- Home
- Entertainment
- TV Talk
- Bigg Boss Kannada 12: ಬಿಗ್ ಬಾಸ್ ಮನೆಯಲ್ಲಿ ಯಾರನ್ನು ಮಿಸ್ ಮಾಡ್ಕೊಳ್ತಿದ್ದಾರೆ ಸೂರಜ್?
Bigg Boss Kannada 12: ಬಿಗ್ ಬಾಸ್ ಮನೆಯಲ್ಲಿ ಯಾರನ್ನು ಮಿಸ್ ಮಾಡ್ಕೊಳ್ತಿದ್ದಾರೆ ಸೂರಜ್?
BBK 12 : ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿರುವ ಸೂರಜ್ ಬಿಗ್ ಬಾಸ್ ಮನೆ ಮಾತ್ರ ಅಲ್ಲ ಅಲ್ಲಿರುವ ಕೆಲ ಸ್ಪರ್ಧಿಗಳನ್ನು ಮಿಸ್ ಮಾಡಿಕೊಳ್ತಿದ್ದಾರೆ. ಯಾರನ್ನ ಮಿಸ್ ಮಾಡಿಕೊಳ್ತಿದ್ದಾರೆ, ಮದುವೆ ಯಾವಾಗ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ.

ಫಿನಾಲೆ ತಪ್ಪಿಸಿಕೊಂಡ ಸೂರಜ್
ಬಿಗ್ ಬಾಸ್ ಮನೆಯಿಂದ ಸೂರಜ್ ಹೊರ ಬಂದಾಗಿದೆ. ಸದ್ಯ ಸೂರಜ್, ಸ್ಪರ್ಧಿಗಳ ಬಗ್ಗೆ ತಮ್ಮ ಆಟ ಹಾಗೂ ವೈಫಲ್ಯದ ಬಗ್ಗೆ ಮಾತನಾಡ್ತಿದ್ದಾರೆ. ವೈಲ್ಡ್ ಕಾರ್ಡ್ ಎಂಟ್ರಿಯಾಗಿ ಬಿಗ್ ಬಾಸ್ ಮನೆಗೆ ಹೋಗಿದ್ದ ಸೂರಜ್, ಉತ್ತಮ ಆಟ ಆಡಿದ್ರೂ ಎಲ್ಲೋ ಕಳೆದು ಹೋಗಿದ್ರು ಎನ್ನುವ ಆರೋಪ ಇತ್ತು. ಎಲ್ಲ ಕಡೆ ಸೂರಜ್ ಕಾಣಿಸಿಕೊಂಡಿರಲಿಲ್ಲ. ಸೂರಜ್ ಹಾಗೂ ರಾಶಿಕಾ ಜೋಡಿ ಫ್ಯಾನ್ಸ್ ಗೆ ಇಷ್ಟವಾದಂತೆ ಕಾಣಲಿಲ್ಲ. ಹಾಗಾಗಿ ಫಿನಾಲೆಗೆ ಎರಡು ವಾರ ಇರುವಾಗ ಸೂರಜ್ ಮನೆಯಿಂದ ಹೊರ ಬಂದಾಗಿದೆ
ಬಿಗ್ ಬಾಸ್ ಮನೆಯಲ್ಲಿ ಸೂರಜ್ ಗೆ ಯಾರು ಇಷ್ಟ?
ಹಿಂದಿನ ವಾರ ಎಲಿಮಿನೇಟ್ ಆಗಿರುವ ಸೂರಜ್ ಮಾಧ್ಯಮಗಳ ಜೊತೆ ತಮ್ಮ ಅಭಿಪ್ರಾಯ ಹಂಚಿಕೊಳ್ತಿದ್ದಾರೆ. ಸೂರಜ್ ಗೆ ಯಾರು ಇಷ್ಟ ಅಂತ ಮಾಧ್ಯಮದವರು ಕೇಳಿದ್ದಾರೆ. ಅದಕ್ಕೆ ಆರಂಭದಲ್ಲಿ ಉತ್ತರ ನೀಡಲು ನಾಚಿಕೊಂಡ ಸೂರಜ್ ನಂತ್ರ ಹೆಸರು ಹೇಳಿದ್ದಾರೆ.
ಲೀಸ್ಟ್ ನಲ್ಲಿ ಯಾರ್ಯಾರಿದ್ದಾರೆ?
ಸೂರಜ್ ಗೆ ಇಷ್ಟವಾದವರು ಎಂದಾಗ ನೆನಪಾಗೋದು ರಾಶಿಕಾ. ಬಿಗ್ ಬಾಸ್ ಮನೆಯಲ್ಲಿ ಸದಾ ಒಟ್ಟಿಗೇ ಇದ್ದ ರಾಶಿಕಾ, ಸೂರಜ್ ಲೀಸ್ಟ್ ನಲ್ಲಿ ಸ್ಥಾನ ಪಡೆದಿದ್ದಾರೆ. ರಾಶಿಕಾ ಜೊತೆ ಸೂರಜ್, ರಕ್ಷಿತಾ, ಅಶ್ವಿನಿ ಗೌಡ ಹಾಗೂ ರಘು ಅವರನ್ನು ಮಿಸ್ ಮಾಡಿಕೊಳ್ತಿದ್ದಾರೆ. ರಾಶಿಕಾ ಜೊತೆ ನಾನು ಅಶ್ವಿನಿ ಗೌಡ, ರಕ್ಷಿತಾ ಹಾಗೂ ರಘು ಅವರಿಗೆ ಹೆಚ್ಚು ಆಪ್ತವಾಗಿದ್ದೆ. ಅವರನ್ನು ಮಿಸ್ ಮಾಡಿಕೊಳ್ತಿದ್ದೇನೆ ಎಂದು ಸೂರಜ್ ಹೇಳಿದ್ದಾರೆ.
ಸೂರಜ್ ಮದುವೆ ಯಾವಾಗ?
ಬಿಗ್ ಬಾಸ್ ಮನೆಯಲ್ಲಿ ರಾಶಿಕಾ ಹಾಗೂ ಸೂರಜ್ ಪ್ರೀತಿ ಮಾಡ್ತಿದ್ದಾರೆ ಎನ್ನುವ ಸುದ್ದಿ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಸೂರಜ್ ನೋಡ್ತಿದ್ದಂತೆ ರಾಶಿಕಾ ಬ್ಲಶ್ ಆಗ್ತಿದ್ದಿದ್ದು ಸುಳ್ಳಲ್ಲ. ಒಮ್ಮೆ ರಾಶಿಕಾಗೆ ಸೂರಜ್ ಪ್ರಪೋಸ್ ಕೂಡ ಮಾಡಿದ್ದರು. ಆದ್ರೆ ಅದಕ್ಕೆ ರಾಶಿಕಾ ಯಾವುದೇ ಉತ್ತರ ನೀಡಿರಲಿಲ್ಲ. ಹೊರಗೆ ಹೋದ್ಮೇಲೆ ನೀವೇ ಟ್ರೇನ್ ಮಾಡ್ಬೇಕಲ್ವ ಅಂತ ರಾಶಿಕಾ ಹೇಳಿದ್ದರು. ಅದ್ರ ಬಗ್ಗೆ ಸೂರಜ್ ಗೆ ಪರೋಕ್ಷವಾಗಿ ಮಾಧ್ಯಮಗಳು ಪ್ರಶ್ನೆ ಕೇಳಿವೆ. ಸೂರಜ್ ಮದುವೆ ಯಾವಾಗ ಅಂತ ಕೇಳಿದ್ದಾರೆ. ಅದಕ್ಕೆ ಸೂರಜ್, ಸದ್ಯ ಮದುವೆ ಇಲ್ಲ. ನಾಲ್ಕು ವರ್ಷ ಮದುವೆ ಆಗೋದಿಲ್ಲ, ಅಮ್ಮ ಯಾವುದೇ ಹುಡುಗಿ ಹುಡುಕ್ತಿಲ್ಲ ಎಂದು ಸೂರಜ್ ಹೇಳಿದ್ದಾರೆ.
ಸೂರಜ್ ಮಿಸ್ ಮಾಡಿಕೊಳ್ತಿದ್ದಾರೆ ರಾಶಿಕಾ
ಬಿಗ್ ಬಾಸ್ ಮನೆಯಲ್ಲಿ ಕಳೆದ ವಾರ ರಾಶಿಕಾ ಹಾಗೂ ಸೂರಜ್ ಒಟ್ಟಾಗಿ ಕಾಣಿಸಿಕೊಂಡಿರಲಿಲ್ಲ. ದೂರ ದೂರ ಇದ್ದವರಿಗೆ ಎಲಿಮಿನೇಷನ್ ಶಾಕ್ ನೀಡಿತ್ತು. ಸರಿಯಾಗಿ ಸೂರಜ್ ಜೊತೆ ಮಾತನಾಡ್ಲಿಲ್ಲ ಎನ್ನುವ ನೋವು ರಾಶಿಕಾಗಿದೆ. ರಾಶಿಕಾ ಈ ವಿಷ್ಯವನ್ನು ಎಲ್ಲರ ಮುಂದೆ ಹೇಳಿಕೊಂಡು ಕಣ್ಣೀರಿಟ್ಟಿದ್ದಾರೆ. ನಾನು ಸೂರಜ್ ಅವರನ್ನು ಮಿಸ್ ಮಾಡಿಕೊಳ್ತಿದ್ದೇನೆ. ಅವರನ್ನು ಫಾಲೋ ಮಾಡಲು ನಾನು ಇಷ್ಟಪಡ್ತೇನೆ. ಹೊರಗೆ ಹೋದ್ಮೇಲೂ ಅವರ ಜೊತೆ ಫ್ರೆಂಡ್ಶಿಪ್ ಇಟ್ಕೊಳ್ತೇನೆ ಎಂದು ರಾಶಿಕಾ ಹೇಳಿದ್ದಾರೆ.
ಅಫೇರ್ ಬಗ್ಗೆ ಸೂರಜ್
ಮಾಧ್ಯಮಗಳ ಜೊತೆ ತಮ್ಮ ವೈಯಕ್ತಿಕ ವಿಷ್ಯಗಳನ್ನು ಸೂರಜ್ ಹಂಚಿಕೊಂಡಿದ್ದಾರೆ. ಎಷ್ಟೆಲ್ಲ ಕಷ್ಟಪಟ್ಟು ಈ ಹಂತಕ್ಕೆ ಬಂದಿದ್ದೇನೆ ಎಂಬುದನ್ನು ಸೂರಜ್ ಹೇಳಿದ್ದಾರೆ. ಅಷ್ಟೇ ಅಲ್ಲ, ಈವರೆಗೆ ಮೂರು ಅಫೇರ್ ಇತ್ತು. ಎರಡು ಸೀರಿಯಸ್ ಆಗಿರಲಿಲ್ಲ. ಒಂದು ಸೀರಿಯಸ್ ಆಗಿತ್ತು. ಆದ್ರೆ ಈಗ ನಾನು ಸಿಂಗಲ್ ಎನ್ನುವ ಮೂಲಕ ಸೂರಜ್, ಹುಡುಗಿಯರಿಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

