- Home
- Entertainment
- TV Talk
- PHOTOS: 2 ವಾರಗಳಲ್ಲಿ 3 ದೇಶ ಸುತ್ತಿದ ಹರ್ಷಿಕಾ ಪೂಣಚ್ಚ, ಭುವನ್ ಪೊನ್ನಣ್ಣ ಮಗಳು ತ್ರಿದೇವಿ ಪೊನ್ನಕ್ಕ!
PHOTOS: 2 ವಾರಗಳಲ್ಲಿ 3 ದೇಶ ಸುತ್ತಿದ ಹರ್ಷಿಕಾ ಪೂಣಚ್ಚ, ಭುವನ್ ಪೊನ್ನಣ್ಣ ಮಗಳು ತ್ರಿದೇವಿ ಪೊನ್ನಕ್ಕ!
ನಟ ಭುವನ್ ಪೊನ್ನಣ್ಣ ಮತ್ತು ಹರ್ಷಿಕಾ ಪೂಣಚ್ಚ ಮಗಳು ತ್ರಿದೇವಿ ಪೊನ್ನಕ್ಕಳ ಜೊತೆ 2 ವಾರಗಳಲ್ಲಿ 3 ದೇಶ ಸುತ್ತಿ ಬಂದು ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ. ವಿಯೆಟ್ನಾಂ, ಶ್ರೀಲಂಕಾ, ಥೈಲ್ಯಾಂಡ್ ದೇಶಗಳಲ್ಲಿ ಈ ಪುಟಾಣಿ ಜೊತೆ ಭರ್ಜರಿ ಮಜಾ ಮಾಡಿದ್ದಾರೆ.

ಮಗುವಾದ ನಂತರ ಮನೆಯಿಂದ ಹೊರಗಡೆ ಬರಲು ಯೋಚಿಸುವ ಜನರ ಮಧ್ಯೆ 8 ತಿಂಗಳ ಕಂದಮ್ಮನೊಡನೆ ಇಷ್ಟೆಲ್ಲ ದೇಶ ಸುತ್ತಿ ಬಂದದ್ದನ್ನು ನೋಡಿ ಜನರು ಆಶ್ಚರ್ಯ ಪಡುತ್ತಿದ್ದಾರೆ. ಇದೊಂದು ಸಾಹಸವೇ ಸರಿ.
ಭುವನ್ ಪೊನ್ನಣ್ಣ ಮತ್ತು ಹರ್ಷಿಕಾ ಪೂಣಚ್ಚ ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಈ ಸುಂದರ ಫೋಟೋ ಮತ್ತು ವೀಡಿಯೊಗಳನ್ನು ಹಂಚಿಕೊಂಡಿದ್ದಾರೆ. ತ್ರಿದೇವಿ ಕಂಡರೆ ಅನೇಕರಿಗೆ ಇಷ್ಟ. ಈ ಫೋಟೋಗಳು ನಿಜಕ್ಕೂ ಎಲ್ಲರ ಮುಖದಲ್ಲೂ ಮಂದಹಾಸ ಮೂಡಿಸುತ್ತವೆ.
ಕಳೆದ ಅಕ್ಟೋಬರ್‌ನಲ್ಲಿ ಹರ್ಷಿಕಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ನವರಾತ್ರಿ ಟೈಮ್‌ನಲ್ಲಿಯೇ ಮಗಳು ಹುಟ್ಟಿರೋದು ಇವರಿಗೆ ದುಪ್ಪಟ್ಟು ಖುಷಿ ತಂದಿತ್ತು.
ಹರ್ಷಿಕಾ ಪೂಣಚ್ಚ ಹಾಗೂ ಭುವನ್ ಪೊನ್ನಣ್ಣ ಇಬ್ಬರೂ ಕೊಡಗಿನವರು. ಇವರಿಬ್ಬರು ಚಿತ್ರರಂಗದಲ್ಲಿ ಆಕ್ಟಿವ್ ಆಗಿದ್ದಾರೆ. ಹರ್ಷಿಕಾ ಅವರು ಕನ್ನಡ, ಬಂಗಾಳಿ ಬೇರೆ ಭಾಷೆಯ ಸಿನಿಮಾಗಳಲ್ಲಿ ನಟಿಸಿದ್ದಾರೆ, ಡ್ಯಾನ್ಸ್ ರಿಯಾಲಿಟಿ ಶೋನಲ್ಲಿಯೂ ಭಾಗವಹಿಸಿದ್ದಾರೆ.
ಅಂದಹಾಗೆ ಕೆಲವೇ ಸಿನಿಮಾಗಳಲ್ಲಿ ನಟಿಸಿರುವ ಭುವನ್ ಪೊನ್ನಣ್ಣ ಅವರು ʼಬಿಗ್ ಬಾಸ್ ಕನ್ನಡ ಸೀಸನ್ 4’ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದರು. ಆ ಬಳಿಕ ʼಸಂಜು ಮತ್ತು ನಾನುʼ ಶೋನಲ್ಲಿ ಭಾಗವಹಿಸಿದ್ದರು. ಮಾಡೆಲ್ ಆಗಿ ಅವರು ಗುರುತಿಸಿಕೊಂಡಿದ್ದಾರೆ.
ಭುವನ್ ಪೊನ್ನಣ್ಣ ಹಾಗೂ ಹರ್ಷಿಕಾ ಪೂಣಚ್ಛ ಅವರು ಆರಂಭದಲ್ಲಿ ನಾವು ಸ್ನೇಹಿತರು ಎಂದು ಹೇಳಿಕೊಂಡಿದ್ದರು. ಈ ಜೋಡಿ ಲವ್‌ನಲ್ಲಿರಬಹುದು ಎಂಬ ಗಾಸಿಪ್ ಇದ್ದರೂ ಕೂಡ, ಮದುವೆ ಟೈಮ್ ಹತ್ತಿರ ಬರೋವರೆಗೂ ಕೂಡ ಈ ವಿಷಯವನ್ನು ಎಲ್ಲಿಯೂ ಹೇಳಿರಲಿಲ್ಲ.
2023ರಲ್ಲಿ ಕೊಡಗಿನಲ್ಲಿ ಗ್ರ್ಯಾಂಡ್ ಆಗಿ ಇವರಿಬ್ಬರು ಮದುವೆ ಆಗಿದ್ದರು. ಕನ್ನಡ ಚಿತ್ರರಂಗದ ಕಲಾವಿದರು ಈ ಮದುವೆಯಲ್ಲಿ ಭಾಗಿಯಾಗಿದ್ದರು. ಅಂದಹಾಗೆ ಕೊರೊನಾ ವೈರಸ್ ಬಂದು ಲಾಕ್‌ಡೌನ್ ಆದ ಸಮಯದಲ್ಲಿ ಇವರಿಬ್ಬರು ಸಾಕಷ್ಟು ಜನರಿಗೆ ಸಹಾಯ ಮಾಡಿದ್ದರು.
ಗೋಲ್ಡನ್ ಸ್ಟಾರ್ ಗಣೇಶ್, ಶಿಲ್ಪಾ ದಂಪತಿಗೆ ಹರ್ಷಿಕಾ, ಭುವನ್ ತುಂಬ ಕ್ಲೋಸ್. ಹೀಗಾಗಿ ಹರ್ಷಿಕಾ ಬೇಬಿ ಶವರ್ ಕಾರ್ಯಕ್ರಮ ಗಣೇಶ್ ಮನೆಯಲ್ಲೇ ನಡೆದಿತ್ತು. ಭುವನ್ ಭವಿಷ್ಯಕ್ಕೆ, ವೃತ್ತಿ ಜೀವನಕ್ಕೆ ಗಣೇಶ್ ಸಲಹೆ ನೀಡುತ್ತಿರುತ್ತಾರಂತೆ.
ತ್ರಿದೇವಿ ಪೊನ್ನಕ್ಕ ಎನ್ನುವುದು ಟ್ರೆಡಿಷನಲ್ ಹೆಸರು. ತ್ರಿದೇವಿ ಎನ್ನೋದು ದೇವರ ಹೆಸರು. ಪೊನ್ನಕ್ಕ ಎಂದರೆ ಭುವನ್ ಹಾಗೂ ಹರ್ಷಿಕಾ ಹೆಸರಿನ ಸಂಯೋಜನೆ.
ಭುವನ್ ಪೊನ್ನಣ್ಣ ಹಾಗೂ ಹರ್ಷಿಕಾ ಪೂಣಚ್ಚ ಮಗಳು ತ್ರಿದೇವಿ ಪೊನ್ನಕ್ಕ ಅವರ ಸುಂದರವಾದ ಫೋಟೋವಿದು. ಕೆಲವೇ ತಿಂಗಳುಗಳಲ್ಲಿ ಈ ಪುಟಾಣಿಗೆ ಒಂದು ವರ್ಷ ತುಂಬಲಿದೆ.