MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • ಬಿಗ್ ಬಾಸ್ ಸೀಸನ್ 13 : ಜನಸಾಮಾನ್ಯರ ಸೆಲೆಕ್ಷನ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಮಹಿಳೆ

ಬಿಗ್ ಬಾಸ್ ಸೀಸನ್ 13 : ಜನಸಾಮಾನ್ಯರ ಸೆಲೆಕ್ಷನ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಮಹಿಳೆ

Big Boss Season 13: ಬಿಗ್ ಬಾಸ್ ಸೀಸನ್ 13ಕ್ಕೆ ಎಲ್ಲ ತಯಾರಿ ನಡೆಯುತ್ತಿದೆ. ಇದೇ ಆಗಸ್ಟ್ 16 ರಿಂದ ಅಗ್ನಿ ಪರೀಕ್ಷೆ ಶುರು ಆಗ್ತಿದೆ. ಆದ್ರೆ ಅದಕ್ಕೂ ಮೊದಲೇ ಬಿಗ್ ಬಾಸ್ ಸ್ಪರ್ಧಿಗಳ ಸೆಲೆಕ್ಷನ್ ಬಗ್ಗೆ ಅಸಮಾಧಾನ ಕೇಳಿ ಬಂದಿದೆ.

2 Min read
Author : Roopa Hegde
Published : Aug 08 2026, 11:28 AM IST
Share this Photo Gallery
  • FB
  • TW
  • Linkdin
  • Whatsapp
15
ಬಿಗ್ ಬಾಸ್ ಕನ್ನಡ ಸೀಸನ್ 13
Image Credit : Asianet News

ಬಿಗ್ ಬಾಸ್ ಕನ್ನಡ ಸೀಸನ್ 13

ಬಿಗ್ ಬಾಸ್ ಕನ್ನಡ ಸೀಸನ್ 13ಕ್ಕೆ ಜನ ಕಾಯ್ತಿದ್ದಾರೆ. ಈ ಬಾರಿ ಸಾರ್ವಜನಿಕರಿಗೆ ಅವಕಾಶ ಸಿಗ್ತಿದೆ. ಈಗಾಗಲೇ ಸೆಲೆಕ್ಷನ್ ನಡೆಯುತ್ತಿದ್ದು, ಬಿಗ್ ಬಾಸ್ ಅಗ್ನಿಪರೀಕ್ಷೆಗೆ ಸ್ಪರ್ಧಿಗಳು ಸಿದ್ಧರಾಗ್ತಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ಅಗ್ನಿಪರೀಕ್ಷೆ
Image Credit : Asianet News

ಅಗ್ನಿಪರೀಕ್ಷೆ

ಇದೇ ಆಗಸ್ಟ್ 16 ರಂದು ಬಿಗ್ ಬಾಸ್ ಅಗ್ನಿಪರೀಕ್ಷೆ ಶುರುವಾಗಲಿದೆ. ಇದ್ರಲ್ಲಿ ಗೆದ್ದ ಸ್ಪರ್ಧಿಗಳು ಬಿಗ್ ಬಾಸ್ ಮನೆ ಸೇರಲಿದ್ದಾರೆ. ಶೃತಿ, ವಿನಯ್ ಗೌಡ, ಸಂಗಿತಾ ಹಾಗೂ ಚಂದನ್ ಶೆಟ್ಟಿ ಅಗ್ನಿಪರೀಕ್ಷೆಗೆ ಜಡ್ಜ್ ಆಗಿ ಬರ್ತಿದ್ದಾರೆ. ನಿರಂಜನ್ ದೇಶಪಾಂಡೆ ಕೂಡ ಪ್ರೋಮೋದಲ್ಲಿ ಕಾಣಿಸಿಕೊಂಡಿದ್ದು, ಅವರು ನಿರೂಪಣೆ ಮಾಡಲಿದ್ದಾರೆ. ಆಗಸ್ಟ್ 16 ರಂದು ರಾತ್ರಿ 9 ಗಂಟೆಗೆ ಶೋ ಶುರುವಾಗಲಿದೆ. ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿ ರಾತ್ರಿ 9.30ಕ್ಕೆ ಶೋ ಪ್ರಸಾರವಾಗಲಿದೆ.

Related Articles

Related image1
YouTuber Driving license Suspend: ಕುಡಿದು ಕಾರು ಓಡಿಸಿದ 'ಯೂಟ್ಯೂಬರ್ ಧನ್ಯ' ಲೈಸೆನ್ಸ್ 3 ತಿಂಗಳು ಸಸ್ಪೆಂಡ್!
Related image2
'ಅಮೃತಧಾರೆ'ಯಲ್ಲಿ ನಾಗತಿಹಳ್ಳಿ ಚಂದ್ರಶೇಖರ್ ಸಿನಿಮಾದ ನೆನಪು.. ಭೂಮಿಕಾ ಬಗ್ಗೆ ಅಭಿಮಾನಿಗಳಲ್ಲಿ ಶುರುವಾಯ್ತು ಆತಂಕ!
35
ಜನಸಾಮಾನ್ಯರಿಗೆ ಅವಕಾಶ
Image Credit : Asianet News

ಜನಸಾಮಾನ್ಯರಿಗೆ ಅವಕಾಶ

ಬಿಗ್ ಬಾಸ್ ಈ ಬಾರಿ ಹೊಸ ರೂಪದಲ್ಲಿ ಬರಲಿದೆ ಅಂತ ಮೊದಲೇ ಅನೌನ್ಸ್ ಆಗಿತ್ತು. ಜನಸಾಮಾನ್ಯರಿಗೆ ವಿಡಿಯೋ ಕಳಿಸುವಂತೆ ಕಲರ್ಸ್ ಕನ್ನಡ ಕೇಳಿತ್ತು. ಅದಕ್ಕೆ ತಕ್ಕಂತೆ ಜನರು ತಮ್ಮ ಸಾಮರ್ಥ್ಯ, ಯಾಕೆ ಬಿಗ್ ಬಾಸ್ ಗೆ ಹೋಗ್ಬೇಕು ಎಂಬುದನ್ನು ತಿಳಿಸುವ ವಿಡಿಯೋ ಪೋಸ್ಟ್ ಮಾಡಿದ್ದರು.

45
ಮಹಿಳೆ ಆರೋಪ
Image Credit : Asianet News

ಮಹಿಳೆ ಆರೋಪ

ಬಂದ ಲಕ್ಷಗಟ್ಟಲೆ ವಿಡಿಯೋದಲ್ಲಿ ಸೆಲೆಕ್ಟರ್ಸ್ ಕೆಲವರನ್ನು ಸೆಲೆಕ್ಟ್ ಮಾಡಿ, ಆಡಿಷನ್ ಗೆ ಕರೆದಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಬಿಗ್ ಬಾಸ್ ಮನೆಗೆ ಹೋಗುವ ಆಸೆ ಹೊತ್ತಿದ್ದ ಮಹಿಳೆಯೊಬ್ಬರು ಇದ್ರ ಬಗ್ಗೆ ಮಾಹಿತಿ ನೀಡಿದ್ದಾರೆ. ಅವರ ಪ್ರಕಾರ ಸುಮಾರು 60 ಜನರು ಆಡಿಷನ್ ಗೆ ಬಂದಿದ್ದರು. ಆದ್ರೆ ಆಡಿಷನ್ ಒಂದೇ ದಿನ ನಡೆದಿದೆ. ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಸ್ಪರ್ಧಿಗಳು ಕಾದಿದ್ದಾರೆ. ಕೆಲವರಿಗೆ 20 ನಿಮಿಷ ತೆಗೆದುಕೊಂಡ್ರೆ ಮತ್ತೆ ಕೆಲವರಿಗೆ ಅರ್ಧ ಗಂಟೆ ಆಡಿಷನ್ ಮಾಡಲಾಗಿದೆ. ನಂತ್ರ ಗ್ರೂಪ್ ಡಿಸ್ಕಷನ್ ಕೂಡ ನಡೆದಿದೆ. ಆದ್ರೆ ಸಮಯ ಕಳೆಯುತ್ತಿದ್ದಂತೆ ಸೆಲೆಕ್ಟರ್ಸ್ ಸುಸ್ತಾಗಿದ್ರು ಅನ್ನೋದು ಮಹಿಳೆ ಆರೋಪ.

55
ಸುದೀಪ್ ಗೆ ಮನವಿ ಮಾಡಿದ ಮಹಿಳೆ
Image Credit : Asianet News

ಸುದೀಪ್ ಗೆ ಮನವಿ ಮಾಡಿದ ಮಹಿಳೆ

ಕಿಚ್ಚ ಸುದೀಪ್ ಅವರ ಫೋಟೋ ಹಾಕಿರುವ ಮಹಿಳೆ, ಸುದೀಪ್ ಅವರಿಗೆ ಮನವಿ ಮಾಡಿದ್ದಾರೆ. ಪ್ರತಿಯೊಬ್ಬರೂ ಆಸೆಯಲ್ಲಿ ಬಂದಿರ್ತಾರೆ. ಆದ್ರೆ ಸೆಲೆಕ್ಟರ್ಸ್ ಒಬ್ಬರ ಮಾತು ಕೇಳುವ, ಸರಿಯಾಗಿ ಆಡಿಷನ್ ಮಾಡುವ ಆಸಕ್ತಿ ತೋರಲಿಲ್ಲ. ಆಡಿಷನ್ ಸ್ಪ್ಲಿಟ್ ಮಾಡಿ ಎರಡನೇ ದಿನಕ್ಕೆ ಮುಂದೂಡಬಹುದಿತ್ತು. ಆದ್ರೆ ರಾತ್ರಿಯವರೆಗೆ ಆಡಿಷನ್ ಮಾಡಿದ್ದು, ಆಡಿಷನ್ ಸರಿಯಾಗಿ ನಡೆದಿಲ್ಲ. ನಮ್ಮನ್ನು ಕೇಳುವವರೇ ಇರಲಿಲ್ಲ ಎಂಬುದು ಮಹಿಳೆ ಆರೋಪ. ಈಗಾಗಲೇ ಸೆಲೆಕ್ಟ್ ಆದವರಿಗೆ ಶಾಕ್ ಆಗಿದೆ. ನಮ್ಮನ್ನು ಹೇಗೆ ಸೆಲೆಕ್ಟ್ ಮಾಡಿದ್ರು ಎನ್ನುವ ಪ್ರಶ್ನೆ ಅವರನ್ನು ಕಾಡ್ತಿದೆ. ಸೆಲೆಕ್ಟ್ ಆಗ್ತಾರೆ ಅಂದ್ಕೊಂಡವರು ಆಗಿಲ್ಲ. ಇದ್ರಿಂದ ಸೂಕ್ತ ಸ್ಪರ್ಧಿಗಳಿಗೆ ಮೋಸ ಆದಂತಾಗಿದೆ. ಇನ್ಮುಂದೆ ಹೀಗೆ ಮಾಡ್ಬೇಡಿ ಅಂತ ಮಹಿಳೆ ಮನವಿ ಮಾಡಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

RH
Roopa Hegde
Roopa Hegdeಮೂಲತಃ ಉತ್ತರ ಕನ್ನಡದ ಯಲ್ಲಾಪುರದವಳು. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ಕಸ್ತೂರಿ, ಸಮಯ ಹಾಗೂ ಸುವರ್ಣ ವಾಹಿನಿಯಲ್ಲಿ ಕೆಲಸ ಮಾಡಿದ್ದೇನೆ. ಈಗ ಏಷ್ಯಾನೆಟ್ ಕನ್ನಡದಲ್ಲಿ ಫ್ರೀಲಾನ್ಸರ್ ಆಗಿ ಕೆಲಸ ಮಾಡುತ್ತಿದ್ದೇನೆ. ಟ್ರೆಂಡಿಂಗ್ ನ್ಯೂಸಲ್ಲಿ ಹೆಚ್ಚು ಆಸಕ್ತಿ ಇದ್ದು, ಸಿನಿಮಾ, ಬ್ಯುಸಿನೆಸ್, ಆರೋಗ್ಯ, ಕ್ರೈಂ, ಕ್ರೀಡೆ ಸೇರಿ ಎಲ್ಲ ಕ್ಷೇತ್ರದ ಸುದ್ದಿ ಬರೆಯುತ್ತೇನೆ.
ಬಿಗ್ ಬಾಸ್ ಕನ್ನಡ
ಬಿಗ್ ಬಾಸ್
ಕಿಚ್ಚ ಸುದೀಪ್
Latest Videos
Recommended Stories
Recommended image1
'ಅಮೃತಧಾರೆ'ಯಲ್ಲಿ ನಾಗತಿಹಳ್ಳಿ ಚಂದ್ರಶೇಖರ್ ಸಿನಿಮಾದ ನೆನಪು.. ಭೂಮಿಕಾ ಬಗ್ಗೆ ಅಭಿಮಾನಿಗಳಲ್ಲಿ ಶುರುವಾಯ್ತು ಆತಂಕ!
Recommended image2
YouTuber Driving license Suspend: ಕುಡಿದು ಕಾರು ಓಡಿಸಿದ 'ಯೂಟ್ಯೂಬರ್ ಧನ್ಯ' ಲೈಸೆನ್ಸ್ 3 ತಿಂಗಳು ಸಸ್ಪೆಂಡ್!
Recommended image3
Karna Serial: ರಮೇಶ್​- ಮಾಲತಿ ಡಿವೋರ್ಸ್ ತಡೆಯಲು ಕರ್ಣನ 25 ಕೋಟಿಯ ಆಟ- ಬಲೆಗೆ ಬಿದ್ದ ಸಂಜಯ್​
Related Stories
Recommended image1
YouTuber Driving license Suspend: ಕುಡಿದು ಕಾರು ಓಡಿಸಿದ 'ಯೂಟ್ಯೂಬರ್ ಧನ್ಯ' ಲೈಸೆನ್ಸ್ 3 ತಿಂಗಳು ಸಸ್ಪೆಂಡ್!
Recommended image2
'ಅಮೃತಧಾರೆ'ಯಲ್ಲಿ ನಾಗತಿಹಳ್ಳಿ ಚಂದ್ರಶೇಖರ್ ಸಿನಿಮಾದ ನೆನಪು.. ಭೂಮಿಕಾ ಬಗ್ಗೆ ಅಭಿಮಾನಿಗಳಲ್ಲಿ ಶುರುವಾಯ್ತು ಆತಂಕ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved