- Home
- Entertainment
- TV Talk
- BBK 12: ಮಾಸ್ಟರ್ ಆನಂದ್ ಒಂದು ಮಾತಿನಿಂದ ಬದಲಾದ್ರು ಗಿಲ್ಲಿ, ಪಂಚ್ ಡೈಲಾಗ್ ಕಿಂಗ್ ಆಗೋಕೆ ಇದೇ ಕಾರಣ
BBK 12: ಮಾಸ್ಟರ್ ಆನಂದ್ ಒಂದು ಮಾತಿನಿಂದ ಬದಲಾದ್ರು ಗಿಲ್ಲಿ, ಪಂಚ್ ಡೈಲಾಗ್ ಕಿಂಗ್ ಆಗೋಕೆ ಇದೇ ಕಾರಣ
ರೀ ಟೇಕ್ ಇಲ್ದೆ ಒಂದು ಸಾರಿ ಮಾತು ಶುರು ಮಾಡಿದ್ರೆ 11 -12 ನಿಮಿಷಗಳ ಕಾಲ ಪಂಚ್ ಮೇಲೆ ಪಂಚ್ ನೀಡ್ತಾ ಮಾತನಾಡುವ ಗಿಲ್ಲಿ ಬಿಗ್ ಬಾಸ್ ಗೆದ್ದು ಬರ್ತಾರಾ? ಸದ್ಯ ಆ ಪ್ರಶ್ನೆಗೆ ಉತ್ತರ ಇಲ್ಲ. ಆದ್ರೆ ಗಿಲ್ಲಿ ಇಷ್ಟೊಂದು ಬೆಳೆಯೋಕೆ ಯಾರು ಸ್ಪೂರ್ತಿ ಗೊತ್ತಾ?

ಗಿಲ್ಲಿ ಪ್ರಚಾರ ಜೋರು
ಬಿಗ್ ಬಾಸ್ ಕನ್ನಡ ಸೀಸನ್ 12ರ ಫಿನಾಲೆಗೆ ಇನ್ನು ಮೂರೇ ದಿನ ಬಾಕಿ ಇದೆ. ಇದೇ ಜನವರಿ 17 – 18 ರಂದು ಫಿನಾಲೆ ನಡೆಯಲಿದೆ. ಫಿನಾಲೆ ವಾರವನ್ನು ತಲುಪಿರುವ ಗಿಲ್ಲಿ ನಟನಿಗೆ ಮತ ಹಾಕುವಂತೆ ಪ್ರಚಾರ ಜೋರಾಗಿದೆ. ಎಲ್ಲ ಕಡೆ ಗಿಲ್ಲಿ, ಗಿಲ್ಲಿ ಎನ್ನುವ ಮಾತು ಕೇಳಿ ಬರ್ತಿದೆ. ಹೋಮವನ್ನು ಫ್ಯಾನ್ಸ್ ಮಾಡಿದ್ದಾರೆ.
ಗಿಲ್ಲಿ ಇಷ್ಟೊಂದು ಬೆಳೆಯಲು ಕಾರಣ ಏನು?
ಗಿಲ್ಲಿ ರಿಯಾಲಿಟಿ ಶೋ ಸ್ಟಾರ್. ಕಲರ್ಸ್ ಕನ್ನಡ ಹಾಗೂ ಜೀ ಕನ್ನಡದ ರಿಯಾಲಿಟಿ ಶೋಗಳಲ್ಲಿ ಗಿಲ್ಲಿ ಮಿಂಚಿದ್ದಾರೆ. ಸೋಶಿಯಲ್ ಮೀಡಿಯಾ, ಗಿಲ್ಲಿಯನ್ನು ಈ ಹಂತಕ್ಕೆ ತಂದು ನಿಲ್ಲಿಸಿದೆ. ಐಐಟಿ ಮುಗಿಸಿ ಸಿನಿಮಾ, ಡೈರೆಕ್ಷನ್ ಅಂತ ಹೊರಟಿದ್ದ ಗಿಲ್ಲಿ, ಕಾಮಿಡಿ ಸ್ಕಿಟ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡ್ತಿದ್ದರು. ಇದು ಕ್ಲಿಕ್ ಆಯ್ತು. ಕಲರ್ಸ್ ಕನ್ನಡದ ಕಾಮಿಡಿ ಕಿಲಾಡಿಗಳು ಸೀಸನ್ 4 ರಲ್ಲಿ ಗಿಲ್ಲಿ ಕಾಣಿಸಿಕೊಂಡಿದ್ದರು. ರನ್ನರ್ ಅಪ್ ಆಗಿದ್ದ ಗಿಲ್ಲಿ, ಝೀ ಕನ್ನಡದ ಡಾನ್ಸ್ ಕರ್ನಾಟಕ ಡಾನ್ಸ್ ನಲ್ಲಿಯೂ ಹಾಸ್ಯದ ಮೂಲಕ ಜನರನ್ನು ಸೆಳೆದಿದ್ದರು. ಇಷ್ಟೆ ಅಲ್ದೆ ಭರ್ಜರಿ ಬ್ಯಾಚ್ಯುಲರ್ಸ್, ಕ್ವಾಟ್ಲೆ ಕಿಚನ್ ನಲ್ಲಿ ಪಾಲ್ಗೊಂಡಿದ್ದ ಗಿಲ್ಲಿಗೆ ಅತೀ ಹೆಸರು ತಂದುಕೊಟ್ಟಿದ್ದು ಬಿಗ್ ಬಾಸ್ ಶೋ.
ಗಿಲ್ಲಿಗೆ ಯಾರು ಪ್ರೇರಣೆ?
ಮಾಸ್ಟರ್ ಆನಂದ್ ಪತ್ನಿ ಹಾಗೂ ನಮ್ಮಮ್ಮ ಸೂಪರ್ ಸ್ಟಾರ್ ಖ್ಯಾತಿಯ ಯಶಸ್ವಿನಿ ಜೊತೆ Konnect Kannada ಶೋನಲ್ಲಿ ಮಾತನಾಡಿದ್ದ ಗಿಲ್ಲಿ, ಸಿಂಗಲ್ ಆಗಿ ಇಷ್ಟೊಂದು ಕಾಮಿಡಿ ಮಾಡಲು ಕಾರಣ ಯಾರು ಎಂಬುದನ್ನು ಹೇಳಿಕೊಂಡಿದ್ದಾರೆ. ಗಿಲ್ಲಿ ಪ್ರಕಾರ ಅವರಿಗೆ ಸ್ಪೂರ್ತಿಯಾಗಿದ್ದು ಮಾಸ್ಟರ್ ಆನಂದ್.
ಮಾಸ್ಟರ್ ಆನಂದ್ ಹೇಳಿದ್ದೇನು?
ಕಾಮಿಡಿ ಕಿಲಾಡಿಗಳು ಶೋ ಆರಂಭದಲ್ಲಿ ಚೆನ್ನಾಗಿದ್ದ ಗಿಲ್ಲಿ, ಹೋಗ್ತಾ ಹೋಗ್ತಾ ಡಲ್ ಆಗಿದ್ರು. ಈ ಸಂದರ್ಭದಲ್ಲಿ ಮಾಸ್ಟರ್ ಆನಂದ್, ಗಿಲ್ಲಿಯವರನ್ನು ಕರೆದು, ಮೊದಲು ನಮ್ಮ ಸ್ಟ್ರೆಂಥ್ ಏನು ಅನ್ನೋದನ್ನು ತಿಳಿದುಕೊಳ್ಬೇಕು ಅಂತ ಕಿವಿ ಮಾತು ಹೇಳಿದ್ದರಂತೆ. ಇಷ್ಟು ದಿನ ಗುಂಪಿನಲ್ಲಿ ಸ್ಕಿಟ್ ಮಾಡ್ತಿದ್ದ ಗಿಲ್ಲಿ ಆ ನಂತ್ರ ಪ್ರಾಪರ್ಟಿ ಕಾಮಿಡಿ, ಪಂಚ್ ಡೈಲಾಗ್ ಹೇಳಲು ಶುರು ಮಾಡಿದ್ರಂತೆ. ಅಲ್ಲಿಂದ ನನ್ನನ್ನು ಜನ ಗುರುತಿಸೋಕೆ ಶುರು ಮಾಡಿದ್ರು ಎಂದು ಗಿಲ್ಲಿ ಹೇಳಿದ್ದಾರೆ.
ಗಿಲ್ಲಿಗೆ ಸದಾ ಕಾಡುವ ಎಮೋಷನಲ್ ಘಟನೆ ಯಾವುದು?
ಇದೇ ಸಂದರ್ಭದಲ್ಲಿ ಗಿಲ್ಲಿ, ಯಶಸ್ವಿನಿ ಅವರ ಜೊತೆ ತಮ್ಮನ್ನು ಹೆಚ್ಚು ಕಾಡಿದ ಘಟನೆ ಬಗ್ಗೆಯೂ ಹೇಳಿಕೊಂಡಿದ್ದಾರೆ. ಭರ್ಜರಿ ಬ್ಯಾಚ್ಯುಲರ್ ರಿಯಾಲಿಟಿ ಶೋ ಸಂದರ್ಭದಲ್ಲಿ ಗಿಲ್ಲಿ ಹಳ್ಳಿಯಲ್ಲಿ ಸಿನಿಮಾ ಶೂಟಿಂಗ್ ಮಾಡ್ತಿದ್ದರು. ಈ ವೇಳೆ ಅಜ್ಜಿಯೊಬ್ಬರು ಅವರನ್ನು ಕರೆದಿದ್ದಾರೆ. ಗಿಲ್ಲಿ ಅವರ ಬಳಿ ಹೋದಾಗ, ಅಜ್ಜಿ ಕಣ್ಣೀರಿಟ್ಟಿದ್ದಾರೆ. ಕಾರಣ ಕೇಳಿದಾಗ, ಅಮ್ಮನಿಗೆ ಕಾಲ್ಚೈನ್, ಅಪ್ಪನಿಗೆ ವಾಚ್ ನೀಡಿದ್ದೀಯಾ, ನಿನ್ನಂಥ ಮಗ ಎಲ್ಲರಿಗೂ ಹುಟ್ಟಬೇಕು ಅಂತ ಅಜ್ಜಿ ಹೇಳಿದ್ದರಂತೆ. ಇದನ್ನು ಕೇಳಿ ಗಿಲ್ಲಿ ಭಾವುಕರಾಗಿದ್ದು, ಅದನ್ನು ಮರೆಯೋಕೆ ಸಾಧ್ಯವಿಲ್ಲ ಎಂದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

