ಹರ್ಷಿಕಾ ಪೂಣಚ್ಚ ಮತ್ತು ಭುವನ್ ಪೊನ್ನಣ್ಣ ದಂಪತಿ ತಮ್ಮ ಮಗಳಿಗೆ ತ್ರಿದೇವಿ ಪೊನ್ನಕ್ಕ ಎಂದು ನಾಮಕರಣ ಮಾಡಿದ್ದಾರೆ. ತ್ರಿದೇವಿ ಎಂಬ ಹೆಸರು ಜ್ಞಾನ, ಸಂಪತ್ತು ಮತ್ತು ಶಕ್ತಿಯನ್ನು ಸೂಚಿಸುತ್ತದೆ ಹಾಗೂ ಪೊನ್ನಕ್ಕ ಎಂಬುದು ಪೋಷಕರ ಹೆಸರುಗಳ ಸಂಯೋಜನೆ. ನವರಾತ್ರಿಯಂದು ಜನಿಸಿದ ಮಗುವಿನ ನಾಮಕರಣ ಸಮಾರಂಭದ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ನಟಿ ಹರ್ಷಿಕಾ ಪೂಣಚ್ಚ ಹಾಗೂ ಭುವನ್‌ ಪೊನ್ನಣ್ಣ ಅವರು ಮುದ್ದಾದ ಮಗಳ ನಾಮಕರಣ ಮಾಡಿ, ಸೋಶಿಯಲ್‌ ಮೀಡಿಯಾದಲ್ಲಿ ಫೋಟೋವನ್ನು ಶೇರ್‌ ಮಾಡಿಕೊಂಡಿದ್ದಾರೆ. ಮಗಳಿಗೆ ತ್ರಿದೇವಿ ಪೊನ್ನಕ್ಕ ಎಂದು ಹೆಸರಿಟ್ಟಿದ್ದಾರೆ. ಸೋಶಿಯಲ್‌ ಮೀಡಿಯಾದಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. 

ಹೆಸರಿನ ಅರ್ಥ ಏನು?
ಇಂದು ಅವಳ ವಿಶೇಷ ದಿನದಂದು (ನಾಮಕರಣ ಸಮಾರಂಭ), ಅವಳಿಗೆ ನಿಮ್ಮ ಎಲ್ಲಾ ಶುಭಾಶಯಗಳು ಮತ್ತು ಆಶೀರ್ವಾದಗಳು ಬೇಕಾಗಿವೆ, ಆದ್ದರಿಂದ ಅವಳು ಮಾನವೀಯತೆಗೆ ಮತ್ತು ವಿಶ್ವಕ್ಕೆ ಸೇವೆ ಸಲ್ಲಿಸುವ ಅತ್ಯುತ್ತಮ ವ್ಯಕ್ತಿಯಾಗುತ್ತಾಳೆ.
ನೀವು ಯಾಕೆ ಈ ಹೆಸರನ್ನು ಆಯ್ಕೆ ಮಾಡಿದ್ದೀರಿ ಎಂದು ನಮ್ಮನ್ನು ಕೇಳಿದರೆ, ವಿವರಣೆ ಇಲ್ಲಿದೆ: ಹಿಂದೂ ಧರ್ಮದಲ್ಲಿ, "ತ್ರಿದೇವಿ" ಎಂದರೆ ಮೂರು ಪ್ರಮುಖ ದೇವತೆಯರಾದ ಸರಸ್ವತಿ, ಲಕ್ಷ್ಮಿ ಮತ್ತು ಪಾರ್ವತಿ (ಅಥವಾ ದುರ್ಗಾ). ಇವರು ತ್ರಿಮೂರ್ತಿಗಳ (ಬ್ರಹ್ಮ, ವಿಷ್ಣು, ಶಿವ) ಪತ್ನಿಯರಾಗಿದ್ದಾರೆ ಮತ್ತು ಕ್ರಮವಾಗಿ ಜ್ಞಾನ, ಸಂಪತ್ತು/ಸಮೃದ್ಧಿ ಮತ್ತು ಶಕ್ತಿ/ಪ್ರೀತಿಯನ್ನು ಪ್ರತಿನಿಧಿಸುತ್ತಾರೆ.
ತ್ರಿದೇವಿ = "ತ್ರಿ" ಏಕೆಂದರೆ ಅವಳ ಜನ್ಮ ದಿನಾಂಕ ಮತ್ತು ಸಮಯದ ಪ್ರಕಾರ ಅವಳು ಬಲವಾದ ಸಂಖ್ಯೆ 3. "ದೇವಿ" ಏಕೆಂದರೆ ಅವಳು ನವರಾತ್ರಿಯ ಮೊದಲ ದಿನದಂದು ಜನಿಸಿದಳು ಮತ್ತು ದೇವಿ ಮೂಕಾಂಬಿಕೆಯಿಂದ ನಮಗೆ ದೊರೆತ ಉಡುಗೊರೆ.
ಪೊನ್ನಕ್ಕ = ಇದು ಅವಳ ತಂದೆ-ತಾಯಿಯ ಹೆಸರಿನ ಸಂಯೋಜನೆ. ಪೊನ್ನಣ್ಣ + ಹರ್ಷಿಕಾ = "ಪೊನ್ನಕ್ಕ".

ನವರಾತ್ರಿಯಲ್ಲಿ ಮಗುವಿನ ಜನನ! 
ಕಳೆದ ಅಕ್ಟೋಬರ್‌ನಲ್ಲಿ ಹರ್ಷಿಕಾ ಅವರು ಮಗುವಿಗೆ ಜನ್ಮ ನೀಡಿದ್ದರು. ಈ ಬಗ್ಗೆ ಅವರು ಸೋಶಿಯಲ್‌ ಮೀಡಿಯಾದಲ್ಲಿ ಬರೆದುಕೊಂಡಿದ್ದರು. ನಮ್ಮ 'ಚೈಕಾರ್ತಿ ಮೂಡಿ' ಹುಟ್ಟಿದೆ ಎಂದು ತಿಳಿಸಲು ಬಹಳ ಖುಷಿಯಾಗುವುದು. ಹರ್ಷಿಕಾ ಮತ್ತು ನಮ್ಮ ಮಗು ಇಬ್ಬರೂ ಆರೋಗ್ಯವಾಗಿದ್ದಾರೆ. ನನ್ನ ಪ್ರಕಾರ ನಮ್ಮ ಮಗಳು ಸಂಪೂರ್ಣವಾಗಿ ಹರ್ಷಿಕಾ ಥರ ಕಾಣುತ್ತಿದ್ದಾಳೆ. ಇನ್ನು ಹರ್ಷಿಕಾ ಪ್ರಕಾರ, ಮಗಳು ನನ್ನ ಕಾಪಿ ಎಂದು ಹೇಳುತ್ತಿದ್ದಾಳೆ. ಮುಂದೆ ಯಾರ ಹಾಗೆ ಕಾಣ್ತಾಳೆ ಎಂದು ನೋಡೋಣ..! 

ಇತ್ತೀಚೆಗೆ ಹರ್ಷಿಕಾ ಪೂಣಚ್ಚಗೆ ಗೋಲ್ಡನ್ ಸ್ಟಾರ್ ಗಣೇಶ್ (Golden Star Ganesh) ಹಾಗೂ ಶಿಲ್ಪಾ ಜೋಡಿ ಅದ್ಧೂರಿಯಾಗಿ ಬೇಬಿ ಶವರ್ ಮಾಡಿದ್ದರು. ಗೋಲ್ಡನ್‌ ಸ್ಟಾರ್‌ ಗಣೇಶ್‌ ಈ ಮನೆಯಲ್ಲಿ ಈ ಪಾರ್ಟಿ ನಡೆದಿತ್ತು. ಕೊಡಗಿನಲ್ಲಿ ಸೀಮಂತ ಶಾಸ್ತ್ರ ಇಲ್ಲ. ಆದರೆ ಕನ್ನಡ ಚಿತ್ರರಂಗ ಹರ್ಷಿಕಾಗೆ ಸೀಮಂತ ಮಾಡಿತ್ತು. ಈ ಕಾರ್ಯಕ್ರಮ ಗಣೇಶ್ ಅವರ ಮನೆಯಲ್ಲಿ ನಡೆದಿತ್ತು.

ಹರ್ಷಿಕಾ ಪೂಣಚ್ಚ ಅವರು ಕೊಡಗಿನ ಅಮ್ಮತ್ತಿಯಲ್ಲಿ ಜನಿಸಿದ್ದರು. ಕನ್ನಡ, ಬಂಗಾಳಿ ಸೇರಿದಂತೆ ಬೇರೆ ಬೇರೆ ಭಾಷೆಯ ಸಿನಿಮಾಗಳಲ್ಲಿ ನಟಿಸಿದ್ದರು, ಡ್ಯಾನ್ಸ್‌ ಶೋನಲ್ಲಿ ಕೂಡ ಭಾಗವಹಿಸಿದ್ದರು. ಸಿನಿಮಾಗಳಲ್ಲಿ ನಟಿಸಿರುವ ಭುವನ್‌ ಪೊನ್ನಣ್ಣ ಅವರು ʼಬಿಗ್‌ ಬಾಸ್‌ ಕನ್ನಡ ಸೀಸನ್‌ 4’ ಶೋನಲ್ಲಿ ಭಾಗವಹಿಸಿದ್ದರು. ಇನ್ನು ಇವರಿಬ್ಬರು ಆರಂಭದಲ್ಲಿ ಸ್ನೇಹಿತರು ಎಂದು ಹೇಳಿಕೊಂಡಿದ್ದರು. ಈ ಜೋಡಿ ಲವ್‌ ಮಾಡುತ್ತಿದೆ ಎನ್ನುವ ಗಾಸಿಪ್‌ ಇದ್ದರೂ ಕೂಡ, ಅದನ್ನು ತಳ್ಳಿ ಹಾಕಿತ್ತು. 2023ರಲ್ಲಿ ಗ್ರ್ಯಾಂಡ್‌ ಆಗಿ ಈ ಜೋಡಿ ಮದುವೆ ಆಗಿತ್ತು.‌ ಕೊರೊನಾ ಸಮಯದಲ್ಲಿ ಈ ಜೋಡಿ ಸಾಕಷ್ಟು ಜನರಿಗೆ ಸಹಾಯ ಮಾಡಿದೆ. 

ಗೋಲ್ಡನ್‌ ಸ್ಟಾರ್ ಗಣೇಶ್‌ ಕುಟುಂಬಕ್ಕೆ ಹರ್ಷಿಕಾ ಕುಟುಂಬ ತುಂಬ ಆತ್ಮೀಯರು. ದೊಡ್ಡ ಮನೆ ಕಟ್ಟಬೇಕು ಎಂದು ಹರ್ಷಿಕಾ ಬಯಸಿದ್ದರಂತೆ. ಆದರೆ ಗಣೇಶ್‌ ಅವರು, “ಅಗತ್ಯ ಇದ್ದರೆ ಕಟ್ಟಿಕೊಳ್ಳಿ. ಅದರ ಬದಲು ಮಗುವಿನ ಭವಿಷ್ಯಕ್ಕೋಸ್ಕರ ಹಣ ಕೂಡಿಟ್ಟುಕೊಳ್ಳಿ” ಎಂದು ಸಲಹೆ ನೀಡಿದ್ದರಂತೆ. ಇದನ್ನು ಇವರಿಬ್ಬರು ಪಾಲಿಸಿದ್ದಾರೆ.