ಕನ್ನಡ ಜನಪ್ರಿಯ ನಟ, ನಿರ್ದೇಶಕ, ನಿರೂಪಕ ದಿಲೀಪ್ ರಾಜ್ ಇತ್ತೀಚೆಗೆ ಹೃದಯಾಘಾತದಿಂದ ನಿಧನರಾದರು. ಇದೀಗ ನಾ ನಿನ್ನ ಬಿಡಲಾರೆ ನಟ ಶರತ್ ಪದ್ಮನಾಭ್ ತಮ್ಮ ಹಾಗೂ ದಿಲೀಪ್ ಸರ್ ನಡುವಿನ ಭಾಂದವ್ಯ ಎಂತದ್ದು ಅನ್ನೋದನ್ನು ಸ್ವತಃ ದಿಲೀಪ್ ರಾಜ್ ಹೇಳಿರುವ ವಿಡಿಯೋ ಶೇರ್ ಮಾಡಿದ್ದಾರೆ.
ಶರತ್ ಥರ ಮಗ ಬೇಕು ಎಂದಿದ್ದ ದಿಲೀಪ್ ರಾಜ್
ಕನ್ನಡ ಚಿತ್ರರಂಗ ಮತ್ತು ಕಿರುತೆರೆಯ ಜನಪ್ರಿಯ ನಿರ್ದೇಶಕ, ನಿರ್ಮಾಪಕ, ನಟ ದಿಲೀಪ್ ರಾಜ್ ಇತ್ತೀಚೆಗೆ ಹೃದಯಾಘಾತದಲ್ಲಿ ನಿಧನರಾಗಿದ್ದರು. ಕನ್ನಡ ಕಿರುತೆರೆಯಲ್ಲಿ ಹಲವಾರು ಹೊಸ ಕಲಾವಿದರಿಗೆ ಜೀವನ ಕೊಟ್ಟ ನಿರ್ಮಾಪಕರು ಇವರು. ಪಾರು ಹಾಗೂ ‘ನಾ ನಿನ್ನ ಬಿಡಲಾರೆ’ ನಟ ಶರತ್ ಪದ್ಮನಾಭ್ ಅವರು ಕೂಡ ದಿಲೀಪ್ ರಾಜ್ ಶಿಷ್ಯರು. ಇದೀಗ ಶರತ್ ಅವರು ದಿಲೀಪ್ ರಾಜ್ ಈ ಹಿಂದೆ ವೇದಿಕೆ ಮೇಲೆ ನನಗೆ ಗಂಡ ಮಗ ಇದ್ರೆ, ಅದು ಶರತ್ ಥರ ಇರಬೇಕು ಎಂದು ಮನಸಾರೆ ಹೇಳಿರುವ ವಿಡಿಯೋ ಒಂದನ್ನು ಶೇರ್ ಮಾಡಿ ತಮ್ಮ ಮನದಾಳಾದ ಮಾತನ್ನು ಹಂಚಿಕೊಂಡಿದ್ದಾರೆ.

ನನ್ನ ಪ್ರೀತಿಯ ದಿಲೀಪ್ ಸರ್,
ಎಲ್ಲಿಂದ ಶುರು ಮಾಡ್ಬೇಕು ಅಂತ ಗೊತ್ತಾಗ್ತಾ ಇಲ್ಲ.
ಇನ್ನು ಒಂದ್ ತಿಂಗಳಿಗೆ ನಿಮ್ನ ವಿದ್ಯಾ ಮ್ಯಾಡಂನ ಪರಿಚಯ ಆಗಿ 10 ವರ್ಷ ಆಗುತ್ತೆ. ವಿದ್ಯಾ ಮ್ಯಾಮ್ ಕಾಲ್ ಮಾಡಿ ಆಫೀಸ್ಗೆ ಬನ್ನಿ ಆಡಿಷನ್ಗೆ ಅಂದಾಗ ನಾನ್ ಯಾರ್ನ ಮೀಟ್ ಮಾಡ್ತಾ ಇದೀನಿ ಅನ್ನೋ idea ಕೂಡ ಇರ್ಲಿಲ್ಲ ಅವತ್ತು. ವಿದ್ಯಾ ಮ್ಯಾಮ್ whatsapp DP li ನಿಮ್ನ ಅವರ್ ಜೊತೆ ನೋಡ್ದಾಗ ಮೋಸ್ಟ್ಲಿ ಅವರು ನಿಮ್ fan irbeku ಅನ್ಕೊಂಡ್ ಇದ್ದೆ. ಬಟ್ ಅವತ್ತು ಆಫೀಸ್ ge ಬಂದಾಗಲೇ ಗೊತ್ತಾಗಿದ್ದು ನಾನ್ ನಿಮ್ನ ಮೀಟ್ ಮಾಡೋಕೆ ಬಂದಿದ್ದು ಅಂತ. Like everyone , I was starstruck. ಲೈಫ್ ಅಲ್ಲೇ ಕ್ಯಾಮೆರಾ ಫೇಸ್ ಮಾಡ್ಡೇ ಇದ್ದೋನಿಗೆ ಮೊದಲ್ನೆ ಸಲ ಕ್ಯಾಮರ ಮುಂದೆ ನಿಲ್ಸಿದ್ದು ನೀವು. I was a toddler in acting , was having no knowledge of acting. ಅಲ್ಲಿಂದ ಇಲ್ಲಿವರ್ಗು ನನ್ನ ಆಕ್ಟಿಂಗ್ ಜರ್ನಿಯ backbone ಆಗಿದ್ದವ್ರು ನೀವು. ಕ್ಯಾಮೆರಾ ಹೇಗ್ ಫೇಸ್ ಮಾಡ್ಬೇಕು ಅಂತ ಹೇಳ್ಕೊಡೊದ್ರಿಂದ , ಇತ್ತೀಚಿಗೆ ನೀವು ಡೈರೆಕ್ಟ್ ಮಾಡಿದ್ದ micro series ಅಲ್ಲಿ act ಮಾಡೋವರ್ಗೂ I have come a long way.
“ಎಲ್ಲಾ ನಿಮ್ಮಿಂದ” .
You have been a guru, guide, friend, parent what not. You were my go to person to discuss anything be it movies , life , sport , philosophy , anything you name it. ಈಗ ನೀವು ಇಲ್ಲ ಅನ್ನೋ ಸತ್ಯನ ಅರಗಿಸಿಕೊಳ್ಳುದು ತುಂಬಾ ಕಷ್ಟ ಆಗಿದೆ ಎಂದು ಶರತ್ ಭಾವುಕರಾಗಿ ಬರೆದಿದ್ದಾರೆ.
ಶರತ್ ಹಂಚಿಕೊಂಡಿರುವ ವಿಡೀಯೋದಲ್ಲಿ ಏನಿತ್ತು?
ಅಂದ ಹಾಗೆ ಈ ಹಿಂದೆ ಶರತ್ ‘ಪಾರು’ ಧಾರಾವಾಹಿ ಮೂಲಕ ಮನೆಮಾತಾಗಿದ್ದರು. ಪಾರು ಧಾರಾವಾಹಿಯನ್ನು ನಿರ್ದೇಶಿಸಿ, ನಿರ್ಮಾಣ ಮಾಡಿದ್ದು, ದಿಲೀಪ್ ರಾಜ್. ಈ ಧಾರಾವಾಹಿಗಾಗಿ ಶರತ್ ಬೆಸ್ಟ್ ನಟ ಪ್ರಶಸ್ತಿ ಪಡೆದಾಗ, ವೇದಿಕೆಯಲ್ಲಿ ಶರತ್ ಜೊತೆ ನಿಂತು ಸಂಭ್ರಮಿಸಿದ ದಿಲೀಪ್ ರಾಜ್, ಶರತ್ ನ ಈ ಯಶಸ್ಸನ್ನು ನೋಡಿ ಅವರ ಅಪ್ಪ-ಅಮ್ಮ ಎಷ್ಟು ಖುಷಿ ಪಡ್ತಾರೋ ಗೊತ್ತಿಲ್ಲ. ಆದರೆ ಶ್ರೀವಿದ್ಯಾ ನಿಜವಾಗಿಯೂ ಹೆಮ್ಮೆ ಪಡುತ್ತಾಳೆ. ನಮಗೆ ಇಬ್ಬರು ಹೆಣ್ಣು ಮಕ್ಕಳು. ಆದರೆ ಅಪ್ಪಿ ತಪ್ಪಿ ನಮಗೆ ಗಂಡು ಮಗ ಕೊಟ್ರೆ ಅದು ಶರತ್ ಥರ ಆಗ್ಬೇಕು ಅಂತ ನಾನು ಇಷ್ಟಪಡ್ತೇನೆ. ಶರತ್ ಒಳ್ಳೆಯ ಹೃದಯವಂತ, ಒಳ್ಳೆಯ ಗೆಳೆಯ, ಒಳ್ಳೆಯ ಮಗ, ಒಳ್ಳೆಯ ಅಣ್ಣನು ಹೌದು. ಇಂಡಷ್ಟ್ರಿಯಲ್ಲಿ ಶರತ್ ಗೆ ನಾನು-ಶ್ರೀವಿದ್ಯಾ ಅಪ್ಪ-ಅಮ್ಮ ಅಂತಾನೆ ಹೇಳಬಹುದು, ಅವನ ಪ್ರತಿ ಹೆಜ್ಜೆಯಲ್ಲಿ ನಾವಿದ್ದೆವು ಎಂದಿದ್ದರು ದಿಲೀಪ್ ರಾಜ್.


