- Home
- Entertainment
- TV Talk
- Bhagyalakshmi Serialನಿಂದ ಜೈಲು ಪಾಲಾಗಿದ್ದ ತಾಂಡವ್ ದಿಢೀರ್ ಪ್ರತ್ಯಕ್ಷ: ನೇರ ಪ್ರಸಾರದಲ್ಲಿ ನಟ ಹೇಳಿದ್ದೇನು
Bhagyalakshmi Serialನಿಂದ ಜೈಲು ಪಾಲಾಗಿದ್ದ ತಾಂಡವ್ ದಿಢೀರ್ ಪ್ರತ್ಯಕ್ಷ: ನೇರ ಪ್ರಸಾರದಲ್ಲಿ ನಟ ಹೇಳಿದ್ದೇನು
'ಭಾಗ್ಯಲಕ್ಷ್ಮಿ' ಸೀರಿಯಲ್‌ನ ಖಳನಾಯಕ ತಾಂಡವ್ ಪಾತ್ರಧಾರಿ ಸುದರ್ಶನ್ ರಂಗಪ್ರಸಾದ್, ಸೀರಿಯಲ್ ಅಂತ್ಯದ ಬೆನ್ನಲ್ಲೇ ತಮ್ಮ ಅನುಭವ ಹಂಚಿಕೊಂಡಿದ್ದಾರೆ. ತಾಂಡವ್ ಪಾತ್ರವು ನಿಜ ಜೀವನಕ್ಕೆ ಹೇಗೆ ಸಂಬಂಧಿಸಿದೆ ಮತ್ತು ಈ ಸೀರಿಯಲ್ ತಮಗೆ ತಂದುಕೊಟ್ಟ ಗುರುತಿನ ಬಗ್ಗೆ ಅವರು ಮನಬಿಚ್ಚಿ ಮಾತನಾಡಿದ್ದಾರೆ.

ತಾಂಡವ್ ಎನ್ನುವ ರಕ್ಕಸ
Bhagyalakshmi Serialನಲ್ಲಿ ಭಾಗ್ಯಳ ಪಾಲಿಗೆ ಪ್ರತಿಕ್ಷಣವೂ ರಕ್ಕಸನಾಗಿ ಕಾಣಿಸಿಕೊಂಡವನು ತಾಂಡವ್. ಅವನ ಹಿಂಸೆ ಎಷ್ಟು ಕ್ರೂರವಾಗಿತ್ತು ಎಂದರೆ, ತಾಂಡವ್ ಪಾತ್ರಧಾರಿ ಹೊರಗಡೆ ಎಲ್ಲಿಯಾದರೂ ಸಿಕ್ಕರೆ ನಟನನ್ನು ಮುಗಿಸಿಬಿಡುವಷ್ಟು ಕೋಪ ಸೀರಿಯಲ್ ವೀಕ್ಷಕರಿಗೆ ಬರುತ್ತಿತ್ತು.
ಜೈಲಿನಲ್ಲಿ ತಾಂಡವ್
ಅಂಥ ರೋಲ್ ಮಾಡಿದ ನಟ ಸುದರ್ಶನ್ ರಂಗಪ್ರಸಾದ್. ಸದ್ಯ ತಾಂಡವ್ ಜೈಲಿನಲ್ಲಿ ಇದ್ದಾನೆ. ಇಷ್ಟು ವರ್ಷಗಳು ಅವನು ಆಡಿದ್ದ ಆಟಕ್ಕೆ ಕೊನೆಗೂ ಬ್ರೇಕ್ ಬಿದ್ದಿದ್ದು ಜೈಲು ಸೇರಿದ್ದಾನೆ. ಅಲ್ಲಿಗೆ ತಾಂಡವ್ ರೋಲ್ ಮುಗಿದಂತೆ. ಏಕೆಂದ್ರೆ ಇದಾಗಲೇ ಭಾಗ್ಯಲಕ್ಷ್ಮಿಯ ಅಂತಿಮ ಸಂಚಿಕೆ ನಾಳೆ ಪ್ರಸಾರ ಆಗಲಿದೆ.
ಸೀರಿಯಲ್ ಅನುಭವ
ಇದರ ನಡುವೆಯೇ, ಭಾಗ್ಯಲಕ್ಷ್ಮಿ ಸೀರಿಯಲ್ನಲ್ಲಿ ತಮ್ಮ ಅನುಭವವನ್ನು ಹಂಚಿಕೊಳ್ಳಲು ತಾಂಡವ್ ಅರ್ಥಾತ್ ಸುದರ್ಶನ್ ರಂಗಪ್ರಸಾದ್ ಅವರು, ನೇರಪ್ರಸಾರದಲ್ಲಿ ಕಾಣಿಸಿಕೊಂಡಿದ್ದಾರೆ. ಭಾಗ್ಯಲಕ್ಷ್ಮಿ ಸೀರಿಯಲ್ನಲ್ಲಿ ನೆಗೆಟಿವ್ ರೋಲ್ ಮಾಡಿರುವ ತಮ್ಮ ಈ ಪಾತ್ರ ನಿಜ ಜೀವನದಲ್ಲಿಯೂ ಹೇಗೆ ಅನ್ವಯ ಆಗುತ್ತದೆ ಎನ್ನುವುದನ್ನೂ ನಟ ತಿಳಿಸಿದ್ದಾರೆ.
ನಿಜ ಜೀವನದಲ್ಲಿಯೂ ಹೀಗೆಯೇ...
ಈ ಸೀರಿಯಲ್ನಲ್ಲಿ ನಾನು ನೆಗೆಟಿವ್ ರೋಲ್ ಮಾಡ್ತಾ ಇದ್ದೆ. ಇದು ಸೀರಿಯಲ್ ನೆಗೆಟಿವ್ ರೋಲ್ ಮಾತ್ರವಲ್ಲ, ನಿಜ ಜೀವನದಲ್ಲಿಯೂ ತಾಂಡವ್ನಂಥವರು ಇರ್ತಾರೆ. ಆರಂಭದಲ್ಲಿ ಇಂಥವರಿಗೆ ಜಯದ ಮೇಲೆ ಜಯ ಆಗುತ್ತಲೇ ಹೋಗುತ್ತದೆ. ಆಗ ಎಲ್ಲರಿಗೂ ಅಯ್ಯೋ ಕೆಟ್ಟವರಿಗೇ ಕಾಲ ಎಂದುಕೊಳ್ಳುವುದು ಉಂಟು. ಆದರೆ ಬಳಿಕ, ಅದೊಂದು ದಿನ ಈ ಕೆಟ್ಟತನಕ್ಕೆ ಅಂತ್ಯ ಬಂದೇ ಬರುತ್ತದೆ. ಅದನ್ನೇ ತಾಂಡವ್ ಪಾತ್ರ ತೋರಿಸಿದೆ ಎಂದಿದ್ದಾರೆ.
ಭಾಗ್ಯಲಕ್ಷ್ಮಿ ಅನುಭವ
ಇನ್ನು ತಮ್ಮ ಭಾಗ್ಯಲಕ್ಷ್ಮಿ ಅನುಭವ ಹಂಚಿಕೊಂಡ ನಟ, ಭಾಗ್ಯಲಕ್ಷ್ಮಿ ಸೆಟ್ನಲ್ಲಿ ಇದ್ದಾಗ ಲೈಫ್ನಲ್ಲಿ ಇರುವ ಸಮಸ್ಯೆ ಮರೆತು ಹೋಗ್ತಾ ಇತ್ತು. ಸೀರಿಯಲ್ ಸೆಟ್ ಜೊತೆ ಅಷ್ಟೊಂದು ಚೆನ್ನಾಗಿ ಬಾಂಡಿಂಗ್ ಇತ್ತು. ಈಗ ದೈಹಿಕವಾಗಿ ಸೆಟ್ನಲ್ಲಿ ಇರದಿದ್ದರೂ ಮಾನಸಿಕವಾಗಿ ಸದಾ ಇರುತ್ತೇನೆ ಎಂದಿದ್ದಾರೆ.
ವಂಡರ್ಫುಲ್ ಕ್ಯಾರೆಕ್ಟರ್
ತಾಂಡವ್ದ್ದು ವಂಡರ್ಫುಲ್ ಕ್ಯಾರೆಕ್ಟರ್. ಇಮೋಷನಲಿ ನನಗೆ ತುಂಬಾ ಟಚ್ ಆಯ್ತು. ಈ ಸೀರಿಯಲ್ ನನಗೊಂದು ಐಡೆಂಟಿಟಿ ತಂದುಕೊಟ್ಟಿದೆ. ಇಂಥ ರೋಲ್ ಕೊಟ್ಟಿರುವ ಸೀರಿಯಲ್ ತಂಡಕ್ಕೆ ಧನ್ಯವಾದ ಎಂದು ಹೇಳಿರುವ ನಟ, ಸೀರಿಯಲ್ ಮತ್ತು ತಂಡವನ್ನು ತುಂಬಾ ಮಿಸ್ ಮಾಡಿಕೊಳ್ತಿರೋದಾಗಿ ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

