- Home
- Entertainment
- TV Talk
- ಗಂಡೈಕ್ಳ ಕಣ್ಣಲ್ಲಿ ನೀರು ತರಿಸಿದ ಬಿಗ್‌ಬಾಸ್ ನೀಡಿದ ಟಾಸ್ಕ್; ತಪ್ಪು ಒಪ್ಪಿನ ಲೆಕ್ಕ ಇದಲ್ಲಾ?
ಗಂಡೈಕ್ಳ ಕಣ್ಣಲ್ಲಿ ನೀರು ತರಿಸಿದ ಬಿಗ್‌ಬಾಸ್ ನೀಡಿದ ಟಾಸ್ಕ್; ತಪ್ಪು ಒಪ್ಪಿನ ಲೆಕ್ಕ ಇದಲ್ಲಾ?
Dhanush Abhishek Friendship: ಬಿಗ್‌ಬಾಸ್ ಆರಂಭವಾಗಿ ಒಂದು ತಿಂಗಳು ಕಳೆದಿದ್ದು, ಸ್ಪರ್ಧಿಗಳ ಮಾನಸಿಕ ಸ್ಥೈರ್ಯವನ್ನು ಪರೀಕ್ಷಿಸಲು ಹೊಸ ಟಾಸ್ಕ್ ನೀಡಲಾಗಿದೆ. ಈ ವಾರದ ನಾಮಿನೇಷನ್‌ನಿಂದ ಪಾರಾಗಲು ಕುಟುಂಬದಿಂದ ಬಂದ ಪತ್ರವನ್ನು ಪಡೆಯುವ ಅವಕಾಶವಿದೆ.

ಸ್ಪರ್ಧಿಗಳು ಮಾನಸಿಕವಾಗಿ ಎಷ್ಟು ಸ್ಟ್ರಾಂಗ್?
ಬಿಗ್‌ಬಾಸ್ ಮನೆಯಲ್ಲಿರುವ ಸ್ಪರ್ಧಿಗಳು ಭಾವನಾತ್ಮಕವಾಗಿ ಎಷ್ಟೇ ಸ್ಟ್ರಾಂಗ್ ಆಗಿದ್ರೂ ದಿನಗಳು ಕಳೆದಂತೆ ಕುಟುಂಬದ ನೆನಪಿನಲ್ಲಿ ಕಣ್ಣೀರು ಹಾಕುತ್ತಾರೆ. ಬಿಗ್‌ಬಾಸ್ ಆರಂಭವಾಗಿ ಒಂದು ತಿಂಗಳು ಕಳೆದಿದ್ದು, ಸ್ಪರ್ಧಿಗಳು ಮಾನಸಿಕವಾಗಿ ಎಷ್ಟು ಸ್ಟ್ರಾಂಗ್ ಎಂಬುದನ್ನು ಪರಿಶೀಲಿಸುವ ಟಾಸ್ಕ್ ನೀಡಲಾಗಿದೆ. ಬಿಗ್‌ಬಾಸ್ ನೀಡಿದ ಟಾಸ್ಕ್‌ಗೆ ಧನುಷ್ ಮತ್ತು ಅಭಿಷೇಕ್ ಕಣ್ಣೀರು ಹಾಕುವಂತಾಗಿದೆ.
ಕಿರುತೆರೆಯ ಅತಿದೊಡ್ಡ ರಿಯಾಲಿಟಿ ಶೋ
ಬಿಗ್‌ಬಾಸ್ ಶೋಗೆ ಬರಬೇಕು ಟ್ರೋಫಿ ಗೆಲ್ಲಬೇಕು ಅನ್ನೋದು ಸ್ಪರ್ಧಿಗಳು ಕನಸು ಆಗಿರುತ್ತದೆ. ಈ ಒಂದು ಗೆಲುವು ಹೊರಗೆ ವೃತ್ತಿಜೀವನದಲ್ಲಿ ಹೊಸ ಅವಕಾಶಗಳನ್ನು ನೀಡುತ್ತದೆ. ಹಾಗಾಗಿನ ಬಿಗ್‌ಬಾಸ್ ಅನ್ನೋದು ಕಿರುತೆರೆಯ ಅತಿದೊಡ್ಡ ರಿಯಾಲಿಟಿ ಶೋ ಅಂತ ಕರೆಸಿಕೊಳ್ಳುತ್ತದೆ. ಸ್ಪರ್ಧಿಗಳನ್ನು ತಮ್ಮನ್ನು ಅವಲೋಕನ ಮಾಡಿಕೊಳ್ಳುವ ಅವಕಾಶವನ್ನು ಬಿಗ್‌ಬಾಸ್ ಮನೆ ನೀಡುತ್ತದೆ.
ಕುಟುಂಬದಿಂದ ಬಂದಿದೆ ಪತ್ರ
ಈ ವಾರ ಮನೆಯಲ್ಲಿರೋ ಎಲ್ಲಾ ಸ್ಪರ್ಧಿಗಳು ನಾಮಿನೇಟ್ ಆಗಿದ್ದಾರೆ. ಇದೀಗ ಸ್ಪರ್ಧಿಗಳಿಗೆ ಕುಟುಂಬದ ಸಹಾಯದಿಂದ ನಾಮಿನೇಟ್‌ನಿಂದ ತಪ್ಪಿಸಿಕೊಳ್ಳುವ ದಾರಿಯೊಂದನ್ನು ಬಿಗ್‌ಬಾಸ್ ನೀಡಿದ್ದಾರೆ. ಕುಟುಂಬದಿಂದ ಬಂದಿರುವ ಪತ್ರ ಪಡೆದುಕೊಳ್ಳುವ ಸ್ಪರ್ಧಿ ಈ ವಾರ ಸೇಫ್ ಆಗುತ್ತಾರೆ. ಅಭಿಷೇಕ್ ಮತ್ತು ಧನುಷ್ ನಡುವೆ ಪತ್ರಕ್ಕಾಗಿ ಭಾವನಾತ್ಮಕ ಆಟ ನಡೆದಿದೆ.
ತ್ಯಾಗ ಮಾಡ್ತಾರಾ ಧನುಷ್?
ಟೇಬಲ್ ಮೇಲೆ ಎರಡು ಬಾಟೆಲ್‌ಗಳಲ್ಲಿ ಕುಟುಂಬದಿಂದ ಬಂದಿರುವ ಪತ್ರ ಇರಿಸಲಾಗಿತ್ತು. ಧನುಷ್‌ಗೆ ಒಂದು ಪತ್ರ ಆಯ್ಕೆ ಮಾಡಿಕೊಳ್ಳುವ ಅವಕಾಶ ನೀಡಲಾಗಿತ್ತು. ಪತ್ರವುಳ್ಳ ಮತ್ತೊಂದು ಬಾಟೆಲ್ ಸ್ವಿಮಿಂಗ್ ಪೂಲ್‌ಗೆ ಹಾಕಬೇಕಿತ್ತು. ಧನುಷ್ ತಮ್ಮ ಪತ್ರ ತೆಗೆದುಕೊಂಡು ಸೇಫ್ ಆಗ್ತಾರಾ ಅಥವಾ ಗೆಳೆಯನಿಗಾಗಿ ತ್ಯಾಗ ಮಾಡ್ತಾರಾ ಎಂಬುವುದು ಇಂದಿನ ಸಂಚಿಕೆಯಲ್ಲಿ ತಿಳಿಯಲಿದೆ.
ಇದನ್ನೂ ಓದಿ: Bigg Boss 12: ಸೂಟ್‌ಕೇಸ್ ಹಿಡಿದುಕೊಂಡು ಬಿಗ್‌ಬಾಸ್ ಮನೆಯಿಂದ ಹೊರಬಂದ ಅಶ್ವಿನಿ ಗೌಡ
ಯಾರೆಲ್ಲಾ ಸೇಫ್ ಆಗ್ತಾರೆ?
ಧನುಷ್ ಸಹ ಏನು ಮಾಡಬೇಕು ಅಂತ ತೋಚದೇ ಭಾವುಕರಾಗಿದ್ದು ಕಣ್ಣಾಲಿಗಳು ತುಂಬಿದ್ದವು. ಇತ್ತ ಅಭಿಷೇಕ್ ಸಹ ಕಣ್ಣೀರು ಹಾಕಿರೋದನ್ನು ಇಂದಿನ ಪ್ರೋಮೋದಲ್ಲಿ ತೋರಿಸಲಾಗಿದೆ. ಇನ್ನುಳಿದಂತೆ ಯಾವೆಲ್ಲಾ ಸ್ಪರ್ಧಿಗಳು ಕುಟುಂಬದ ಪತ್ರ ಪಡೆದುಕೊಂಡು ನಾಮಿನೇಷನ್ ತೂಗುಗತ್ತಿ ಪಡೆದು ಸೇವ್ ಆಗ್ತಾರೆ ಎಂಬುದರ ಬಗ್ಗೆ ಕುತೂಹಲ ಮೂಡಿದೆ.
ಇದನ್ನೂ ಓದಿ: ಕ್ಯಾರೆಕ್ಟರ್ ಬಗ್ಗೆ ಗಂಭೀರ ಆರೋಪ ಮಾಡಿದ್ದ ಅಶ್ವಿನಿ ಗೌಡಗೆ ಓಪನ್ ಚಾಲೆಂಜ್ ಹಾಕಿದ ರಕ್ಷಿತಾ ಶೆಟ್ಟಿ