MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • ಹಣದಾಸೆಗೆ ಇನ್‌ಸ್ಟಾಗ್ರಾಂ ಸಬ್‌ಸ್ಕ್ರಿಪ್ಷನ್ ಅಕೌಂಟ್ ಮಾಡಿದ ನಟಿ; ₹399 ಪಾವತಿಸಿದವರ ಬೇಡಿಕೆಗೆ ನಟಿ ಶಾಕ್!

ಹಣದಾಸೆಗೆ ಇನ್‌ಸ್ಟಾಗ್ರಾಂ ಸಬ್‌ಸ್ಕ್ರಿಪ್ಷನ್ ಅಕೌಂಟ್ ಮಾಡಿದ ನಟಿ; ₹399 ಪಾವತಿಸಿದವರ ಬೇಡಿಕೆಗೆ ನಟಿ ಶಾಕ್!

ತಮಿಳು ನಟಿ ಅಭಿರಾಮಿ ವೆಂಕಟಾಚಲಂ ತಮ್ಮ ಇನ್‌ಸ್ಟಾಗ್ರಾಂ ಸಬ್‌ಸ್ಕ್ರಿಪ್ಷನ್ ಫೀಚರ್ ಮೂಲಕ ವಿವಾದಕ್ಕೆ ಸಿಲುಕಿದ್ದಾರೆ. ಹಣ ಪಾವತಿಸಿ ಅಶ್ಲೀಲ ಫೋಟೋಗಳನ್ನು ನಿರೀಕ್ಷಿಸಿದ ಸಬ್‌ಸ್ಕ್ರೈಬರ್‌ಗಳಿಗೆ, ಇದು ಪೋ*ರ್ನ್ ಸೈಟ್ ಅಲ್ಲ, ಕಲೆಗೆ ಮಾತ್ರ ಬೆಲೆ ಎಂದಿದ್ದಾರೆ. ಮುಂದೇನಾಯ್ತು ನೀವೇ ನೋಡಿ.

2 Min read
Author : Sathish Kumar KH
Published : Apr 08 2026, 08:21 PM IST
Share this Photo Gallery
  • FB
  • TW
  • Linkdin
  • Whatsapp
18
ಇನ್‌ಸ್ಟಾಗ್ರಾಂ ಸಬ್‌ಸ್ಕ್ರಿಪ್ಷನ್ ಫೀಚರ್ಸ್
Image Credit : Instagram

ಇನ್‌ಸ್ಟಾಗ್ರಾಂ ಸಬ್‌ಸ್ಕ್ರಿಪ್ಷನ್ ಫೀಚರ್ಸ್

ಸಿನಿಮಾ ನಟಿಯರು ಮತ್ತು ಅಭಿಮಾನಿಗಳ ನಡುವಿನ ಸಂಪರ್ಕಕ್ಕಾಗಿ ಸಾಮಾಜಿಕ ಜಾಲತಾಣಗಳು ದೊಡ್ಡ ವೇದಿಕೆಯಾಗಿವೆ. ಇತ್ತೀಚೆಗೆ ಇನ್‌ಸ್ಟಾಗ್ರಾಂನಲ್ಲಿ 'ಸಬ್‌ಸ್ಕ್ರಿಪ್ಷನ್' (Subscription) ಫೀಚರ್ ಹೆಚ್ಚು ಜನಪ್ರಿಯವಾಗುತ್ತಿದ್ದು, ತಾರೆಯರು ತಮ್ಮ ವಿಶೇಷ ಫೋಟೋ ಮತ್ತು ವಿಡಿಯೋಗಳನ್ನು ಹಂಚಿಕೊಳ್ಳಲು ಇದನ್ನು ಬಳಸುತ್ತಿದ್ದಾರೆ.

28
ಸಬ್‌ಸ್ಕ್ರೈಬರ್‌ಗಳ ಕೆಟ್ಟ ಆಲೋಚನೆ
Image Credit : Instagram

ಸಬ್‌ಸ್ಕ್ರೈಬರ್‌ಗಳ ಕೆಟ್ಟ ಆಲೋಚನೆ

ಆದರೆ, ಇದೇ ಫೀಚರ್ ಈಗ ತಮಿಳು ನಟಿ ಅಭಿರಾಮಿ ವೆಂಕಟಾಚಲಂ ಅವರ ಪಾಲಿಗೆ ದೊಡ್ಡ ವಿವಾದವಾಗಿ ಪರಿಣಮಿಸಿದೆ. ತಮ್ಮ ಸಬ್‌ಸ್ಕ್ರೈಬರ್‌ಗಳ ಕೆಟ್ಟ ಆಲೋಚನೆ ಮತ್ತು ಟೀಕೆಗಳಿಗೆ ಅಭಿರಾಮಿ ಈಗ ಅತ್ಯಂತ ಖಡಕ್ ಆಗಿ ಉತ್ತರ ನೀಡಿದ್ದಾರೆ.

Related Articles

Related image1
ಕಾಲೇಜು ವಾಟ್ಸಪ್ ಗ್ರೂಪ್‌ಗೆ ತನ್ನದೇ ಬೆತ್ತಲೆ ವಿಡಿಯೋ, ಗೆಳೆಯನ ಮನೆಯಲ್ಲಿ ಕೊಳೆತ ಶವವಾಗಿ ಪತ್ತೆಯಾದ ವಿದ್ಯಾರ್ಥಿನಿ!
Related image2
ಸೆಲೆಬ್ರಿಟಿ ಮಗಳೆಂಬ ಹಿಂಜರಿಕೆ ಬೇಡ 'ನೀನು ಹೊಡೆದು ಬಾ ಮಗಳೇ': ಪುತ್ರಿಗೆ ಧೈರ್ಯ ತುಂಬಿದ ಹಿರಿಯ ನಟಿ!
38
ಯಾರು ಈ ಅಭಿರಾಮಿ?:
Image Credit : Instagram

ಯಾರು ಈ ಅಭಿರಾಮಿ?:

ತಮಿಳಿನ 'ಬಿಗ್ ಬಾಸ್ ಅಲ್ಟಿಮೇಟ್ ಸೀಸನ್ 1' ಮೂಲಕ ಮನೆಮಾತಾದವರು ನಟಿ ಅಭಿರಾಮಿ ವೆಂಕಟಾಚಲಂ. ವಿಜಯ್ ದೇವರಕೊಂಡ ಅಭಿನಯದ 'ನೋಟ', ಅಜಿತ್ ಕುಮಾರ್ ಅವರ 'ನೇರ್ಕೊಂಡ ಪಾರ್ವೈ' ಹಾಗೂ 'ಕಳವು', 'ಆನಂದ' ಅಂತಹ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುವ ಇವರಿಗೆ ಇನ್‌ಸ್ಟಾಗ್ರಾಂನಲ್ಲಿ 10 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಇದ್ದಾರೆ.

48
ವಿವಾದದ ಹಿನ್ನೆಲೆ
Image Credit : Instagram

ವಿವಾದದ ಹಿನ್ನೆಲೆ

ಅಭಿರಾಮಿ ಅವರು ಇತ್ತೀಚೆಗೆ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಸಬ್‌ಸ್ಕ್ರಿಪ್ಷನ್ ಫೀಚರ್ ಆರಂಭಿಸಿದ್ದರು. ಅಂದರೆ, ಅಭಿಮಾನಿಗಳು ನಿಗದಿತ ಹಣ ಪಾವತಿಸಿ (ಮಾಸಿಕ 399 ರೂ.) ಅವರ ವಿಶೇಷ ಕಂಟೆಂಟ್ ಅನ್ನು ನೋಡಬಹುದಾಗಿತ್ತು. ಆದರೆ, ಹಣ ಕೊಟ್ಟು ಸಬ್‌ಸ್ಕ್ರೈಬ್ ಆದ ಕೆಲವರು ಅಭಿರಾಮಿ ವಿರುದ್ಧ ಅಶ್ಲೀಲವಾಗಿ ಕಾಮೆಂಟ್ ಮಾಡಲು ಮತ್ತು ಟೀಕೆ ಮಾಡಲು ಶುರು ಮಾಡಿದ್ದರು. ಅವರು ನಿರೀಕ್ಷಿಸಿದ ರೀತಿಯ ಫೋಟೋಗಳು ಸಿಗದಿದ್ದಕ್ಕೆ ನಟಿಯ ವಿರುದ್ಧ ತಿರುಗಿಬಿದ್ದಿದ್ದರು.

58
ಸಬ್‌ಸ್ಕ್ರೈಬರ್ಸ್‌ಗೆ ಒಂದು ವಿಷಯ ಸ್ಪಷ್ಟನೆ
Image Credit : Asianet News

ಸಬ್‌ಸ್ಕ್ರೈಬರ್ಸ್‌ಗೆ ಒಂದು ವಿಷಯ ಸ್ಪಷ್ಟನೆ

ತಮ್ಮ ಬಗ್ಗೆ ಕೇಳಿ ಬರುತ್ತಿರುವ ಟೀಕೆಗಳಿಂದ ಬೇಸತ್ತ ಅಭಿರಾಮಿ, ನೇರವಾಗಿ ತಮ್ಮ ಸಬ್‌ಸ್ಕ್ರೈಬರ್‌ಗಳಿಗೆ ವಿಡಿಯೋ ಮೂಲಕ ಎಚ್ಚರಿಕೆ ನೀಡಿದ್ದಾರೆ. 'ನನ್ನನ್ನು ಪ್ರೀತಿಸುವ ಮತ್ತು ಗೌರವಿಸುವ ಎಲ್ಲರಿಗೂ ಧನ್ಯವಾದಗಳು. ಆದರೆ, ನನ್ನ ಸಬ್‌ಸ್ಕ್ರೈಬರ್ಸ್‌ಗೆ ಒಂದು ವಿಷಯ ಸ್ಪಷ್ಟಪಡಿಸಲು ಬಯಸುತ್ತೇನೆ.

68
ಅಭಿರಾಮಿ ನೀಡಿದ ಖಡಕ್ ಉತ್ತರ:
Image Credit : Instagram

ಅಭಿರಾಮಿ ನೀಡಿದ ಖಡಕ್ ಉತ್ತರ:

ನಾನು ಈ ಹಿಂದೆ ಎಲ್ಲೂ ಪೋಸ್ಟ್ ಮಾಡದ, ನನ್ನ ಕ್ರಿಯೇಟಿವಿಟಿಯಿಂದ ಕೂಡಿದ ಹೊಸ ರೀತಿಯ ಫೋಟೋಗಳನ್ನು ಹಂಚಿಕೊಳ್ಳಲು ಈ ಪೇಜ್ ಶುರು ಮಾಡಿದ್ದೇನೆ. ಅಷ್ಟೇ ಹೊರತು, ನೀವು ಹಣ ಕೊಟ್ಟಿದ್ದೀರಿ ಎಂಬ ಕಾರಣಕ್ಕೆ ನಾನು ಇಲ್ಲಿ ಬೆ*ತ್ತಲಾಗಿ ನಿಲ್ಲುತ್ತೇನೆ ಎಂದು ಯಾರಾದರೂ ಅಂದುಕೊಂಡಿದ್ದರೆ, ದಯವಿಟ್ಟು ಈಗಲೇ ಅನ್‌ಸಬ್‌ಸ್ಕ್ರೈಬ್ ಮಾಡಿ ಹೋಗಿ' ಎಂದು ಗುಡುಗಿದ್ದಾರೆ.

78
ಇದೇನೂ ಪೋರ್ನ್ ಸೈಟ್ ಅಲ್ಲ:
Image Credit : Asianet News

ಇದೇನೂ ಪೋರ್ನ್ ಸೈಟ್ ಅಲ್ಲ:

ತಮ್ಮ ಆಕ್ರೋಶವನ್ನು ಮುಂದುವರಿಸಿದ ನಟಿ, 'ನಾನು ಏನು ಪೋಸ್ಟ್ ಮಾಡಬೇಕು ಅಥವಾ ಮಾಡಬಾರದು ಎಂದು ಯಾರೂ ನನಗೆ ಹೇಳಿಕೊಡಬೇಕಿಲ್ಲ. ನನ್ನ ಕ್ರಿಯೇಟಿವಿಟಿಯನ್ನು ಮೆಚ್ಚುವವರಿಗೆ ಮಾತ್ರ ಇಲ್ಲಿ ಸ್ವಾಗತ. ಒಂದು ವಿಷಯ ನೆನಪಿಟ್ಟುಕೊಳ್ಳಿ, ಇದೇನೂ ಪೋ*ರ್ನ್ ಸೈಟ್ ಅಲ್ಲ. ಇಲ್ಲಿ ಕಲೆಗೆ ಮಾತ್ರ ಬೆಲೆ. ಅಶ್ಲೀಲತೆಯನ್ನು ನಿರೀಕ್ಷಿಸುವವರು ಇಲ್ಲಿ ಇರಬೇಕಾದ ಅಗತ್ಯವಿಲ್ಲ' ಎಂದು ನೇರವಾಗಿಯೇ ಹೇಳಿದ್ದಾರೆ.

88
ಅಭಿರಾಮಿ ಪರ-ವಿರೋಧ ಚರ್ಚೆ
Image Credit : Asianet News

ಅಭಿರಾಮಿ ಪರ-ವಿರೋಧ ಚರ್ಚೆ

ಸದ್ಯ ಅಭಿರಾಮಿ ಅವರ ಈ ನಡೆಗೆ ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧ ವ್ಯಕ್ತವಾಗುತ್ತಿದೆ. ಸಿನಿಮಾ ನಟಿಯರನ್ನು ಕೇವಲ ಗ್ಲಾಮರ್ ಗೊಂಬೆಗಳಂತೆ ನೋಡುವ ಕಿಡಿಗೇಡಿಗಳಿಗೆ ಅಭಿರಾಮಿ ಸರಿಯಾದ ಪಾಠ ಕಲಿಸಿದ್ದಾರೆ ಎಂದು ನೆಟ್ಟಿಗರು ಶ್ಲಾಘಿಸುತ್ತಿದ್ದಾರೆ. 

ಇನ್ನೊಂದೆಡೆ ನಟಿ ಅಭಿರಾಮಿ ಈಗಾಗಲೇ 5 ಸಾವಿರಕ್ಕೂ ಅಧಿಕ ಪೇಡ್ ಸಬ್‌ಸ್ಕ್ರೈಬರ್ಸ್‌ ಹೊಂದಿದ್ದಾರೆ. ಅಂದರೆ ತಿಂಗಳಿಗೆ ₹40 ಲಕ್ಷಕ್ಕಿಂತ ಹೆಚ್ಚಿನ ಹಣ ಬರುತ್ತದೆ. ಇವರಿಗೆ ಬೇರೆ ದುಡಿಮೆಯೇ ಬೇಡ ಎಂದು ಹೇಳುತ್ತಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SK
Sathish Kumar KH
ವಿಜಯನಗರ ಜಿಲ್ಲೆ ಕಂದಗಲ್‌ಪುರ ಗ್ರಾಮದವನು ಮೂಲತಃ ಶಿಕ್ಷಕ. ಆದರೆ, ಆಕರ್ಷಿಸಿದ್ದು ಪತ್ರಿಕೋದ್ಯಮ. ಎಂಟು ವರ್ಷಗಳಿಂದ ಪ್ರಜಾವಾಣಿ, ವಿಜಯವಾಣಿ ನಂತರ ಇದೀಗ ಏಷ್ಯಾನೆಟ್ ಕನ್ನಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಕರ್ನಾಟಕ ರಾಜಕಾರಣ ನೆಚ್ಚಿನ ಕ್ಷೇತ್ರ. ಡಿಜಿಟಲ್ ಮಾಧ್ಯಮಕ್ಕನುಗುಣವಾಗಿ ಶಿಕ್ಷಣ, ಆರೋಗ್ಯ, ಸಿನಿಮಾ ಸುದ್ದಿಗಳನ್ನೂ ಬರೆಯುತ್ತೇನೆ. ಕ್ರಿಕೆಟ್, ಕೃಷಿ ಇಷ್ಟ. ಓದು ನೆಚ್ಚಿನ ಹವ್ಯಾಸ.
ಭಾರತ ಸುದ್ದಿ
ನಟಿ
ಸಾಮಾಜಿಕ ಮಾಧ್ಯಮ
ಸಾಮಾಜಿಕ ಜಾಲತಾಣ ಪ್ರಭಾವಿ
ದಕ್ಷಿಣ ಭಾರತದ ನಟಿ

Latest Videos
Recommended Stories
Recommended image1
ಒಂದು ರಾತ್ರಿಗೆ 50 ಲಕ್ಷ; ಷರತ್ತು ನಿನ್ನದು, ಸ್ಥಳ ನನ್ನದು- Bigg Boss ಬೆಡಗಿ ಹೇಳಿಕೆಗೆ ಬಣ್ಣದ ಲೋಕ ಶೇಕ್​
Recommended image2
ಸೆಲೆಬ್ರಿಟಿ ಮಗಳೆಂಬ ಹಿಂಜರಿಕೆ ಬೇಡ 'ನೀನು ಹೊಡೆದು ಬಾ ಮಗಳೇ': ಪುತ್ರಿಗೆ ಧೈರ್ಯ ತುಂಬಿದ ಹಿರಿಯ ನಟಿ!
Recommended image3
‘ಕರ್ಣ’ ಧಾರಾವಾಹಿಗೆ ಎಂಟ್ರಿ ಕೊಟ್ಟು 1 ವರ್ಷ… ನಿತ್ಯಾ ಪಾತ್ರ ಇಷ್ಟಪಡವರಿಗೆ ನಮ್ರತಾ ಗೌಡ ಏನಂದ್ರು?
Related Stories
Recommended image1
ಕಾಲೇಜು ವಾಟ್ಸಪ್ ಗ್ರೂಪ್‌ಗೆ ತನ್ನದೇ ಬೆತ್ತಲೆ ವಿಡಿಯೋ, ಗೆಳೆಯನ ಮನೆಯಲ್ಲಿ ಕೊಳೆತ ಶವವಾಗಿ ಪತ್ತೆಯಾದ ವಿದ್ಯಾರ್ಥಿನಿ!
Recommended image2
ಸೆಲೆಬ್ರಿಟಿ ಮಗಳೆಂಬ ಹಿಂಜರಿಕೆ ಬೇಡ 'ನೀನು ಹೊಡೆದು ಬಾ ಮಗಳೇ': ಪುತ್ರಿಗೆ ಧೈರ್ಯ ತುಂಬಿದ ಹಿರಿಯ ನಟಿ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved