MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • ಪ್ರೀತಿಯ ಹೆಸ್ರಲ್ಲಿ ಮೋಸದಾಟ: ಕನ್ನಡದ ಈ ಸೀರಿಯಲ್​ ನಾಯಕರಿಗೆ ಶುರುವಾಯ್ತು ನಡುಕ; ಏನಿವರ ಸ್ಟೋರಿ?

ಪ್ರೀತಿಯ ಹೆಸ್ರಲ್ಲಿ ಮೋಸದಾಟ: ಕನ್ನಡದ ಈ ಸೀರಿಯಲ್​ ನಾಯಕರಿಗೆ ಶುರುವಾಯ್ತು ನಡುಕ; ಏನಿವರ ಸ್ಟೋರಿ?

'ಭಾಗ್ಯಲಕ್ಷ್ಮಿ' ಮತ್ತು 'ಲಕ್ಷ್ಮೀ ನಿವಾಸ' ಧಾರಾವಾಹಿಗಳಲ್ಲಿ ನಾಯಕಿಯರಾದ ಭಾಗ್ಯ ಮತ್ತು ಜಾನು ತಮ್ಮ ಗಂಡಂದಿರಿಗೆ ತಿರುಗೇಟು ನೀಡಲು ಸಜ್ಜಾಗಿದ್ದಾರೆ. ಭಾಗ್ಯ ತಾಂಡವ್‌ನನ್ನು ಮದುವೆಯಾಗುವ ಮೂಲಕ ಮತ್ತು ಜಾನು ಜಯಂತ್‌ಗೆ ಅವನದೇ ರೀತಿಯಲ್ಲಿ ಪಾಠ ಕಲಿಸುವ ಮೂಲಕ, ದೊಡ್ಡ ಕಂಟಕವನ್ನು ತಂದೊಡ್ಡುತ್ತಿದ್ದಾರೆ.

2 Min read
Author : Suchethana D
Published : Apr 07 2026, 01:07 PM IST
Share this Photo Gallery
  • FB
  • TW
  • Linkdin
  • Whatsapp
17
ನಾಯಕರಿಗೆ ಕಂಟಕ
Image Credit : Instagram

ನಾಯಕರಿಗೆ ಕಂಟಕ

ಎರಡು ಚಾನೆಲ್​ಗಳು, ಎರಡು ವಿಭಿನ್ನ ಸ್ಟೋರಿಗಳು. ಆದರೂ ಇದೀಗ ಒಂದೇ ರೀತಿಯ ಕ್ಲೈಮ್ಯಾಕ್ಸ್​. ಈ ಎರಡೂ ಸೀರಿಯಲ್​ಗಳ ನಾಯಕರಿಗೆ ಕಾದಿದೆ ಮಾರಿಹಬ್ಬ. ಶುರುವಾಗಲಿದೆ ಭಾರಿ ಕಂಟಕ, ಹೆಣ್ಣು ಮನಸ್ಸು ಮಾಡಿದ್ರೆ ಏನು ಬೇಕಾದ್ರೂ ಮಾಡಿಯಾಳು ಎನ್ನೋದಕ್ಕೆ ಈ ಎರಡೂ ಸೀರಿಯಲ್​ಗಳು ಒಂದೇ ಸಲ ಸಾಕ್ಷಿಯಾಗ್ತಿರೋದು ಕುತೂಹಲ.

27
ಎರಡು ಸೀರಿಯಲ್​ಗಳ ವಿಶೇಷ
Image Credit : Instagram

ಎರಡು ಸೀರಿಯಲ್​ಗಳ ವಿಶೇಷ

ಅದರಲ್ಲಿ ಒಂದು ಕಲರ್ಸ್​​ ಕನ್ನಡದ ಭಾಗ್ಯಲಕ್ಷ್ಮಿ. ಇನ್ನೊಂದು ಜೀ ಕನ್ನಡದ ಲಕ್ಷ್ಮೀ ನಿವಾಸ. ಭಾಗ್ಯಲಕ್ಷ್ಮಿ ಸೀರಿಯಲ್​ನಲ್ಲಿ ಎಲ್ಲವೂ ಗೊತ್ತಿದ್ದೇ ತಾಂಡವ್​ನನ್ನು ಮತ್ತೊಮ್ಮೆ ಮದುವೆಯಾಗಲು ಭಾಗ್ಯ ಒಪ್ಪಿಕೊಂಡಿದ್ದರೆ, ಲಕ್ಷ್ಮೀ ನಿವಾಸದಲ್ಲಿ, ಸೈಕೋ ಜಯಂತ್​ನಿಗೆ ಅವನದ್ದೇ ಆದ ರೀತಿಯಲ್ಲಿ ತಿರುಗೇಟು ನೀಡಲು ಜಾನು ಮತ್ತೆ ಮನೆಗೆ ವಾಪಸ್​ ಆಗಿದ್ದಾಳೆ.

Related Articles

Related image1
ದೀಪಾ ಸಾಲದಂತ ಈಗ ನಂದಿನಿ ಬೇರೆ! Serial ಡೈರೆಕ್ಟರ್ಸ್​ಗೆ ಪುರುಷರ ಮೇಲೆ ಕರುಣೆನೇ ಇಲ್ವಾ- ಭಾರಿ ಅಸಮಾಧಾನ
Related image2
ಆ್ಯಕ್ಟಿಂಗ್​ ಬರಲ್ಲ ಎಂದು ಹೆಂಗಸರೆದುರೇ ಉಗಿದುಬಿಟ್ಟರು: ಕಣ್ಣೀರು ಹಾಕುತ್ತಲೇ ಆಕೆಗಾಗಿ ಸಹಿಸಿಕೊಂಡೆ- ಪ್ರಮೋದ್​ ಶೆಟ್ಟಿ ಮೆಲುಕು
37
ಭಾಗ್ಯಳಿಂದ ಕಾದಿದೆ ಮಾರಿಹಬ್ಬ
Image Credit : Jio Hotstar

ಭಾಗ್ಯಳಿಂದ ಕಾದಿದೆ ಮಾರಿಹಬ್ಬ

ಮೊದಲಿಗೆ ಭಾಗ್ಯಲಕ್ಷ್ಮಿ ಸೀರಿಯಲ್​ ನೋಡೋಣ. ತಾಂಡವ್​ ತಾನು ಒಳ್ಳೆಯವನಾಗಿದ್ದೇನೆ ಎಂದು ಎಲ್ಲರ ಎದುರೂ ಪೋಸ್​ ಕೊಟ್ಟಿದ್ದಾನೆ. ಅಮ್ಮ ಕುಸುಮಾ ಮತ್ತು ಭಾಗ್ಯನಿಗೆ ಇವನು ಸರಿಯಾಗಲ್ಲ ಎಂದು ಗೊತ್ತಿದ್ದರೂ, ಅಮ್ಮ ಸುನಂದ ಮತ್ತು ಮಾವನಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳುವುದು ಅವಳ ಜವಾಬ್ದಾರಿ ಆಗಿದ್ದರಿಂದ ಮದುವೆಗೆ ಒಪ್ಪಿಗೆ ಸೂಚಿಸಿದ್ದಾಳೆ.

47
ತಾಂಡವ್ ಪ್ಲ್ಯಾನ್​ ಉಲ್ಟಾ ಆಗತ್ತಾ?
Image Credit : Jio Hotstar

ತಾಂಡವ್ ಪ್ಲ್ಯಾನ್​ ಉಲ್ಟಾ ಆಗತ್ತಾ?

ತಮ್ಮ ಪ್ಲ್ಯಾನ್​ ಸಕ್ಸಸ್​ ಆಯ್ತು ಎಂದು ತಾಂಡವ್​ ಮನಸ್ಸಿನಲ್ಲಿಯೇ ಖುಷಿ ಪಟ್ಟುಕೊಳ್ತಿದ್ದಾನೆ. ಆದರೆ, ತಾನು ಭಾಗ್ಯಳಿಗೆ ಮೋಸ ಮಾಡುವ ಉದ್ದೇಶದಿಂದ ಮದುವೆಯಾಗುತ್ತಿರುವುದಾಗಿ ಶ್ರೇಷ್ಠಾಳ ಎದುರು ಮಾತನಾಡಿದ್ದನ್ನು ಭಾಗ್ಯ ಕೇಳಿಸಿಕೊಂಡಿದ್ದಾಳೆ. ಆದ್ದರಿಂದ ಅವಳ ಉದ್ದೇಶವೇ ಬೇರೆ ಇದೆ.

57
ಕುಂಕುಮ ಇಟ್ಟುಕೊಳ್ಳಲು ನಕಾರ
Image Credit : Instagram

ಕುಂಕುಮ ಇಟ್ಟುಕೊಳ್ಳಲು ನಕಾರ

ಮದುವೆಯ ಸಂದರ್ಭದಲ್ಲಿ ಕುಂಕುಮ ಇಡಲು ಬಂದಾಗ, ತಾಂಡವ್​ನಿಂದ ಆಕೆ ಕುಂಕುಮ ಇಟ್ಟುಕೊಳ್ಳಲಿಲ್ಲ. ತಾಂಡವ್​ ಕೊಟ್ಟಿರೋ ದುಬಾರಿ ಚಿನ್ನದ ಬಳೆಗಳ ಬದಲು ಆದಿ ಕೊಟ್ಟ ಹಸಿರು ಗಾಜಿನ ಬಳೆಗಳನ್ನೇ ತೊಟ್ಟುಕೊಂಡಿದ್ದಾಳೆ. ಮದುವೆಯಾಗುವ ಹಿಂದೆ ಅವಳ ಉದ್ದೇಶವೇ ಬೇರೆ ಇದೆ. ತಾಂಡವ್​ಗೆ ಇನ್ನಿದೆ ಮಾರಿ ಹಬ್ಬ.

67
ಚಿನ್ನುಮರಿ ಈಗ ಮಹಾಮಾರಿ
Image Credit : zee Kannada

ಚಿನ್ನುಮರಿ ಈಗ ಮಹಾಮಾರಿ

ಅದೇ ಇನ್ನೊಂದೆಡೆ, ಲಕ್ಷ್ಮೀ ನಿವಾಸದ ಚಿನ್ನುಮರಿ ಈಗ ಮಹಾಮಾರಿ ಆಗಿದ್ದಾಳೆ. ಸೈಕೋ ಗಂಡ ಅತಿಯಾದ ಪ್ರೀತಿಯ ನೆಪದಲ್ಲಿ ತನಗೆ ಹೇಗೆಲ್ಲಾ ಟಾರ್ಚರ್​ ಕೊಡುತ್ತಿದ್ದನೋ ಅದೇ ರೀತಿ ಅವಳು ಈಗ ಜಯಂತ್​ಗೆ ಮಾಡುತ್ತಿದ್ದಾಳೆ. ಗುಲಾಬಿ ಹೂವಿನ ಬೊಕ್ಕೆ ನೀಡಿ ಅದರಲ್ಲಿ ಮುಳ್ಳು ಹಾಕಿ ರಕ್ತ ಬರಿಸೋವುದರಿಂದ ಹಿಡಿದು, ಹಾಲಿನಲ್ಲಿ ಜಿರಲೆ ಹಾಕಿ ಕುಡಿಸುವವರೆಗೆ ಎಲ್ಲವನ್ನೂ ಜಯಂತ್​ಗೇ ವಾಪಸ್​ ಮಾಡುತ್ತಿದ್ದಾಳೆ ಜಾಹ್ನವಿ.

77
ಸಿಕ್ಕಾಪಟ್ಟೆ ಮಜಾ ಬರ್ತಿದೆ
Image Credit : zee Kannada

ಸಿಕ್ಕಾಪಟ್ಟೆ ಮಜಾ ಬರ್ತಿದೆ

ಇದೀಗ ಈ ಎರಡೂ ಸೀರಿಯಲ್​ ನೋಡುಗರಿಗೆ ಸಿಕ್ಕಾಪಟ್ಟೆ ಮಜಾ ಬರ್ತಿದೆ. ಸೀರಿಯಲ್​ ವೀಕ್ಷಕರಲ್ಲಿ ಹೆಚ್ಚಿನ ವೀಕ್ಷಕರಾಗಿರುವ ಹೆಂಗಸರಿಗಂತೂ ಹಬ್ಬವೋ ಹಬ್ಬ. ಎರಡು ವಿಭಿನ್ನ ಸೀರಿಯಲ್​ಗಳ ಕ್ಲೈಮ್ಯಾಕ್ಸ್ ನೋಡಲು ತುದಿಗಾಲಿನಲ್ಲಿ ನಿಂತಿರೋದು ಪ್ರೊಮೋಗಳಿಗೆ ಬರ್ತಿವೋ ಕಮೆಂಟ್ಸ್​ ನೋಡಿಯೇ ತಿಳಿಯುತ್ತದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಕನ್ನಡ ಧಾರಾವಾಹಿ
ಮನರಂಜನಾ ಸುದ್ದಿ
ಟಿವಿ ಶೋ
ಸಂಬಂಧಗಳು
ಲಕ್ಷ್ಮೀ ನಿವಾಸ ಧಾರಾವಾಹಿ
ಭಾಗ್ಯಲಕ್ಷ್ಮಿ ಧಾರಾವಾಹಿ
ಜೀ ಕನ್ನಡ
ಕಲರ್ಸ್ ಕನ್ನಡ

Latest Videos
Recommended Stories
Recommended image1
ಕಾಲೇಜು ಅರ್ಧಕ್ಕೆ ಬಿಟ್ಟ ಹುಡುಗಿ, 24ನೇ ವಯಸ್ಸಿಗೆ ಮೋದಿ ಜುಕರ್‌ಬರ್ಗ್ ಪಟ್ಟಿಯಲ್ಲಿ ಸ್ಥಾನ
Recommended image2
OTT Release This Week: ಒಟಿಟಿಯಲ್ಲಿ ತೆರೆಕಂಡ, ಜನರನ್ನು ಕಾಡು ಸಿನಿಮಾಗಳು; ಸಿನಿಪ್ರೇಮಿಗಳಿಗೆ ಹಬ್ಬದೂಟ
Recommended image3
Amruthadhaare: ಅಲೆಲೆ... ಶಕುನಿ ಮಾಮಾನ್ನೇ ಯಾಮಾರಿಸಿದ್ಲು ಲೇಡಿ ಕೇಡಿ- ಜೈದೇವ್​ನನ್ನೇ ಮೀರಿಸಿದ ದಿಯಾ!
Related Stories
Recommended image1
ದೀಪಾ ಸಾಲದಂತ ಈಗ ನಂದಿನಿ ಬೇರೆ! Serial ಡೈರೆಕ್ಟರ್ಸ್​ಗೆ ಪುರುಷರ ಮೇಲೆ ಕರುಣೆನೇ ಇಲ್ವಾ- ಭಾರಿ ಅಸಮಾಧಾನ
Recommended image2
ಆ್ಯಕ್ಟಿಂಗ್​ ಬರಲ್ಲ ಎಂದು ಹೆಂಗಸರೆದುರೇ ಉಗಿದುಬಿಟ್ಟರು: ಕಣ್ಣೀರು ಹಾಕುತ್ತಲೇ ಆಕೆಗಾಗಿ ಸಹಿಸಿಕೊಂಡೆ- ಪ್ರಮೋದ್​ ಶೆಟ್ಟಿ ಮೆಲುಕು
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved