- Home
- Entertainment
- Sandalwood
- Aditi Prabhudeva Birthday: ಅಮ್ಮನಂತೆಯೇ ಪುಟಾಣಿಯ ವರ್ಕ್ಔಟ್- ಕ್ಯೂಟ್ ವಿಡಿಯೋ ವೈರಲ್
Aditi Prabhudeva Birthday: ಅಮ್ಮನಂತೆಯೇ ಪುಟಾಣಿಯ ವರ್ಕ್ಔಟ್- ಕ್ಯೂಟ್ ವಿಡಿಯೋ ವೈರಲ್
ನಟಿ ಅದಿತಿ ಪ್ರಭುದೇವ ತಮ್ಮ 32ನೇ ಹುಟ್ಟುಹಬ್ಬದಂದು, ಮಗಳು ನೇಸರಾ ಜೊತೆ ವರ್ಕೌಟ್ ಮಾಡುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. 'ನೂಲಿನಂತೆ ಸೀರೆ, ಅಮ್ಮನಂತೆ ಮಗಳು' ಎಂಬಂತೆ ನೇಸರಾ ಕೂಡ ಅಮ್ಮನನ್ನೇ ಅನುಕರಿಸುತ್ತಿರುವುದನ್ನು ನೋಡಬಹುದು.

ನೂಲಿನಂತೆ ಸೀರೆ...
ಇಂದು ಅರ್ಥಾತ್ ಜನವರಿ 13 ಸ್ಯಾಂಡಲ್‌ವುಡ್ ಬ್ಯೂಟಿ ನಟಿ ಅದಿತಿ ಪ್ರಭುದೇವ ಅವರ 32ನೇ ವರ್ಷದ ಹುಟ್ಟುಹಬ್ಬ. ಅವರ ಪುಟಾಣಿ ಕಂದಮ್ಮ ನೇಸರಳಿಗೆ ಈಗ ಒಂದೂವರೆ ವರ್ಷ ವಯಸ್ಸು. ನೂಲಿನಂತೆ ಸೀರೆ, ಅಮ್ಮನಂತೆ ಮಗಳು ಎನ್ನುವ ಮಾತಿಗೆ ಈ ಅಮ್ಮ-ಮಗಳು ಉದಾಹರಣೆಯಾಗಿದ್ದಾರೆ.
ಮಗಳ ಜೊತೆಗೆ ವಿಡಿಯೋ
ಮಗಳ ಜೊತೆಗಿನ ವಿಡಿಯೋ ಒಂದನ್ನು ಅದಿತಿ ಪ್ರಭುದೇವ (Aditi Prabhudeva) ಶೇರ್ ಮಾಡಿದ್ದಾರೆ. ಅದರಲ್ಲಿ ಮಗಳು ನೇಸರಾ ಅಮ್ಮನಂತೆಯೇ ವರ್ಕ್ಔಟ್ ಮಾಡುವುದನ್ನು ನೋಡಬಹುದಾಗಿದೆ. ಸೇಮ್ ಟು ಸೇಮ್ ಅಮ್ಮನಂತೆಯೇ ವ್ಯಾಯಾಮ ಮಾಡುತ್ತಿದ್ದಾಳೆ ಈ ಪುಟ್ಟಿ.
ನಟಿ ಹೇಳಿದ್ದೇನು?
ಅದಕ್ಕೆ ಶೀರ್ಷಿಕೆ ಕೊಟ್ಟಿರುವ ನಟಿ, ನಾನು ಮತ್ತೊಂದು ವರ್ಷ ದೊಡ್ಡವಳಾಗಿದ್ದೇನೆ. ಬರಿ ವಯಸ್ಸಲ್ಲಷ್ಟೇ ಅಲ್ಲ ಎಲ್ಲಾ ಒಳ್ಳೆಯ ವಿಷಯಗಳಲ್ಲೂ ದೊಡ್ಡವಳಾಗುವ ಪ್ರಯತ್ನ ನನ್ನದು. ಮಾನಸಿಕ ಆರೋಗ್ಯ ಹಾಗೂ ದೈಹಿಕ ಆರೋಗ್ಯಕ್ಕೆ ಖಂಡಿತ ಸಂಬಂಧವಿದೆ. ಹೆಣ್ಣು ಹುಟ್ಟಿದಾಗಿನಿಂದ ಬರಿ ಕೊಡುವುದನ್ನ ಕಲಿಯುತ್ತಾಳೆ ಆದ್ರೆ ತನಗೆ ತಾನು ಬದುಕಿನ ಸವಿಯನ್ನ ಕೊಡುವುದನ್ನ ಮರೆಯುತ್ತಾಳೆ. ಎಲ್ಲಾ ತಾಯಂದಿರಿಗೆ ನೀವು ನಮಗಾಗಿ ಮಾಡಿದ ನಿಮ್ಮ ಕನಸಿನ ತ್ಯಾಗ, 24/7 ನಮ್ಮ ಚಕಾರಿ ಯನ್ನ innocence ಎಂಬ ಬಣ್ಣ ಹಚ್ಚಿ ಅವರಿಗೆ ಅವರ ಬದುಕಿಗೆ ಮೋಸ ಮಾಡುವ ಬದಲು, ಅವರ ಆರೋಗ್ಯ, ಅವರ ಇಷ್ಟ ಗಳನ್ನ ಕೇಳೋಣ ಎಂದು ಬರೆದುಕೊಂಡಿದ್ದಾರೆ.
ಅಭಿಮಾನಿಗಳಿಗೆ ಧನ್ಯವಾದ
ಇದೇ ವೇಳೆ ತಮಗೆ ಸಪೋರ್ಟ್ ಮಾಡಿದ ಅಭಿಮಾನಿಗಳಿಗೆ ನಟಿ ಧನ್ಯವಾದವನ್ನೂ ಸಲ್ಲಿಸಿದ್ದಾರೆ. ಈ ವಿಡಿಯೋದಲ್ಲಿ ಅಮ್ಮ ವರ್ಕ್ಔಟ್ ಮಾಡುವಾಗ ನೇಸರ ಅಮ್ಮನ ಮೇಲೆ ಕುಳಿತು ಕಿಲಾಡಿ ಮಾಡಿರುವುದನ್ನೂ ಅವರು ಶೇರ್ ಮಾಡಿದ್ದಾರೆ.
ತುಸು ದೂರ
ಇನ್ನು ನಟಿ ಕುರಿತು ಹೇಳುವುದಾದರೆ, ‘ಧೈರ್ಯಂ’, ‘ಬಜಾರ್’, ‘ಸಿಂಗ್’, ‘ಬ್ರಹ್ಮಚಾರಿ’, ‘ಒಂಬತ್ತನೆ ದಿಕ್ಕು’, ‘ತೋತಾಪುರಿ’, ‘ತ್ರಿಬಲ್ ರೈಡಿಂಗ್’, ಅಲೆಕ್ಸಾ ಮುಂತಾದ ಚಿತ್ರಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿರುವ ಸ್ಯಾಂಡಲ್‌ವುಡ್ ಬೆಡಗಿ ಅದಿತಿ ಪ್ರಭುದೇವ ಈಗ ಬಣ್ಣದ ಲೋಕದಿಂದ ತುಸು ದೂರ ಉಳಿದಿದ್ದಾರೆ. ಟಿವಿ ರಿಯಾಲಿಟಿ ಷೋಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಕೂರ್ಗ್ ಉದ್ಯಮಿ ಜೊತೆ ಮದುವೆ
ಅದಿತಿ ಅವರು, ಕೇವಲ ಚಿತ್ರನಟಿ ಮಾತ್ರವಲ್ಲದೇ ಅಪ್ಪಟ ಗೃಹಿಣಿ ಕೂಡ. ಕಿರುತೆರೆ ನಟಿಯಾಗಿ ಬಣ್ಣದ ಬದುಕಿಗೆ ಪದಾರ್ಪಣೆ ಮಾಡಿದ ನಟಿ, ಸ್ಯಾಂಡಲ್ವುಡ್ನಲ್ಲಿ ಬೇಡಿಕೆ ಇರುವಾಗಲೇ ಹಸೆಮಣೆ ಏರಿದರು. ಅದಿತಿ, ಕೂರ್ಗ್ ಮೂಲದ ಉದ್ಯಮಿ ಯಶಸ್ ಜೊತೆ ದಾಂಪತ್ಯ ಬದುಕನ್ನು ಎಂಜಾಯ್ ಮಾಡ್ತಿದ್ದಾರೆ. ಮಗು ಎರಡೂವರೆ ತಿಂಗಳು ಇರುವಾಗಲೇ ಜೀ ಕನ್ನಡದ ರಾಜಾ ರಾಣಿ ಷೋನಲ್ಲಿ ತೀರ್ಪುಗಾರರಾಗಿಯೂ ಬಂದು ಕೆಲಸ ಶುರು ಮಾಡಿಕೊಂಡಿದ್ದರು. ಜೊತೆಗೆ ಸೋಷಿಯಲ್ ಮೀಡಿಯಾದಲ್ಲಿಯೂ ನಟಿ ಆ್ಯಕ್ಟೀವ್ ಆಗಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

