- Home
- Entertainment
- TV Talk
- ನಕ್ಕಳಾ ರಾಜಕುಮಾರಿ! ಸ್ಪಂದನಾ ಕಣ್ಣೀರು ಒರೆಸಲು 'ಜಿಂಕೆ ಮರಿನಾ' ಹಾಡಿಗೆ Bigg Boss Boys ಸ್ಟೆಪ್
ನಕ್ಕಳಾ ರಾಜಕುಮಾರಿ! ಸ್ಪಂದನಾ ಕಣ್ಣೀರು ಒರೆಸಲು 'ಜಿಂಕೆ ಮರಿನಾ' ಹಾಡಿಗೆ Bigg Boss Boys ಸ್ಟೆಪ್
ಬಿಗ್ಬಾಸ್ ಮನೆಯಲ್ಲಿ ಒಬ್ಬಳೇ ಕುಳಿತು ಕಣ್ಣೀರಿಡುತ್ತಿದ್ದ ಸ್ಪಂದನಾಳನ್ನು ಇತರ ಸ್ಪರ್ಧಿಗಳಾದ ಸೂರಜ್, ಧನುಷ್ ಮತ್ತು ಅಭಿಷೇಕ್ ನೋಡಿದ್ದಾರೆ. ಸ್ಪಂದನಾಳನ್ನು ಸಮಾಧಾನ ಮಾಡಲು ವಿಫಲರಾದ ಹುಡುಗರು, ಕೊನೆಗೆ 'ಜಿಂಕೆ ಮರಿನಾ' ಹಾಡಿಗೆ ಡಾನ್ಸ್ ಮಾಡಿ ಆಕೆಯನ್ನು ನಗಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸ್ನೇಹದ ವಾತಾವರಣ
ಬಿಗ್ಬಾಸ್ (Bigg Boss Kannada 12)ನಲ್ಲಿ ಸ್ಪರ್ಧಿಗಳ ನಡುವೆ ಸ್ಪರ್ಧೆಯ ವಿಷಯದಲ್ಲಿ ಏನೇ ಸಮಸ್ಯೆ ಇದ್ದರೂ, ಕಷ್ಟದ ಕಾಲದಲ್ಲಿ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ಸಹಾಯ ಮಾಡುವುದು ಇದ್ದೇ ಇರುತ್ತದೆ. ಟಾಸ್ಕ್ ವಿಷಯದಲ್ಲಿ ಕಿತ್ತಾಡಿಕೊಂಡರೂ, ಕೆಲವೊಮ್ಮೆ ತುಂಬಾ ಸ್ನೇಹಪೂರ್ವಕವಾಗಿ ವರ್ತಿಸುತ್ತಾರೆ.
ಸ್ಪಂದನಾ ಕಣ್ಣೀರು
ಇದೀಗ ಹಾಸಿಗೆಯ ಮೇಲೆ ಒಬ್ಬಳೇ ಕುಳಿತ ಸ್ಪಂದನಾ ಕಣ್ಣೀರು ಹಾಕುತ್ತಿದ್ದಾರೆ. ಅವರ ಕಣ್ಣೀರಿಗೆ ಕಾರಣ ತಿಳಿದಿಲ್ಲ. ಆದರೆ ಆಕೆ ಅಳುತ್ತಿರುವುದನ್ನು ಇತರ ಸ್ಪರ್ಧಿಗಳಾದ ಸೂರಜ್ ಸಿಂಗ್, ಧನುಷ್ ಗೌಡ ಮತ್ತು ಅಭಿಷೇಕ್ ಶ್ರೀಕಾಂತ್ ನೋಡಿದ್ದಾರೆ.
ನಗಿಸಲು ಪ್ರಯತ್ನ
ಸ್ಪಂದನಾ ಅವರನ್ನು ನಗಿಸಲು ಈ ಬಿಗ್ಬಾಸ್ ಬಾಯ್ಸ್ ಪ್ರಯತ್ನಿಸಿದ್ದಾರೆ. ಆದರೆ ಏನು ಮಾಡಬೇಕು ಎಂದು ತಿಳಿಯದೇ ಸ್ಪಂದನಾ ಸುತ್ತಲೂ ನಿಂತಿದ್ದಾರೆ.
ಸ್ಪಂದನಾ ಮಾತು
ಅವರನ್ನು ನೋಡಿದ ಸ್ಪಂದನಾ ನಿಮಗೆ ಸಮಾಧಾನ ಮಾಡಲು ಬರುವುದಿಲ್ಲ ಎಂದು ನನಗೆ ಗೊತ್ತು ಕಣ್ರೋ ಎಂದಿದ್ದಾರೆ. ಆಗ ಒಂದೇ ಒಂದು ಕಣ್ಣ ಬಿಂದು ಜಾರಿದರೆ ನನ್ನಾಣೆ ಎಂದು ಧನುಷ್ ಗೌಡ ಹೇಳಿದ್ದಾರೆ.
ಕೊನೆಗೂ ನಕ್ಕ ಸ್ಪಂದನಾ
ಇಷ್ಟು ಹೇಳುತ್ತಿದ್ದಂತೆಯೇ ಸ್ಪಂದನಾ ನಕ್ಕಿದ್ದಾರೆ. ಕೊನೆಗೆ ಮೂವರೂ ಸೇರಿ ನೀವು ನಗಲು ನಾವು ಡಾನ್ಸ್ ಮಾಡ್ಬೇಕಾ ಎಂದು ಪ್ರಶ್ನಿಸಿದಾಗ ಸ್ಪಂದನಾ ಬೇಡ ಎಂದಿದ್ದಾರೆ.
ಜಿಂಕೆ ಮರಿನಾ ಹಾಡಿಗೆ ಸ್ಟೆಪ್
ಆದರೂ ಕೇಳದೇ ಮೂವರೂ ಸೇರಿ ಜಿಂಕೆ ಮರೀನಾ, ನೀ ಜಿಂಕೆ ಜಿಂಕೆ ಮರಿನಾ ಹಾಡಿಗೆ ಸ್ಟೆಪ್ ಹಾಕಿದ್ದಾರೆ. ಇದನ್ನು ನೋಡಿ ಸ್ಪಂದನಾ ಅಳುವೆಲ್ಲಾ ಮಾಯವಾಗಿ ಜೋರಾಗಿ ನಕ್ಕಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

