- Home
- Entertainment
- TV Talk
- Bigg Boss 13 ವೀಕ್ಷಕರ ಕುತೂಹಲಕ್ಕೆ ಕೊನೆಗೂ ಬಿತ್ತು ತೆರೆ: ಆ ನಾಲ್ವರು ಸೆಲೆಬ್ರಿಟಿಗಳು ಯಾರ‍್ಯಾರು
Bigg Boss 13 ವೀಕ್ಷಕರ ಕುತೂಹಲಕ್ಕೆ ಕೊನೆಗೂ ಬಿತ್ತು ತೆರೆ: ಆ ನಾಲ್ವರು ಸೆಲೆಬ್ರಿಟಿಗಳು ಯಾರ‍್ಯಾರು
ಸೆಪ್ಟೆಂಬರ್‌ನಲ್ಲಿ ಆರಂಭವಾಗಲಿರುವ ಬಿಗ್ ಬಾಸ್ 13, ಸಾಮಾನ್ಯ ಜನರಿಗೆ ಭಾಗವಹಿಸಲು ಅವಕಾಶ ನೀಡಿದೆ. ಈ ಆಯ್ಕೆ ಪ್ರಕ್ರಿಯೆಗೆ 'ಬಿಗ್ ಬಾಸ್ ಅಗ್ನಿಪರೀಕ್ಷೆ' ಎಂದು ಹೆಸರಿಡಲಾಗಿದ್ದು, ಶೃತಿ, ವಿನಯ್ ಗೌಡ, ಚಂದನ್ ಶೆಟ್ಟಿ ಮತ್ತು ಸಂಗೀತಾ ಶೃಂಗೇರಿ ತೀರ್ಪುಗಾರರಾಗಿ ಕಾರ್ಯನಿರ್ವಹಿಸಲಿದ್ದಾರೆ.

ಸೆಪ್ಟೆಂಬರ್‌ನಲ್ಲಿ ಬಿಗ್ಬಾಸ್
ಬಿಗ್ಬಾಸ್ 13 (Bigg Boss 13) ಬರುವ ಸೆಪ್ಟೆಂಬರ್‌ನಲ್ಲಿ ಆರಂಭವಾಗಲಿದೆ. ಇದರ ಬಗ್ಗೆ ವೀಕ್ಷಕರು ಕಾತರದಿಂದ ಕಾಯುತ್ತಿದ್ದಾರೆ. ಬಿಗ್ಬಾಸ್ ಮನೆಗೆ ಹೋಗುವವರು ಯಾರು ಎಂಬ ಬಗ್ಗೆ ಇದಾಗಲೇ ಸಾಕಷ್ಟು ಚರ್ಚೆ ಆಗುತ್ತಿದೆ.
ಹಲವು ವಿಶೇಷತೆ
ಈ ಬಾರಿಯ ಬಿಗ್ಬಾಸ್ ಹಲವು ವಿಶೇಷತೆಗಳಿಂದ ಕೂಡಿದ್ದು, ಅದರಲ್ಲಿ ಒಂದು ಸಾಮಾನ್ಯ ಜನರು ಅದರಲ್ಲಿ ಪಾಲ್ಗೊಳ್ಳಲು ಅವಕಾಶ ಸಿಕ್ಕಿರುವುದು. ಆದರೆ ಈ ಬಾರಿ ಕನ್ನಡ ಸೇರಿದಂತೆ ಕೆಲವು ಭಾಷೆಗಳ ಬಿಗ್ಬಾಸ್ನಲ್ಲಿ ಈ ಅವಕಾಶವನ್ನು ಕಲ್ಪಿಸಲಾಗಿದೆ. ಇದಾಗಲೇ ಸಾಮಾನ್ಯ ಜನರು ಹೇಗೆ ಇದರಲ್ಲಿ ಭಾಗವಹಿಸಬೇಕು ಎನ್ನುವ ಬಗ್ಗೆ ಸೂಚನೆ ನೀಡಲಾಗಿತ್ತು. ಮೂರು ನಿಮಿಷಗಳ ವಿಡಿಯೋಮಾಡಿ, ತಮ್ಮನ್ನು ಏಕೆ ಆಯ್ಕೆ ಮಾಡಬೇಕು ಎನ್ನುವುದೂ ಸೇರಿದಂತೆ ಆ ವಿಡಿಯೋದಲ್ಲಿ ಏನೇನು ಇರಬೇಕು ಎನ್ನೋದನ್ನು ಕೇಳಲಾಗಿತ್ತು.
ಅಗ್ನಿ ಪರೀಕ್ಷೆ
ಅದರಂತೆಯೇ ಸಹಸ್ರಾರು ಮಂದಿ ತಮ್ಮ ಕನಸನ್ನು ಸಾಕಾರಗೊಳಿಸುವ ಸಲುವಾಗಿ ವಿಡಿಯೋ ಮಾಡಿ ಆಸೆಯಿಂದ ಕಾಯುತ್ತಿದ್ದಾರೆ. ಇವರ ಪೈಕಿ ಯಾರು ಸೆಲೆಕ್ಟ್ ಆಗಿದ್ದಾರೆ, ಇದರಲ್ಲಿ ಫೈನಲ್ ಆಗಿ ಹೋಗುವವರು ಯಾರು ಎಂಬ ಬಗ್ಗೆ ಕುತೂಹಲ ಇದ್ದು, ಇದಕ್ಕೆ ಬಿಗ್ಬಾಸ್ ಅಗ್ನಿಪರೀಕ್ಷೆ (Bigg Boss Agni Pareekshe) ಎಂದು ಹೆಸರು ಇಡಲಾಗಿದೆ.
ತೀರ್ಪುಗಾರರು ಇವರೇ
ಈ ಅಗ್ನಿಪರೀಕ್ಷೆಗೆ ಜಡ್ಜ್ ಆಗಿ ಕೆಲವರನ್ನು ನೇಮಕ ಮಾಡಲಾಗಿದೆ. ಬಿಗ್ಬಾಸ್ ಸ್ಪರ್ಧಿಗಳಂತೆಯೇ ಅಗ್ನಿಪರೀಕ್ಷೆ ನಡೆಸಿಕೊಡುವವರ ಬಗ್ಗೆಯೂ ಇದಾಗಲೇ ಸಾಕಷ್ಟು ಚರ್ಚೆಯಾಗುತ್ತಿದೆ. ಅವರೆಲ್ಲರ ಮುಖವನ್ನು ಈಗ ವಾಹಿನಿ ಬಿಡುಗಡೆ ಮಾಡಿದೆ. ಆಗಸ್ಟ್ 16ರ ರಾತ್ರಿ 9 ಗಂಟೆಗೆ ಆಯ್ಕೆಯಾದವರ ಹೆಸರು ರಿವೀಲ್ ಆಗಲಿದೆ.
ಯಾರ್ಯಾರು ಜಡ್ಜಸ್?
ಇವರಲ್ಲಿ ಬಿಗ್ಬಾಸ್ ಖ್ಯಾತಿಯವರೇ ಆದ ಹಾಗೂ ನಟರಾದ ಶೃತಿ, ವಿನಯ್ ಗೌಡ, ಚಂದನ್ ಶೆಟ್ಟಿ ಹಾಗೂ ಸಂಗೀತಾ ಶೃಂಗೇರಿ ಅಗ್ನಿ ಪರೀಕ್ಷೆಯ ತೀರ್ಪುಗಾರರಾಗಿದ್ದಾರೆ. ಜನರನ್ನು ಸೆಲೆಕ್ಟ್ ಮಾಡಲು ಇವರು ಬರುತ್ತಿದ್ದಾರೆ.
ಲೈವ್ ನೋಡಲು ಅವಕಾಶ
ಇನ್ನು ಬಿಗ್ಬಾಸ್ ಅಗ್ನಿಪರೀಕ್ಷೆಯ ಲೈವ್ ನೋಡಲು ಹಲವರಿಗೆ ಅವಕಾಶ ಕಲ್ಪಿಸಲಾಗಿದ್ದು, ಅದಕ್ಕೂ ಒಂದು ಸ್ಪರ್ಧೆ ಏರ್ಪಡಿಸಲಾಗಿದೆ. ಈ ಅವಕಾಶಕ್ಕಾಗಿ ಬೆಂಗಳೂರಿನ ಲಾಲ್‌ಬಾಗ್ ಫ್ಲವರ್ ಶೋನಲ್ಲಿ ಭಾಗವಹಿಸಬೇಕು. ಆಗಸ್ಟ್ 6ರಿಂದ ಆರಂಭವಾಗಿರುವ ಫ್ಲವರ್ ಶೋನಲ್ಲಿ ಬಿಗ್ ಬಾಸ್ ತಂಡ ವಿಶೇಷವಾದ ‘ಬಿಗ್ ಬಾಸ್ ಅಗ್ನಿಪರೀಕ್ಷೆ ಎಕ್ಸ್‌ಪೀರಿಯನ್ಸ್ ಜೋನ್’ ಸಿದ್ಧಪಡಿಸಿದೆ. ಈ ಜೋನ್‌ನಲ್ಲಿ ಬಿಗ್ ಬಾಸ್‌ನ ಐಕಾನಿಕ್ ಚೇರ್ ಜೊತೆಗೆ ವಿಶೇಷ ಸೆಲ್ಫಿ ಜೋನ್ ಕೂಡ ಇರಲಿದೆ. ಇಲ್ಲಿಗೆ ಭೇಟಿ ನೀಡುವವರು ತಮ್ಮ ನೆಚ್ಚಿನ ಬಿಗ್ ಬಾಸ್ ಕ್ಷಣವನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯಬಹುದು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

