ಚಿನ್ನದ ಗೊಂಬೆಯಾಗಿ ಮಿಂಚಿದ ಕರ್ಣನ ಹೀರೋಯಿನ್: 'ಬ್ಯಾಂಗಲ್ ಬಂಗಾರಿ'ಯಾದ ನಮ್ರತಾ ಗೌಡ!
ನಮ್ರತಾ ಗೌಡ ಈಗ ಗ್ಲಾಮರಸ್ ಗೋಲ್ಡನ್ ಫೋಟೋಶೂಟ್ ಮೂಲಕ ಫ್ಯಾನ್ಸ್ಗಳ ಗಮನವನ್ನು ತನ್ನತ್ತ ಸೆಳೆಯುತ್ತಿದ್ದು, ಸೋಷಿಯಲ್ ಮೀಡಿಯಾದಲ್ಲಿ ಫೋಟೋಸ್ ವೈರಲ್ ಆಗಿದೆ.

ಬಿಗ್ ಬಾಸ್ ಕನ್ನಡ ಸೀಸನ್ 10ರ ಸ್ಪರ್ಧಿ ನಮ್ರತಾ ಗೌಡ ಇದೀಗ ಕರ್ಣ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಈ ಮೂಲಕ ಕಿರುತೆರೆಗೆ ಮತ್ತೆ ಕಂಬ್ಯಾಕ್ ಮಾಡುತ್ತಿದ್ದಾರೆ. ಈ ಮಧ್ಯೆ ನಮ್ರತಾ ಸಾಮಾಜಿಕ ಜಾಲತಾಣದಲ್ಲಿ ಹೊಸ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.
ಹೊಸ ಹೊಸ ಲುಕ್ನಲ್ಲಿ ಕಾಣಿಸಿಕೊಳ್ಳುವ ಕಿರುತೆರೆ ನಟಿ ನಮ್ರತಾ ಗೌಡ ಈಗ ಗ್ಲಾಮರಸ್ ಫೋಟೋಶೂಟ್ ಮೂಲಕ ಫ್ಯಾನ್ಸ್ಗಳ ಗಮನವನ್ನು ತನ್ನತ್ತ ಸೆಳೆಯುತ್ತಿದ್ದು, ಸೋಷಿಯಲ್ ಮೀಡಿಯಾದಲ್ಲಿ ಫೋಟೋಸ್ ವೈರಲ್ ಆಗಿದೆ.
ಹೊಸ ಫೋಟೋಶೂಟ್ ಮಾಡಿಸಿರೋ ನಮ್ರತಾ ಗೋಲ್ಡನ್ ಕಲರ್ ಲೆಹೆಂಗಾ ತೊಟ್ಟಿದ್ದು, ಅದಕ್ಕೆ ಒಪ್ಪುವ ಹಾಗೆ ಗೋಲ್ಡನ್ ಬಣ್ಣದ ಬ್ಯಾಂಗಲ್ ತೊಟ್ಟಿದ್ದಾರೆ. ಈ ಲುಕ್ನಲ್ಲಿ ನಮ್ರತಾ ಚಿನ್ನದ ಗೊಂಬೆ ತರ ಕಾಣ್ತಿದ್ದಾರೆ.
ಈ ಫೋಟೋಸ್‌ಗೆ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಆಗಿರೋ 'ಬ್ಯಾಂಗಲ್ ಬಂಗಾರಿ' ಹಾಡನ್ನು ಲಿಂಕ್ ಮಾಡಿದ್ದಾರೆ. ಇದನ್ನು ನೋಡಿದ ನೆಟಿಜನ್ಸ್ ಕೂಡ ನಮ್ಮ ನೆಚ್ಚಿನ ಬ್ಯಾಂಗಲ್ ಬಂಗಾರಿ ಅಂತ ಕಮೆಂಟ್ ಮಾಡ್ತಿದ್ದಾರೆ.
ಕಿರುತೆರೆಯ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ನಮ್ರತಾ, ಹಲವಾರು ಧಾರಾವಾಹಿಗಳಲ್ಲಿ ನಟಿಸಿ ಮನೆ ಮಾತಾದ್ರು. ಅಲ್ಲದೇ ಬಿಗ್ ಬಾಸ್ ಸೀಸನ್ 10ರ ಸ್ಪರ್ಧಿಯಾದ ಬಳಿಕ ಬಿಗ್ ಬಾಸ್ ನಮ್ಮು ಎಂದೇ ಫೇಮಸ್ ಆಗಿದ್ದಾರೆ.
ಬಿಗ್ ಬಾಸ್ ಮನೆಯಿಂದ ಹೊರಬಂದ ಬಳಿಕ ನಟಿ ನಮ್ರತಾಗೆ ಡಿಮ್ಯಾಂಡ್ ಹೆಚ್ಚಿತ್ತು. ಹಲವು ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದರಲ್ಲದೇ, ಎಂಜಿ ಮೋಟರ್ ಇಂಡಿಯಾ ಕಂಪನಿಯ ಎಲೆಕ್ಟ್ರಿಕಲ್ ಕಾರನ್ನು ಖರೀದಿಸಿ ಸುದ್ದಿ ಕೂಡಾ ಆಗಿದ್ದರು.
ಕನ್ನಡ ಕಿರುತೆರೆಯಲ್ಲಿ ಕೆಲ ಧಾರಾವಾಹಿಗಳಲ್ಲಿ ಕಾಣಿಸಿಕೊಂಡಿದ್ದ ನಮ್ರತಾ ಗೌಡ, ಜೀ ಕನ್ನಡದಲ್ಲಿ ಪ್ರಸಾರವಾಗಿದ್ದ ನಾಗಿಣಿ 2 ಸೀರಿಯಲ್ ಮೂಲಕ ಹೆಚ್ಚು ಜನಪ್ರಿಯತೆಯನ್ನು ಪಡೆದಿದ್ದರು. ಇದಿಗ ಅವರ ಬಂಗಾರಿ ಲುಕ್ ಸಖತ್ತಾಗಿದೆ.