- Home
- Entertainment
- TV Talk
- BBK 12: ನಾನು ಎಷ್ಟೇ ಪ್ರೀತಿಸಿದ್ರೂ ಗಿಲ್ಲಿ ನಟ ಹಗೆ ಸಾಧಿಸ್ತಾನೆ: ಮನಸ್ಸು ಬಿಚ್ಚಿ ಮಾತನಾಡಿದ Ashwini Gowda
BBK 12: ನಾನು ಎಷ್ಟೇ ಪ್ರೀತಿಸಿದ್ರೂ ಗಿಲ್ಲಿ ನಟ ಹಗೆ ಸಾಧಿಸ್ತಾನೆ: ಮನಸ್ಸು ಬಿಚ್ಚಿ ಮಾತನಾಡಿದ Ashwini Gowda
Bigg Boss Kannada Season 12 Episode Update: ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಅಶ್ವಿನಿ ಗೌಡ ಹಾಗೂ ಗಿಲ್ಲಿ ನಟ ಅವರಿಗೆ ಆಗಿ ಬರೋದೇ ಇಲ್ಲ. ಆರಂಭದಿಂದಲೂ ಇವರಿಬ್ಬರು ಜಗಳ ಆಡಿಕೊಳ್ಳುತ್ತಲೇ ಇದ್ದಾರೆ. ಅಶ್ವಿನಿ ಗೌಡ ಪ್ರೀತಿಸಿದ್ರೂ ಕೂಡ, ಗಿಲ್ಲಿ ನಟ ಮಾತ್ರ ದ್ವೇಷ ಮಾಡುತ್ತಿದ್ದಾರಂತೆ.

ಗಿಲ್ಲಿ ನಟ ನಾಮಿನೇಟ್ ಮಾಡ್ತಾರೆ
ಯಾವುದೇ ನಾಮಿನೇಶನ್ ವಿಚಾರ ಬರಲಿ, ಇನ್ಯಾವುದೋ ಟಾಸ್ಕ್ ಇರಲೀ, ಗಿಲ್ಲಿ ನಟ ಅವರು ಅಶ್ವಿನಿ ಗೌಡ ಅವರನ್ನು ನಾಮಿನೇಟ್ ಮಾಡುತ್ತಾರೆ. ಅಷ್ಟೇ ಅಲ್ಲದೆ ಅಶ್ವಿನಿ ಗೌಡ ಅವರನ್ನು ಕೆಣಕುವ ಮಾತುಗಳನ್ನು ಕೂಡ ಹೇಳುತ್ತಾರೆ. ಇವರಿಬ್ಬರು ಸುಮ್ಮನಾಗೋದಿಲ್ಲ, ಅಲ್ಲಿಂದಲೇ ಜಗಳ ಶುರುವಾಗುವುದು.
ಗಿಲ್ಲಿ ನಟ ಟಾರ್ಗೆಟ್ ಮಾಡ್ತಾರೆ!
ಧ್ರುವಂತ್ ಹಾಗೂ ಅಶ್ವಿನಿ ಗೌಡ ಅವರು 93ನೇ ದಿನ ಲಿವಿಂಗ್ ಏರಿಯಾದಲ್ಲಿ ಮಾತನಾಡಿಕೊಂಡಿದ್ದಾರೆ. ಆ ವೇಳೆ ಗಿಲ್ಲಿ ನಟ ತಮ್ಮನ್ನು ಟಾರ್ಗೆಟ್ ಮಾಡೋದರ ಬಗ್ಗೆ ಅವರು ಮಾತನಾಡಿಕೊಂಡಿದ್ದಾರೆ.
ಗಿಲ್ಲಿ ನಟನಿಗೆ ಅಶ್ವಿನಿ ಗೌಡ ರಾಣಿ
ಗಿಲ್ಲಿ ನಟ ಅವರು ಕ್ಯಾಪ್ಟನ್ ಆದಾಗ, ಅಶ್ವಿನಿ ಗೌಡ ಅವರನ್ನು ರಾಣಿಯಾಗಿ ಮಾಡಿಕೊಳ್ಳಬೇಕಿತ್ತು. ಗಿಲ್ಲಿ ನಟ ಅವರು ಸ್ವಂತಂತ್ರ ಕ್ಯಾಪ್ಟನ್ ಆಗೋಕೆ ಸಾಧ್ಯವಿರಲಿಲ್ಲ, ಇವರಿಗೆ ಇನ್ನೊಬ್ಬ ಕ್ಯಾಪ್ಟನ್‌ರನ್ನು ನೀಡಿದ್ದರು. ಇದರ ಬಗ್ಗೆಯೂ ಗಿಲ್ಲಿ ನಟ ಬೇಸರ ಹೊರಹಾಕಿದ್ದರು.
ಪರ್ಸನಲ್ ಆಗಿ ಮಾತಾಡ್ತಾನೆ
“ನಾನು ಎಷ್ಟು ಪ್ರೀತಿ ಮಾಡ್ತೀನಿ, ಕಂಟೆಂಟ್‌ಗೋಸ್ಕರ ಹೀಗೆಲ್ಲ ಮಾಡ್ತಾನೆ ಎಂದು ಸುಮ್ಮನಾಗ್ತೀನಿ. ತೀರ ಮನಸ್ಸಿಗೆ ತಗೊಂಡು ಆಟ ಆಡ್ತಾನೆ. ಆದರೆ ತೀರ ಪರ್ಸನಲ್ ಆಗಿ ಮಾತಾಡ್ತಾನೆ. ಯಾರು ಏನೇ ಹೇಳೋದಿಲ್ಲ ಎಂದುಕೊಂಡಿದ್ದಾನೆ. ನಾವು ಮರಳಿ ಕೊಟ್ಟರೆ ಅವನಿಗೆ ವಾಪಾಸ್ ತಗೋಳೋಕೆ ಆಗೋದಿಲ್ಲ” ಎಂದು ಅಶ್ವಿನಿ ಗೌಡ ಅವರು ಧ್ರುವಂತ್ ಬಳಿ ಹೇಳಿದ್ದಾರೆ.
ಕೆಳಗಡೆ ಹಾಕಿ ಮಾತನಾಡಿದ್ದಾನೆ
“ಟಾಸ್ಕ್ ಆಡೋ ಬದಲು, ಬಾಯಿ ಆಡಿಸಿಕೊಂಡು ಇಲ್ಲಿಯವರೆಗೆ ಬಂದಿದ್ದಾನೆ” ಎಂದು ಅಶ್ವಿನಿ ಗೌಡ ಹೇಳಿದ್ದಾರೆ. ಆಗ ರಾಶಿಕಾ ಶೆಟ್ಟಿ ಅವರು, “ಗಿಲ್ಲಿ ನಟ ಮಾತ್ರ ಬೇರೆಯವರನ್ನು ಎಷ್ಟು ಸಾಧ್ಯವೋ ಅಷ್ಟು ಕೆಳಗಡೆ ಹಾಕಿ ಮಾತನಾಡಿದ್ದಾನೆ” ಎಂದು ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

