- Home
- Entertainment
- TV Talk
- ಆದಿ ಬ್ರೋ, ವೇಟ್ ವೇಟ್... ಶ್ರೀರಸ್ತು ಶುಭಮಸ್ತುವಿನಲ್ಲೂ ಹೀಗೇ ಹೇಳಿ ಕೊನೆಗೆ ಮಗು ಹುಟ್ಟಿಸಿದ್ರು ಎಂದ ನೆಟ್ಟಿಗರು
ಆದಿ ಬ್ರೋ, ವೇಟ್ ವೇಟ್... ಶ್ರೀರಸ್ತು ಶುಭಮಸ್ತುವಿನಲ್ಲೂ ಹೀಗೇ ಹೇಳಿ ಕೊನೆಗೆ ಮಗು ಹುಟ್ಟಿಸಿದ್ರು ಎಂದ ನೆಟ್ಟಿಗರು
ಕಲರ್ಸ್ ಕನ್ನಡದ ಭಾಗ್ಯಲಕ್ಷ್ಮಿ ಧಾರಾವಾಹಿಯಲ್ಲಿ ಆದಿಯ ಆಗಮನದಿಂದ ಭಾಗ್ಯಳ ಜೀವನದಲ್ಲಿ ಹೊಸ ಅಧ್ಯಾಯ ಆರಂಭವಾಗಿದೆ. ಇವರಿಬ್ಬರ ಮೊದಲ ರಾತ್ರಿಗೆ ಸಿದ್ಧತೆ ನಡೆದಿದ್ದು, ಈ ವೇಳೆ ಆದಿ ತಮಗೆ ಮಕ್ಕಳೇ ಬೇಡ ಎಂಬ ಅಚ್ಚರಿಯ ನಿರ್ಧಾರವನ್ನು ಪ್ರಕಟಿಸಿದ್ದಾನೆ, ಇದು ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ.

ಭಾಗ್ಯಳ ಜೀವನದಲ್ಲಿ ಆದಿ ಎಂಟ್ರಿ
ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗ್ತಿರೋ ಭಾಗ್ಯಲಕ್ಷ್ಮಿ ಸೀರಿಯಲ್ನಲ್ಲಿ ಸದ್ಯ ಭಾಗ್ಯಳ ಜೀವನದಲ್ಲಿ ಆದಿಯ ಎಂಟ್ರಿಯಾಗಿದೆ. ಭಾಗ್ಯಳ ಗೋಳು ಇನ್ನಾದರೂ ಮುಗಿಯಲು ಎನ್ನುವ ಸೀರಿಯಲ್ ಪ್ರಿಯರಿಗೆ, ನಿರಾಸೆ ಆಗೋದಂತೂ ಗ್ಯಾರೆಂಟಿ. ಏಕೆಂದರೆ ಗಂಡ ಒಳ್ಳೆಯವನಾದ್ರೆ ಸಾಕಾಗಲ್ವಾ, ನಾದಿನಿ, ಅತ್ತೆ ಸೇರಿದಂತೆ ಮನೆಯಲ್ಲಿ ಇರುವವರು ಅದರಲ್ಲಿಯೂ ಹೆಚ್ಚಾಗಿ ಹೆಂಗಸರು ಒಳ್ಳೆಯವರು ಇರಲು ಸೀರಿಯಲ್ನವರು ಬಿಡುವುದಿಲ್ಲವಲ್ಲ, ಅದೇ ರೀತಿ ಭಾಗ್ಯಳ ಗೋಳಿನ 2.0 ಈಗ ಆರಂಭವಾಗಿದೆ.
ಆದಿ ಮತ್ತು ಭಾಗ್ಯಳ ಫಸ್ಟ್ನೈಟ್
ಇದರ ನಡುವೆಯೇ, ಇದೀಗ ಆದಿ ಮತ್ತು ಭಾಗ್ಯಳ ಫಸ್ಟ್ನೈಟ್ಗೆ ಅರೇಂಜ್ ಮಾಡಲಾಗಿದೆ. ಪಾಸ್ಟ್ ಎಲ್ಲಾ ಮರೆತು ಆದಿಯ ಜೊತೆ ಬಾಳಬೇಕು ಎಂದು ವಿಲನ್ ಇದಾಗಲೇ ಭಾಗ್ಯಳಿಂದ ಮಾತು ಪಡೆದುಕೊಂಡಿದ್ದಾಳೆ. ಇದರ ಅರ್ಥ, ತಾಂಡವ್ ಮಾತ್ರವಲ್ಲದೇ ಮಕ್ಕಳು, ಅಮ್ಮನಂತೆ ಇರುವ ಕುಸುಮಾ ಎಲ್ಲರನ್ನೂ ಮರೆಯಬೇಕಿದೆ ಭಾಗ್ಯ.
ಭಾಗ್ಯಳ ಗೋಳಿನ 2.0
ಎಲ್ಲಾ ಸೀರಿಯಲ್ಗಳಂತೆ ಇಲ್ಲಿ ಕೂಡ ಇದ್ಯಾವುದೂ ಆದಿಗೆ ಗೊತ್ತಾಗುವುದಿಲ್ಲ. ಅವನಿಗೆ ಎಲ್ಲರೂ ಒಳ್ಳೆಯವರಂತೆಯೇ ಕಾಣಿಸುತ್ತಾರೆ. ಆದರೆ ಭಾಗ್ಯಳ ಮಾತ್ರ ಎಲ್ಲವನ್ನೂ ನುಂಗಿಕೊಂಡು ಬದುಕುವ ಅನಿವಾರ್ಯತೆ ಇದೆ.
ನಮಗೆ ಸ್ವಂತ ಮಕ್ಕಳು ಬೇಡ
ಇದೀಗ ಫಸ್ಟ್ನೈಟ್ ಸಂದರ್ಭದಲ್ಲಿ ಆದಿ, ಭಾಗ್ಯಳ ಬಳಿ ಬಂದು, ಹೀಗೆ ಅರೇಂಜ್ ಮಾಡಿರುತ್ತಾರೆ ಎಂದು ಗೊತ್ತಿರಲಿಲ್ಲ. ಏನಿದ್ದರೂ ತನ್ವಿ ಮತ್ತು ಗುಂಡನೇ ನಮ್ಮ ಮಕ್ಕಳು. ನಮಗೆ ಸ್ವಂತ ಮಕ್ಕಳು ಬೇಕು ಎಂದು ನಾನು ಬಯಸುವವನಲ್ಲ, ಅದಕ್ಕೆ ನೀವು ಬೇಸರ ಪಟ್ಟುಕೊಳ್ಳುವುದು ಬೇಡ ಎಂದಿದ್ದಾನೆ.
ಶ್ರೀಮಸ್ತು- ಶುಭಮಸ್ತು ನೆನಪಿಸಿದ ಸೀರಿಯಲ್ ಪ್ರೇಮಿಗಳು
ಇದರ ಪ್ರೊಮೋ ನೋಡಿದ ಸೀರಿಯಲ್ ಪ್ರೇಮಿಗಳು, ಜೀ ಕನ್ನಡದಲ್ಲಿ ಪ್ರಸಾರ ಆಗ್ತಿದ್ದ ಶ್ರೀಮಸ್ತು- ಶುಭಮಸ್ತು ಸೀರಿಯಲ್ ನೆನಪಿಸಿದ್ದಾರೆ. ಇಲ್ಲಿ ಕೂಡ ಆರಂಭದಲ್ಲಿ ತುಳಸಿ ಮತ್ತು ಮಾಧವ್ ನಾವಿಬ್ಬರೂ ಒಳ್ಳೆಯ ಫ್ರೆಂಡ್ಸ್ ಅಷ್ಟೇ ಎಂದಿದ್ದರು. ಕೊನೆಗೆ ತುಳಸಿ ಮಗುವನ್ನು ಹೆತ್ತಿದ್ದಳು.
ಮುಂದೇನಾಗತ್ತೆ?
ಈ ಸೀರಿಯಲ್ನಲ್ಲಿಯೂ ಹಾಗೆಯೇ ಆಗತ್ತೆ, ಈಗಲೇ ಈ ಎಲ್ಲಾ ಡೈಲಾಗ್ ಬೇಡ ಗುರೂ ಎನ್ನುತ್ತಿದ್ದಾರೆ ನೆಟ್ಟಿಗರು. ಅದೇನೇ ಇರಲಿ, ಭಾಗ್ಯಳಿಗೆ ಮಗು ಹುಟ್ಟಲಿ, ಬಿಡಲಿ ಇವರಿಬ್ಬರ ಪ್ರೀತಿ ಹೀಗೆಯೇ ಸೀರಿಯಲ್ನಲ್ಲಿ ಸದಾಕಾಲ ಇರಲಿ ಎನ್ನುವುದು ಸೀರಿಯಲ್ ಪ್ರೇಮಿಗಳ ಆಸೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

