ಫಿನಾಲೆಗೆ ಎರಡು ವಾರ ಇದ್ದಾಗಲೇ, BBK 12 ಮನೆಯಿಂದ ಈ ವಾರ ಹೊರ ಹೋಗೋರು ಯಾರು?
Bigg Boss Kannada Season 12 Episode Update: ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಈ ಬಾರಿ ವಿಭಿನ್ನವಾಗಿ ನಾಮಿನೇಶನ್ ಮಾಡಲಾಗಿದೆ. ಕಳೆದ ಐದಾರು ವಾರಗಳಿಂದಲೂ ಸ್ಪಂದನಾ ಅವರು ಹೊರಗಡೆ ಹೋಗ್ತಾರೆ ಎಂದು ವೀಕ್ಷಕರು ಬಯಸಿದ್ದರು. ಆದರೆ ಆ ರೀತಿ ಆಗಿರಲಿಲ್ಲ.

ಟಾಸ್ಕ್ ಏನಾಗಿತ್ತು?
ಈ ಬಾರಿ ಗಿಲ್ಲಿ ನಟ ಅವರು ಕ್ಯಾಪ್ಟನ್ ಆಗಿದ್ದಾರೆ. ಒಂದು ಕೆಂಪು ಬಾವುಟ ಇಡಲಾಗಿತ್ತು, ಬಜರ್ ಆದ ತಕ್ಷಣ ಯಾರು ಓಡಿ ಹೋಗಿ ಆ ಬಾವುಟವನ್ನು ಕಿತ್ತುಕೊಳ್ತಾರೋ ಅವರಿಗೆ ನಾಮಿನೇಶನ್ ಮಾಡುವ ಅಧಿಕಾರ ಇರುತ್ತದೆ.
ವಾದ ಮಾಡಬೇಕು
ಬಾವುಟ ಪಡೆದ ವ್ಯಕ್ತಿ ಇಬ್ಬರು ವ್ಯಕ್ತಿಗಳನ್ನು ಆಯ್ಕೆ ಮಾಡಿ, ಅವರು ಯಾಕೆ ಈ ಮನೆಯಲ್ಲಿ ಇರಲು ಅರ್ಹತೆ ಹೊಂದಿಲ್ಲ ಎಂದು ಹೇಳಬೇಕು. ಆ ವಾದವನ್ನು ಆಲಿಸಿದ ಕ್ಯಾಪ್ಟನ್, ಯಾವ ಸ್ಪರ್ಧಿಗಳಿಗೆ ಸೂಕ್ತವಾದ ಕಾರಣಗಳನ್ನು ನೀಡಿದ್ದಾರೆ ಎಂದು ಗಮನಿಸಿ, ಅವರನ್ನು ನಾಮಿನೇಟ್ ಮಾಡಬೇಕು.
ನಾಮಿನೇಟ್ ಆದವರಾರು?
ಒಟ್ಟಾರೆಯಾಗಿ ಸ್ಪಂದನಾ ಸೋಮಣ್ಣ, ಅಶ್ವಿನಿ ಗೌಡ, ರಾಶಿಕಾ ಶೆಟ್ಟಿ, ಧ್ರುವಂತ್, ಧನುಷ್ ಗೌಡ ಅವರು ನಾಮಿನೇಟ್ ಆಗಿದ್ದಾರೆ. ಅಂದಹಾಗೆ ಧನುಷ್ ಗೌಡ ಅವರು ಮನೆಯ ಕೊನೆಯ ಕ್ಯಾಪ್ಟನ್ ಆಗಿ ಟಿಕೆಟ್ ಟು ಫಿನಾಲೆ ಪಡೆದಿದ್ದಾರೆ. ಉಳಿದವರಲ್ಲಿ ಯಾರು ಹೊರಗಡೆ ಹೋಗ್ತಾರೆ?
ಯಾರು ಎಲಿಮಿನೇಟ್ ಆಗಲ್ಲ?
ದೊಡ್ಮನೆಯಲ್ಲಿ ಆರಂಭದಿಂದ ಅಶ್ವಿನಿ ಗೌಡ, ಧ್ರುವಂತ್ ಇರೋದು ಗೊತ್ತಾಗ್ತಿದೆ. ಇವರಿಬ್ಬರು ಸಾಕಷ್ಟು ಸೌಂಡ್ ಮಾಡಿದ್ದಾರೆ. ಆದರೆ ಉಳಿದವರು ಅಷ್ಟಾಗಿ ಇಲ್ಲ.
ಯಾರು ಹೊರಗಡೆ ಹೋಗ್ತಾರೆ?
ಇನ್ನು ರಾಶಿಕಾ ಶೆಟ್ಟಿ, ಸ್ಪಂದನಾ ಸೋಮಣ್ಣ, ಕಾವ್ಯ ಶೈವ ಮಧ್ಯೆ ರಾಶಿಕಾ ಅವರು ಚೆನ್ನಾಗಿ ಟಾಸ್ಕ್ ಆಡಿದ್ದರು. ಉಳಿದವರು ಟಾಸ್ಕ್ ಆಗಲೀ, ಅಡುಗೆ ಮನೆಯಲ್ಲಾಗಲೀ ಕಾಣಿಸಿಕೊಂಡಿಲ್ಲ. ಅದರಲ್ಲಿಯೂ ಸ್ಪಂದನಾ ಅವರು ಆಟ ಆಡಿಲ್ಲ, ಮನೆ ಕೆಲಸ ಮಾಡಿಲ್ಲ, ಅಡುಗೆ ಮಾಡಲ್ಲ, ಇದ್ದಾರೆ ಅಂತ ಸೌಂಡ್ ಮಾಡಿಲ್ಲ ಎನ್ನಲಾಗ್ತಿದೆ. ಮಾಳುಗಿಂತ ಮುಂಚೆಯೇ ಸ್ಪಂದನಾ ಹೊರಗಡೆ ಹೋಗಬೇಕಿತ್ತು ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

