- Home
- Entertainment
- TV Talk
- BBK 12: ಸುದೀಪ್ ಮುಂದೆಯೇ ಅಶ್ವಿನಿ ಗೌಡ ಮುಖವಾಡ ಕಳಚಿದ ಕಾವ್ಯಾ; ಪ್ರೇಕ್ಷಕರಿಂದ ಸಿಕ್ತು ಚಪ್ಪಾಳೆ
BBK 12: ಸುದೀಪ್ ಮುಂದೆಯೇ ಅಶ್ವಿನಿ ಗೌಡ ಮುಖವಾಡ ಕಳಚಿದ ಕಾವ್ಯಾ; ಪ್ರೇಕ್ಷಕರಿಂದ ಸಿಕ್ತು ಚಪ್ಪಾಳೆ
BBK 12: ವೀಕೆಂಡ್ ಸಂಚಿಕೆಯಲ್ಲಿ ಅಶ್ವಿನಿ ಗೌಡ, ರಕ್ಷಿತಾ ಶೆಟ್ಟಿ ತನ್ನಗೆ ಚಪ್ಪಲಿ ತೋರಿಸಿ ಸೀರಿಯಲ್ ಕಲಾವಿದರಿಗೆ ಅವಮಾನಿಸಿದ್ದಾರೆ ಎಂದು ಆರೋಪಿಸಿದರು. ಆದರೆ, ಕಾವ್ಯಾ ಶೈವ ಮಧ್ಯ ಪ್ರವೇಶಿಸಿ, ಅಶ್ವಿನಿ ತಮ್ಮ ಅನುಕೂಲಕ್ಕೆ ತಕ್ಕಂತೆ ರಕ್ಷಿತಾ ಹೇಳಿಕೆಯನ್ನು ತಿರುಚಿದ್ದಾರೆ ಎಂದು ಹೇಳಿದರು.

ರಕ್ಷಿತಾ ವಿರುದ್ಧ ಅಶ್ವಿನಿ ಗೌಡ ಗಂಭೀರ ಆರೋಪ
ಈ ವಾರದ ವೀಕೆಂಡ್ ಸಂಚಿಕೆಯಲ್ಲಿ ರಕ್ಷಿತಾ ಶೆಟ್ಟಿ ಅವರ ಕುರಿತು ಅತ್ಯಧಿಕವಾಗಿ ಚರ್ಚೆ ನಡೆಯಿತು. ಐದನೇ ವಾರದ ಸಂಚಿಕೆಗಳಲ್ಲಿ ರಕ್ಷಿತಾ ಶೆಟ್ಟಿಯೇ ಟಾರ್ಗೆಟ್ ಆಗಿರೋದು ಕಾಣಿಸಿತ್ತು. ರಿಷಾ ಗೌಡ, ರಾಶಿಕಾ ಶೆಟ್ಟಿ ಮತ್ತ ಅಶ್ವಿನಿ ಗೌಡ ಮೂವರು ಜೊತೆಯಾಗಿ ರಕ್ಷಿತಾ ವಿರುದ್ದ ತಿರುಗಿ ಬಿದ್ದಂತೆ ಕಾಣಿಸಿತ್ತು. ಮತ್ತೊಂದೆಡೆ ವೀಕೆಂಡ್ ಸಂಚಿಕೆಯಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ಅಶ್ವಿನಿ ಗೌಡ ಸಾಲು ಸಾಲು ಆರೋಪಗಳನ್ನು ಮಾಡಿದ್ದರು.
ಸತ್ಯ ಬಿಚ್ಚಿಟ್ಟ ಕಾವ್ಯಾ
ಸುದೀಪ್ ಮುಂದೆ ರಕ್ಷಿತಾ ಶೆಟ್ಟಿ, ಸೀರಿಯಲ್ ಕಲಾವಿದರಿಗೆ ಅವಮಾನಿಸಿದ್ದಾರೆ ಎಂದು ಆರೋಪಿಸಿದ್ದರು. ಅಶ್ವಿನಿ ಗೌಡ ಅವರ ಈ ಆರೋಪಕ್ಕೆ ಪ್ರತಿಕ್ರಿಯಿಸಿದ ಕಾವ್ಯಾ ಶೈವ ನಡೆದ ಘಟನೆ ಬಗ್ಗೆ ವಿವರಿಸಿದರು. ರಕ್ಷಿತಾ ಶೆಟ್ಟಿ ನೀಡಿದ ಹೇಳಿಕೆಯನ್ನು ಅಶ್ವಿನಿ ಗೌಡ ತಮ್ಮ ಅನುಕೂಲಕ್ಕೆ ಹೇಗೆ ಬಳಸಿದ್ರು ಎಂಬುದನ್ನು ಸುದೀಪ್ ಮುಂದೆ ಕಾವ್ಯಾ ತಿಳಿಸಿದರು.
ಮುಂದೆ ಬಂದು ಸ್ಪಷ್ಟನೆ ನೀಡಿದ ಕಾವ್ಯಾ
ನನಗೂ ಮತ್ತು ಕಾವ್ಯಾಗೂ ವಾಗ್ವಾದ ನಡೆಯುತ್ತಿರುವಾಗ ಮಧ್ಯೆ ಬಂದ ರಕ್ಷಿತಾ ಶೆಟ್ಟಿ, ನೀವು ಕಲಾವಿದರು ಡ್ರಾಮಾ ಮಾಡ್ತೀರಾ ಎಂದು ಹೇಳಿದರು. ನೀವು ಏನು ಮಾಡಿದ್ದೀರಿ ಅಂದಾಗ ರಕ್ಷಿತಾ ಶೆಟ್ಟಿ ನನಗೆ ಚಪ್ಪಲಿ ತೋರಿಸಿದರು ಅಂತ ಸುದೀಪ್ ಮುಂದೆಯೇ ಅಶ್ವಿನಿ ಗೌಡ ಹೇಳುತ್ತಾರೆ. ಅಶ್ವಿನಿ ಗೌಡ ಹೇಳುತ್ತಿರುವ ಘಟನೆಯಲ್ಲಿ ತಾವಿದ್ದರಿಂದ ಕಾವ್ಯಾ ಉತ್ತರ ನೀಡಲು ಮುಂದಾಗುತ್ತಾರೆ.
ಕಾವ್ಯಾ ಸ್ಪಷ್ಟನೆ
ನನ್ನ ಮತ್ತು ಅಶ್ವಿನಿ ಅವರ ಮಧ್ಯೆ ಜಗಳವಾಗುತ್ತಿರುವಾಗ ನಮ್ಮಿಬ್ಬರ ಮಧ್ಯೆ ರಕ್ಷಿತಾ ಬಂದಿರೋದು ನಿಜ. ಇದು ಸೀರಿಯಲ್ ಅಲ್ಲ, ಆಕ್ಟ್ ಮಾಡಬೇಡಿ ಅಂತ ರಕ್ಷಿತಾ ಹೇಳಿದ್ದರು. ಕಲಾವಿದರಿಗೆ ಅವಮಾನಿಸುವ ರೀತಿ ಅವರ ಹೇಳಿರಲಿಲ್ಲ. ಆದ್ರೆ ಈ ಹೇಳಿಕೆಯನ್ನು ಅಶ್ವಿನಿ ಗೌಡ ತಮಗೆ ಬೇಕಾದಂತೆ ತಿರುಚಿದರು. ಕಲಾವಿದರನ್ನು ಕೆಳಗಿಟ್ಟು ಮಾತನಾಡುವ ಉದ್ದೇಶ ರಕ್ಷಿತಾ ಮಾತುಗಳಲ್ಲಿ ಇರಲಿಲ್ಲ ಎಂದು ಕಾವ್ಯಾ ಸ್ಪಷ್ಟಪಡಿಸಿದರು.
ಇದನ್ನೂ ಓದಿ: ಬಿಗ್‌ಬಾಸ್ ಮನೆಯಲ್ಲಿ ಟಾರ್ಗೆಟ್ ಆದ ರಕ್ಷಿತಾ! ಬಡಪಾಯಿ ಹುಡುಗಿ ಮೇಲೆ ದೊಡ್ಮಂದಿಯ ದರ್ಪ!
ರಕ್ಷಿತಾ ಬಗ್ಗೆ ರಘು, ಸೂರಜ್ ಹೇಳಿದ್ದೇನು?
ರಕ್ಷಿತಾ ಶೆಟ್ಟಿ ಅನಾವಶ್ಯಕವಾಗಿ ಮಾತನಾಡಲ್ಲ. ಮನೆಯವರೆಲ್ಲರೂ ರಕ್ಷಿತಾ ಅವರನ್ನು ಟೇಕನ್ ಫಾರ್ ಗ್ಯಾಂಟೆಡ್ ರೀತಿಯಲ್ಲಿ ತೆಗೆದುಕೊಂಡಿದ್ದಾರೆ. ಹಾಗಾಗಿ ರಕ್ಷಿತಾ ಮಾತುಗಳನ್ನು ಒಪ್ಪಿಕೊಳ್ಳಲು ಇವರು ಸಿದ್ಧರಿಲ್ಲ ಎಂದು ರಘು ಹೇಳುತ್ತಾರೆ. ಇನ್ನೂ ಸೂರಜ್ ಸಿಂಗ್ ಮಾತನಾಡಿ, ರಕ್ಷಿತಾ ಮಾತುಗಳಲ್ಲಿ ತೂಕವಿರುತ್ತೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಇದನ್ನೂ ಓದಿ: Jockey 42 Movie Teaser: ಬೆಳ್ಳಂಬೆಳಗ್ಗೆ ಗುಡ್‌ನ್ಯೂಸ್ ಕೊಟ್ಟ Kiran Raj; ಫ್ಯಾನ್ಸ್‌ಗೆ ಹಬ್ಬದ ಸಂಭ್ರಮ