ಈ ಸಾರಿ ಬಿಗ್​ಬಾಸ್​ ಒಂಥರಾ ಗಿಲ್ಲಿ ಬಾಸ್ ಆಗಿಬಿಟ್ಟಿದೆ. ಈ ವಾರವನ್ನೇ ತೆಗೆದುಕೊಳ್ಳಿ, ಕಳೆದ ಸೀಸನ್​ನ ಸ್ಪರ್ಧಿಗಳು ದೊಡ್ಮನೆಗೆ ಬಂದ ವೇಳೆ , ಇಡೀ ಮನೆ ಸೈಲೆಂಟ್ ಆಗಿದ್ರೆ, ಗಿಲ್ಲಿ ಮಾತ್ರ ಇಡೀ ಶೋನ ಆವರಿಸಿಕೊಂಡಿದ್ದಾನೆ.ಹೆಚ್ಚಿನ ಮಾಹಿತಿಗೆ ಸಿನಿಮಾ ಹಂಗಾಮ ವಿಡಿಯೋ ನೋಡಿ..

ಇಲ್ಲಿದೆ ನೋಡಿ ಸಿಲ್ಲಿಯಲ್ಲದ ಗಿಲ್ಲಿ ಕಥೆ!

ಗಿಲ್ಲಿ ಸಿಲ್ಲಿ ಅಲ್ಲ.. ಈತ ಕನ್ನಡಿಗರ ಮನಗೆದ್ದಿರೋ ಮಾತಿನ ಮಲ್ಲ..!,, ಹಸಿವು.. ಅಪಮಾನ.. ನೋವಿನ ಕಥೆಯಿದೆ ನಗಿಸೋ ‘ನಟ’ ಹಿಂದೆ..!,, ಮಣ್ಣಲ್ಲಿ ಬಿದ್ದೋನು.. ಮುಗಿಲಲ್ಲಿ ಎದ್ದನು.. ಹೇಗಿದ್ದ ಹೇಗಾದ ಗೊತ್ತಾ ಗಿಲ್ಲಿ ನಟ..?

ಈ ಬಾರಿ ಬಿಗ್​ಬಾಸ್​​ನಲ್ಲಿ ಗೆಲ್ಲುವ ರೇಸ್​ನಲ್ಲಿ ಎಲ್ಲರಿಗಿಂತ ಮುಂದೆ ಇರೋದು ಗಿಲ್ಲಿ. ತರ್ಲೆ, ತಮಾಷೆ, ಕಾಮಿಡಿ, ಕಿರಿಕ್ ಮಾಡ್ತಾ ಉಳಿದೆಲ್ಲಾ ಸ್ಪರ್ಧಿಗಳನ್ನ ಮಂಕುಮಾಡಿ ಇಡೀ ಮನೆತುಂಬಾ ತಾನೇ ಆವರಿಸಿಕೊಂಡಿದ್ದಾನೆ ಕಿಲಾಡಿ ಗಿಲ್ಲಿ. ನೋಡೋಕೆ ಸಿಲ್ಲಿಯಂತೆ ಕಾಣೋ ಗಿಲ್ಲಿ (Gilli Nata Nataraj) ಸಿಲ್ಲಿಯಲ್ಲ.. ಕನ್ನಡಿಗರ ಮನಸು ಗೆದ್ದಿರೋ ಮಾತಿನ ಮಲ್ಲ. ಅಷ್ಟಕ್ಕೂ ಹಳ್ಳಿಹೈದ ಗಿಲ್ಲಿ ಈ ಹಂತಕ್ಕೆ ಬೆಳೆದು ಬಂದಿದ್ದು ಹೇಗೆ..? ಆ ಸ್ಟೋರಿ ಇಲ್ಲಿದೆ ನೋಡಿ.

ಗಿಲ್ಲಿ ಲೈಫ್​ ಜರ್ನಿ ಮತ್ತಷ್ಟು ಪುಟಗಳನ್ನ ನೋಡೋಣ ಆಫ್ಟರ್ ಎ ಶಾರ್ಟ್ ಬ್ರೇಕ್.

ಹಳ್ಳಿಯಿಂದ ನಟ-ನಿರ್ದೇಶಕ ಆಗ್ಲಿಕ್ಕೆ ಬೆಂಗಳೂರಿಗೆ ಬಂದ ಗಿಲ್ಲಿನ ಕರೆದು ಯಾರೂ ಕೆಲಸ ಕೊಡಲಿಲ್ಲ. ಸೆಟ್​ನಲ್ಲಿ ಕೆಲಸ ಮಾಡ್ತಾ , ಅಲ್ಲಿ ಉಳಿಸಿದ ಹಣದಲ್ಲಿ ಶಾರ್ಟ್ ಫಿಲ್ಮ್​​ಗಳನ್ನ ಮಾಡ್ತಾ ಬಂದ ಗಿಲ್ಲಿ, ಸಾಮಾಜಿಕ ಮಾಧ್ಯಮಗಳಲ್ಲಿ ಸದ್ದು ಮಾಡಿದ,. ಅಲ್ಲಿಂದ ಟೆಲಿವಿಷನ್​ಗೆ ಎಂಟ್ರಿ ಕೊಟ್ಟು ಕಿರುತೆರೆಯ ತಾರೆಯಾದ.

ವಿಶೇಷ ಕಾರ್ಯಕ್ರಮ ಮುಂದುವರೆಯುತ್ತೆ ಮತ್ತೊಂದು ಚಿಕ್ಕ ಬ್ರೇಕ್​ನ ಬಳಿಕ.

ಈ ಸಾರಿ ಬಿಗ್​ಬಾಸ್​ ಒಂಥರಾ ಗಿಲ್ಲಿ ಬಾಸ್ ಆಗಿಬಿಟ್ಟಿದೆ. ಈ ವಾರವನ್ನೇ ತೆಗೆದುಕೊಳ್ಳಿ ಕಳೆದ ಸೀಸನ್​ನ ಸ್ಪರ್ಧಿಗಳು ದೊಡ್ಮನೆಗೆ ಬಂದ ವೇಳೆ , ಇಡೀ ಮನೆ ಸೈಲೆಂಟ್ ಆಗಿದ್ರೆ, ಗಿಲ್ಲಿ ಮಾತ್ರ ಇಡೀ ಶೋನ ಆವರಿಸಿಕೊಂಡಿದ್ದಾನೆ.

ಗಿಲ್ಲಿ ನಟನ ವರ್ತನೆ ಹಿಂದಿನ ವಾರ ಅತಿರೇಕ ಆಗಿತ್ತು ಎಂಬ ಮಾತು ಇದೆಯಾದರೂ ಸುದೀಪ್ ಅವರು ಅದರ ಬಗ್ಗೆ ಕೂಲ್ ಅಗಿ ಕ್ಲಾಸ್ ತೆಗೆದುಕೊಂಡು ಮುಗಿಸಿದ್ದಾರೆ. ಅತಿಥಿಗಳು ಹಾಗೂ ಗಿಲ್ಲಿ ನಟನ ಮಧ್ಯೆ ಸಾಕಷ್ಟು ವಾದ-ವಿವಾದಗಳು ನಡೆದಿದ್ದರೂ ಅದರಿಂದ ಬೆಂಕಿ ಹೊತ್ತಕೊಳ್ಳದ ಹಾಗೆ ನೋಡಿಕೊಳ್ಳಲಾಗಿದೆ ಎಂಬ ಮಾತು ಕೇಳಿಬರುತ್ತಿದೆ. 

ಹೆಚ್ಚಿನ ಮಾಹಿತಿಗೆ ಸಿನಿಮಾ ಹಂಗಾಮ ವಿಡಿಯೋ ನೋಡಿ..