- Home
- Entertainment
- TV Talk
- ಲೈವ್ನಲ್ಲಿ Amrutadhaare ಜೋಡಿ: 'ಗೌತಮ್, ನೀವ್ಯಾಕೆ ಇಷ್ಟು ಹ್ಯಾಂಡ್ಸಮ್'? ಫ್ಯಾನ್ ಪ್ರಶ್ನೆಗೆ ನಾಚಿ ಏನ್ ಹೇಳಿದ್ರು ಕೇಳಿ
ಲೈವ್ನಲ್ಲಿ Amrutadhaare ಜೋಡಿ: 'ಗೌತಮ್, ನೀವ್ಯಾಕೆ ಇಷ್ಟು ಹ್ಯಾಂಡ್ಸಮ್'? ಫ್ಯಾನ್ ಪ್ರಶ್ನೆಗೆ ನಾಚಿ ಏನ್ ಹೇಳಿದ್ರು ಕೇಳಿ
ಅಮೃತಧಾರೆ ಧಾರಾವಾಹಿಯು ಯಶಸ್ವಿಯಾಗಿ 1000 ಸಂಚಿಕೆಗಳನ್ನು ಪೂರ್ಣಗೊಳಿಸಿದೆ. ಈ ವಿಶೇಷ ಸಂದರ್ಭದಲ್ಲಿ, ಮುಖ್ಯ ಪಾತ್ರಧಾರಿಗಳಾದ ರಾಜೇಶ್ ನಟರಂಗ (ಗೌತಮ್) ಮತ್ತು ಛಾಯಾ ಸಿಂಗ್ (ಭೂಮಿಕಾ) ಅಭಿಮಾನಿಗಳೊಂದಿಗೆ ಸಂವಾದ ನಡೆಸಿದ್ದಾರೆ.

ಒಂದು ಸಾವಿರ ಸಂಚಿಕೆ ಪೂರ್ಣ
ಅಮೃತಧಾರೆ ಸೀರಿಯಲ್ (Amrutadhaare Serial) ನಿನ್ನೆ ಅರ್ಥಾತ್ ಜುಲೈ 3ರಂದು ಒಂದು ಸಾವಿರ ಎಪಿಸೋಡ್ಗಳನ್ನು ಮುಗಿಸಿದೆ. May 29, 2023ರಿಂದ ಆರಂಭಗೊಂಡಿದ್ದ ಈ ಸೀರಿಯಲ್ ಇದಾಗಲೇ ಮೂರು ವರ್ಷಗಳನ್ನು ಪೂರೈಸಿದ್ದು, ಇನ್ನೂ ಜನಮನಕ್ಕೆ ಹತ್ತಿರವಾಗುತ್ತಿದೆ.
ನಟನೆಯಲ್ಲಿ ಪೈಪೋಟಿ
ಇದರಲ್ಲಿ ಗೌತಮ್ ಮತ್ತು ಭೂಮಿಕಾ ಜೋಡಿಯನ್ನು ವೀಕ್ಷಕರು ಸಿಕ್ಕಾಪಟ್ಟೆ ಇಷ್ಟಪಟ್ಟಿದ್ದಾರೆ. ಮಧ್ಯ ವಯಸ್ಸಿನ ಲವ್ಸ್ಟೋರಿಗೆ ಫ್ಯಾನ್ಸ್ ಫಿದಾ ಆಗಿದ್ದು, ಇದ್ದರೆ ಇಂಥ ಜೋಡಿ ಇರಬೇಕು ಎನ್ನುತ್ತಿದ್ದಾರೆ. ಅದರಲ್ಲಿಯೂ ಗೌತಮ್ ಆಗಿ ನಟಿಸುತ್ತಿರುವ ರಾಜೇಶ್ ನಟರಂಗ (Rajesh Nataranga) ಹಾಗೂ ಭೂಮಿಕಾ ಆಗಿ ನಟಿಸುತ್ತಿರುವ ಛಾಯಾ ಸಿಂಗ್ (Chaya Singh) ಅವರ ಅಭಿನಯದ ಲೆವೆಲ್ಲೇ ಬೇರೆ ಇದೆ. ಕಣ್ಣಿನಲ್ಲಿಯೇ ಎಲ್ಲವನ್ನೂ ಹೇಳುವ, ನಟನೆಯಲ್ಲಿ ಒಬ್ಬರಿಗೊಬ್ಬರು ಪೈಪೋಟಿಕೊಡುವ ರೀತಿಯಲ್ಲಿ ಇವರು ನಟಿಸುತ್ತಿರುವುದರಿಂದಲೇ ಇದೊಂದು ತಮ್ಮ ಮನೆಯ ಸ್ಟೋರಿನೇ ಎಂದುಕೊಳ್ಳುವವರು ಹಲವರಿದ್ದಾರೆ.
ನೀವ್ಯಾಕೆ ಇಷ್ಟು ಹ್ಯಾಂಡ್ಸಮ್?
ಇಂತಿಪ್ಪ ಜೋಡಿ, ಸೀರಿಯಲ್ ಒಂದು ಸಾವಿರ ಸಂಚಿಕೆ ಮುಗಿಸಿರುವ ಹಿನ್ನೆಲೆಯಲ್ಲಿ ನೇರಪ್ರಸಾರದಲ್ಲಿ ಬಂದು, ಅಭಿಮಾನಿಗಳ ಜೊತೆ ಮಾತನಾಡಿದ್ದಾರೆ. ಅಭಿಮಾನಿಗಳು ಕೇಳಿದ ಹಲವಾರು ಪ್ರಶ್ನೆಗಳಿಗೆ ಜೋಡಿ ಉತ್ತರಿಸಿದೆ. ಗೂಗಲ್ ದಾಖಲೆಯ ಪ್ರಕಾರ, ರಾಜೇಶ್ ಹುಟ್ಟಿದ್ದು 1977ರಲ್ಲಿ. ಇದರ ಪ್ರಕಾರ ಇಂದು ಅವರು ತಮ್ಮ 49 ವರ್ಷ ಪೂರ್ಣ ಮಾಡಿದ್ದಾರೆ. ಆದರೂ ಇದೀಗ ಅವರ ಹಲವರ ಕ್ರಷ್ ಆಗಿಯೇ ಇದ್ದಾರೆ. ಅದಕ್ಕಾಗಿಯೇ ಲೇಡಿ ಫ್ಯಾನ್ ಒಬ್ಬರು ಸರ್ ನೀವ್ಯಾಕೆ ಇಷ್ಟೊಂದು ಹ್ಯಾಂಡ್ಸಮ್ ಎಂದು ಪ್ರಶ್ನೆ ಕೇಳಿದ್ದಾರೆ. ಅದಕ್ಕೆ ನಾಚಿಕೊಂಡ ರಾಜೇಶ್, ಹಾಗೇನೂ ಇಲ್ಲ. ನಿಮ್ಮ ದೃಷ್ಟಿಕೋನ ಹಾಗಿದೆಯಷ್ಟೇ. ದೃಷ್ಟಿಯಂತೆ ಸೃಷ್ಟಿ ಅಲ್ವಾ? ಅದಕ್ಕೇ ನಿಮಗೆ ಹಾಗೆ ಕಾಣಿಸ್ತಿದ್ದೇನೆ ಅಷ್ಟೇ ಎಂದಿದ್ದಾರೆ.
ಲೇಡಿ ಜೇಮ್ಸ್ಬಾಂಡ್
ಇದೇ ವೇಳೆ, ಇಬ್ಬರ ಅಭಿನಯದ ಬಗ್ಗೆ ಅಭಿಮಾನಿಗಳಿಂದ ಶ್ಲಾಘನೆಗಳ ಮಹಾಪೂರವೇ ಹರಿದುಬಂದಿದೆ. ಛಾಯಾ ಸಿಂಗ್ ಅವರು, ತಮ್ಮನ್ನು ರಾಜೇಶ್ ನಟರಂಗ ಅವರು ಹೇಗೆ ತಿದ್ದಿ ತೀಡುತ್ತಾರೆ, ಹೇಗೆ ಕನ್ನಡವನ್ನು ಕಲಿಸುತ್ತಾರೆ ಎನ್ನುವ ಬಗ್ಗೆ ಮಾತನಾಡಿದ್ದಾರೆ. ಇದೇ ವೇಳೆ, ಭೂಮಿಕಾ ಅವರನ್ನು ಲೇಡಿ ಜೇಮ್ಸ್ಬಾಂಡ್ ಎಂದು ಅಭಿಮಾನಿಯೊಬ್ಬರು ಕರೆದಿದ್ದಾರೆ. ಅದಕ್ಕೆ ಛಾಯಾ ಸಿಂಗ್ ಸಿಕ್ಕಾಪಟ್ಟೆ ಖುಷಿ ಪಟ್ಟುಕೊಂಡಿದ್ದಾರೆ.
ರಾಜೇಶ್ ನಟರಂಗ ಹಿನ್ನೆಲೆ
ಇನ್ನು ರಾಜೇಶ್ ಅವರ ಬಗ್ಗೆ ಕಿರುತೆರೆ, ಹಿರಿತೆರೆ ಪ್ರಿಯರಿಗೆ ತಿಳಿದಿದ್ದೇ. ಅವರು 'ಸ್ಮಶಾನ' ಮತ್ತು 'ಕುರುಕ್ಷೇತ್ರ' ಧಾರಾವಾಹಿಯ ಪ್ರೊಡಕ್ಷನ್ ಮ್ಯಾನೇಜರ್ ಆಗಿ ಗುರುತಿಸಿಕೊಳ್ಳುವ ಮೂಲಕ ಕಿರುತೆರೆಗೆ ಕಾಲಿಟ್ಟವರು. 'ಮಾಯಾಮೃಗ' ಧಾರಾವಾಹಿಯಲ್ಲಿ ಮೊದಲ ಬಾರಿ ಬಣ್ಣ ಹಚ್ಚಿದ ರಾಜೇಶ್ ನಟರಂಗ ಮುಂದೆ 'ಮುಕ್ತ', 'ಬದುಕು', 'ಶಕ್ತಿ', 'ಗುಪ್ತಗಾಮಿನಿ', 'ನಾನೂ ನನ್ನ ಕನಸು' ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಗೌತಮ್ ಪಾತ್ರಕ್ಕೆ ಜೀವ ತುಂಬಿರುವ ರಾಜೇಶ್, ಪೋಷಕನಟನಾಗಿ, ಖಳನಟನಾಗಿ ಕನ್ನಡ ಕಿರುತೆರೆ ಮತ್ತು ಹಿರಿತೆರೆ ಎರಡರಲ್ಲೂ ಕೂಡ ತಮ್ಮದೇ ಆದ ಛಾಪನ್ನ ಮೂಡಿಸಿದ್ದಾರೆ. ಅವರ ಅಭಿನಯಕ್ಕೆ ನಿಬ್ಬೆರಗಾಗದವರೇ ಇಲ್ಲ.
ನಟಿಯ ಕುರಿತು
ನಟಿ ಛಾಯಾ ಸಿಂಗ್ ಸ್ಯಾಂಡಲ್‌ವುಡ್ ನಟಿ. ಮೊನ್ನೆಯಷ್ಟೇ ಇವರ ನಟನೆಗೆ ಭೈರತಿ ರಣಗಲ್ ಚಿತ್ರ ಭರ್ಜರಿಯಾಗಿ ಓಡುತ್ತಿದೆ. 2000ರಲ್ಲಿ ತೆರೆಕಂಡ 'ಮುನ್ನುಡಿ' ಅವರ ಮೊದಲ ಸಿನಿಮಾ. ವಿಶೇಷವೆಂದರೆ, ಆ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಲಭಿಸಿತ್ತು. ಪ್ರಾರಂಭದ ಮೂರು ವರ್ಷ ಕನ್ನಡದಲ್ಲೇ ಗುರುತಿಸಿಕೊಂಡಿದ್ದ ಅವರು, ಆನಂತರ ತಮಿಳಿಗೆ ಕಾಲಿಟ್ಟರು. ನಂತರ ಮಲಯಾಳಂ, ತೆಲುಗು, ಬೆಂಗಾಲಿ ಸಿನಿಮಾಗಳಲ್ಲೂ ಗುರುತಿಸಿಕೊಂಡಿದ್ದಾರೆ. ಒಟ್ಟೂ 38 ಚಿತ್ರಗಳಲ್ಲಿ ನಟಿಸಿರುವುದಾಗಿ ನಟಿ ತಿಳಿಸಿದ್ದಾರೆ. ಮದುವೆಯಾದ ಬಳಿಕ ತಮ್ಮ 20 ವರ್ಷಗಳ ಬಣ್ಣದ ಲೋಕಕ್ಕೆ ಸ್ವಲ್ಪ ಬ್ರೇಕ್ ಕೊಟ್ಟಿದ್ದರು. ಈಗ ಪುನಃ ಅಮೃತಧಾರೆ ಮೂಲಕ ಕಿರುತೆರೆಗೆ ಮರಳಿದ್ದಾರೆ.
ರೌಡಿ ಅಳಿಯ ಚಿತ್ರ
2004ರಲ್ಲಿ ಬಿಡುಗಡೆಯಾಗಿದ್ದ ರೌಡಿ ಅಳಿಯ ಚಿತ್ರದಲ್ಲಿ ಶಿವರಾಜ್ ಕುಮಾರ್, ಶರಣ, ಪ್ರಿಯಾಂಕಾ ಉಪೇಂದ್ರ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದರೆ, ರೌಡಿ ಅಣ್ಣ-ತಂಗಿಯಾಗಿ ಕಾಣಿಸಿಕೊಂಡಿದ್ದರು ಗೌತಮ್ ಮತ್ತು ಭೂಮಿಕಾ ಅರ್ಥಾತ್ ರಾಜೇಶ್ ಮತ್ತು ಛಾಯಾ ಸಿಂಗ್! ಇದರಲ್ಲಿ ಛಾಯಾ ಸಿಂಗ್ ಕುಪ್ಪಮ್ಮ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

