- Home
- Entertainment
- TV Talk
- Radhika Pandit Birthday Photos: ಹಳೆ ಬೇರು ಮರೆಯದೆ 42ನೇ ಜನ್ಮದಿನ ಆಚರಿಸಿಕೊಂಡ ರಾಧಿಕಾ ಪಂಡಿತ್!
Radhika Pandit Birthday Photos: ಹಳೆ ಬೇರು ಮರೆಯದೆ 42ನೇ ಜನ್ಮದಿನ ಆಚರಿಸಿಕೊಂಡ ರಾಧಿಕಾ ಪಂಡಿತ್!
ದಶಕಗಳಿಗೂ ಕಾಲ ನಾಯಕಿಯಾಗಿ ಮೆರೆದ ನಟ ಯಶ್ ಪತ್ನಿ ರಾಧಿಕಾ ಪಂಡಿತ್ ಅವರು ಮದುವೆಯಾದಬಳಿಕ ಸಿನಿಮಾದತ್ತ ಮುಖ ಮಾಡಿಲ್ಲ. ಜಾಹೀರಾತು, ಸಿನಿಮಾ ಕಾರ್ಯಕ್ರಮಗಳಲ್ಲಿ ಅವರು ಭಾಗಿ ಆಗುತ್ತಿದ್ದಾರೆ. ಈಗ ಜನ್ಮದಿನವನ್ನು ಆಚರಿಸಿಕೊಂಡಿದ್ದಾರೆ. ಈ ಸುಂದರ ಫೋಟೋಗಳು ಇಲ್ಲಿವೆ.

ನಾಯಕಿಯಾಗಿ ಮೆರೆದ್ರು!
ರಾಧಿಕಾ ಪಂಡಿತ್ ಅವರು ದಶಕಗಳ ಕಾಲ ನಾಯಕಿಯಾಗಿ ಮೆರೆದಿದ್ದಾರೆ. ಅನೇಕ ಸೂಪರ್ ಹಿಟ್ ಸಿನಿಮಾಗಳ ಭಾಗ ಆಗಿದ್ದಾರೆ.
ಸ್ನೇಹಿತರ ಜೊತೆ ಜನ್ಮದಿನ ಆಚರಣೆ
ನಂದಗೋಕುಲ ಧಾರಾವಾಹಿಯಲ್ಲಿ ನಟಿಸುತ್ತಿದ್ದ ರಾಧಿಕಾ ಪಂಡಿತ್, ಯಶ್ ಈಗ ದಂಪತಿ. ಆದರೆ ಅಂದಿನ ಸ್ನೇಹಿತರನ್ನು ಮರೆತಿಲ್ಲ.
ಅದೇ ಸ್ನೇಹ ಸಂಬಂಧ
ಆ ಧಾರಾವಾಹಿಯಿಂದ ಇಲ್ಲಿಯವರೆಗೆ ರಾಧಿಕಾ ಪಂಡಿತ್ ಮನೆಯ ಎಲ್ಲ ಕಾರ್ಯಕ್ರಮಗಳಲ್ಲಿ ಈ ನಟಿಯರು ಭಾಗಿ ಆಗಿರೋದು ವಿಶೇಷ.
ಕುಚಿಕು ಫ್ರೆಂಡ್ಸ್
ರಾಧಿಕಾ ಪಂಡಿತ್ ಅವರಿಗೆ ಒಳ್ಳೆಯ ಫ್ರೆಂಡ್ಸ್ ಇದ್ದಾರೆ, ಆ ಫ್ರೆಂಡ್ಸ್ ಜೊತೆ ಸಮಯ ಕಳೆಯಲು ಬಯಸುತ್ತಾರೆ.
ನಂದಿನಿ ಗೌಡ
ನಂದಿನಿ ಗೌಡ ಅವರು ಸ್ನೇಹಿತೆ ಜೊತೆ ತೆಗೆಸಿಕೊಂಡ ಫೋಟೋ ಇದಾಗಿದೆ.
ಕೇಸರಿ ಬಣ್ಣದ ಉಡುಗೆ
ರಾಧಿಕಾ ಪಂಡಿತ್ ಅವರು ಎರಡು ಮಕ್ಕಳಿಗೆ ಜನ್ಮ ನೀಡಿದ ಬಳಿಕವೂ ಕೂಡ ಫಿಟ್ ಆಗಿದ್ದಾರೆ, ಕೇಸರಿ ಬಣ್ಣದ ಉಡುಗೆ ಧರಿಸಿ ಮಿಂಚಿದ್ದಾರೆ.
ಯಶ್ ಫ್ಯಾಮಿಲಿ ಟೈಮ್ ಮಿಸ್ ಮಾಡಲ್ಲ
ಕೆಲಸದ ಜೊತೆಗೆ ಯಶ್ ಅವರು ಫ್ಯಾಮಿಲಿ ಜೊತೆ ಸಮಯ ಕಳೆಯೋದನ್ನು ಮಿಸ್ ಮಾಡೋದಿಲ್ಲ.
ಸುಂದರ ಕುಟುಂಬ
ನಟ ಯಶ್ ಹಾಗೂ ರಾಧಿಕಾ ಪಂಡಿತ್ ಅವರು ಮಕ್ಕಳು, ಸ್ನೇಹಿತರ ಜೊತೆಗೆ..
ಗ್ರೂಪ್ ಫೋಟೋ
ಯಶ್, ರಾಧಿಕಾ ಪಂಡಿತ್ ಅವರು ಸ್ನೇಹಿತರ ಜೊತೆಗೆ ಕಂಡಿದ್ದು ಹೀಗೆ..
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

