- Home
- Entertainment
- TV Talk
- ಕ್ಯಾರೆಕ್ಟರ್ ಬಗ್ಗೆ ಗಂಭೀರ ಆರೋಪ ಮಾಡಿದ್ದ ಅಶ್ವಿನಿ ಗೌಡಗೆ ಓಪನ್ ಚಾಲೆಂಜ್ ಹಾಕಿದ ರಕ್ಷಿತಾ ಶೆಟ್ಟಿ
ಕ್ಯಾರೆಕ್ಟರ್ ಬಗ್ಗೆ ಗಂಭೀರ ಆರೋಪ ಮಾಡಿದ್ದ ಅಶ್ವಿನಿ ಗೌಡಗೆ ಓಪನ್ ಚಾಲೆಂಜ್ ಹಾಕಿದ ರಕ್ಷಿತಾ ಶೆಟ್ಟಿ
ಬಿಗ್‌ಬಾಸ್ ಮನೆಯಲ್ಲಿ ರಕ್ಷಿತಾ ಶೆಟ್ಟಿ ಮತ್ತು ಅಶ್ವಿನಿ ಗೌಡ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದೆ. ರಕ್ಷಿತಾ ವರ್ತನೆ ಮತ್ತು ವ್ಯಕ್ತಿತ್ವದ ಬಗ್ಗೆ ಅಶ್ವಿನಿ ಗಂಭೀರ ಆರೋಪಗಳನ್ನು ಮಾಡಿದ್ದು, ಇದಕ್ಕೆ ಪ್ರತಿಯಾಗಿ ರಕ್ಷಿತಾ, ಮೊದಲು ನಿಮ್ಮನ್ನು ಮನೆಯಿಂದ ಹೊರಹಾಕುವುದಾಗಿ ಓಪನ್ ಚಾಲೆಂಜ್ ಮಾಡಿದ್ದಾರೆ.

ಗಂಭೀರ ಆರೋಪ
ಕೈ ಹಿಡಿದುಕೊಂಡು ಮಾತನಾಡ್ತಾರೆ. 24-25ನೇ ವಯಸ್ಸಿನಲ್ಲಿ ನಾವೆಲ್ಲಾ ಹೀಗೆ ಮಾಡಿರಲಿಲ್ಲ ನಿಮ್ಮನ್ನು ಜನರು ಹೊರಗಡೆ ನೋಡ್ತಿದ್ದಾರೆ ಅನ್ನೋದು ಗೊತ್ತಿರಲಿ ಎಂದು ಹೇಳುವ ಮೂಲಕ ರಕ್ಷಿತಾ ಶೆಟ್ಟಿ ವಿರುದ್ಧ ಮತ್ತೊಂದು ಗಂಭೀರ ಆರೋಪ ಮಾಡಿದರು. ಈ ಆರೋಪಕ್ಕೆ ಪ್ರತಿಕ್ರಿಯಿಸಿದ ರಕ್ಷಿತಾ ಶೆಟ್ಟಿ ಓಪನ್ ಚಾಲೆಂಜ್ ಹಾಕಿದರು.
ರಕ್ಷಿತಾ ವ್ಯಕ್ತಿತ್ವದ ಬಗ್ಗೆ ಗಂಭೀರ ಆರೋಪ
ರಕ್ಷಿತಾ ಶೆಟ್ಟಿ ನಾನು ಅಂದುಕೊಂಡುವಷ್ಟು ಮುಗ್ಧೆ ಅಲ್ಲ. ಡ್ರಾಮಾ ಅಂತಾ ಎಲ್ಲರಿಗೂ ಹೇಳ್ತಾರೆ. ಇವರು ಡ್ರಾಮಾ ಕಂಪನಿಯ ಅಪ್ಪಾನೂ ಅಲ್ಲ ಮುತ್ತಾತ. ತಮ್ಮ ಕುತಂತ್ರ, ಚೇಷ್ಠೆಗಳು ಇನ್ನೊಬ್ಬರಿಗೆ ಅರ್ಥ ಆಗುತ್ತೆ ಎಂದು ಒಬ್ಬೊಬ್ಬರನ್ನೇ ಟಾರ್ಗೆಟ್ ಮಾಡಿ ಅವರ ಕೈ ಹಿಡಿದುಕೊಳ್ಳೋದು, ಅವರಿಗೆ ಒರಗಿ ಕುಳಿತುಕೊಳ್ಳುತ್ತಾರೆ. ನಾವ್ಯಾರು 24-25ನೇ ವಯಸ್ಸಿಗೆ ಹೀಗೆ ಮಾಡಿಲ್ಲ. ಹಾಗಾಗಿ ಅದನ್ನು ಕಡಿಮೆ ಮಾಡಿಕೊಳ್ಳಿ. ನಿಮ್ಮಷ್ಟು ವಯಸ್ಕರು ಹೊರಗೆ ಶೋ ನೋಡುತ್ತಿರುತ್ತಾರೆ ಎಂದು ರಕ್ಷಿತಾ ವ್ಯಕ್ತಿತ್ವದ ಬಗ್ಗೆ ಗಂಭೀರ ಆರೋಪ ಮಾಡಿದರು.
ನೂರು ಸಿನಿಮಾ ಮಾಡು ತೋರಿಸು
ನಾವೇನು ಹಾಗೆಯೇ ಇಲ್ಲಿಗೆ ಬಂದಿಲ್ಲ. ನೂರು ಸಿನಿಮಾ ಮಾಡಿ ಬಂದಿದ್ದು, ನಿನ್ನ ಹಾಗೆ ಒಂದು ಯುಟ್ಯೂಬ್ ಚಾನೆಲ್ ಮಾಡಿಕೊಂಡು ಇಲ್ಲಿಗೆ ಬಂದಿಲ್ಲ. ಇದು ನಮ್ಮ 15 ವರ್ಷದ ಪ್ರಯಾಣವಾಗಿದ್ದು, ಪ್ರತಿಯೊಂದು ಪಾಠವನ್ನು ಕಲಿತುಕೊಂಡು ಬಿಗ್‌ಬಾಸ್‌ಗೆ ಬಂದಿದ್ದೇವೆ. ಮೂರನೇ ವಾರ ಯಾವುದೋ ಒಂದು ಕಾರ್ಡ್ ವರ್ಕೌಟ್ ಆಗಿದ್ದಕ್ಕೆ ನಮ್ಮ ವ್ಯಕ್ತಿತ್ವವನ್ನು ಡಸ್ಟ್‌ಬಿನ್‌ಗೆ ಹಾಕುವ ಯೋಗ್ಯತೆ ನಿನಗಿಲ್ಲ. ನಿನ್ನಂಥಹ ಚಾನೆಲ್‌ಗಳನ್ನು ನಾನು ನೂರು ಮಾಡಬಹುದು. ನನ್ನ 39-40 ವಯಸ್ಸಿಗೆ ನೂರು ಸಿನಿಮಾ ಮಾಡು ತೋರಿಸು ಎಂದು ರಕ್ಷಿತಾಗೆ ಅಶ್ವಿನಿ ಗೌಡ ಚಾಲೆಂಜ್ ಹಾಕಿದರು,
ಹಳೆ ಆರೋಪ
ಮನೆಯಲ್ಲಿರಲು ಅರ್ಹರಿಲ್ಲದ ಇಬ್ಬರು ಸ್ಪರ್ಧಿಗಳಿಗೆ ಕಪ್ಪು ಮಸಿ ಬಳೆಯುವ ಟಾಸ್ಕ್ ನೀಡಲಾಗಿತ್ತು. ಅಶ್ವಿನಿ ಗೌಡ ಮತ್ತು ಕಾಕ್ರೋಚ್ ಸುಧಿ ಅವರ ಮುಖಕ್ಕೆ ರಕ್ಷಿತಾ ಶೆಟ್ಟಿ ಮಸಿ ಬಳೆದರು. ತಮ್ಮ ಮುಖಕ್ಕೆ ಮಸಿ ಬಳಿದಿದ್ದಕ್ಕೆ ತಮ್ಮ ಹಳೆ ಆರೋಪಗಳ ಜೊತೆ ಮತ್ತೊಂದು ಆರೋಪ ಮಾಡಿದರು. ಅಶ್ವಿನಿ ಗೌಡ ಅವರು ಸಹ ಪ್ರತಿಯಾಗಿ ರಕ್ಷಿತಾ ಮುಖಕ್ಕೆ ಕಪ್ಪು ಬಳೆಯುತ್ತಾರೆ.
ನಿಮ್ಮ ವ್ಯಕ್ತಿತ್ವ ನನಗಿಷ್ಟ ಇಲ್ಲ
ನೀವು ಹೊರಗೆ ತುಂಬಾನೇ ಸಕ್ಸಸ್‌ಫುಲ್ ಆಗಿರಬಹುದು. ಆದರೆ ಇಲ್ಲಿ ನೀವು ಮತ್ತೊಬ್ಬರನ್ನು ಕಾಲಡಿಯಲ್ಲಿ ತುಳಿಯುತ್ತೀರಿ. ಅವರನ್ನು ಲೂಸರ್ ಎಂದು ಕರೆಯುತ್ತೀರಿ. ನಿಮ್ಮ ವ್ಯಕ್ತಿತ್ವ ನನಗಿಷ್ಟವಿಲ್ಲ. ನೀವು ಮ್ಯಾನಿಪ್ಯೂಲೇಟ್ ಮಾಡ್ತೀರಿ. ಹಾಗಾಗಿ ನಿಮ್ಮ ಮುಖಕ್ಕೆ ಮಸಿ ಬಳೆಯುವೆ ಎಂದು ರಕ್ಷಿತಾ ಶೆಟ್ಟಿ ಹೇಳುತ್ತಾರೆ.
ಇದನ್ನೂ ಓದಿ: Bigg Boss 12: ಸೂಟ್‌ಕೇಸ್ ಹಿಡಿದುಕೊಂಡು ಬಿಗ್‌ಬಾಸ್ ಮನೆಯಿಂದ ಹೊರಬಂದ ಅಶ್ವಿನಿ ಗೌಡ
ರಾಕ್ಷಸಿಯರಿಗೆ ನಾನು ಸಹ ರಾಕ್ಷಸಿ
ಅಶ್ವಿನಿ ಗೌಡ ಆರೋಪಗಳಿಗೆ ತಿರುಗೇಟು ನೀಡಿದ ರಕ್ಷಿತಾ ಶೆಟ್ಟಿ, ನಾನು ಇನೋಸೆಂಟ್‌ಗಳಿಗೆ ಇನೋಸೆಂಟ್. ರಾಕ್ಷಸಿಯರಿಗೆ ನಾನು ಸಹ ರಾಕ್ಷಸ. ನಿಮ್ಮನ್ನು ಮೊದಲು ಹೊರಗೆ ಕಳುಹಿಸಿದ ನಂತರವೇ ನಾನು ಬಿಗ್‌ಬಾಸ್‌ನಿಂದ ಹೋಗುತ್ತೇನೆ ಎಂದು ಓಪನ್ ಚಾಲೆಂಜ್ ಮಾಡಿದರು. ಇದಾದ ನಂತರ ಬಂದ ಗಿಲ್ಲಿ ನಟ, ಎಲ್ಲಾ ಕಲಾವಿದರು ಒಂದೇ. ಯುಟ್ಯೂಬ್‌ನಲ್ಲಿ ಸಕ್ಸಸ್ ಆಗೋದು ಅಷ್ಟು ಸುಲಭವಲ್ಲ. ಹೊರಗೆ ಬಂದು ಒಳ್ಳೆಯ ಕಂಟೆಂಟ್ ಇರೋ ಚಾನೆಲ್ ಮಾಡಿ ತೋರಿಸಿ ಎಂದು ಅಶ್ವಿನಿ ಗೌಡ ಅವರಿಗೆ ಚಾಲೆಂಜ್ ಹಾಕಿದರು.
ಇದನ್ನೂ ಓದಿ: BBK 12: ತಂಗಿ ಅಂಥ ಕರೆದು ಕಾವ್ಯ ಶೈವಗೆ ಕಳಂಕ ತರೋ ಮಾತಾಡಿದ ಚಂದ್ರಪ್ರಭ; ಇದೇನಿದು?