- Home
- Entertainment
- TV Talk
- ಬ್ರೇಕಪ್ ಆಯ್ತು, Bigg Boss ಮನೇಲಿ ಒಂದಾದ್ರು, ಹೃದಯಾಘಾತದಿಂದಲೇ ಜೀವ ಬಿಟ್ರು; ಎಂಥ ಕಾಕತಾಳೀಯ?
ಬ್ರೇಕಪ್ ಆಯ್ತು, Bigg Boss ಮನೇಲಿ ಒಂದಾದ್ರು, ಹೃದಯಾಘಾತದಿಂದಲೇ ಜೀವ ಬಿಟ್ರು; ಎಂಥ ಕಾಕತಾಳೀಯ?
ಒಂದು ಕಾಲದಲ್ಲಿ ಪ್ರೀತಿಸಿದವರು, ಬ್ರೇಕಪ್ ಆದ್ಮೇಲೆ ಉತ್ತಮ ಸ್ನೇಹ ಸಂಬಂಧ ಹೊಂದಿದ್ದವರು, ಬಿಗ್ ಬಾಸ್ 13 ಶೋನಲ್ಲಿ ಭಾಗವಹಿಸಿದ್ದ ಸಿದ್ದಾರ್ಥ್ ಶುಕ್ಲಾ ಹಾಗೂ ಶೆಫಾಲಿ ಜೆರಿವಾಲಾ ಕೂಡ ಹೃದಯಾಘಾತದಿಂದ ನಿಧನರಾಗಿದ್ದಾರೆ.

ನಟಿ ಮತ್ತು ಮಾಡೆಲ್ ಶೆಫಾಲಿ ಜರಿವಾಲಾ, 2000ರ ಆರಂಭದಲ್ಲಿ "ಕಾಂಟಾ ಲಗಾ" ಹಾಡಿನ ಮೂಲಕ ಹೆಸರು ಮಾಡಿದ್ದರು. ಕನ್ನಡದಲ್ಲಿ ಹುಡುಗರು ಸಿನಿಮಾದ ʼಬೋರ್ಡು ಇರದ ಬಸ್ಸನುʼ ಹಾಡಿನಲ್ಲಿ ಸೊಂಟ ಬಳುಕಿಸಿದ್ದರು. “ನಾನು ಸಾಯೋ ಕೊನೆದಿನದವರೆಗೂ ಜನರು ನನ್ನ ಬಗ್ಗೆ ಈ ಹಾಡಿನ ಹುಡುಗಿ ಅಂತಯ ಕರೆಯಬೇಕು” ಎಂದು ಅವರು ಒಮ್ಮೆ ಪಾರಸ್ ಛಾಬ್ರಾ ಜೊತೆಗಿನ ಪಾಡ್‌ಕಾಸ್ಟ್‌ನಲ್ಲಿ ಹೇಳಿದ್ದರು. ಈಗ ಬಿಗ್ ಬಾಸ್ ಹಿಂದಿ 13 ಸ್ಪರ್ಧಿಗಳಾದ ನಟ ಸಿದ್ಧಾರ್ಥ್ ಶುಕ್ಲಾ, ಶೆಫಾಲಿ ಜರಿವಾಲಾ ಅವರು ಹೃದಯಾಘಾತಕ್ಕೆ ಬಲಿಯಾಗಿರೋದು ದುರಂತವೇ ಸರಿ.
ಸಿದ್ದಾರ್ಥ್ ಶುಕ್ಲಾ ಹಾಗೂ ಶೆಫಾಲಿ ಜರಿವಾಲಾ ಅವರು ಒಂದು ಕಾಲದಲ್ಲಿ ಉತ್ತಮ ಸ್ನೇಹ ಸಂಬಂಧ ಹೊಂದಿದ್ದರು. ಡೇಟ್ ಕೂಡ ಮಾಡಿದ್ದವರು. ಆಮೇಲೆ ಈ ಜೋಡಿ ಬೇರೆ ಬೇರೆಯಾಗಿತ್ತು, ಬಿಗ್ ಬಾಸ್ ಮನೆಯಲ್ಲಿ ಮತ್ತೆ ಇವರಿಬ್ಬರು ಒಂದಾದರು, ಆ ವೇಳೆ ಶೆಫಾಲಿಗೆ ಮದುವೆಯಾಗಿತ್ತು, ಸಿದ್ದಾರ್ಥ್ ಸಿಂಗಲ್ ಆಗಿದ್ದರು.
ಈ ಹಿಂದೆ ನೀಡಿದ ಸಂದರ್ಶನವೊಂದರಲ್ಲಿ, ಶೆಫಾಲಿ ಅವರು ಬಿಗ್ ಬಾಸ್ 13ರಲ್ಲಿ ಸಿದ್ಧಾರ್ಥ್ ಜೊತೆಗೆ ಕಳೆದ ಸಮಯದ ಬಗ್ಗೆ ಮಾತನಾಡಿದ್ದರು. “ಬಿಗ್ ಬಾಸ್ ಮನೆಯ ಒಳಗಿನ ಆರಂಭದ ದಿನಗಳಲ್ಲಿ ಜಾಸ್ತಿ ಒತ್ತಡ ಇತ್ತು, ವಾದ-ವಿವಾದಗಳಿದ್ದವು. ಆದರೆ ಸೀಕ್ರೇಟ್ ರೂಮ್‌ನಿಂದ ಸಿದ್ದಾರ್ಥ್ ಬಂದ್ಮೇಲೆ ನಮ್ಮಿಬ್ಬರ ಸಂಬಂಧ ಸುಧಾರಿಸಿತು. ನಾವಿಬ್ಬರೂ ತುಂಬ ವಿಮರ್ಶೆ ಮಾಡುವ ವ್ಯಕ್ತಿತ್ವ ಹೊಂದಿದ್ದೆವು, ಒಂದೇ ರೀತಿಯ ಆಸಕ್ತಿಗಳನ್ನು ಹೊಂದಿದ್ದೆವು” ಎಂದಿದ್ದರು.
“ಸಿದ್ಧಾರ್ಥ್ ನಿಜಕ್ಕೂ ಸ್ಟ್ರಾಂಗ್ ಪರ್ಸನ್. ಬಿಗ್ ಬಾಸ್ ಮನೆಯೊಳಗೆ ಎಲ್ಲರೂ ಅವನನ್ನು ಒಂದು ಆಧಾರ ಸ್ತಂಭ ಎನ್ನೋ ಥರ ನೋಡುತ್ತಿದ್ದರು. ನಾವಿಬ್ಬರು ಲವ್ವರ್ಸ್ ಆಗಿದ್ದೆವು, ಆಮೇಲೆ ಮತ್ತೆ ಫ್ರೆಂಡ್ಸ್ ಆದೆವು, ಇದು ಹೇಗೆ ಸಾಧ್ಯ ಅಂತ ಜನರು ನಮ್ಮನ್ನು ಆಶ್ಚರ್ಯದಿಂದ ನೋಡಬಹುದು, ಆದರೆ ಒಂದಷ್ಟು ಸಮಯದ ಬಳಿಕ ನಾವು ಕಾಂಟ್ಯಾಕ್ಟ್‌ಗೆ ಬಂದೆವು” ಎಂದಿದ್ದರು.
ಬಾಹ್ಯಾಕಾಶ, ವಿಜ್ಞಾನ, ಅಥವಾ ಹೈ-ಸ್ಪೀಡ್ ಬುಲೆಟ್ ರೈಲುಗಳಂತಹ ವಿಷಯಗಳ ಬಗ್ಗೆ ಮಾತನಾಡುತ್ತ ನಾನು, ಸಿದ್ದಾರ್ಥ್ ಮತ್ತೆ ಒಂದುಗೂಡಿದೆವು. ಬ್ರೇಕಪ್ ಆಗಿದ್ದರೂ ಕೂಡ ನಮ್ಮಿಬ್ಬರ ಮಧ್ಯೆ ಯಾವುದೇ ಬೇಸರ, ಮನಸ್ತಾಪ ಇರಲಿಲ್ಲ. ಬ್ರೇಕಪ್ ಆದ್ಮೇಲೆ ಕೂಡ ಸೌಜನ್ಯ, ಗೌರವದಿಂದ ವರ್ತಿಸುತ್ತಿದ್ದೆವು. ಎಲ್ಲಿಯಾದರೂ ಸಿಕ್ಕಾಗ ಕೂಡ ಖುಷಿಯಿಂದ, ಸ್ನೇಹದಿಂದ ಇರುತ್ತಿದ್ದೆವು ಎಂದು ಶೆಫಾಲಿ ಹೇಳಿದ್ದರು.