MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • ಆ ಆಂಟಿ ಊಟ ಮಾಡೋದ್​ ಬಿಟ್ಟು ನನ್ನನ್ನೇ ಗುರಾಯಿಸ್ತಾ ಇದ್ರು: ಶಾಕಿಂಗ್​ ಘಟನೆ ನೆನೆದ Bhagyalakshmi ತನ್ವಿ

ಆ ಆಂಟಿ ಊಟ ಮಾಡೋದ್​ ಬಿಟ್ಟು ನನ್ನನ್ನೇ ಗುರಾಯಿಸ್ತಾ ಇದ್ರು: ಶಾಕಿಂಗ್​ ಘಟನೆ ನೆನೆದ Bhagyalakshmi ತನ್ವಿ

'ಭಾಗ್ಯಲಕ್ಷ್ಮಿ' ಸೀರಿಯಲ್ ಖ್ಯಾತಿಯ ತನ್ವಿ ಪಾತ್ರಧಾರಿ ಅಮೃತಾ ಗೌಡ, ತಮಗಾದ ಒಂದು ಶಾಕಿಂಗ್ ಅನುಭವವನ್ನು ಹಂಚಿಕೊಂಡಿದ್ದಾರೆ. ಮದುವೆಯೊಂದರಲ್ಲಿ ಊಟ ಮಾಡುವಾಗ ಮಹಿಳೆಯೊಬ್ಬರು ತಮ್ಮನ್ನೇ ಗುರಾಯಿಸುತ್ತಿದ್ದು, ಇದರಿಂದ ತಮಗೆ ಭಯವಾಗಿತ್ತು ಎಂದು ಅವರು ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ.

2 Min read
Author : Suchethana D
Published : Jul 04 2026, 02:09 PM IST
Share this Photo Gallery
  • FB
  • TW
  • Linkdin
  • Whatsapp
16
ಭಾಗ್ಯಲಕ್ಷ್ಮಿ ಸೀರಿಯಲ್​ ತನ್ವಿ
Image Credit : kannada.mojo360 Instagram

ಭಾಗ್ಯಲಕ್ಷ್ಮಿ ಸೀರಿಯಲ್​ ತನ್ವಿ

ಭಾಗ್ಯಲಕ್ಷ್ಮಿ ಸೀರಿಯಲ್​ (Bhagyalakshmi Serial)ನಲ್ಲಿ ತನ್ವಿ ಪಾತ್ರದ ಮೂಲಕ ಎಲ್ಲರನ್ನೂ ರಂಜಿಸಿದಾಕೆ ನಟಿ ಅಮೃತಾ ಗೌಡ. ಈಚೆಗಷ್ಟೇ ದ್ವಿತೀಯ ಪಿಯುಸಿ ಮುಂದಿನ ವಿದ್ಯಾಭ್ಯಾಸ ಮಾಡುತ್ತಿರುವ ಅಮೃತಾ ಸೋಷಿಯಲ್​ ಮೀಡಿಯಾದಲ್ಲಿಯೂ ಸಕತ್​ ಆ್ಯಕ್ಟೀವ್​. ಇದಾಗಲೇ ಸಂದರ್ಶನದಲ್ಲಿ ತನಗೆ ನಟಿಯಾಗುವ ಕನಸು ಇದೆ ಎಂದು ಹೇಳಿಕೊಂಡಿದ್ದಳು. ಸೋಷಿಯಲ್​ ಮೀಡಿಯಾದಲ್ಲಿ ಸಕತ್​ ಆ್ಯಕ್ಟೀವ್​ ಆಗಿರೋ ಅಮೃತಾ ಆಗಾಗ್ಗೆ ಫೋಟೋಶೂಟ್​, ವಿಡಿಯೋಶೂಟ್​ ಮಾಡಿಸಿಕೊಳ್ಳುತ್ತಲೇ ಇರುತ್ತಾಳೆ. ನಟನೆಯಲ್ಲಿಯೂ ಈಕೆಯದ್ದು ಎತ್ತಿದ ಕೈ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಅಭಿಮಾನಿಗಳ ಕಾಟ
Image Credit : Asianet News

ಅಭಿಮಾನಿಗಳ ಕಾಟ

ಅಷ್ಟಕ್ಕೂ ಸಿನಿಮಾ ಸೆಲೆಬ್ರಿಟಿಗಳು ಹೊರಡೆ ಹೋದಾಗ ಅವರಿಗೆ ಅಭಿಮಾನಿಗಳು ಕೊಡುವ ಕಾಟ ಅಷ್ಟಿಷ್ಟಲ್ಲ. ಇದೇ ಕಾರಣಕ್ಕೆ ಹಲವರು ಸ್ಟಾರ್​ ತಾರೆಯರು ಬಾಡಿಗಾರ್ಡ್​ ನೇಮಕಮಾಡಿಕೊಂಡಿರುತ್ತಾರೆ. ಸೀರಿಯಲ್ ತಾರೆಯರಿಗೂ ಸಕತ್​ ಡಿಮಾಂಡ್​ ಇರುವ ಕಾರಣ, ಹೋದಲ್ಲಿ, ಬಂದಲ್ಲಿ ಅಭಿಮಾನಿಗಳನ್ನು ನಿಭಾಯಿಸುವುದೇಕಷ್ಟ ಆಗಿಬಿಡುತ್ತದೆ.

Related Articles

Related image1
ಲೈವ್​ನಲ್ಲಿ Amrutadhaare ಜೋಡಿ: 'ಗೌತಮ್​, ನೀವ್ಯಾಕೆ ಇಷ್ಟು ಹ್ಯಾಂಡ್​ಸಮ್​'? ಫ್ಯಾನ್​ ಪ್ರಶ್ನೆಗೆ ನಾಚಿ ಏನ್​ ಹೇಳಿದ್ರು ಕೇಳಿ
Related image2
ಗಿಚ್ಚಿ ಗಿಲಿಗಿಲಿ ಪ್ರಶಾಂತ್ ಬಾಳಲ್ಲಿ ಶುರುವಾಯ್ತು ಹೊಸ ಅಧ್ಯಾಯ: ಮದುವೆ ಶಾಸ್ತ್ರಗಳ ಕ್ಯೂಟ್​ ಫೋಟೋಸ್​ ಇಲ್ಲಿವೆ
36
ಶಾಕಿಂಗ್ ಅನುಭವ
Image Credit : Asianet News

ಶಾಕಿಂಗ್ ಅನುಭವ

ಅದೇ ರೀತಿಯ ಒಂದು ಅನುಭವವನ್ನು ಹಂಚಿಕೊಂಡಿದ್ದಾಳೆ ಅಮೃತಾ ಗೌಡ. kannada.mojo360 ಚಾನೆಲ್​ಗೆ ನೀಡಿರುವ ಸಂದರ್ಶನದಲ್ಲಿ ಅಮೃತಾ ಅವರು ತನಗಾಗಿರುವ ಶಾಕಿಂಗ್​ ಘಟನೆಯನ್ನು ಹಂಚಿಕೊಂಡಿದ್ದಾಳೆ. ಮದುವೆ ಸಮಾರಂಭಕ್ಕೆ ಹೋದಾಗ ಅಲ್ಲಿ ಊಟಕ್ಕೆ ಕುಳಿತುಕೊಂಡಾಗ ತಮ್ಮ ಎದುರಿಗೆ ಕುಳಿತ ಮಹಿಳೆಯೊಬ್ಬರು ತಮ್ಮನ್ನೇ ಗುರಾಯಿಸುತ್ತಿದ್ದುದನ್ನು ನೆನಪಿಸಿಕೊಂಡಿದ್ದಾಳೆ.

46
ನನ್ನನ್ನೇ ಗುರಾಯಿಸ್ತಿದ್ರು
Image Credit : Instagram

ನನ್ನನ್ನೇ ಗುರಾಯಿಸ್ತಿದ್ರು

ನಾನು ಹೊರಗೆ ಹೋಗುವಾಗ ಸ್ಪೆಕ್ಟ್​ ಹಾಕುತ್ತೇನೆ. ಅದಕ್ಕಾಗಿ ಹಲವರಿಗೆ ನಾನು ತನ್ವಿ ಎನ್ನುವುದು ತಿಳಿಯುವುದಿಲ್ಲ. ಆದರೆ ನೋಡಲು ಅದೇ ರೀತಿ ಕಾಣುವ ಕಾರಣದಿಂದ ಹೌದೋ ಅಲ್ವೋ ಅಂತ ಕನ್​ಫ್ಯೂಸ್​ ಆಗ್ತಾರೆ. ಅದೇ ರೀತಿ ಈ ಆಂಟಿ ಕೂಡ ಊಟ ಮಾಡ್ತಾ ಇದ್ರು. ಆದರೆ ಪ್ಲೇಟ್​ ನೋಡುವ ಬದಲು ನನ್ನನ್ನು ಗುರಾಯಿಸುತ್ತಿದ್ದರು. ಆ ಸಮಯದಲ್ಲಿ ನನಗೆ ಶಾಕ್​ ಕೂಡ ಆಗೋಯ್ತು ಎಂದಿದ್ದಾರೆ.

56
ಏನೋ ಮಾಡ್ತಾರೆ ಎಂದುಕೊಂಡೆ
Image Credit : Instagram

ಏನೋ ಮಾಡ್ತಾರೆ ಎಂದುಕೊಂಡೆ

ಅವರು ನನಗೆ ಏಕೆ ಹಾಗೆ ಮಾಡ್ತಿದ್ದಾರೆ ಎಂದು ತಿಳಿಯಲಿಲ್ಲ. ಅಮ್ಮನ ಬಳಿನೂ ಹೇಳಿದೆ. ಅವರು ನನಗೆ ಏನೋ ಮಾಡ್ತಾರೆ ಅನ್ನಿಸತ್ತೆ ಎಂದು. ಕೊನೆಗೆ ನಾನೇ ಮುಖ ಮುಚ್ಚಿಕೊಂಡು ಊಟ ಮಾಡತೊಡಗಿದೆ. ಕೊನೆಗೂ ಆ ಆಂಟಿ ನನ್ನನ್ನು ಮಾತನಾಡಿಸಲಿಲ್ಲ. ಆದ್ರೆ ನಂಗೇನೋ ಮಾಡಿ ಬಿಡ್ತಾರೆ ಎನ್ನೋ ಭಯ ಇತ್ತು ಎಂದಿದ್ದಾಳೆ.

66
ಪಿಯುಸಿಯಲ್ಲಿ ಉತ್ತಮ ಅಂಕ
Image Credit : Instagram

ಪಿಯುಸಿಯಲ್ಲಿ ಉತ್ತಮ ಅಂಕ

ಇನ್ನು ಈಚೆಗೆ, ಅಮೃತಾ ಸಕತ್​ ಸುದ್ದಿಯಾಗಲು ಕಾರಣ, ಆಕೆ ಪಿಯುಸಿಯ ಕಾಮರ್ಸ್​ ವಿಭಾಗದಲ್ಲಿ ಶೇಕಡಾ 91 ತೆಗೆದದ್ದರಿಂದ. ಈ ಮೂಲಕ ನಟನೆಯ ಜೊತೆಗೆ ಅಭ್ಯಾಸದಲ್ಲಿಯೂ ಜಾಣೆ ಎನ್ನುವುದನ್ನು ಸಾಬೀತು ಮಾಡಿದ್ದಾಳೆ. ಈಗಿನ ಬಹುತೇಕ ಮಕ್ಕಳು ಶೇಕಡಾ 90ರ ಮೇಲೆ ತೆಗೆಯುವುದು ಸಾಮಾನ್ಯವಾಗಿದೆ. ಆದರೆ ಒಂದೆಡೆ ಶೂಟಿಂಗ್​ ಬಿಜಿಯ ನಡುವೆಯೇ, ಇಷ್ಟು ಅಂಕ ಗಳಿಸಿರುವ ಕಾರಣ ತನ್ವಿಗೆ ಶ್ಲಾಘನೆಗಳ ಮಹಾಪೂರವೇ ಹರಿದುಬಂದಿತ್ತು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಭಾಗ್ಯಲಕ್ಷ್ಮಿ ಧಾರಾವಾಹಿ
ಮನರಂಜನಾ ಸುದ್ದಿ
ಕನ್ನಡ ಧಾರಾವಾಹಿ
ಸಂಬಂಧಗಳು

Latest Videos
Recommended Stories
Recommended image1
'ನೀ ಇರಲು ಜೊತೆಯಲ್ಲಿ'... ತಮಿಳುನಾಡಿನ ನಟಿ ಜೊತೆ ನಿಶ್ಚಿತಾರ್ಥ ಮಾಡ್ಕೊಂಡ ಕನ್ನಡ ನಟ Pavan Ravindra
Recommended image2
Paddu Gowda Passed Away: ʻಪ್ಯಾಟೆ ಮಂದಿ ಕಾಡಿಗ್‌ ಬಂದ್ರುʼ ಖ್ಯಾತಿ ಪದ್ದು ಗೌಡ ನಿಧನ; ಜೀವನಯಾನ ಮುಗಿಸಿದ ಮುಗ್ಧ ಸ್ನೇಹಜೀವಿ!
Recommended image3
ಲೈವ್​ನಲ್ಲಿ Amrutadhaare ಜೋಡಿ: 'ಗೌತಮ್​, ನೀವ್ಯಾಕೆ ಇಷ್ಟು ಹ್ಯಾಂಡ್​ಸಮ್​'? ಫ್ಯಾನ್​ ಪ್ರಶ್ನೆಗೆ ನಾಚಿ ಏನ್​ ಹೇಳಿದ್ರು ಕೇಳಿ
Related Stories
Recommended image1
ಲೈವ್​ನಲ್ಲಿ Amrutadhaare ಜೋಡಿ: 'ಗೌತಮ್​, ನೀವ್ಯಾಕೆ ಇಷ್ಟು ಹ್ಯಾಂಡ್​ಸಮ್​'? ಫ್ಯಾನ್​ ಪ್ರಶ್ನೆಗೆ ನಾಚಿ ಏನ್​ ಹೇಳಿದ್ರು ಕೇಳಿ
Recommended image2
ಗಿಚ್ಚಿ ಗಿಲಿಗಿಲಿ ಪ್ರಶಾಂತ್ ಬಾಳಲ್ಲಿ ಶುರುವಾಯ್ತು ಹೊಸ ಅಧ್ಯಾಯ: ಮದುವೆ ಶಾಸ್ತ್ರಗಳ ಕ್ಯೂಟ್​ ಫೋಟೋಸ್​ ಇಲ್ಲಿವೆ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved