- Home
- Entertainment
- TV Talk
- BBK 12: ತಪ್ಪು ತಿದ್ದಿಕೊಳ್ಳದ ಗಿಲ್ಲಿ ನಟನಿಗೆ ಕೊನೆಗೂ ಸರಿಯಾದ ಏಟು ಕೊಟ್ಟ ವಂಶದ ಕುಡಿ ರಕ್ಷಿತಾ
BBK 12: ತಪ್ಪು ತಿದ್ದಿಕೊಳ್ಳದ ಗಿಲ್ಲಿ ನಟನಿಗೆ ಕೊನೆಗೂ ಸರಿಯಾದ ಏಟು ಕೊಟ್ಟ ವಂಶದ ಕುಡಿ ರಕ್ಷಿತಾ
Bigg Boss Kannada Season 12 Updates: ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಯಾರು, ಯಾವಾಗ ಫ್ರೆಂಡ್ಸ್ ಆಗುತ್ತಾರೆ? ಯಾರಿಗೆ ಯಾರ ಮೇಲೆ ಲವ್ ಆಗುತ್ತದೆ, ದ್ವೇಷ ಹುಟ್ಟಿಕೊಳ್ತದೆ ಎಂದು ಹೇಳೋಕೆ ಆಗೋದಿಲ್ಲ. ಈ ವಾರ ಗಿಲ್ಲಿ ನಟನನ್ನು ರಕ್ಷಿತಾ ವಿರೋಧಿಸಿದ್ದಾರೆ.

ಸಿಕ್ಕಿದ್ದೇ ಚಾನ್ಸ್ ಎಂದು ಮಾತಾಡಿದ್ರು
ಅಶ್ವಿನಿ ಗೌಡ ಹಾಗೂ ಅಭಿಷೇಕ್ ನಡುವಿನ ಕ್ಯಾಪ್ಟನ್ಸಿ ಟಾಸ್ಕ್ ವೇಳೆ ಗಿಲ್ಲಿ ನಟ ಅವರು ಮಾತನಾಡಬೇಕಿತ್ತು. ಇದೊಂದು ಟಾಸ್ಕ್ ಆಗಿದ್ದು, ಅಶ್ವಿನಿ ಅವರ ಏಕಾಗ್ರತೆ ಹಾಳು ಮಾಡೋದು ಗಿಲ್ಲಿ ಉದ್ದೇಶ ಆಗಿತ್ತು. ಹೀಗಾಗಿ ಗಿಲ್ಲಿ ಸಿಕ್ಕಿದ್ದೇ ಚಾನ್ಸ್ ಎಂದುಕೊಂಡು ಮಾತನಾಡಿದರು.
ಅಶ್ವಿನಿ ಗೌಡ ಹಾಗೂ ರಘು ಮಧ್ಯೆ ಜಗಳ
ಏಕವಚನ ವಿಚಾರದಲ್ಲಿ ಅಶ್ವಿನಿ ಗೌಡ ಹಾಗೂ ರಘು ಮಧ್ಯೆ ಜಗಳ ಆಗಿತ್ತು. ಇದೇ ವಿಚಾರ ಇಟ್ಟುಕೊಂಡು ಗಿಲ್ಲಿ ನಟ ಅವರು ಅಶ್ವಿನಿ ಗೌಡ ಮೇಲೆ ಮಾತಿನ ಪ್ರಹಾರ ನಡೆಸಿದ್ದರು. ಏನು ನೀವು ಅಷ್ಟೊಂದು ಕಿರುಚುತ್ತೀರಾ? ನೀವು ಕಣ್ಣು ಬಿಟ್ಟು ನೋಡಿಕೊಂಡು ಗುರಾಯಿಸಿದ್ರೆ, ಕಣ್ಣು ಕಿತ್ತು, ಅದರಲ್ಲಿ ಗೋಲಿ ಆಡುವೆ. ರಘು ಅಣ್ಣ ನಿಮಗೆ ಅಶ್ವಿನಿ ಅಂತ ಕರೆಯದೆ, ಆಶು, ಅಶು ಅಂತ ಕರೆಯಬೇಕಾ?” ಎಂದಿದ್ದರು.
ಮರ್ಯಾದೆ ಕೊಡೋಕೆ ಮನಸ್ಸು ಬರಲ್ಲ
“ಅಶ್ವಿನಿ ಎನ್ನೋದು ಸುಂದರವಾದ ಹೆಸರು. ನಿಮ್ಮನ್ನು ಹೋಗಮ್ಮಮ್ಮ ಅಂತ ಕರೆದೆ. ಅದರಲ್ಲಿ ಅಮ್ಮ ಅಂತ ಇದೆ. ನಿಮ್ಮನ್ನು ನೋಡಿದ್ರೆ ಮರ್ಯಾದೆ ಕೊಡಬೇಕು ಎಂದು ಅನಿಸೋದಿಲ್ಲ” ಎಂದು ಗಿಲ್ಲಿ ನಟ ಹೇಳಿದ್ದರು.
ಕಿತಾಪತಿ ಹೆಂಗಸು
“ಕಿತಾಪತಿ ಹೆಂಗಸು. ಮ್ಯಾನಿಪ್ಯುಲೇಟ್ ಮಾಡ್ತೀರಾ. ಬಿಗ್ ಬಾಸ್ ಬಳಿ ಹೋಗಿ ಮುಕ್ಕಾಲು ಗಂಟೆ ನನಗೆ ಮೊಸರು, ಮೂಸಂಬಿ ಜ್ಯೂಸ್ ಬೇಕು, ಕೊಡಿ ಅಂತ ಕೇಳ್ತೀರಾ” ಎಂದೆಲ್ಲ ಗಿಲ್ಲಿ ನಟ ಹೇಳಿದ್ದರು.
ಎಲ್ಲರೂ ನಕ್ಕರು
ಗಿಲ್ಲಿ ನಟ ಅವರು ಮಾತನಾಡಿದಾಗ ಎಲ್ಲರೂ ನಕ್ಕಿದ್ದರು. ರಕ್ಷಿತಾ ಅವರಂತೂ ಬೇರೆ ಕಡೆ ಮುಖ ಮಾಡಿ ನಕ್ಕಿದ್ದರು. ಧ್ರುವಂತ್ ಅಂತೂ ನಗಲಾಗದೆ, ಸುಮ್ಮನೆ ಇರಲಾಗದೆ ಶರ್ಟ್‌ನ್ನು ಮುಖಕ್ಕೆ ಮುಚ್ಚಿಕೊಂಡು ನಕ್ಕಿದ್ದರು. ಅಶ್ವಿನಿ ಅವರಿಗೆ ಇದರಿಂದ ಬೇಸರ ಕೂಡ ಆಗಿತ್ತು.
ತಪ್ಪು ಎತ್ತಿಹೇಳಿದ ರಕ್ಷಿತಾ
ಅಂದಹಾಗೆ ಗಿಲ್ಲಿ ನಟ ಬಳಿ ರಕ್ಷಿತಾ ಹೋಗಿ, “ನಿಮ್ಮಿಂದ ಅವರ ಮನಸ್ಸಿಗೆ ನೋವಾಗಿದೆ, ಹೋಗಿ ಕ್ಷಮೆ ಕೇಳಿ. ಇದು ಆಟ ಅಂತ ಹೇಳಿ. ಆಟ ಅಂತ ಹೇಳದೆ ಇರೋದು ತಪ್ಪು” ಎಂದಿದ್ದರು. ನಿನಗೆ ಇದು ಬೇಡದೆ ಇರೋದು ಎಂದು ರಘು, ರಕ್ಷಿತಾಗೆ ಹೇಳಿದ್ದರು. ಆಮೇಲೆ ರಕ್ಷಿತಾ ಸುಮ್ಮನಿದ್ದರು.
ಗಿಲ್ಲಿ ನಟ ಅವರು ಆಮೇಲೆ ಅಶ್ವಿನಿ ಗೌಡಗೆ ಕ್ಷಮೆ ಕೇಳಿದ್ದಾರೆ. ಇದಾದ ಬಳಿಕ ಮತ್ತೆ ಕ್ಷಮೆ ಕೇಳಿಲ್ಲ ಎಂದು ಸ್ಪಂದನಾ ಮುಂದೆ ವಾದ ಕೂಡ ಮಾಡಿದ್ದರು.
ಕಳಪೆ ಕೊಟ್ಟ ರಕ್ಷಿತಾ
ರಕ್ಷಿತಾ ನನ್ನ ವಂಶದ ಕುಡಿ ಎಂದು ಗಿಲ್ಲಿ ನಟ ತಮಾಷೆ ಮಾಡೋದುಂಟು. ಅಂದಹಾಗೆ ಗಿಲ್ಲಿ ನಟನ ಮಾತುಗಳನ್ನು ಕೂಡ ರಕ್ಷಿತಾ ಪಾಲಿಸುತ್ತಾರೆ. ಈ ವಾರ ಗಿಲ್ಲಿ ನಟ ನಡೆದುಕೊಂಡಿದ್ದು ಸರಿ ಇಲ್ಲ ಎಂದು ರಕ್ಷಿತಾ ಅವರೇ ಗಿಲ್ಲಿಗೆ ಕಳಪೆ ಪಟ್ಟ ಕೊಟ್ಟಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

