯಜಮಾನ ಸೀರಿಯಲ್ ನಲ್ಲಿ ಝಾನ್ಸಿಯಾಗಿ ನಟಿಸ್ತಿರುವ ಮಧುಶ್ರೀ ಆಕ್ಟಿಂಗ್ ಅಭಿಮಾನಿಗಳಿಗೆ ಇಷ್ಟವಾಗಿದೆ. ಸೆಟ್ ನಲ್ಲಿದ್ದಾಗ ಒಂದಲ್ಲ ಒಂದು ವಿಡಿಯೋ ಮಾಡೋದು ಮಧುಶ್ರೀ ಹವ್ಯಾಸ. ಈಗ ಇನ್ನೊಂದು ವಿಡಿಯೋವನ್ನು ಮಧುಶ್ರೀ ಪೋಸ್ಟ್ ಮಾಡಿದ್ದಾರೆ.

ಸೌತೆಕಾಯಿ ಜೊತೆ ಸಕ್ಕರೆ – ನೀವೂ ಟೇಸ್ಟ್ ಮಾಡಿ :

ಸೌತೆಕಾಯಿ ಹಾಗೂ ಉಪ್ಪು ಸೇರಿಸಿ ತಿನ್ನೋದು ನಮಗೆಲ್ಲ ಗೊತ್ತೇ ಇದೆ. ಆದ್ರೆ ಸೋಶಿಯಲ್ ಮೀಡಿಯಾದಲ್ಲಿ ದಿನಕ್ಕೊಂದು ಹೊಸ ಪ್ರಯೋಗ ನಡೆಯುತ್ತಿರುತ್ತೆ. ಸದ್ಯ ಅನೇಕರು ಸೌತೆಕಾಯಿಗೆ ಉಪ್ಪಿನ ಬದಲು ಸಕ್ಕರೆ ಹಾಕಿ ತಿಂದ್ರೆ ಕಲ್ಲಂಗಡಿ ಹಣ್ಣು ತಿಂದ ಟೇಸ್ಟ್ ಬರುತ್ತೆ ಅಂತ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋ ನೋಡಿದ ಮಧುಶ್ರೀ ಕೂಡ ಈ ಪ್ರಯೋಗಕ್ಕೆ ಇಳಿದಿದ್ದಾರೆ. ಒಂದು ಕೈನಲ್ಲಿ ಸಕ್ಕರೆ ಇನ್ನೊಂದು ಕೈನಲ್ಲಿ ಸೌತೆಕಾಯಿ ಪೀಸ್ ಹಿಡಿದ್ದಿದ್ದ ಮಧುಶ್ರೀ ಮೊದಲು ಪ್ರಯೋಗ ಮಾಡಿದ್ದು ರಾಘು ಮೇಲೆ. ಸೌತೆಕಾಯಿ ಜೊತೆ ಸಕ್ಕರೆ ತಿಂದ ರಾಘು, ಯಸ್, ಕಲ್ಲಂಗಡಿ ಹಣ್ಣಿನ ಟೇಸ್ಟ್ ಬರ್ತಿದೆ ಎಂದಿದ್ದಾರೆ. ಆ ನಂತ್ರ ರಾಯ್ ಇದನ್ನು ಟೇಸ್ಟ್ ಮಾಡಿ, ಹೌದಲ್ವಾ ಎಂದಿದ್ದಾರೆ. ಇಷ್ಟೇ ಅಲ್ಲ ಸೆಟ್ ನಲ್ಲಿದ್ದ ಇನ್ನಿಬ್ಬರ ಮೇಲೂ ಝಾನ್ಸಿ ಪ್ರಯೋಗ ಮಾಡಿದ್ದಾರೆ. ಝಾನ್ಸಿ ಕೂಡ ಸೌತೆಕಾಯಿಗೆ ಸಕ್ಕರೆ ಬೆರೆಸಿ ತಿಂದಿದ್ದಲ್ಲದೆ ಹೌದು ಅದೇ ರುಚಿ ಎಂದಿದ್ದಾರೆ.

'ಫ್ರೀ ಪ್ರಾಡಕ್ಟ್ ನೀನು, ವೇಸ್ಟ್ ಬಾಡಿ.. ಆದಷ್ಟೂ ಬೇಗ ಹೋಗು'.. ಗಿಲ್ಲಿ ಮಾತಿಗೆ ಸೋಷಿಯಲ್ ಮೀಡಿಯಾ ಏನ್ ಹೇಳ್ತಿದೆ?

ಇನ್ಸ್ಟಾಖಾತೆಯಲ್ಲಿ ಮಧುಶ್ರೀ, ಶೂಟಿಂಗ್ ಮಧ್ಯೆ ವಿಡಿಯೋ ಅಂತ ಶೀರ್ಷಿಕೆ ಹಾಕಿ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋ ನೋಡಿದ ಫ್ಯಾನ್ಸ್, ನಾವು ಟೇಸ್ಟ್ ಮಾಡ್ತೇವೆ ಎಂದಿದ್ದಾರೆ. ಅಷ್ಟೇ ಅಲ್ಲ ಫುಲ್ ವಿಡಿಯೋ ಪೋಸ್ಟ್ ಮಾಡುವಂತೆ ಝಾನ್ಸಿಗೆ ರಿಕ್ವೆಸ್ಟ್ ಮಾಡಿದ್ದಾರೆ.

ಯಜಮಾನ ಸೀರಿಯಲ್, ಮಧುಶ್ರೀ ಅವರ ಮೊದಲ ಸೀರಿಯಲ್. ಯಜಮಾನದಲ್ಲಿ ಜಂಭದ ಕೋಳಿಯಾಗಿದ್ದ, ಗಂಡು ಮಕ್ಕಳನ್ನು ಕಂಡ್ರೆ ಹೆಮ್ಮಾರಿ ಆಗ್ತಿದ್ದ ಝಾನ್ಸಿ ರಾಘುಗೆ ಮನಸೋತಿದ್ದಳು. ಆಸ್ತಿಗಾಗಿ ಸುಳ್ಳು ಮದುವೆ ಮಾಡ್ಕೊಂಡ್ರೂ ರಾಘು ಪ್ರೀತಿಗೆ ಬಿದ್ದಿದ್ದ ಝಾನ್ಸಿಗೆ ಅಡ್ಡಿಯಾಗಿದ್ದು ಅನಿತಾ. 

ಹೆಣ್ಣು ಹುಲಿ ಸುಷ್ಮಾ ರಾಜ್ ಹೊಟ್ಟೆ ಮೇಲೆ ಮರಿ ಹುಲಿ, ಭಿನ್ನವಾಗಿ ನಡೆದ ಪ್ರೆಗ್ನೆನ್ಸಿ ಫೋಟೋ ಶೂಟ್

ರಾಘು – ಅನಿತಾ ಮದುವೆಗಾಗಿ ಝಾನ್ಸಿ – ರಾಘು ವಿಚ್ಛೇದನ ಪಡೆದ್ರೂ ಅನಿತಾ ಜೊತೆ ರಾಘು ಮದುವೆ ನಡೆಯಲಿಲ್ಲ. ಇಬ್ಬರೂ ಬೇರೆ ಆದ್ಮೇಲೆ ಝಾನ್ಸಿಗೆ ಕ್ಷಮೆ ಕೇಳಲು ರಾಘು ಮುಂದಾಗಿದ್ದ. ಆದ್ರೆ ಝಾನ್ಸಿಗೆ ಆಕ್ಸಿಡೆಂಟ್ ಆಗಿ ನೆನಪಿನ ಶಕ್ತಿ ಹೋಗಿದೆ. ಮದುವೆ ಆಗಿದ್ದು ಆಕೆಗೆ ನೆನಪಿಲ್ಲ. ಇದನ್ನು ವಿಲನ್ ತುಳಸಿ ದುರುಪಯೋಗ ಪಡಿಸಿಕೊಳ್ತಿದ್ದಾಳೆ. ಮಗ ಪ್ರಣವ್ ಜೊತೆ ಝಾನ್ಸಿ ಮದುವೆಗೆ ಪ್ಲಾನ್ ಮಾಡಿದ್ದಾಳೆ. ಈ ಎಲ್ಲದರ ಮಧ್ಯೆ ಝಾನ್ಸಿ ತಾಯಿ ಸಾವಿತ್ರಿ ಎಂಟ್ರಿಯಾಗಿದೆ. ಝಾನ್ಸಿ – ಪ್ರಣವ್ ಮದುವೆ ನಡೆಯುತ್ತಾ ಇಲ್ಲ ಝಾನ್ಸಿ ರಾಘು ಪಾಲಾಗ್ತಾಳಾ, ಸುಮಿತ್ರಾ ಕಥೆ ಏನು ಎಂಬೆಲ್ಲ ಕುತೂಹಲ ಸದ್ಯ ಪ್ರೇಕ್ಷಕರಲ್ಲಿ.

View post on Instagram