- Home
- Entertainment
- TV Talk
- ಜೆಡಿಎಸ್‌ಗೆ ಸೇರಿದ ಬೆನ್ನಲ್ಲೇ ದೇವೇಗೌಡರ ಕಾಲು ಹಿಡಿದು ಆಶೀರ್ವಾದ ಪಡೆದ ಯುವನಾಯಕಿ ಬಿಗ್‌ಬಾಸ್ ಜಾಹ್ನವಿ
ಜೆಡಿಎಸ್‌ಗೆ ಸೇರಿದ ಬೆನ್ನಲ್ಲೇ ದೇವೇಗೌಡರ ಕಾಲು ಹಿಡಿದು ಆಶೀರ್ವಾದ ಪಡೆದ ಯುವನಾಯಕಿ ಬಿಗ್‌ಬಾಸ್ ಜಾಹ್ನವಿ
ಬಿಗ್‌ಬಾಸ್ ಖ್ಯಾತಿಯ ನಟಿ ಜಾಹ್ನವಿ, ಎಚ್‌ಡಿ ಕುಮಾರಸ್ವಾಮಿ ನೇತೃತ್ವದಲ್ಲಿ ಜೆಡಿಎಸ್ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಯಾಗಿದ್ದಾರೆ. ಬಳಿಕ, ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡರನ್ನು ಭೇಟಿಯಾಗಿ ಆಶೀರ್ವಾದ ಪಡೆದಿದ್ದು, ಈ ಕ್ಷಣದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ನಟಿ, ನಿರೂಪಕಿ ಹಾಗೂ ಬಿಗ್‌ಬಾಸ್ ರಿಯಾಲಿಟಿ ಶೋನಲ್ಲಿ ಸ್ಪರ್ಧೆ ಮಾಡಿದ್ದ ಜಾಹ್ನವಿ ಇತ್ತೀಚೆಗೇ ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ನೇತೃತ್ವದಲ್ಲಿ ಜೆಡಿಎಸ್ ಪಕ್ಷಕ್ಕೆ ಅಧಿಕೃತವಾಗಿ ಸೇರಿಕೊಂಡಿದ್ದರು. ಬಿಗ್‌ಬಾಸ್ ಬಳಿಕ ಸಮಾಜಸೇವೆಯಲ್ಲೇ ಹೆಚ್ಚಾಗಿ ತೊಡಗಿಕೊಂಡಿದ್ದ ಅವರೀಗ ಜೆಡಿಎಸ್ ಮಹಿಳಾ ಘಟಕವನ್ನು ಬಲಪಡಿಸುವ ಉದ್ದೇಶದಲ್ಲಿ ಪಕ್ಷಕ್ಕೆ ಸೇರಿಕೊಂಡಿದ್ದಾರೆ.
ಪಕ್ಷಕ್ಕೆ ಸೇರಿಕೊಂಡ ಐದು ದಿನಗಳ ಬಳಿಕ ಶುಕ್ರವಾರ ಅವರು ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ಅವರನ್ನು ಪದ್ಮನಾಭ ನಗರದ ನಿವಾಸದಲ್ಲಿ ಭೇಟಿಯಾದರು. ಅವರಿಗೆ ಹೂಗುಚ್ಛ ನೀಡಿದ ಬಳಿಕ ಕಾಲು ಮುಟ್ಟಿ ನಮಸ್ಕಾರ ಪಡೆದಿದ್ದಾರೆ. ಈ ವಿಡಿಯೋವನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಜೆಡಿಎಸ್‌ಗೆ ಸೇರಿದ ಬೆನ್ನಲ್ಲಿಯೇ ಅವರು ರಾಜಕೀಯ ವಿಚಾರಗಳನ್ನು ಹಂಚಿಕೊಳ್ಳಲು ಜಾಹ್ನವಿ ರಾಜಶೇಖರ್ (jhanvirajshekar) ಹೆಸರಿನಲ್ಲಿ ಹೊಸ ಖಾತೆಯನ್ನೂ ತೆರೆದಿದ್ದು, ಇದರಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ. ತಮ್ಮ ಡಿಪಿಯಲ್ಲಿ ಜೆಡಿಎಸ್ ಯುವನಾಯಕಿ ಎಂದು ಅವರು ಬರೆದುಕೊಂಡಿದ್ದಾರೆ.
ವಿಡಿಯೋ ಹಂಚಿಕೊಂಡಿರುವ ಜಾಹ್ನವಿ, ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದ ಬೆನ್ನಲ್ಲೆ ನಮ್ಮ ಹೆಮ್ಮೆಯ ಮಾಜಿ ಪ್ರಧಾನಿಗಳು , ಮಣ್ಣಿನ ಮಗ , @ಹೆಚ್ ಡಿ ದೇವೇಗೌಡ ಅಪ್ಪಾಜಿಯವರನ್ನು ಪದ್ಮನಾಭನಗರ ನಿವಾಸದಲ್ಲಿ ಭೇಟಿಯಾಗಿ ಆಶೀರ್ವಾದ ಪಡೆಯಲಾಯಿತು' ಎಂದು ಶೀರ್ಷಿಕೆ ಬರೆದುಕೊಂಡಿದ್ದಾರೆ.
ಇದಕ್ಕೆ ಕಾಮೆಂಟ್ ಮಾಡಿರುವ ಹಲವರು, ನೀವು ಚುನಾವಣೆಗೆ ನಿಂತು ಶಾಸಕಿಯಾಗಬೇಕು. ನಿಮಗೆ ಆ ಅರ್ಹತೆ ಇದೆ ಎಂದು ಕಾಮೆಂಟ್ ಮಾಡಿದ್ದಾರೆ. 'ಯುವಶಕ್ತಿಯ ಜೊತೆಗೆ ಮಹಿಳಾ ಶಕ್ತಿಯೂ ಪಕ್ಷಕ್ಕೆ ಇನ್ನಷ್ಟು ಬಲ ತುಂಬಲಿ.ಜಾತ್ಯಾತೀತ ಜನತಾದಳದ ತತ್ವ, ಸಿದ್ಧಾಂತಗಳನ್ನು ಜನರಿಗೆ ತಲುಪಿಸುವ ಕಾರ್ಯದಲ್ಲಿ ನಿಮ್ಮ ಪಯಣ ಯಶಸ್ವಿಯಾಗಲಿ' ಎಂದು ಇನ್ನೊಬ್ಬರು ಹರಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

