- Home
- Entertainment
- TV Talk
- BBK 12: ಬಿಗ್‌ಬಾಸ್ ಬಾಗಿಲು ತಟ್ಟಿದ ಅಶ್ವಿನಿ ಗೌಡ; ಈ ಬಾರಿ ಜಗಳ ಆಗಿದ್ದು ಗಿಲ್ಲಿ ಜೊತೆ ಅಲ್ಲವೇ ಅಲ್ಲ
BBK 12: ಬಿಗ್‌ಬಾಸ್ ಬಾಗಿಲು ತಟ್ಟಿದ ಅಶ್ವಿನಿ ಗೌಡ; ಈ ಬಾರಿ ಜಗಳ ಆಗಿದ್ದು ಗಿಲ್ಲಿ ಜೊತೆ ಅಲ್ಲವೇ ಅಲ್ಲ
ಬಿಗ್‌ಬಾಸ್ ಮನೆಯಲ್ಲಿ ಕ್ಯಾಪ್ಟನ್ ರಘು ಮತ್ತು ಅಶ್ವಿನಿ ಗೌಡ ನಡುವೆ ಕ್ಲೀನಿಂಗ್ ವಿಚಾರವಾಗಿ ಜಗಳ ತಾರಕಕ್ಕೇರಿದೆ. ರಘು ಏಕವಚನದಲ್ಲಿ ಮಾತನಾಡಿದ್ದಕ್ಕೆ ಮನನೊಂದ ಅಶ್ವಿನಿ, ಕಣ್ಣೀರು ಹಾಕುತ್ತಾ ಮನೆಯಿಂದ ಹೊರಹೋಗಲು ಬಿಗ್‌ಬಾಸ್‌ಗೆ ಮನವಿ ಮಾಡಿದ್ದಾರೆ.

ಸ್ಪರ್ಧಿ ಗಿಲ್ಲಿ ನಟ
ಮಂಗಳವಾರದ ಸಂಚಿಕೆಯಲ್ಲಿ ಸ್ಪರ್ಧಿ ಗಿಲ್ಲಿ ನಟ ಅವರೊಂದಿಗೆ ಅಶ್ವಿನಿ ಗೌಡ ಅವರ ವಾಕ್ಸಮರ ತೀವ್ರವಾಗಿತ್ತು. ಡ್ರಮ್ ನೀರು ತುಂಬಿಸೋ ಟಾಸ್ಕ್ ನಂತರ ಅಶ್ವಿನಿ ಗೌಡ ಕಣ್ಣೀರು ಹಾಕಿದ್ದರು. ಇಂದಿನ ಪ್ರೋಮೋದಲ್ಲಿ ಮತ್ತೆ ಅಶ್ವಿನಿ ಗೌಡ ಕಣ್ಣೀರು ಹಾಕಿದ್ದು, ಕಾರಣ ಮಾತ್ರ ಗಿಲ್ಲಿ ಅಲ್ಲ.
ಮನೆಯಲ್ಲಿನ ಕ್ಲೀನಿಂಗ್
ಮನೆಯಲ್ಲಿನ ಕ್ಲೀನಿಂಗ್ ಕೆಲಸ ಮಾಡಲು ಬರುವಂತೆ ಅಶ್ವಿನಿ ಗೌಡ ಅವರಿಗೆ ಕ್ಯಾಪ್ಟನ್ ಆಗಿರುವ ರಘು ಕರೆಯುತ್ತಾರೆ. ಬ್ಯಾಕ್ ಪೇನ್ ಆಗ್ತಿದ್ದು, ನನಗೆ 10 ನಿಮಿಷ ರೆಸ್ಟ್ ಬೇಕು. ಆನಂತರ ಕ್ಲೀನಿಂಗ್ ಕೆಲಸ ಮಾಡುವೆ ಎಂದು ಅಶ್ವಿನಿ ಗೌಡ ಕೇಳಿಕೊಳ್ಳುತ್ತಾರೆ. 10 ನಿಮಿಷದ ನಂತರ ಬ್ಯಾಕ್ ಪೇನ್ ಕಡಿಮೆಯಾಗುತ್ತಾ ಎಂದು ರಘು ಪ್ರಶ್ನೆ ಹಾಕುತ್ತಾರೆ.
ಏಕವಚನ
ಇದೇ ವಿಷಯವಾಗಿ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಜಗಳ ಆರಂಭವಾಗುತ್ತದೆ. ಜಗಳದ ಸಂದರ್ಭದಲ್ಲಿ ಅಶ್ವಿನಿ ಅವರನ್ನು ರಘು ನೀನು ಎಂದು ಏಕವಚನದಲ್ಲಿ ಕರೆಯುತ್ತಾರೆ. ಏಕವಚನದಲ್ಲಿ ಮಾತನಾಡದಂತೆ ರಘುಗೆ ಅಶ್ವಿನಿ ಗೌಡ ಎಚ್ಚರಿಸುತ್ತಾರೆ. ಇದರಿಂದ ಮತ್ತಷ್ಟು ಕೋಪಗೊಂಡ ಅಶ್ವಿನಿ ಗೌಡ, ಹೋಗೆ, ಬಾರೆ ಎಂದು ಮತ್ತೆ ಕರೆಯಲು ಆರಂಭಿಸುತ್ತಾರೆ.
ಬೆರಳು ತೋರಿಸಿ ಮಾತನಾಡಬೇಡ
ನೆಟ್ಟಗೆ ಕೆಲಸ ಮಾಡೋಕೆ ಆಗಲ್ಲ. ಎಲ್ಲರ ಮುಂದೆ ಮಾತುಗಳನ್ನಾಡುತ್ತಾರೆ ಅಂತ ರಘು ಹೇಳಿದಾಗ ಮಾಡಲ್ಲ ಹೋಗಿ ಎಂದು ಅಶ್ವಿನಿ ಗೌಡ ಹೇಳುತ್ತಾರೆ. ಇದಕ್ಕೆ ಮಾಡಬೇಡ ಹೋಗು ಎಂದು ಹೇಳುತ್ತಾರೆ. ಎಷ್ಟು ಅಂತ ಇವರಿಗೆ ಮರ್ಯಾದೆ ಕೊಡುವುದು. ಬೆರಳು ತೋರಿಸಿ ಮಾತನಾಡಬೇಡ ಎಂದು ರಘು ಎಚ್ಚರಿಕೆ ನೀಡುತ್ತಾರೆ.
ಇದನ್ನೂ ಓದಿ: ಅಯ್ಯೋ ದುರ್ವಿಧಿಯೇ, ಇದೇನಾಗೋಯ್ತು Bigg Bossನಲ್ಲಿ? ಬಿಕ್ಕಿ ಬಿಕ್ಕಿ ಅತ್ತ ಅಶ್ವಿನಿ ಗೌಡ! ಹೊರಗೆ ಹೋಗ್ತಾರಾ?
ಅಶ್ವಿನಿ ಗೌಡ ಕಣ್ಣೀರು
ರಘು ಜೊತೆಗಿನ ಜಗಳದಿಂದ ಮನನೊಂದ ಅಶ್ವಿನಿ ಗೌಡ ಕಣ್ಣೀರು ಹಾಕುತ್ತಾ ಮುಖ್ಯದ್ವಾರದ ಬಳಿಗೆ ಬಂದು ಬಾಗಿಲು ತೆಗೆಯುವಂತೆ ಬಿಗ್‌ಬಾಸ್‌ಗೆ ಮನವಿ ಮಾಡಿಕೊಳ್ಳುತ್ತಾರೆ. ಟಾಸ್ಕ್ ಆಡುತ್ತಿರೋ ಸಂದರ್ಭದಲ್ಲಿಯೂ ಏಕವಚನ ಪದ ಬಳಕೆ ವಿಷಯವಾಗಿ ಗಿಲ್ಲಿ ಜೊತೆ ಅಶ್ವಿನಿ ಗೌಡ ಜಗಳ ಮಾಡಿಕೊಂಡಿರುತ್ತಾರೆ.
ಇದನ್ನೂ ಓದಿ: ಬಿಗ್ ಬಾಸ್‌ನಲ್ಲಿ ಗಿಲ್ಲಿ ಮಹಿಳೆಯೆರಿಗೆ ಅವಮಾನ ಮಾಡಿದ್ರೂ ಕಿಚ್ಚ ಪ್ರಶ್ನೆ ಮಾಡಿಲ್ಲ, ದೂರುದಾರೆ ಎಚ್ಚರಿಕೆ

