- Home
- Entertainment
- TV Talk
- ಬ್ಯಾಂಕ್ ಅಕೌಂಟ್ ಇಲ್ಲದ ಗಿಲ್ಲಿ ನಟ 24 ಲಕ್ಷ ಕಾರ್ ತಗೊಂಡ್ರಾ? ಸತ್ಯ ಬಿಚ್ಚಿಟ್ಟ ಆಪ್ತ, ನಿರ್ದೇಶಕ ಸೂರ್ಯವಂಶಿ
ಬ್ಯಾಂಕ್ ಅಕೌಂಟ್ ಇಲ್ಲದ ಗಿಲ್ಲಿ ನಟ 24 ಲಕ್ಷ ಕಾರ್ ತಗೊಂಡ್ರಾ? ಸತ್ಯ ಬಿಚ್ಚಿಟ್ಟ ಆಪ್ತ, ನಿರ್ದೇಶಕ ಸೂರ್ಯವಂಶಿ
ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಗಿಲ್ಲಿ ನಟ ಅವರು MG ಕಾರ್ ಇಟ್ಟುಕೊಂಡಿದ್ದಾರೆ, ಆದರೆ ಬಡವನ ಥರ ನಾಟಕ ಮಾಡ್ತಾರೆ ಎಂದು ಧ್ರುವಂತ್ ಹೇಳಿದ್ದರು. ಈಗ ನಿರ್ದೇಶಕ ಹಾಗೂ ಗಿಲ್ಲಿ ನಟ ಆಪ್ತ ಸೂರ್ಯವಂಶಿ ಅವರು ಕಾರ್ ಸತ್ಯ ಬಿಚ್ಚಿಟ್ಟಿದ್ದಾರೆ.

ಕಾರ್ ಸಮಸ್ಯೆ ಆಗ್ತಿತ್ತು
ಗಿಲ್ಲಿ ನಟ ಅವರು ಆಗಾಗ ಬೇರೆ ಬೇರೆ ಊರುಗಳಿಗೆ ಕಾರ್ಯಕ್ರಮಗಳಿಗೆ ಹೋಗುತ್ತಿದ್ದರು. ಯಾರದ್ದೋ ಕಾರ್ ತಗೊಂಡು ಹೋಗುತ್ತಿದ್ದರು. ಬೇರೆಯವರ ಹತ್ರ ಕಾರ್ ಕೇಳೋದು ಎಷ್ಟು ಸರಿ? ಒಂದು ಸಲ ಕೊಡ್ತಾರೆ, ಇನ್ನೊಮ್ಮೆ ಕೊಡ್ತಾರೆ ಎಂದಿದ್ದಾರೆ ಸೂರ್ಯವಂಶಿ
ಇನ್ನೊಂದಿಷ್ಟು ಖರ್ಚು ಆಗುತ್ತಿತ್ತು
ಇನ್ನು ಕಾರ್ ತಗೊಂಡು ಹೋದರೆ ಪೆಟ್ರೋಲ್, ಡೀಸೆಲ್ ಹಾಕಿಸಬೇಕು, ಬಾಟ ಕೊಡಬೇಕು, ದಿನದ ಬಾಡಿಗೆ ಕೊಡಬೇಕು, ಎಲ್ಲವನ್ನು ನೋಡಬೇಕು. ಇದೆಲ್ಲವೂ ಕಷ್ಟವಾಗಿತ್ತು ಎಂದು ಹೇಳಿದ್ದಾರೆ ಸೂರ್ಯವಂಶಿ.
ಆ ಕಾರ್ ಬೆಲೆ ಎಷ್ಟು?
ಒಮ್ಮೆ ಗಿಲ್ಲಿ ನಟ ಅವರು ಯೋಚನೆ ಮಾಡಿ, ನಾವು ಕಾರ್ ತಗೊಳೋಣ ಎಂದು ಹೇಳಿದನು. ಆಮೇಲೆ ಅವನು MG ಕಾರ್ ತಗೊಂಡಿದ್ದಾನೆ. ಅದಿಕ್ಕೆ 24 ಲಕ್ಷ ರೂಪಾಯಿ ಕೊಟ್ಟಿದ್ದಾನೆ ಎಂದಿದ್ದಾರೆ.
ಅಕೌಂಟ್ ಇರಲಿಲ್ಲ
ಬ್ಯಾಂಕ್ ಅಕೌಂಟ್ ಇಲ್ಲದ ಗಿಲ್ಲಿ ನಟ ಅವರು ಆ ರೀತಿ ಹಣ ಕೊಟ್ಟು ಕಾರ್ ತಗೊಂಡಿರೋದು ಸಣ್ಣ ವಿಷಯವಲ್ಲ. ಎರಡು ವರ್ಷದಲ್ಲಿ ನೀನು ಕಾರ್ ತಗೊಳ್ತೀಯಾ ಎಂದು ನಾನು ಹೇಳಿದ್ದೆ, ಒಂದೂವರೆ ವರ್ಷಕ್ಕೆ ಅವನು ಕಾರ್ ತಗೊಂಡಿದ್ದಾನೆ ಎಂದು ನಿರ್ದೇಶಕ ಸೂರ್ಯವಂಶಿ ಹೇಳಿದ್ದಾರೆ.
ಯಾರು ಟ್ರೋಫಿ ಗೆಲ್ತಾರೆ?
ಬಿಗ್ ಬಾಸ್ ಕನ್ನಡ ಸೀಸನ್ 12 ಸ್ಪರ್ಧಿ ಗಿಲ್ಲಿ ನಟ ಅವರನ್ನು ಅನೇಕರು ಇಷ್ಟಪಟ್ದಿದ್ದಾರೆ. ಗಿಲ್ಲಿ ಅವರೇ ಟ್ರೋಫಿ ಹೊಡೆಯಬಹುದು ಎಂದು ಬಹುತೇಕರು ಹೇಳುತ್ತಿದ್ದಾರೆ. ಹದಿನೈದು ದಿನಗಳಲ್ಲಿ ಫಿನಾಲೆ ನಡೆಯಲಿದೆ, ಯಾರು ವಿನ್ ಆಗ್ತಾರೆ ಎಂದು ಕಾದು ನೋಡಬೇಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

