ಕಲರ್ಸ್ ಕನ್ನಡ ಪ್ರೋಮೋದಲ್ಲಿ ಭವ್ಯಾ ಗೌಡ ನೋಡಿ ಫ್ಯಾನ್ಸ್ ಹೇಳಿದ್ದೇನು?
Chittar Star Awards: : ಬಿಗ್ ಬಾಸ್ ಖ್ಯಾತಿಯ ನಟಿ ಭವ್ಯಾ ಗೌಡ, ಚಿತ್ತಾರ ಸ್ಟಾರ್ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಮಿಂಚಿದ್ದಾರೆ. ಅವರ ಡಾನ್ಸ್, ಡ್ರೆಸ್ ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.

ಚಿತ್ತಾರ ಸ್ಟಾರ್ ಅವಾರ್ಡ್ಸ್
ಕಲರ್ಸ್ ಕನ್ನಡ ಜೂನ್ 21 ರಂದು ಚಿತ್ತಾರ ಸ್ಟಾರ್ ಅವಾರ್ಡ್ಸ್ ಕಾರ್ಯಕ್ರಮ ಪ್ರಸಾರ ಮಾಡ್ತಿದೆ. ಈ ಪ್ರೋಗ್ರಾಂ ಪ್ರೋಮೋ ಆಗಲೇ ಕಲರ್ಸ್ ಕನ್ನಡದಲ್ಲಿ ಹರಿದಾಡ್ತಿದೆ. ಹಿಂದೆ ಗಿಲ್ಲಿ ಪ್ರೋಮೋ ಬಿಡುಗಡೆ ಮಾಡಿದ್ದ ಕಲರ್ಸ್ ಕನ್ನಡ ಈಗ ನಟಿಯರ ಡಾನ್ಸ್ ವಿಡಿಯೋ ಪೋಸ್ಟ್ ಮಾಡಿದೆ. ಇದ್ರಲ್ಲಿ ಭವ್ಯ ಗೌಡ ಡಾನ್ಸ್ ಮಾಡೋದು ಎಲ್ಲರ ಗಮನ ಸೆಳೆದಿದೆ.
ವೇದಿಕೆ ಮೇಲೆ ಭವ್ಯಾ ಹವಾ
ಕಲರ್ಸ್ ಕನ್ನಡದ ಹುಡುಗಿ ಎಂದೇ ಪ್ರಸಿದ್ಧಿ ಪಡೆದಿದ್ದ ಭವ್ಯಾ ಗೌಡ ಈಗ ಮತ್ತೆ ಕಲರ್ಸ್ ಕನ್ನಡದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ತಾರ ಸ್ಟಾರ್ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಭವ್ಯಾ ಗೌಡ ಭರ್ಜರಿ ಡಾನ್ಸ್ ಮಾಡಿದ್ದು, ನೀಲಿ ಡ್ರೆಸ್ ನಲ್ಲಿ ಮಿಂಚಿದ್ದಾರೆ. ಸದ್ಯ ಪ್ರೋಮೋದಲ್ಲಿ ಭವ್ಯಾ ಗೌಡ ನೋಡಿದ ಫ್ಯಾನ್ಸ್ ಖುಷಿಯಾಗಿದ್ದಾರೆ.
ಫ್ಯಾನ್ಸ್ ಹೇಳಿದ್ದೇನು?
ಭವ್ಯಾ ಗೌಡ ಸೀರಿಯಲ್ ಕೆರಿಯರ್ ಶುರು ಮಾಡಿದ್ದು ಗೀತಾ ಸೀರಿಯಲ್ ನಿಂದ. ಈ ಸೀರಿಯಲ್ ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗ್ತಿತ್ತು. ನಂತ್ರ ಭವ್ಯಾ ಗೌಡ ಬಿಗ್ ಬಾಸ್ ಮನೆ ಪ್ರವೇಶ ಮಾಡಿ, ಮತ್ತಷ್ಟು ಅಭಿಮಾನಿಗಳ ಮನಸ್ಸು ಗೆದ್ದಿದ್ದರು. ಆದ್ರೆ ಬಿಗ್ ಬಾಸ್ ನಂತ್ರ ಆದ ಕೆಲ ಸಮಸ್ಯೆಯಿಂದಾಗಿ ಭವ್ಯಾ ಗೌಡ ಮತ್ತೆ ಕಲರ್ಸ್ ಗೆ ಬರೋದಿಲ್ಲ ಅಂತ ಫ್ಯಾನ್ಸ್ ಭಾವಿಸಿದ್ದರು. ಈಗ ಪ್ರೋಮೋ ನೋಡಿ ಸಂತೋಷಪಟ್ಟಿದ್ದಾರೆ. ಭವ್ಯಾ ಗೌಡ ಅವರನ್ನು ಕಲರ್ಸ್ ಕನ್ನಡ ಪ್ರೋಮೋದಲ್ಲಿ ನೋಡಿ ನೆಮ್ಮದಿಯಾಗಿದೆ ಎಂದಿದ್ದಾರೆ.
ವೇದಿಕೆ ಮೇಲೆ ಬಿಗ್ ಬಾಸ್ ಬೆಡಗಿಯರು
ಚಿತ್ತಾರ ಸ್ಟಾರ್ ಅವಾರ್ಡ್ಸ್ ನಲ್ಲಿ ಬಿಗ್ ಬಾಸ್ ಬೆಡಗಿಯರ ಡಾನ್ಸ್ ಕಣ್ತುಂಬಿಕೊಳ್ಬಹುದು. ಭವ್ಯಾ ಗೌಡ, ಕಾವ್ಯಾ ಪ್ರಿಯಾಂಕಾ ಆಚಾರ್, ರಾಶಿಕಾ ಸೇರಿದಂತೆ ಚೆಲುವೆಯರು ಮಸ್ತ್ ಮಸ್ತ್ ಡಾನ್ಸ್ ಮೂಲಕ ಎಲ್ಲರನ್ನು ಸೆಳೆಯಲಿದ್ದಾರೆ. ಪ್ರೋಮೋ ನೋಡಿದ ವೀಕ್ಷಕರು, ಕಾವ್ಯಾ, ಭವ್ಯಾ ಅಂತ ತಮ್ಮ ನೆಚ್ಚಿನ ನಟಿಯರ ಡಾನ್ಸ್ ನೋಡಲು ಕಾತರರಾಗಿದ್ದಾರೆ. ಜೂನ್ 21ರ ಸಂಜೆ 5 ಗಂಟೆಗೆ ಅವಾರ್ಡ್ಸ್ ಕಾರ್ಯಕ್ರಮ ಪ್ರಸಾರವಾಗಲಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.
