- Home
- Entertainment
- TV Talk
- ನಿಮಗೆ ಬೇಕಾದ ಉತ್ತರ ಬೇಕಿದ್ರೆ ಪ್ರಶ್ನೆ ಯಾಕೆ ಕೇಳಬೇಕು? ಕಾವ್ಯಾ ಅಭಿಪ್ರಾಯ ಬದಲಿಸಿದ್ರಾ ಸುದೀಪ್?
ನಿಮಗೆ ಬೇಕಾದ ಉತ್ತರ ಬೇಕಿದ್ರೆ ಪ್ರಶ್ನೆ ಯಾಕೆ ಕೇಳಬೇಕು? ಕಾವ್ಯಾ ಅಭಿಪ್ರಾಯ ಬದಲಿಸಿದ್ರಾ ಸುದೀಪ್?
ಬಿಗ್‌ಬಾಸ್ ವೀಕೆಂಡ್ ಸಂಚಿಕೆಯಲ್ಲಿ, ಅತಿಥಿಗಳು ಗಿಲ್ಲಿಯನ್ನು ಟಾರ್ಗೆಟ್ ಮಾಡಿದ್ದರು ಎಂಬ ಕಾವ್ಯಾ ಅವರ ಅಭಿಪ್ರಾಯವನ್ನು ಸುದೀಪ್ ಪ್ರಶ್ನಿಸಿದ್ದಾರೆ. ಸುದೀಪ್ ಅವರ ಮಧ್ಯಪ್ರವೇಶದಿಂದ ಕಾವ್ಯಾ ತಮ್ಮ ಹೇಳಿಕೆಯನ್ನು ಬದಲಿಸಿದರೇ ಎಂಬ ಚರ್ಚೆ ಸಾಮಾಜಿಕ ಜಾಲತಾಣದಲ್ಲಿ ಶುರುವಾಗಿದೆ.

ಕಾವ್ಯಾ ಅಭಿಪ್ರಾಯ
ಶನಿವಾರದ ಸಂಚಿಕೆಯಲ್ಲಿ ಕಾವ್ಯಾ ನೀಡಿದ ಅಭಿಪ್ರಾಯವನ್ನು ಸುದೀಪ್ ಬದಲಿಸಿದ್ರಾ ಎಂಬ ಚರ್ಚೆಗಳು ಸಾಮಾಜಿಕ ಜಾಲತಾಣದಲ್ಲಿ ಶುರುವಾಗಿವೆ. ವೀಕೆಂಡ್ ಸಂಚಿಕೆಯಲ್ಲಿ ಗಿಲ್ಲಿ ನಟ ಮತ್ತು ಐವರು ಅತಿಥಿಗಳ ನಡುವಿನ ಭಿನ್ನಾಭಿಪ್ರಾಯದ ಕುರಿತ ವಿಡಿಯೋ ಪ್ಲೇ ಮಾಡಲಾಗುತ್ತಿದೆ. ಈ ವಿಡಿಯೋ ನೋಡಿದ ಮೇಲೆ ನಿಮಗೆ ಏನು ಅನ್ನಿಸ್ತು ಎಂದು ಕೇಳುತ್ತಾರೆ.
ವಿಡಿಯೋ ನೋಡಿದ್ಮೇಲೆ ಕಾವ್ಯಾ ಹೇಳಿದ್ದೇನು?
ಐವರು ಅತಿಥಿಗಳು ಗಿಲ್ಲಿ ಮೇಲೆ ಇಷ್ಟು ಡಾಮಿನೇಟ್ ಆಗಿರೋದು ಕಾಣಿಸ್ತು. ಗಿಲ್ಲಿ ಜೊತೆಯಲ್ಲಿ ಇಷ್ಟೆಲ್ಲಾ ಮಾತುಕತೆ ನಡೆದಿದೆ ಅನ್ನೋದು ನನಗೆ ಗೊತ್ತಿರಲಿಲ್ಲ. ಗಿಲ್ಲಿ ನಟ ಚೆನ್ನಾಗಿ ಆಡ್ತಿದ್ದಾನೆ ಅತಿಥಿಗಳು ಹೇಳಿದ್ದಾರೆ. ಹಾಗೆಯೇ ನಿಮ್ಮೆಲ್ಲರ ಕೈಯಲ್ಲಿ ಒಬ್ಬನನ್ನು ಕಂಟ್ರೋಲ್ ಮಾಡೋಕೆ ಆಗಲಿಲ್ಲ ಎಂದು ಹಲವು ಬಾರಿ ಉಲ್ಲೇಖಿಸಿದ್ದಾರೆ. ಈ ವಿಡಿಯೋ ನೋಡಿದ್ಮೇಲೆ, ಗಿಲ್ಲಿಯನ್ನು ಕಂಟ್ರೋಲ್ ಮಾಡಬೇಕು ಅನ್ನೋದೇ ಅವರ ಉದ್ದೇಶವಾಗಿತ್ತು ಅನ್ನೋದು ನನ್ನ ಅಭಿಪ್ರಾಯ ಎಂದು ಹೇಳುತ್ತಾರೆ.
ನಮ್ಮ ಉದ್ದೇಶ ಅದಾಗಿರಲಿಲ್ಲ: ತ್ರಿವಿಕ್ರಮ್
ಕಾವ್ಯಾ ಹೇಳಿಕೆಗೆ ಪ್ರತಿಕ್ರಿಯಿಸಿದ ತ್ರಿವಿಕ್ರಮ್, ಗಿಲ್ಲಿಯನ್ನು ಟಾರ್ಗೆಟ್ ಮಾಡಬೇಕು ಅನ್ನೋದು ನಮ್ಮ ಉದ್ದೇಶವೇ ಆಗಿರಲಿಲ್ಲ. ಮನೆಗೆ ಬರುತ್ತಿದ್ದಂತೆ ಗಿಲ್ಲಿ ಮಾತುಗಳು ಶುರುವಾದವು. ಕ್ಷಮೆ ಕೇಳ್ತಾನೆ, ಮತ್ತೆ ತಮಾಷೆ ಮಾಡುತ್ತಿದ್ದನು. ಗಿಲ್ಲಿಯಿಂದ ಪ್ರಾರಂಭವಾಗಿದ್ದರಿಂದ ನಮ್ಮ ಪ್ರತಿಕ್ರಿಯೆ ಶುರುವಾಯ್ತು ಎಂದು ಹೇಳುತ್ತಾರೆ. ಈ ವೇಳೆ ಮಧ್ಯೆ ಪ್ರವೇಶಿಸಿದ ಸುದೀಪ್, ನಿಮ್ಮ ಹೇಳಿಕೆ ಅಥವಾ ಅಭಿಪ್ರಾಯವನ್ನು ಇನ್ನು ಸ್ವಲ್ಪ ವಿವರಿಸಿ ಹೇಳಬಹುದಾ ಎಂದು ಕೇಳುತ್ತಾರೆ.
ಗಿಲ್ಲಿ ತಮಾಷೆ
ಮಂಜಣ್ಣನ ಬಗ್ಗೆ ಮಾತಾಡಿದಾಗ ತಪ್ಪು ಅಂತ ಗಿಲ್ಲಿಗೆ ನೇರವಾಗಿಯೇ ಹೇಳಿದ್ದೆ. ರಾತ್ರಿ ಊಟ ಮಾಡುವ ಸಂದರ್ಭದಲ್ಲಿಯೂ ಎಲ್ಲವೂ ತಮಾಷೆಯಾಗಿಯೇ ನಡೆದುಕೊಂಡು ಹೋಗುತ್ತಿತ್ತು. ದಿಢೀರ್ ಅಂತ ಕಿಡಿ ಹೊತ್ತಿಕೊಳ್ತು. ಟಾಸ್ಕ್‌ನಲ್ಲಿಯೂ ಎಲ್ಲಾ ಗಲಾಟೆ ನಡೆದರೂ ಮಧ್ಯೆ ಹೋಗ್ತಿದ್ದೆ. ಅತಿಥಿಗಳಿಗೆ ನೋವುಂಟು ಮಾಡಬಾರದು ಅನ್ನೋದು ನಮ್ಮ ಉದ್ದೇಶ. ಆದರೆ ಅವರನ್ನು ಸರಿಯಾಗಿ ಜಡ್ಜ್ ಮಾಡೋಕೆ ಆಗಲಿಲ್ಲ. ಹಾಸ್ಪಿಟಾಲಿಟಿ ಟೀಂ ಬಗ್ಗೆ ಬಿಗ್‌ಬಾಸ್ ವಾರ್ನ್ ಮಾಡಿದ್ದರು. ಹಾಗಾಗಿ ತಪ್ಪು ಅಂತ ಕಂಡ್ರೂ ಮಾತಾಡೋಕೆ ಸಾಧ್ಯವಾಗಲಿಲ್ಲ ಎಂದು ಅಸಹಾಯಕತೆಯನ್ನು ಕಾವ್ಯಾ ವ್ಯಕ್ತಪಡಿಸಿದರು.
ಸಮಾನ ಪಾಲುದಾರಿಕೆ
ಆರಂಭಿಸಿದ್ದು ಗಿಲ್ಲಿ, ಆದ್ರೆ ಅತಿಥಿಗಳು ಅದನ್ನು ಎಳೆದುಕೊಂಡು ಹೋದರು. ನಾನು ನೋಡಿರುವ ಪ್ರಕಾರ, ಇಲ್ಲಿ ಇಬ್ಬರದ್ದು ಸಮಾನ ಪಾಲುದಾರಿಕೆ ಇದೆ. ಗಿಲ್ಲಿಯನ್ನು ಕಂಟ್ರೋಲ್ ಅಥವಾ ಪ್ರವೋಕ್ ಮಾಡೋದು ಸಹ ನಡೆಯಿತು ಎಂದು ಕಾವ್ಯಾ ಹೇಳುತ್ತಾರೆ. ನಿಮಗೆ ಮಾತನಾಡೋಕೆ ಬಿಟ್ಟಿಲ್ಲವಾ ಅಥವಾ ನೀವು ಮಾತನಾಡಿಯೇ ಇಲ್ಲವಾ ಎಂದು ಸುದೀಪ್ ಕೇಳುತ್ತಾರೆ. ಇದಕ್ಕೆ ಗಿಲ್ಲಿ ನಟ ಇಲ್ಲ ಎಂದು ಉತ್ತರ ನೀಡುತ್ತಾರೆ.
A ಮತ್ತು B ನಡುವೆ C
ನಿಮ್ಮನ್ನು ಕನ್ವಿನಸ್ ಮಾಡೋದಕ್ಕೆ ಈ ಎಪಿಸೋಡ್ ನಡೆಸೋದಕ್ಕೆ ಆಗಲ್ಲ ಎಂದ ಸುದೀಪ್, ಈ ಮನೆಯಲ್ಲಿ ಎಲ್ಲಾ ವಿಷಯ ಎಲ್ಲರಿಗೂ ಗೊತ್ತಿರುತ್ತೆ ಅಂತ ಒಪ್ಪಿಕೊಳ್ಳುತ್ತೀರಿ ಅಲ್ಲವಾ? ನೀವು A ಮತ್ತು B ನೋಡಿರುತ್ತೀರಿ. ಹಾಗಾಗಿ ನಿಮಗೆ ಎರಡೂ ಸರಿ ಕಾಣಬಹುದು. ಆದ್ರೆ A ಮತ್ತು B ನಡುವೆ C ಇರೋದು ನಿಮಗೆ ಕಾಣಿಸಿರಲ್ಲ ಎಂದು ಸುದೀಪ್ ಹೇಳುತ್ತಾರೆ. ಇದಕ್ಕೆ ಕಾವ್ಯಾ ಹೌದು ಎಂದು ಹೇಳುತ್ತಾರೆ.
ಕಾವ್ಯಾ ಮತ್ತು ಸುದೀಪ್ ನಡುವಿನ ಸಂಭಾಷಣೆ
ಸದ್ಯ ಕಾವ್ಯಾ ಮತ್ತು ಸುದೀಪ್ ನಡುವಿನ ಸಂಭಾಷಣೆ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗಳು ನಡೆಯುತ್ತಿವೆ. Sathish Raj_official ಹೆಸರಿನ ಥ್ರೆಡ್ ಖಾತೆಯಲ್ಲಿ ಈ ರೀತಿ ಬರೆದುಕೊಳ್ಳಲಾಗಿದೆ. ಸುದೀಪ್ ಎದುರು ಗಿಲ್ಲಿ ಪರ ಕಾವ್ಯಾ ಮಾತನಾಡಿದರು.
ಸರಿಯಾಗಿ ಮಾತನಾಡಿದರು ಇದ್ದಿದನ್ನೇ ಹೇಳಿದರು. ಆದರೆ ಈ ಸುದೀಪ್ ಸರ್ ಕಾವ್ಯಾ ಉತ್ತರನ ಚೇಂಜ್ ಮಾಡೋವರ್ಗೂ ಬಿಡ್ಲಿಲ್ಲ. ರೀ ಸುದೀಪ್ ಸರ್ ನಿಮಗೆ ಬೇಕಾದ ಉತ್ತರವೇ ಬರಬೇಕು ಅಂದ್ರೆ ಪ್ರಶ್ನೆ ಯಾಕ್ರೀ ಕೇಳೀರಾ? ಒಟ್ನಲ್ಲಿ ನಿಮ್ಮ ಮನಸಲ್ಲಿರೋ ಉತ್ತರ ಇನ್ನೊಬ್ಬರು ಹೇಳಬೇಕು ಅನ್ನೋದೇನು ರೂಲ್ಸ್. ಒಟ್ಟಿನಲ್ಲಿ ಕಾವ್ಯಾ ಹೇಳಿದ್ದು ಕರೆಕ್ಟ ಆಗಿತ್ತು ಗೆಸ್ಟ್ ಗಳು ಗಿಲ್ಲಿಯನ್ನು ಟಾರ್ಗೆಟ್ ಮಾಡಿದ್ರು ಅಂದ್ರೆ ಮಾಡಿದ್ರು ಅಷ್ಟೇ ಎಂದು ಹೇಳಿದ್ದಾರೆ.
Kavya was bang on. The 5 guests obviously tried to hit on the most popular guy #Gilli and it was obvious to everyone. Avaru Malu jothe atva bere contestants jothe kaal kerkond yaak hoglila. Kicha Sudeep couldn't leak the script. #BBKSeason12#BBK12pic.twitter.com/8JnEVQKuhu
— Suhas (@CricSuhas) November 29, 2025
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

