- Home
- Entertainment
- TV Talk
- BBK 12: ಪದೇ ಪದೇ ಕಿಚ್ಚ ಸುದೀಪ್ ಹೇಳ್ತಿರುವಂತೆ ರಜತ್ ವೈರಲ್ ವಿಡಿಯೋ ಅಸಲಿ ವಿಷಯ ಏನು? ಅಂಥದ್ದೇನಿದೆ?
BBK 12: ಪದೇ ಪದೇ ಕಿಚ್ಚ ಸುದೀಪ್ ಹೇಳ್ತಿರುವಂತೆ ರಜತ್ ವೈರಲ್ ವಿಡಿಯೋ ಅಸಲಿ ವಿಷಯ ಏನು? ಅಂಥದ್ದೇನಿದೆ?
Bigg Boss Kannada Season 12 Episode Update: ಬಿಗ್ ಬಾಸ್ ಮನೆಯಲ್ಲಿ ರಜತ್ ಅವರನ್ನು ನೋಡಿದಾಗೆಲ್ಲ ಕಿಚ್ಚ ಸುದೀಪ್ ಅವರು, “ವಿಡಿಯೋ ಪ್ಲೇ ಮಾಡಲಾ?” ಎಂದು ಪ್ರಶ್ನೆ ಮಾಡುತ್ತಲೇ ಇದ್ದಾರೆ. ಕಳೆದ ವೀಕೆಂಡ್ ಎಪಿಸೋಡ್‌ನಲ್ಲಿ ಕೂಡ ಕೇಳಿದ್ದುಂಟು. ಈ ವಿಡಿಯೋ ಹಿಂದಿನ ಕಥೆ ಏನು?

ಏಕವಚನದ ಮಾತು ಆಡಿದ್ರಾ?
ಕಳೆದ ವೀಕೆಂಡ್ ಎಪಿಸೋಡ್ ಪ್ರಸಾರ ಆದಬಳಿಕ ರಜತ್ ಅವರು ಕಾವ್ಯ ಶೈವ ಬಳಿ ಮಾತನಾಡುವಾಗ ಏಕವಚನದಲ್ಲಿ ಮಾತನಾಡಿದ್ದರು. ತಪ್ಪಾಗಿ ಬಳಕೆ ಮಾಡಿದ್ದರು ಎನ್ನಲಾಗಿದೆ. ಈ ಬಗ್ಗೆ ಈ ವಾರ ಚರ್ಚೆ ಆಗಿದೆ.
ಕ್ಷಮೆ ಕೇಳಿದ ರಜತ್
ಕಿಚ್ಚನ ಪಂಚಾಯಿತಿಯಲ್ಲಿ ಕಿಚ್ಚ ಸುದೀಪ್ ಅವರ ಬಳಿ ರಜತ್ ಮಾತನಾಡಿದ್ದಾರೆ. ಆಗ ರಜತ್ ಅವರು ಏಕವಚನದಲ್ಲಿ ಮಾತನಾಡಿದ್ದಾರೆ ಎಂದು ಕಿಚ್ಚ ಸುದೀಪ್ ಅಂದುಕೊಂಡಿದ್ದರು. ಅದನ್ನೇ ಮತ್ತೆ ಪ್ರಶ್ನೆ ಮಾಡಲಾಗಿತ್ತು. ಆಗ ರಜತ್ ಅವರು ಕ್ಷಮೆ ಕೇಳಿದ್ದಾರೆ.
ತಲೆ ಕೆಡಿಸಿಕೊಳ್ಳಲ್ಲ ಎಂದ ಕಿಚ್ಚ ಸುದೀಪ್
“ನನಗೆ ಹಾಗೆ ಕರೆದರೆ ತೊಂದರೆ ಇಲ್ಲ. ನಾನು ಚೈತ್ರಾ ಕುಂದಾಪುರ, ಅಶ್ವಿನಿ ಗೌಡ ಅಲ್ಲ. ಆದರೆ ಹೊರಗಡೆ ಇದರ ಬಗ್ಗೆ ಚರ್ಚೆ ಆಗುತ್ತಿದೆ. ಹೀಗಾಗಿ ಹೇಳಿದೆ ಅಷ್ಟೇ” ಎಂದು ಕಿಚ್ಚ ಸುದೀಪ್ ಹೇಳಿದ್ದರು. ಆಗ ರಜತ್ ಅವರು “ನಾನು ನಿಮ್ಮ ಮೇಲೆ ತುಂಬ ಅಭಿಮಾನ, ಗೌರವ ಇಟ್ಟುಕೊಂಡಿದ್ದೀನಿ. ನಿಮ್ಮನ್ನು ನೋಡಿಕೊಂಡು ಬೆಳೆದಿದ್ದೇನೆ. ಯಾರು ಏನು ಲಿಂಕ್ ಮಾಡುತ್ತಿದ್ದಾರೆ ಗೊತ್ತಿಲ್ಲ, ನನ್ನಿಂದ ತಪ್ಪಾಗಿದ್ದರೆ ಕ್ಷಮಿಸಿ” ಎಂದು ಹೇಳಿದ್ದಾರೆ.
ವೈಲ್ಡ್‌ಕಾರ್ಡ್ ಸ್ಪರ್ಧಿಯಾದ ರಜತ್
ಈ ಬಾರಿ ರಜತ್ ಅವರು ಅತಿಥಿಯಾಗಿ ಬಿಗ್ ಬಾಸ್ ಮನೆಗೆ ಬಂದಿದ್ದಾರೆ. ಆಮೇಲೆ ವೈಲ್ಡ್‌ಕಾರ್ಡ್ ಸ್ಪರ್ಧಿ ಎಂದು ಘೋಷಣೆ ಮಾಡಲಾಗಿದೆ. ಕಳೆದ ಸೀಸನ್‌ನಲ್ಲಿ ಕಾಣಿಸಿಕೊಂಡ ರಜತ್ ಅವರು ಮಾತ್ರ ಇಲ್ಲಿ ಕಾಣಿಸಿಕೊಂಡಿಲ್ಲ. ಉಳಿದ ಸ್ಪರ್ಧಿಗಳಿಗೆ ಚಿಯರ್ ಲೀಡರ್ ಎನ್ನುವ ಹಾಗೆ ಕಾಣುತ್ತಿದೆ.
ಬದಲಾದ ರಜತ್?
ಅಂದಹಾಗೆ ರಜತ್ ಅವರು ಮುಂದಿನ ವಾರ ಆಟ ಶುರು ಮಾಡ್ತೀನಿ ಎಂದಿದ್ದಾರೆ.
ಧ್ರುವಂತ್ ಅವರು ಮನೆಗೆ ಹೋಗ್ತೀನಿ ಅಂತ ನಾಟಕ ಮಾಡ್ತಾರೆ, ಆ ಥರ ಆಲೋಚನೆ ಇಲ್ಲ, ಸ್ಪಂದನಾ ಜೊತೆ ಅಸಭ್ಯವಾಗಿ ಸನ್ನೆ ಮಾಡ್ತಾನೆ ಎಂದು ಕೂಡ ಹೇಳಿದ್ದುಂಟು.
ಆರಂಭದಲ್ಲಿ ಗಿಲ್ಲಿ ಇರಿಟೇಟ್ ಎನ್ನುತ್ತಿದ್ದ ರಜತ್, ಈಗ ಗಿಲ್ಲಿ ಕಾಮಿಡಿಗೆ ನಗ್ತಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

