- Home
- Entertainment
- TV Talk
- BBK 12: ಪಣ ತೊಟ್ಟು, ಹಠ ಸಾಧಿಸಿದ ಛಲಗಾರ್ತಿ Ashwini Gowda; ಇದಕ್ಕೆ ಭೇಷ್ ಹೇಳಲೇಬೇಕು!
BBK 12: ಪಣ ತೊಟ್ಟು, ಹಠ ಸಾಧಿಸಿದ ಛಲಗಾರ್ತಿ Ashwini Gowda; ಇದಕ್ಕೆ ಭೇಷ್ ಹೇಳಲೇಬೇಕು!
Bigg Boss Kannada Season 12 Episode: ಬಿಗ್ ಬಾಸ್ ಮನೆಯಲ್ಲಿ ಎಲ್ಲರೂ ಒಂದಾದರೆ, ಅಶ್ವಿನಿ ಗೌಡ ಇನ್ನೊಂದು ಕಡೆ ಆಗಿದ್ದಾರೆ. ನಾಮಿನೇಶನ್ ವಿಚಾರ ಬರಲಿ, ಬೇರೆ ವಿಷಯಗಳೇ ಇರಲಿ ಅಶ್ವಿನಿ ಗೌಡ ಅವರನ್ನು ಉಳಿದ ಸ್ಪರ್ಧಿಗಳು ವಿರೋಧ ಮಾಡೋದುಂಟು. ಈಗ ಅಶ್ವಿನಿ ಅವರು ಹಿಡಿದ ಹಠ ಸಾಧಿಸಿದ್ದಾರೆ. ಏನದು?

ಕಿರಿಯ ಸ್ಪರ್ಧಿಗಳಿಗೆ ಸ್ಪರ್ಧೆ
ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ 41ರ ಹರೆಯದ ಅಶ್ವಿನಿ ಗೌಡ ಅವರು ಫಿಸಿಕಲ್ ಟಾಸ್ಕ್‌ನಲ್ಲಿ ಅವರ ಕಿರಿಯರಿಗೆ ಕಾಂಪಿಟೇಶನ್ ಕೊಟ್ಟಿದ್ದರು. ಈಗಲೂ ಕೂಡ ಅವರು ಭರ್ಜರಿಯಾಗಿ ಟಾಸ್ಕ್ ಆಡಿದ್ದಾರೆ.
ಯಾರ ವಿರುದ್ಧ ಯಾರು ಟಾಸ್ಕ್ ಆಡಿದ್ರು?
ತಾಕತ್ತಿದ್ದರೆ ತಡೆದುಕೋ ಎಂದು ಟಾಸ್ಕ್ ಕೊಡಲಾಗಿತ್ತು. ಇವರಲ್ಲಿ ಗೆದ್ದವರು ಟಿಕೆಟ್ ಟು ಫಿನಾಲೆ 6 ಕಂಟೆಂಡರ್ ಟಾಸ್ಕ್‌ಗೆ ಅರ್ಹತೆ ಪಡೆಯುತ್ತಾರೆ. ಆ ವೇಳೆ ರಾಶಿಕಾ ಹಾಗೂ ರಘು ಅವರ ವಿರುದ್ಧ ಧ್ರುವಂತ್ ಹಾಗೂ ಅಶ್ವಿನಿ ಗೌಡ ನೀಡಿದ್ದರು.
ಟಾಸ್ಕ್ ನಿಯಮ ಏನು?
ಒಂದು ಕಂಬವನ್ನು ಸ್ಪರ್ಧಿಗಳು ಹಿಡಿದುಕೊಂಡು ನಿಲ್ಲಬೇಕು, ಉಳಿದವರು ಅವರನ್ನು ಡೈವರ್ಟ್ ಮಾಡಿ, ಆಟ ನಿಲ್ಲಿಸುವ ಹಾಗೆ ಮಾಡಿದರು. ಯಾರು ಹೆಚ್ಚು ಹೊತ್ತು ಕಂಬ ಹಿಡಿದು ನಿಲ್ಲುತಾರೋ ಅವರೇ ವಿನ್ನರ್. ಈ ಮಧ್ಯೆ ರಾಶಿಕಾ, ರಘು ಅವರು ಕಂಬ ಹಿಡಿದು ನಿಂತಾಗ ಅಶ್ವಿನಿ ಗೌಡ, ಧ್ರುವಂತ್ ಅವರು ಡೈವರ್ಟ್ ಮಾಡಬೇಕಿತ್ತು.
ಹಠ ಹಿಡಿದು ಕೂತ ಅಶ್ವಿನಿ ಗೌಡ
ಅಶ್ವಿನಿ ಗೌಡ, ಧ್ರುವಂತ್ ಅವರು ಮನೆಯಲ್ಲಿದ್ದ ಅಡುಗೆ ಎಣ್ಣೆ, ಲೋಶನ್ ಎಲ್ಲವನ್ನೂ ಕೂಡ ಅವರು ನೀರಿನಲ್ಲಿ ಮಿಕ್ಸ್ ಮಾಡಿ ರಾಶಿಕಾ, ರಘು ಮುಖಕ್ಕೆ ನೀರು ಎರಚಿದ್ದಾರೆ. ಅದಾದ ಬಳಿಕ ಅಶ್ವಿನಿ ಗೌಡ ಅವರು ಒಂದಾದ ಮೇಲೆ ಒಂದರಂತೆ ಮೈಮೇಲೆ ಬಟ್ಟೆ ಹಾಕಿಕೊಂಡಿದ್ದಲ್ಲದೆ, ರಘು ಅವರಿಗಿಂತ ಜಾಸ್ತಿ ಸಮಯ ಕಂಬ ಹಿಡಿದು ನಿಂತಿದ್ದರು. ರಘು, ರಾಶಿಕಾ ಅವರು ಬಹಳ ಫೋರ್ಸ್‌ನಲ್ಲಿ ನೀರು ಎರಚಿದರೂ ಕೂಡ ಅಶ್ವಿನಿ ಗೌಡ ಮಾತ್ರ ಹಠ ಹಿಡಿದು ನಿಂತಿದ್ದರು.
ಅಶ್ವಿನಿ ಗೌಡರನ್ನೇ ಮೆಚ್ಚಿದ ರಘು
ಕೊನೆಗೂ ರಘು ಅವರಿಗೆ ಠಕ್ಕರ್ ಕೊಟ್ಟು, ವಿನ್ ಆದ ಅಶ್ವಿನಿ ಗೌಡ ಅವರ ಆಟವನ್ನು ರಕ್ಷಿತಾ ಶೆಟ್ಟಿ, ರಘು ಕೂಡ ಮೆಚ್ಚಿದ್ದಾರೆ. ಹುಡುಗಿಯಾಗಿ ಈ ರೀತಿ ಆಟ ಆಡಿದ್ದಕ್ಕೆ ನನ್ನ ಸೆಲ್ಯೂಟ್ ಎಂದು ರಕ್ಷಿತಾ ಕೂಡ ಹೇಳಿದ್ದಾರೆ. ಫಿಸಿಕಲ್ ಟಾಸ್ಕ್, ಡ್ಯಾನ್ಸ್ ಅಂತ ಬಂದಾಗ ಅಶ್ವಿನಿ ಗೌಡ ಅವರು ಎತ್ತಿದ ಕೈ ಎನ್ನೋದರಲ್ಲಿ ಎರಡು ಮಾತಿಲ್ಲ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

