MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • 'ಅಮೃತಧಾರೆ'ಯಲ್ಲಿ ನಾಗತಿಹಳ್ಳಿ ಚಂದ್ರಶೇಖರ್ ಸಿನಿಮಾದ ನೆನಪು.. ಭೂಮಿಕಾ ಬಗ್ಗೆ ಅಭಿಮಾನಿಗಳಲ್ಲಿ ಶುರುವಾಯ್ತು ಆತಂಕ!

'ಅಮೃತಧಾರೆ'ಯಲ್ಲಿ ನಾಗತಿಹಳ್ಳಿ ಚಂದ್ರಶೇಖರ್ ಸಿನಿಮಾದ ನೆನಪು.. ಭೂಮಿಕಾ ಬಗ್ಗೆ ಅಭಿಮಾನಿಗಳಲ್ಲಿ ಶುರುವಾಯ್ತು ಆತಂಕ!

Amruthadhare serial news: ಅಮೃತಧಾರೆ ಧಾರಾವಾಹಿಯಲ್ಲಿ ಈಗ ಸಂತೋಷ ಮತ್ತು ದುಃಖ ಎರಡೂ ಸಮ್ಮಿಳಿತವಾಗಿವೆ. ಕೆಲವು ದೃಶ್ಯಗಳು ನಾಗತಿಹಳ್ಳಿಯ 'ಅಮೃತಧಾರೆ' ಸಿನಿಮಾವನ್ನು ನೆನಪಿಸುತ್ತಿದ್ದು, ಅಭಿಮಾನಿಗಳಲ್ಲಿ ಸಣ್ಣದೊಂದು ಆತಂಕ ಶುರುವಾಗಿದೆ.

2 Min read
Author : Ashwini HR
Published : Aug 07 2026, 10:29 PM IST
Share this Photo Gallery
  • FB
  • TW
  • Linkdin
  • Whatsapp
14
ಮೈಸೂರಿಗೆ ಪ್ರವಾಸ
Image Credit : Instagram

ಮೈಸೂರಿಗೆ ಪ್ರವಾಸ

ಮೈಸೂರಿಗೆ ಪ್ರವಾಸ
ಜೀ ಕನ್ನಡ ವಾಹಿನಿಯ ಜನಪ್ರಿಯ ಧಾರಾವಾಹಿ 'ಅಮೃತಧಾರೆ' ಈಗ ವೀಕ್ಷಕರ ಕಣ್ಣಾಲಿಗಳನ್ನು ಒದ್ದೆ ಮಾಡುವಂತಹ ಅತ್ಯಂತ ಭಾವುಕ ಘಟ್ಟದಲ್ಲಿದೆ. ಸೌಮ್ಯ ಸ್ವಭಾವದ, ಎಲ್ಲರನ್ನೂ ಪ್ರೀತಿಸುತ್ತಿದ್ದ ಭೂಮಿಕಾಗೆ ಈಗ 'ಕ್ಯಾನ್ಸರ್' ಎಂಬ ಕಠಿಣ ಸವಾಲು ಎದುರಾಗಿದೆ. ಇಷ್ಟು ದಿನ ಆಸ್ಪತ್ರೆ, ಕಿಮೋಥೆರಪಿ ಮತ್ತು ಚಿಕಿತ್ಸೆಯ ನೋವಿನಲ್ಲೇ ಕಳೆದುಹೋಗಿದ್ದ ಭೂಮಿಕಾಳನ್ನು ಆ ಕತ್ತಲ ಲೋಕದಿಂದ ಸ್ವಲ್ಪ ಕಾಲ ಹೊರತರುವ ಸಲುವಾಗಿ ಗೌತಮ್ ದಿವಾನ ಆಕೆಯನ್ನು ಮೈಸೂರಿಗೆ ಪ್ರವಾಸ ಕರೆದುಕೊಂಡು ಬಂದಿದ್ದಾನೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
24
ನೀನು ಯಾವಾಗಲೂ ಮಹಾರಾಣಿಯೇ
Image Credit : Instagram

ನೀನು ಯಾವಾಗಲೂ ಮಹಾರಾಣಿಯೇ

ನೀನು ಯಾವಾಗಲೂ ಮಹಾರಾಣಿಯೇ
ಮೈಸೂರಿನ ಅಧಿದೇವತೆ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆದ ನಂತರ, ಗೌತಮ್ ಭೂಮಿಕಾಳನ್ನು ಅರಮನೆಯ ವೈಭವವನ್ನು ತೋರಿಸಲು ಕರೆದೊಯ್ಯುತ್ತಾನೆ. ಆಸ್ಪತ್ರೆಯ ಬಿಳಿ ಗೋಡೆಗಳ ಮಧ್ಯೆ ಬಸವಳಿದಿದ್ದ ಭೂಮಿಕಾಗೆ ಅರಮನೆಯ ಈ ಸೌಂದರ್ಯ ಹೊಸ ಚೈತನ್ಯ ನೀಡಿದೆ. ಈ ಸಂದರ್ಭದಲ್ಲಿ ತನ್ನ ಬಾಲ್ಯದ ಸುಂದರ ಕನಸನ್ನು ಗೌತಮ್ ಮುಂದೆ ಹಂಚಿಕೊಳ್ಳುವ ಭೂಮಿಕಾ, "ನಾನು ಚಿಕ್ಕವಳಿದ್ದಾಗ ಅರಮನೆ ನೋಡಿದಾಗಲೆಲ್ಲಾ ಒಬ್ಬ ರಾಜಕುಮಾರ ಕುದುರೆಯ ಮೇಲೆ ಬಂದು, ನನ್ನನ್ನು ಕೂರಿಸಿಕೊಂಡು ಸುತ್ತಿಸುತ್ತಾನೆ ಎಂದು ಕನಸು ಕಾಣುತ್ತಿದ್ದೆ" ಎಂದು ಭಾವುಕಳಾಗುತ್ತಾಳೆ. ಅದಕ್ಕೆ ಗೌತಮ್ ಅಷ್ಟೇ ಪ್ರೀತಿಯಿಂದ, "ನಾನು ಮಹಾರಾಜ ಹೌದೋ ಅಲ್ಲವೋ ಗೊತ್ತಿಲ್ಲ, ಆದರೆ ನನ್ನ ಪಾಲಿಗೆ ನೀನು ಯಾವಾಗಲೂ ಮಹಾರಾಣಿಯೇ" ಎಂದು ಹೇಳುವ ಮಾತು ಪ್ರತಿಯೊಬ್ಬ ವೀಕ್ಷಕನ ಹೃದಯ ಸ್ಪರ್ಶಿಸಿದೆ.

Related Articles

Related image1
Amruthadhaare: ಭೂಮಿಕಾ ಬರೆದ ಡೈರಿ ಈಗ 'ಅಮೃತಧಾರೆ' ಪುಸ್ತಕವಾಯ್ತು; ಪತ್ರಕರ್ತ ಜೋಗಿ ಎಂಟ್ರಿ
Related image2
Amruthadhaare Serial: ಗೌತಮ್‌ಗೆ ಮಾರಣಾಂತಿಕ ಕಾಯಿಲೆ; ಸಾವಿನಿಂದಲೇ 'ಅಮೃತಧಾರೆ' ಅಂತ್ಯ ಆಗುತ್ತಾ?
34
ದುರಂತಮಯ ಸಿನಿಮಾ
Image Credit : Instagram

ದುರಂತಮಯ ಸಿನಿಮಾ

ದುರಂತಮಯ ಸಿನಿಮಾ
ಅಂದಹಾಗೆ, ಈ ಧಾರಾವಾಹಿಯ ಪ್ರಸ್ತುತ ಬೆಳವಣಿಗೆಗಳನ್ನು ಗಮನಿಸುತ್ತಿದ್ದರೆ ಪ್ರತಿಯೊಬ್ಬರಿಗೂ ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ಸಾರ್ವಕಾಲಿಕ ಶ್ರೇಷ್ಠ ಸಿನಿಮಾ 'ಅಮೃತಧಾರೆ' ನೆನಪಾಗುತ್ತಿದೆ. ಆ ಸಿನಿಮಾದಲ್ಲೂ ಕ್ಯಾನ್ಸರ್‌ನಿಂದ ಬಳಲುತ್ತಿರುವ ನಾಯಕಿಗೆ (ರಮ್ಯಾ), ನಾಯಕ (ಧ್ಯಾನ್) ಆಕೆಗೆ ಇಷ್ಟವಾದ ಜಾಗಗಳನ್ನೆಲ್ಲಾ ತೋರಿಸುತ್ತಾ ಸಂಭ್ರಮದಿಂದ ಇಡಲು ಪ್ರಯತ್ನಿಸುತ್ತಾನೆ. ಆದರೆ ಆ ಸಿನಿಮಾದ ಅಂತ್ಯ ಅತ್ಯಂತ ದುರಂತಮಯವಾಗಿತ್ತು. ತಾಜ್‌ಮಹಲ್ ಮುಂದೆ ನಾಯಕಿ ಪ್ರಾಣ ಬಿಡುತ್ತಾಳೆ.

44
ಧಾರಾವಾಹಿಯಲ್ಲಿ ಪವಾಡ ನಡೆಯಲಿ
Image Credit : Instagram

ಧಾರಾವಾಹಿಯಲ್ಲಿ ಪವಾಡ ನಡೆಯಲಿ

ಧಾರಾವಾಹಿಯಲ್ಲಿ ಪವಾಡ ನಡೆಯಲಿ
ಧಾರಾವಾಹಿಯ ಹೆಸರೂ ಕೂಡ 'ಅಮೃತಧಾರೆ' ಎಂದೇ ಇರುವುದರಿಂದ, ವೀಕ್ಷಕರಲ್ಲಿ ಒಂದು ಸಣ್ಣ ಆತಂಕ ಶುರುವಾಗಿದೆ. ಸಿನಿಮಾದಲ್ಲಿ ಆದಂತೆ ಇಲ್ಲಿಯೂ ಭೂಮಿಕಾ ಪಾತ್ರಕ್ಕೆ ದುರಂತ ಅಂತ್ಯ ಸಿಗುತ್ತದೆಯೇ ಎಂಬ ಭಯ ಅಭಿಮಾನಿಗಳನ್ನು ಕಾಡುತ್ತಿದೆ. ಆದರೆ, ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು "ಧಾರಾವಾಹಿಯ ಅಂತ್ಯ ಸಿನಿಮಾದಂತೆ ಆಗದಿರಲಿ, ಭೂಮಿಕಾ ಕ್ಯಾನ್ಸರ್ ಗೆದ್ದು ಬಂದು ಗೌತಮ್ ಜೊತೆ ಸುಖವಾಗಿ ಬಾಳಲಿ" ಎಂದು ಆಶಿಸುತ್ತಿದ್ದಾರೆ. ಸಿನಿಮಾದಲ್ಲಿ ಕಣ್ಣೀರು ಇತ್ತು, ಆದರೆ ಧಾರಾವಾಹಿಯಲ್ಲಿ ಪವಾಡ ನಡೆಯಲಿ ಎಂಬುದು ಎಲ್ಲರ ಹಾರೈಕೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

AH
Ashwini HR
ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ದಿನಪತ್ರಿಕೆ 'ಕ್ರಾಂತಿದೀಪ'ದಲ್ಲಿ ಉಪ ಸಂಪಾದಕಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 14 ವರ್ಷಗಳ ಅನುಭವ. ರಾಜ್ಯಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ರಾಜಕೀಯ, ಮನರಂಜನೆ, ಶಿಕ್ಷಣ, ಆರೋಗ್ಯ, ಟ್ರೆಂಡಿಂಗ್‌, ಲೈಫ್‌ಸ್ಟೈಲ್‌ ಕುರಿತಾದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ.ಪ್ರಸ್ತುತ ಸುವರ್ಣ ಡಿಜಿಟಲ್‌ ತಂಡದ ಭಾಗವಾಗಿ ವೃತ್ತಿ ಜೀವನ ಮುಂದುವರಿಸುತ್ತಿದ್ದೇನೆ.
ಟಿವಿ ಶೋ
ಮನರಂಜನಾ ಸುದ್ದಿ
ಅಮೃತಧಾರೆ
Latest Videos
Recommended Stories
Recommended image1
YouTuber Driving license Suspend: ಕುಡಿದು ಕಾರು ಓಡಿಸಿದ 'ಯೂಟ್ಯೂಬರ್ ಧನ್ಯ' ಲೈಸೆನ್ಸ್ 3 ತಿಂಗಳು ಸಸ್ಪೆಂಡ್!
Recommended image2
Karna Serial: ರಮೇಶ್​- ಮಾಲತಿ ಡಿವೋರ್ಸ್ ತಡೆಯಲು ಕರ್ಣನ 25 ಕೋಟಿಯ ಆಟ- ಬಲೆಗೆ ಬಿದ್ದ ಸಂಜಯ್​
Recommended image3
Brahmagantu ಸೀರಿಯಲ್​ ಮುಗಿವ ಹೊತ್ತಲ್ಲೇ ವೀಕ್ಷಕರಿಗೆ ಗುಡ್​ನ್ಯೂಸ್​ ಕೊಟ್ಟ ದೀಪಾ, ಚಿರು
Related Stories
Recommended image1
Amruthadhaare: ಭೂಮಿಕಾ ಬರೆದ ಡೈರಿ ಈಗ 'ಅಮೃತಧಾರೆ' ಪುಸ್ತಕವಾಯ್ತು; ಪತ್ರಕರ್ತ ಜೋಗಿ ಎಂಟ್ರಿ
Recommended image2
Amruthadhaare Serial: ಗೌತಮ್‌ಗೆ ಮಾರಣಾಂತಿಕ ಕಾಯಿಲೆ; ಸಾವಿನಿಂದಲೇ 'ಅಮೃತಧಾರೆ' ಅಂತ್ಯ ಆಗುತ್ತಾ?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved