'ಪೊಗರು' ಸಿನಿಮಾದ 'ಕರಾಬು' ಹಾಡು 33.4 ಕೋಟಿ ವೀಕ್ಷಣೆಗಳೊಂದಿಗೆ ಯೂಟ್ಯೂಬ್‌ನಲ್ಲಿ ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಕನ್ನಡ ವಿಡಿಯೋ ಹಾಡು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಲೇಖನವು 'ಬೊಂಬೆ ಹೇಳುತೈತೆ', 'ವರಾಹ ರೂಪಂ' ಸೇರಿದಂತೆ ಯೂಟ್ಯೂಬ್‌ನಲ್ಲಿ ಅತಿ ಹೆಚ್ಚು ವೀಕ್ಷಣೆ ಪಡೆದಿದೆ.
ಇದು ಕನ್ನಡದ ಮೋಸ್ಟ್ ಸೂಪರ್‌ಹಿಟ್ ವಿಡಿಯೋ ಸಾಂಗ್. ಆರು ವರ್ಷದ ಹಿಂದೆ ಯೂಟ್ಯೂಬ್‌ಗೆ ಬಂದ ಈ ವಿಡಿಯೋ ಸಾಂಗ್‌ಇಲ್ಲಿಯವರೆಗೂ 33.4 ಕೋಟಿ ವೀವ್ಸ್‌ಅನ್ನು ಯೂಟ್ಯೂಬ್‌ನಲ್ಲಿ ಪಡೆದುಕೊಂಡಿದೆ. ಕನ್ನಡದ ವಿಡಿಯೋ ಸಾಂಗ್‌ವೊಂದು 33 ಕೋಟಿಗೂ ಅಧಿಕ ವೀಕ್ಷಣೆ ಕಂಡಿರೋದು ಸ್ಯಾಂಡಲ್‌ವುಡ್‌ಗೂ ಹೆಮ್ಮೆಯ ವಿಚಾರ.
ಹಾಗಂತ ಈ ಸಿನಿಮಾ ರಿಲೀಸ್ ಆಗಿ ಹೆಚ್ಚೇನೂ ವರ್ಷಗಳಾಗಿಲ್ಲ. ಕೇವಲ ಆರು ವರ್ಷದ ಹಿಂದೆ ರಿಲೀಸ್ ಆಗಿದ್ದ ಸಿನಿಮಾದ ಈ ಹಾಡು ಯೂಟ್ಯೂಬ್‌ನಲ್ಲಿ ತನ್ನ ಕಮಾಲ್ ಸೃಷ್ಟಿಸಿದೆ. ಸೋಶಿಯಲ್ ಮೀಡಿಯಾದಲ್ಲೂ ದೊಡ್ಡ ಮಟ್ಟದ ಹವಾ ಸೃಷ್ಟಿಸಿದ್ದ ಈ ಸಿನಿಮಾ ಕನ್ನಡದಲ್ಲಿ ರಶ್ಮಿಕಾ ಮಂದಣ್ಣ ನಟಿಸಿರುವ ಕೊನೆಯ ಸಿನಿಮಾ ಕೂಡ ಆಗಿದೆ. ಇಂದಿಗೂ ಕೂಡ ಈ ಹಾಟು ಪಾರ್ಟಿಗಳು, ಮದುವೆ ಹಾಗೂ ಸೋಶಿಯಲ್ ಮೀಡಿಯಾ ರೀಲ್ಸ್‌ಗಳಲ್ಲಿ ವ್ಯಾಪಕವಾಗಿ ಬಳಸಿಕೊಳ್ಳುತ್ತಾರೆ.
ಈ ಹಾಡು ಯಾವುದೆಂದರೆ, ಪೊಗರು ಸಿನಿಮಾದ 'ಕರಾಬು.. ಬಾಸು ಕರಾಬು..' ಸಾಂಗ್. ನಂದಕಿಶೋರ್ ನಿರ್ದೇಶನದ ಪೊಗರು ಸಿನಿಮಾದ ಈ ಹಾಡಿನ ಸಂಪೂರ್ಣ ಕ್ರೆಡಿಟ್ ಇರುವುದು ಚಂದನ್ ಶೆಟ್ಟಿ ಬಳಿಯಲ್ಲಿ. ಈ ಹಾಡಿನ ಮ್ಯೂಸಿಕ್, ಲಿರಿಕ್ಸ್ ಮಾತ್ರವಲ್ಲದೆ ಇದನ್ನು ಸ್ವತಃ ಅವರೇ ಕೂಡ ಹಾಡಿದ್ದರು. ಹಾಡಿನಲ್ಲಿ ಧ್ರುವ ಸರ್ಜಾ ಹಾಗೂ ರಶ್ಮಿಕಾ ಮಂದಣ್ಣ ಸೇರಿದಂತೆ ಇತರರು ನಟಿಸಿದ್ದರು. ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್‌ನಲ್ಲಿ ವಿಡಿಯೋ ರಿಲೀಸ್ ಆಗಿದ್ದು, ಇಂದಿನವರೆಗೆ 33 ಕೋಟಿ 43 ಲಕ್ಷದ 92 ಸಾವಿರದ 713 ವೀವ್ಸ್ ಪಡೆದುಕೊಂಡಿದೆ. 2020ರ ಏಪ್ರಿಲ್ 2 ರಂದು ಈ ವಿಡಿಯೋ ಯೂಟ್ಯೂಬ್‌ಗೆ ಅಪ್‌ಲೋಡ್ ಆಗಿತ್ತು.
ಯೂಟ್ಯೂಬ್‌ನಲ್ಲಿ ಗರಿಷ್ಠ ವೀಕ್ಷಣೆ ಪಡೆದ ಕನ್ನಡದ 10 ಯೂಟ್ಯೂಬ್ ವಿಡಿಯೋ ಸಾಂಗ್‌ಗಳನ್ನು ನೋಡೋದಾದರೆ, ಪುನೀತ್ ರಾಜ್‌ಕುಮಾರ್ ನಟನೆಯ ರಾಜಕುಮಾರ ಸಿನಿಮಾದ ಫೇಮಸ್ ಹಾಡು 'ಬೊಂಬೆ ಹೇಳುತೈತೆ..' ಮೇಕಿಂಗ್ ವಿಡಿಯೋ ಇಲ್ಲಿಯವರೆಗೂ 29 ಕೋಟಿ 30 ಲಕ್ಷ ವೀವ್ಸ್ ಪಡೆದುಕೊಂಡಿದೆ. ಇನ್ನು ಕಾಂತಾರ ಸಿನಿಮಾದ ವರಾಹ ರೂಪಂ ಲಿರಿಕ್ ವಿಡಿಯೋ ಕಳೆದ ಮೂರು ವರ್ಷದಲ್ಲಿಯೇ 28 ಕೋಟಿ 20 ಲಕ್ಷ ವೀವ್ಸ್ ಪಡೆದುಕೊಂಡಿದ್ದು, ಮುಂದಿನ ದಿನಗಳಲ್ಲಿ ಅಗ್ರಸ್ಥಾನಕ್ಕೇರುವ ಹಾದಿಯಲ್ಲಿದೆ.
ಯಶ್ ಹಾಡಿಗಿಂತ ಮಾಳು ನಿಪನಾಳ ಫೇಮಸ್
ಇನ್ನೂ ಅಚ್ಚರಿಯ ವಿಚಾರ ಏನೆಂದರೆ, ಟಾಪ್-10 ಲಿಸ್ಟ್‌ನಲ್ಲಿ ರಾಕಿಂಗ್ ಸ್ಟಾರ್ ಯಶ್ ಅವರ ಯಾವ ಹಾಡುಗಳೂ ಕೂಡ ಇಲ್ಲ. ಇನ್ನು ಉತ್ತರ ಕರ್ನಾಟಕದ ಪ್ರತಿಭೆ, ಬಿಗ್‌ಬಾಸ್‌ನಲ್ಲಿ ಭಾಗವಹಿಸಿದ್ದ ಮಾಳು ನಿಪನಾಳ ಅವರ ಮೂರು ಸಾಂಗ್‌ಗಳು ಟಾಪ್-10 ಲಿಸ್ಟ್‌ನಲ್ಲಿ ಸ್ಥಾನ ಪಡೆದಿದೆ.
ನಂತರದ 7 ಸ್ಥಾನಗಳಲ್ಲಿರುವ ವಿಡಿಯೋ ಸಾಂಗ್‌ಗಳು ಹಾಗೂ ಅದರ ವೀವ್ಸ್
| ಸ್ಥಾನ | ಹಾಡು | ವೀವ್ಸ್ |
| 4 | ನಾ ಡ್ರೈವರ್ ನೀ ನನ್ನ ಲವರ್ | 27 ಕೋಟಿ 60 ಲಕ್ಷ |
| 5 | ಸಿಂಗಾರ ಸಿರಿಯೇ | 20 ಕೋಟಿ, 3 ಲಕ್ಷ |
| 6 | ಲಂಗಾ ದಾವನ್ಯಾಗ ಮಸ್ತ್ ಕಾಣತಿ ಲಾವಣ್ಯ | 19 ಕೋಟಿ 10 ಲಕ್ಷ |
| 7 | ಚುಟು ಚುಟು ಅಂತೈತಿ | 18 ಕೋಟಿ 90 ಲಕ್ಷ |
| 8 | ಮೂರೇ ಮೂರು ಪೆಗ್ಗಿಗೆ | 18 ಕೋಟಿ 60 ಲಕ್ಷ |
| 9 | ಕಣ್ಣು ಹೊಡಿಯಾಕಾ | 18 ಕೋಟಿ, 20 ಲಕ್ಷ |
| 10 | ಕುಣೀತಾಳೋ ಕುಣೀತಾಳ | 18 ಕೋಟಿ 10 ಲಕ್ಷ |


