ನಾನೀಗ ಮನೆಯನ್ನು ಕಂಟ್ರೋಲ್ ಮಾಡಲಾಗ್ತಿಲ್ಲ, ವಿಲನ್ ಬಂದ್ರು ಎಂದು ನಡುಗಿದ Bigg Boss
Bigg Boss Kannada Season 12 Episode Update: ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ವಿಲನ್ ಎಂಟ್ರಿಯಾಗಿದೆ. ಹೌದು, ಈಗ ಬಿಗ್ ಬಾಸ್ ಕಂಟ್ರೋಲ್ ಮಾಡುತ್ತಿಲ್ಲ. ಹಾಗಾದರೆ ಬಂದೋರು ಯಾರು? ಒಟ್ಟಿನಲ್ಲಿ ಈ ಎಪಿಸೋಡ್ ಭಾರೀ ಕುತೂಹಲದಿಂದ ಕೂಡಿದೆ.

ಹೆದರಿ ಬಿದ್ದಿದ್ದ ಚೈತ್ರಾ ಕುಂದಾಪುರ
ಬಿಗ್ ಬಾಸ್ ಶೋನಲ್ಲಿ ಎಲ್ಲ ನಿರ್ಧಾರಗಳು ನಂದೇ, ಅಬ್ಬರವೂ ನಂದೇ ಎನ್ನುವ ಧ್ವನಿ ಕೇಳಿಸಿದೆ. ಇದನ್ನು ಕೇಳಿ ಎಲ್ಲರೂ ನಡುಗಿದ್ದಾರೆ. ಕಳೆದ ಸೀಸನ್‌ನಲ್ಲಿ ಹೆದರಿ ಕಿಚನ್ ಏರಿಯಾದಲ್ಲಿ ಉರುಳಿ ಉರುಳಿ ಬಿದ್ದಿದ್ದ ಚೈತ್ರಾ ಕುಂದಾಪುರ ಅವರು ಈ ಬಾರಿ ಮತ್ತೆ ಹೆದರಿದ್ದಾರೆ.
ಎರಡು ಟೀಂಗಳಾಗಿ ವಿಂಗಡಣೆ
ಬಿಗ್ ಬಾಸ್ ಕನ್ನಡ ಸೀಸನ್ 10 ಶೋನಲ್ಲಿ ಸಂಗೀತಾ ಶೃಂಗೇರಿ, ಕಾರ್ತಿಕ್ ಮಹೇಶ್, ವಿನಯ್ ಗೌಡ ಇದ್ದರು. ಆಗ ಅಸುರ ಟಾಸ್ಕ್ ಕೊಟ್ಟಿದ್ದರು. ಒಂದು ತಂಡ ವಿಲನ್ ಆಗಿ, ಇನ್ನೊಂದು ತಂಡ ಸೇವಕರಾಗಿ ಟಾಸ್ಕ್ ನಿಭಾಯಿಸಿದ್ದರು. ಇದು ಚೇಂಜ್ ಕೂಡ ಆಗಿತ್ತು. ಆ ಟಾಸ್ಕ್‌ನ್ನು ತುಂಬ ಚೆನ್ನಾಗಿ ಮಾಡಲಾಗಿತ್ತು.
ವಿಲನ್ ಆಗಿದ್ದ ಗಿಲ್ಲಿ ನಟ
ಈ ಬಾರಿ ಗಿಲ್ಲಿ ನಟ ವಿಲನ್ ಆಗಿದ್ದಾರೆ. ಸೂರಜ್, ರಾಶಿಕಾ ಶೆಟ್ಟಿ ಕೂಡ ವಿಲನ್ ಆಗಿದ್ದಾರೆ. ಈಗ ಹೇಗೆ ಟಾಸ್ಕ್ ಮಾಡಲಿದ್ದಾರೆ ಎಂದು ಕಾದು ನೋಡಬೇಕಿದೆ. ಈಗಾಗಲೇ ಅಸುರ, ರಾಜಮಾತೆ ಎಂದು ಒಂದು ಟಾಸ್ಕ್ ಮಾಡಲಾಗಿದೆ. ಈಗ ವಿಲನ್ ಅವತಾರವನ್ನು ಹಾಕಿಕೊಂಡು, ಎಲ್ಲೂ ಹೇಗೆ ಮಾಡ್ತಾರೆ ಎಂದು ಕಾದು ನೋಡಬೇಕಿದೆ.
ಅಭಿಷೇಕ್ ಶ್ರೀಕಾಂತ್ ಔಟ್
ಅಭಿಷೇಕ್ ಶ್ರೀಕಾಂತ್ ಅವರು ಈಗಾಗಲೇ ಮನೆಯಿಂದ ಹೊರಗಡೆ ಬಂದಿದ್ದಾರೆ. ಅಂದಹಾಗೆ ಚೈತ್ರಾ ಕುಂದಾಪುರ, ರಜತ್ ಅವರು ಸ್ಪರ್ಧಿಗಳಲ್ಲ, ವೈಲ್ಡ್‌ಕಾರ್ಡ್ ಸ್ಪರ್ಧಿಗಳು ಎಂಬ ಕೂಡ ಅಭಿಪ್ರಾಯ ಕೂಡ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಿದೆ.
ಈ ಎಪಿಸೋಡ್ ಹೇಗೆ ಇರಲಿದೆ?
ಒಟ್ಟಿನಲ್ಲಿ ಈ ಎಪಿಸೋಡ್ ಹೇಗೆ ಮೂಡಿ ಬರಲಿದೆ? ಎಂಬ ಕುತೂಹಲ ಇದೆ. ಯಾವಾಗಲೂ ಎಲ್ಲರ ಬಳಿ ಕಾಮಿಡಿ ಮಾಡುವ ಗಿಲ್ಲಿ ನಟನಿಗೆ ಈಗ ಅಸುರ ಟಾಸ್ಕ್ ಕೊಟ್ಟರೆ ಸುಮ್ಮನೆ ಬಿಡುತ್ತಾರಾ? ಬಿಗ್ ಬಾಸ್ ಹೊಸ ಹೊಸ ರೀತಿಯ ಟಾಸ್ಕ್‌ಗಳನ್ನು ಪರಿಚಯಿಸುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

