MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • ಕನ್ನಡಿಗ ಅಂತ ಹೇಳ್ಕೋಳೋಕೆ ನಾಚಿಕೆ ಆಗುತ್ತೆ, ಬಿಗ್ ಬಾಸ್ ಕನ್ನಡ ಶೋನ ಮಣ್ಣಿನ ಮಗ; ಮೈಕೆಲ್ ಅಜಯ್

ಕನ್ನಡಿಗ ಅಂತ ಹೇಳ್ಕೋಳೋಕೆ ನಾಚಿಕೆ ಆಗುತ್ತೆ, ಬಿಗ್ ಬಾಸ್ ಕನ್ನಡ ಶೋನ ಮಣ್ಣಿನ ಮಗ; ಮೈಕೆಲ್ ಅಜಯ್

ಬಿಗ್ ಬಾಸ್ ಸ್ಪರ್ಧೆಯಲ್ಲಿ ನಾನು ಕನ್ನಡದ ಮಣ್ಣಿನ ಮಗ ಎಂದೆಲ್ಲಾ ಬಿಲ್ಡಪ್ ಕೊಟ್ಟುಕೊಂಡು ಕನ್ನಡಿಗರ ಓಟು ಪಡೆದು ಫಿನಾಲೆವರೆಗೂ ಆಟವಾಡಿದ್ದ ಮೈಕಲ್ ಅಜಯ್ ಇದೀಗ ‘ನಾನು ಕನ್ನಡಿಗ ಎಂದು ಹೇಳಿಕೊಳ್ಳುವುದಕ್ಕೆ ನಾಚಿಕೆ ಆಗುತ್ತಿದೆ’ ಎಂದು ವಿವಾದಾತ್ಮಕ ಹೇಳಿಕೆ ನಿಡಿದ್ದಾನೆ.

3 Min read
Author : Sathish Kumar KH
| Updated : May 17 2026, 05:31 PM IST
Share this Photo Gallery
  • FB
  • TW
  • Linkdin
  • Whatsapp
110
Image Credit : Instagram

ಬಿಗ್ ಬಾಸ್ ಕನ್ನಡದ ಮಾಜಿ ಸ್ಪರ್ಧಿ ಮೈಕಲ್ ಅಜಯ್ ನಾನು ಕನ್ನಡ ನಾಡಿನ ಮಣ್ಣಿನ ಮಗ ಎಂದು ಹೇಳಿಕೊಂಡಿದ್ದನು. ಹೀಗೆ ಹೇಳಿಕೊಂಡು ಕನ್ನಡಿಗರ ಓಟು ಪಡೆದು ಸರ್ವೈವ್ ಆಗಿದ್ದರು. ಇದೀಗ ಏಕಾಏಕಿ 'ನಾನು ಕನ್ನಡಿಗ ಎಂದು ಹೇಳಿಕೊಳ್ಳುವುದಕ್ಕೆ ನಾಚಿಕೆ ಆಗುತ್ತದೆ' ಎಂದು ಬಹಿರಂಗವಾಗಿ ಹೇಳಿಕೊಂಡಿದ್ದಾನೆ.

Add Asianetnews Kannada as a Preferred SourcegooglePreferred
210
Image Credit : Instagram

ಹೌದು, ಬಿಗ್ ಬಾಸ್ ಮನೆಯಲ್ಲಿದ್ದಾಗ ಬಣ್ಣದ ಮಾತನಾಡಿ ಕನ್ನಡಿಗರ ಓಟು ಪಡೆದು ಫಿನಾಲೆ ವಾರದವರೆಗೂ ಬಂದಿದ್ದನು.  ಕನ್ನಡಿಗರ ಬಗ್ಗೆ ಮಾತನಾಡುತ್ತಾ ಕನ್ನಡಿಗರ ಓಟು ಪಡೆದು ಮೈಕೆಲ್ ಅಜಯ್ ಸರ್ವೈವ್ ಆಗಿದ್ದರು.ಬಿಗ್ ಬಾಸ್ ಸ್ಪರ್ಧೆ ಮುಗಿದ ನಂತರ ಕನ್ನಡಿಗರ ಬೆಂಬಲ ಮತ್ತು ಪ್ರೀತಿಯಿಂದ ಒಂದು ನಾನ್‌ವೆಜ್ ಶಾಪ್, ನಂತರ ಒಂದು ಅಂಗಡಿ ಹಾಕಿಕೊಂಡು ಬ್ಯುಸಿನೆಸ್ ಆರಂಭಿಸಿದ್ದಾರೆ.  

ಜೊತೆಗೆ, ತನ್ನ ಗರ್ಲ್ ಫ್ರೆಂಡ್ ಜೊತೆಗೆ ಬಾಡಿ ಬಿಲ್ಡಿಂಗ್ ಎಕ್ಸ್‌ಸೈಜ್ ಮಾಡಿಕೊಂಡು ವಿಡಿಯೋಹಾಕುತ್ತಿದ್ದವನು ಇದೀಗ ಏಕಾಏಕಿ 'ನಾನು ಕನ್ನಡಿಗ ಎಂದು ಹೇಳಿಕೊಳ್ಳುವುದಕ್ಕೆ ನಾಚಿಕೆ ಆಗುತ್ತದೆ' ಎಂದು ಬಹಿರಂಗವಾಗಿ ಹೇಳಿಕೊಂಡಿದ್ದಾನೆ.

Related Articles

Related image1
ಬಿಗ್ ಬಾಸ್ ಮೈಕಲ್ ಅಜಯ್ ಡ್ರಗ್ಸ್‌ ಡೀಲಿಂಗ್ ಮಾಡ್ತಾರಾ?; ರಸ್ತೆಯಲ್ಲಿ ಹುಡುಗನೊಬ್ಬ ಕೇಳಿದ ಪ್ರಶ್ನೆಗೆ ಖಡಕ್ ಉತ್ತರ!
Related image2
ಬಿಗ್ ಬಾಸ್ ಮೂಲಕ ಮಣ್ಣಿನ ಮಗ ಎಂದು ಖ್ಯಾತಿ ಪಡೆದ ಮೈಕಲ್ ಅಜಯ್‌ಗೆ 29ನೇ ಹುಟ್ಟುಹಬ್ಬದ ಸಂಭ್ರಮ!
310
Image Credit : Instagram

ಈ ಬಗ್ಗೆ ಎರಡು ಪಾರ್ಟ್‌ನಲ್ಲಿ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಅವರು, ನನ್ನ ಹೆಸರು ಮೈಕಲ್ ಅಜಯ್ ನಾನು ಅರ್ಧ ಭಾರತೀಯ ಹಾಗೂ ಅರ್ಧ ನೈಜೀರಿಯನ್ ಎಂದು ಮತ್ತೆ ಪರಿಚಯ ಮಾಡಿಕೊಂಡಿದ್ದಾನೆ. ಇನ್ನು ಭಾರತದಲ್ಲಿ ನಾನು ಅರ್ಧ ಕನ್ನಡಿಗ ಆಗಿದ್ದೇನೆ. ತುಂಬಾ ಹೆಮ್ಮೆಯಿಂದ ನಾನು ಕನ್ನಡಿಗ ಎಂದು ಹೇಳಿಕೊಳ್ಳುತ್ತಿದ್ದೆ. 

410
Image Credit : others

ಆದರೆ, ಇವಾಗ ಆ ತರಹ (ಕನ್ನಡಿಗ) ಎಂದು ಹೇಳಿಕೊಳ್ಳುವುದಕ್ಕೆ ನಿಜವಾಗಿಯೂ ನಾಚಿಕೆ ಆಗುತ್ತಿದೆ. ಏಕೆಂದರೆ ನನ್ನ ಇನ್‌ಸ್ಟಾಗ್ರಾಮ್‌ನಲ್ಲಿ ತುಂಬಾ ಫಾಲೋವರ್ಸ್ ಇದ್ದಾರೆ. ಇದರಲ್ಲಿ ಭಾರತೀಯರು, ವಿದೇಶದವರೂ ಕೂಡ ಇದ್ದಾರೆ. ನನ್ನ ಕಾಮೆಂಟ್‌ ಸೆಕ್ಷನ್ ಓಪೆನ್ ಮಾಡಿ ನೋಡಿದರೆ, ಬರೀ ಕೆಟ್ಟ ಕಾಮೆಂಟ್ಸ್‌ಗಳೇ ಕಾಣುತ್ತವೆ. ಅದರಲ್ಲಿಯೂ ಎಲ್ಲವೂ ಕನ್ನಡಿಗರೇ ಮಾಡಿರುವ ಕನ್ನಡ ಕಾಮೆಂಟ್‌ಗಳಾಗಿವೆ.

510
Image Credit : our own

ನಾನು ಒಬ್ಬ ಬಾಡಿ ಬಿಲ್ಡರ್ ಆಗಿದ್ದೇನೆ. ಬಾಡಿ ಬಿಲ್ಡರ್‌ಗಳು ಸ್ಟೇಜ್‌ನಲ್ಲಿ ಕೇವಲ ಒಂದು ಶಾರ್ಟ್ಸ್ ಹಾಕಿಕೊಂಡು ವರ್ಕೌಟ್ ಮಾಡುತ್ತಾರೆ. ಅವರು ಸ್ಟೇಜ್‌ ಮೇಲೆ ಹೋಗಿ ಬಾಡಿ ಬಿಲ್ಡಿಂಗ್ ಪ್ರದರ್ಶನ ಮಾಡುವಾಗಲೂ ಒಂದು ಶಾರ್ಟ್ಸ್ ಮಾತ್ರ ಹಾಕಿಕೊಂಡಿರುತ್ತಾರೆ. ಬಾಡಿ ಬಿಲ್ಡಿಂಗ್ ಎಂದರೆ ಕೇವಲ ಬಿಲ್ಡಿಂಗ್ ಅಂದರೆ ನಮ್ಮ ದೇಹವನ್ನು ತೋರಿಸುವುದು. ಅದೇ ರೀತಿ ನನ್ನ ಬಾಡಿಯನ್ನು ಇನ್‌ಸ್ಟಾಗ್ರಾಮ್‌ನಲ್ಲಿ ತೋರಿಸುತ್ತೇನೆ. ಯಾವುದೇ ಕೆಟ್ಟ ಕಂಟೆಂಟ್ ಮಾಡಿಲ್ಲ. ಇದನ್ನು ಸ್ವತಃ ನಮ್ಮ ಅಪ್ಪ-ಅಮ್ಮಂದಿರೇ ನನ್ನ ವಿಡಿಯೋಗಳನ್ನು ನೋಡುತ್ತಾರೆ.

610
Image Credit : Instagram

ನನಗೂ ಒಳ್ಳೆಯ ಮತ್ತು ಕೆಟ್ಟ ಕಂಟೆಂಟ್‌ಗಳು ಹೇಗಿರುತ್ತವೆ ಎಂಬುದು ಗೊತ್ತು. ನಮ್ಮ ಮನೆಯವರೇ ಸುಮ್ಮನಿರುವಾಗ ಈ ತರಹ ನೀವು ಕೆಟ್ಟ ಕಾಮೆಂಟ್ ಮಾಡವುದು ಎಷ್ಟು ಸರಿ..? ನಾನು ಮಾಡಿರುವ ವಿಡಿಯೋಗಳು ಡೀಸೆಂಟ್ ಆಗಿ ಇರಿದ್ದರೆ ಅದನ್ನು ಇನ್‌ಸ್ಟಾಗ್ರಾಮ್ ಅವರೇ ಅದನ್ನು ತೆಗೆದು ಹಾಕ್ತಾರೆ. ನನ್ನ ಅಕೌಂಟ್‌ ಅನ್ನೇ ಬ್ಲಾಕ್ ಮಾಡಿಬಿಡುತ್ತಾರೆ. ನನಗೂ ಗೊತ್ತು, ಹೀಗಾಗಿ ತುಂಬಾ ಡೀಸೆಂಟ್ ಆಗಿ ವಿಡಿಯೋ ಮಾಡಿದರೂ ನೀವು ಕೆಟ್ಟದಾಗಿ ಕಾಮೆಂಟ್ ಮಾಡುವುದು ಏಕೆ? ಇದರಿಂದ ನಮ್ಮ ಅಪ್ಪ-ಅಮ್ಮನಿಗೆ ತುಂಬಾ ಬೇಸರವಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ.

710
Image Credit : Instagram

ಒಂದೊಂದು ಟೈಮಲ್ಲಿ ನನ್ನ ಗರ್ಲ್‌ ಫ್ರೆಂಡ್ ಜೊತೆಗೆ ನಾನು ವಿಡಿಯೋ ಮಾಡುತ್ತೇನೆ. ಅದರಲ್ಲಿಯೂ ನಾನು ಯಾವುದೇ ಕೆಟ್ಟ ದೃಶ್ಯಗಳನ್ನು ವಿಡಿಯೋ ಮಾಡಿ ಅಪ್ಲೋಡ್ ಮಾಡುವುದಿಲ್ಲ. ಕೆಲವೊಇಬ್ಬರು ಏಕೆ ನೀವು ನಿಮ್ಮ ಹುಡುಗಿಯ ಮುಖ ತೋರಿಸುವುದಿಲ್ಲ ಎಂದು ಕೇಳುತ್ತಾರೆ. ಈ ಬಗ್ಗೆ ಕಾಮೆಂಟ್ಸ್‌ ಅಲ್ಲಿ ಅವಳ ಬಗ್ಗೆ ಜನ ಏನೇನು ಮಾತಾಡ್ತಾರೆ ಅಂತಾ ನಿಮಗೇ ಗೊತ್ತಾಗುತ್ತದೆ. ಹೀಗಾಗಿ, ನಾನು ಅವಳ ಮುಖ ತೋರಿಸುತ್ತಿಲ್ಲ.

810
Image Credit : Instagram

ನೀವು ಪ್ರೀತಿಸುವ ಹುಡುಗಿ ಬಗ್ಗೆ ಈ ತರಹ ಎಲ್ಲಾ ಮಾತನಾಡಿದರೆ, ನಿಮಗೆ ಎಷ್ಟು ಬೇಸರ ಆಗುತ್ತೆ ಅಲ್ವಾ? ನನ್ನ ಇನ್‌ಸ್ಟಾಗ್ರಾಮ್ ಅಕೌಂಟ್‌ನಲ್ಲಿ ಎಲ್ಲ ಕಾಮೆಂಟ್ ಬಾಕ್ಸ್ ಓಪನ್ ಮಾಡಿದರೆ ಎಲ್ಲವೂ ಕನ್ನಡದಲ್ಲಿ ಕೆಟ್ಟ ಕಾಮೆಂಟ್‌ಗಳೇ ತುಂಬಿವೆ. ನನಗೆ ಕನ್ನಡ ಅಷ್ಟೊಂದು ಚೆನ್ನಾಗಿ ಓದಲು ಬರೊಲ್ಲ. ಆದರೂ ನಾನು ನೋಡಿದಾಗ ಬರೀ ಕೆಟ್ಟ ಕಾಮೆಂಟ್‌ಗಳೇ ತುಂಬಿರುತ್ತವೆ.

910
Image Credit : Instagram

ನನ್ನ ಲೈಫ್‌ನಲ್ಲಿ ನನಗೆ ಯಾವುದೇ ಬೇಜಾರು ಇಲ್ಲ, ನಾನು ಖುಷಿಯಾಗೇ ಇದ್ದೇನೆ. ಆದರೆ, ಕನ್ನಡಿಗರು ಯಾಕೆ ಇಷ್ಟೊಂದು ಕೆಟ್ಟ ಕಾಮೆಂಟ್ ಮಾಡುತ್ತಾರೆ ಗೊತ್ತಾಗುತ್ತಿಲ್ಲ. ಆದರೂ ತುಂಬಾ ಜನ ಕನ್ನಡಿಗರು ನನಗೆ ಸಪೋರ್ಟ್ ಮಾಡುತ್ತಿರುವುದಕ್ಕೆ ನಿಮಗೆಲ್ಲರಿಗೂ ಥ್ಯಾಂಕ್ಸ್ ಎಂದೂ ಹೇಳಿದ್ದಾರೆ.

1010
Image Credit : Instagram

ನಾನು ನಿಮ್ಮ ಹತ್ತಿರ ಜಾಸ್ತಿ ಏನೂ ಕೇಳುವುದಿಲ್ಲ. ನಿಮಗೆ ಗೊತ್ತಿರೋರೆ ನಿಮ್ಮ ಕೆಟ್ಟ ಕಾಮೆಂಟ್‌ಗಳನ್ನು ನೋಡಿದರೆ ಅವರು ನಿಮ್ಮ ಬಗ್ಗೆ ಏನು ಯೋಚನೆ ಮಾಡ್ತಾರೆ ಎಂಬುದನ್ನು ತಿಳಿದುಕೊಳ್ಳಿ. ನಾನು ನಿಮಗೆ ಇಷ್ಟವಾಗಿಲ್ಲ ಎಂದರೆ ಸುಮ್ಮನೆ ನನ್ನ ವಿಡಿಯೋ ನೋಡದೆ ಸ್ಕ್ರೋಲ್ ಮಾಡಿಕೊಂಡು ಮೇಲೆ ತಳ್ಳಿಬಿಡಿ. ಅದನ್ನು ಬಿಟ್ಟು ಇಷ್ಟೊಂದು ಬೇಜಾರು ಮಾಡೋದೇಕೆ? ಎಂದು ಮನವಿ ಮಾಡಿಕೊಂಡಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SK
Sathish Kumar KH
ವಿಜಯನಗರ ಜಿಲ್ಲೆ ಕಂದಗಲ್‌ಪುರ ಗ್ರಾಮದವನು ಮೂಲತಃ ಶಿಕ್ಷಕ. ಆದರೆ, ಆಕರ್ಷಿಸಿದ್ದು ಪತ್ರಿಕೋದ್ಯಮ. ಎಂಟು ವರ್ಷಗಳಿಂದ ಪ್ರಜಾವಾಣಿ, ವಿಜಯವಾಣಿ ನಂತರ ಇದೀಗ ಏಷ್ಯಾನೆಟ್ ಕನ್ನಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಕರ್ನಾಟಕ ರಾಜಕಾರಣ ನೆಚ್ಚಿನ ಕ್ಷೇತ್ರ. ಡಿಜಿಟಲ್ ಮಾಧ್ಯಮಕ್ಕನುಗುಣವಾಗಿ ಶಿಕ್ಷಣ, ಆರೋಗ್ಯ, ಸಿನಿಮಾ ಸುದ್ದಿಗಳನ್ನೂ ಬರೆಯುತ್ತೇನೆ. ಕ್ರಿಕೆಟ್, ಕೃಷಿ ಇಷ್ಟ. ಓದು ನೆಚ್ಚಿನ ಹವ್ಯಾಸ.
ಬಿಗ್ ಬಾಸ್
ಬಿಗ್ ಬಾಸ್ ಕನ್ನಡ
ವಿವಾದ
ಕನ್ನಡ
ಕನ್ನಡಿಗ

Latest Videos
Recommended Stories
Recommended image1
ಶರತ್ ಥರ ಮಗ ಬೇಕು ಎಂದಿದ್ದ ದಿಲೀಪ್ ರಾಜ್… ಹಳೆ ನೆನಪು ಬಿಚ್ಚಿಟ್ಟ ‘ನಾ ನಿನ್ನ ಬಿಡಲಾರೆ’ ನಟ
Recommended image2
Exclu Interview: ಮಗು ಆದ್ಮೇಲೆ ತೂಕ ಇಳಿಸ್ಕೊಂಡು ಮತ್ತೆ ಮೊದಲಿನಂತಾದ Lakshmi Baramma Serial Kavitha Gowda
Recommended image3
Kwatle Kitchen ಸೇರಿದ ಬಿಗ್ ಬಾಸ್ ರಕ್ಷಿತಾ ಶೆಟ್ಟಿ, ಸೂರಜ್ ಸಿಂಗ್… Promo ನೋಡಿ ಫ್ಯಾನ್ಸ್ ಖುಷ್
Related Stories
Recommended image1
ಬಿಗ್ ಬಾಸ್ ಮೈಕಲ್ ಅಜಯ್ ಡ್ರಗ್ಸ್‌ ಡೀಲಿಂಗ್ ಮಾಡ್ತಾರಾ?; ರಸ್ತೆಯಲ್ಲಿ ಹುಡುಗನೊಬ್ಬ ಕೇಳಿದ ಪ್ರಶ್ನೆಗೆ ಖಡಕ್ ಉತ್ತರ!
Recommended image2
ಬಿಗ್ ಬಾಸ್ ಮೂಲಕ ಮಣ್ಣಿನ ಮಗ ಎಂದು ಖ್ಯಾತಿ ಪಡೆದ ಮೈಕಲ್ ಅಜಯ್‌ಗೆ 29ನೇ ಹುಟ್ಟುಹಬ್ಬದ ಸಂಭ್ರಮ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved