- Home
- Entertainment
- TV Talk
- Annayya Serial: ಮಾರಿಗುಡಿ ಹೆಣ್ಣುಲಿ ಕೈಲಿ ಸಿಕ್ಕಿ ಬಿದ್ದ ಸೀನಾ… ಅನ್ಯಾಯ ಆಗಿರೋದು ರಶ್ಮಿಗೋ? ಸೀನಂಗೋ?
Annayya Serial: ಮಾರಿಗುಡಿ ಹೆಣ್ಣುಲಿ ಕೈಲಿ ಸಿಕ್ಕಿ ಬಿದ್ದ ಸೀನಾ… ಅನ್ಯಾಯ ಆಗಿರೋದು ರಶ್ಮಿಗೋ? ಸೀನಂಗೋ?
Annayya Serial: ಅಣ್ಣಯ್ಯ ಧಾರಾವಾಹಿಯಲ್ಲಿ ಇದೀಗ ಸೀನಾ ಮತ್ತು ಪಿಂಕಿಯ ಕಳ್ಳಾಟ ಎಲ್ಲರ ಮುಂದೆ ಬಯಲಾಗುವ ಸಮಯ ಬಂದಿದೆ. ಸೀನಾ ತನ್ನ ಹೆಂಡತಿ ಗುಂಡಮ್ಮ ರಶ್ಮಿಗೆ ಮಾಡುತ್ತಿರುವುದು ಅನ್ಯಾಯವೇ ಹೌದು. ಆದರೆ ಸೀನಾ ಜೊತೆ ಶಿವು ಮತ್ತು ಮಾದಪ್ಪ ಮಾಡಿದ್ದು ಕೂಡ ಅನ್ಯಾಯ ಅಲ್ವಾ?

ಅಣ್ಣಯ್ಯ ಧಾರಾವಾಹಿ
ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿ ‘ಅಣ್ಣಯ್ಯ’. ಈ ಧಾರಾವಾಹಿಯಲ್ಲಿ ಇದೀಗ ಮಹಾ ತಿರುವು ಎದುರಾಗಿದೆ. ಇಷ್ಟು ದಿನ ರಶ್ಮಿ ಎಲ್ಲರಿಂದಲೂ ಮುಚ್ಚಿಟ್ಟ ಗುಟ್ಟು ಪಾರು ಮುಂದೆ ಬಯಲಾಗಿದೆ. ತನ್ನ ಗಂಡ ಒಳ್ಳೆಯವನೆಂದು, ತನ್ನ ಜೊತೆ ಅನ್ಯೋನ್ಯತೆಯಿಂದ ಇರುವುದಾಗಿ ಎಲ್ಲರನ್ನು ನಂಬಿಸಿದ್ದ ಗುಂಡಮ್ಮ ಪಾರು ಕೈಯಲ್ಲಿ ಸಿಕ್ಕಿ ಬಿದ್ದಿದ್ದಾಳೆ.
ಪಿಂಕಿ ಜೊತೆ ಸೀನನ ಲವ್ವಿ ಡವ್ವಿ
ಧಾರವಾಹಿಯ ಆರಂಭದಿಂದಲೂ ಪಿಂಕಿ ಮತ್ತು ಸೀನನ ಲವ್ ಸ್ಟೋರಿ ನಡೆಯುತ್ತಿತ್ತು. ಆದರೆ ಇದ್ದಕ್ಕಿದ್ದಂತೆ ರಶ್ಮಿ ಜೊತೆ ಮದುವೆಯಾದ ಕಾರಣ ಸೀನನ ಪ್ರೀತಿಗೆ ಕೊಂಚ ಬ್ರೇಕ್ ಬಿದ್ದಿತ್ತು. ನಂತರ ಮತ್ತೆ ಪಿಂಕಿ ಜೊತೆ ಪ್ರೀತಿ, ಪ್ರೇಮ ಎಂದು ಸೀನಾ ಹೊರಟರೆ ಆತನಿಗೆ ಅಮ್ಮನ ಸಾತ್ ಕೂಡ ಸಿಕ್ಕಿತ್ತು. ಇದರಿಂದ ರಶ್ಮಿಗೆ ಅನ್ಯಾಯ ಆಗಿದ್ದು ನಿಜ.
ರಶ್ಮಿಗೆ ಅನ್ಯಾಯ
ಸದ್ಯ ಧಾರಾವಾಹಿಯ ಕಥೆ ಪ್ರಕಾರ ಸೀನ ಜೊತೆ ಮದುವೆಯಾಗಿರುವ ರಶ್ಮಿಗೆ ಅನ್ಯಾಯ ಆಗಿದೆ. ಮದುವೆಯಾದ ಬಳಿಕವೂ ಇನ್ನೊಬ್ಬ ಹುಡುಗಿಯ ಹಿಂದೆ ಸೀನಾ ಅಲೆಯುತ್ತಿರುವುದು ತಪ್ಪು. ಇದು ಹೆಂಡತಿಗೆ ಮಾಡುವ ಮೋಸವು ಹೌದು. ಶಿವೂಗೆ ಈ ವಿಚಾರ ಗೊತ್ತಾದರೆ ಸುಮ್ಮನೆ ಬಿಡುವ ಮಾತೇ ಇಲ್ಲ. ಸದ್ಯ ಪಾರುಗೆವಿಷಯ ಗೊತ್ತಾಗಿ ಸೀನಾ ಕಳ್ಳಾಟವನ್ನು ಬಯಲು ಮಾಡುವ ಸಾಧ್ಯತೆ ಇದೆ. ಆದರೆ ನಿಜಕ್ಕೂ ಅನ್ಯಾಯ ಆಗಿರೋದು ರಶ್ಮಿಗೆ ಒಬ್ಬಳಿಗೆ ಮಾತ್ರಾನ?
ಸೀನಾ ಪ್ರೀತಿಗೂ ಅನ್ಯಾಯ ಆಗಿದೆ ಅಲ್ವಾ
ಹಾಗೆ ನೋಡಿದರೆ ಸೀನ ಆರಂಭದಿಂದಲೂ ಪಿಂಕಿಯನ್ನು ಪ್ರೀತಿಸುತ್ತಿದ್ದನು. ಪಿಂಕಿ ಜೊತೆ ಮದುವೆಯಾಗುವ ಕನಸನ್ನು ಕೂಡ ಕಂಡಿದ್ದನು. ಆದರೆ, ಇನ್ನೊಬ್ಬರ ಜೊತೆ ಆಗಬೇಕಾಗಿದ್ದ ರಶ್ಮಿಯ ಮದುವೆ ಯಾವುದೋ ಕಾರಣಕ್ಕೆ ನಿಂತಾಗ, ಮಾದಪ್ಪ ಸೀನನ ಬಳಿ ಒಂದು ಮಾತು ಕೇಳದೆ ಆತನಿಗೆ ಒಪ್ಪಿಗೆ ಇದೆಯೇ ಎನ್ನುವುದನ್ನು ಕೇಳದೆ ರಶ್ಮಿಯನ್ನು ಮದುವೆಯಾಗುವಂತೆ ಹೇಳಿದ್ದನು.
ಶಿವು ಮಾಡಿದ್ದು ಕೂಡ ತಪ್ಪು
ಇನ್ನು ಶಿವು ಯಾವಾಗಲೂ ತನ್ನ ತಂಗಿಯರ ಮದುವೆಯಾಗಬೇಕು ಎನ್ನುವ ಯೋಚನೆಯನ್ನು ಮಾತ್ರ ಮಾಡುತ್ತಿದ್ದ, ಆದರೆ ತಂಗಿಯರ ಜೀವನ ಹೇಗಿರಬಹುದು ಎನ್ನುವ ಯೋಚನೆ ಕೂಡ ಮಾಡಿರಲಿಲ್ಲ. ಅದೇ ರೀತಿ ರಶ್ಮಿಯ ಮದುವೆ ನಿಂತಾಗ ಮಾದಪ್ಪ ಸೀನನ ಹೆಸರು ಹೇಳಿದಾಗ, ಸೀನನ ಬಳಿ ಒಂದು ಮಾತು ಕೇಳದೆ ರಶ್ಮಿ ಒಪ್ಪಿಗೆಯನ್ನು ಕೇಳಿ ಮದುವೆ ಮಾಡಿಸಿಬಿಟ್ಟಿದ್ದ. ಈಗ ಅನ್ಯಾಯ ಆಗಿದ್ದು ಯಾರಿಗೆ?
ಮುಂದೇನಿದೆ ಟ್ವಿಸ್ಟ್?
ಇದೀಗ ರಶ್ಮಿ ಜೀವನದಲ್ಲಿ ಅನ್ಯಾಯ ಆಗಿದೆ ಅನ್ನೋದಾದ್ರೆ ಸೀನಾ ಜೀವನದಲ್ಲೂ ಖಂಡಿತವಾಗಿಯೂ ಅನ್ಯಾಯ ಆಗಿದೆ ಅಲ್ವಾ? ಆದರೆ ಕಥೆಯ ದೃಷ್ಟಿಯಲ್ಲಿ ಸೀನನನ್ನು ವಿಲನ್ ಮಾಡಿ, ಕೊನೆಗೆ ಸೀನ ತನ್ನ ಪ್ರೀತಿಯನ್ನು ತೊರೆದು ರಶ್ಮಿಯನ್ನು ಹೆಂಡ್ತಿ ಎಂದು ಒಪ್ಪುವುದು ಖಚಿತ ಎಂದು ವೀಕ್ಷಕರು ಹೇಳುತ್ತಿದ್ದಾರೆ. ಅದಕ್ಕೂ ಮುನ್ನ ಧಾರಾವಾಹಿಯಲ್ಲಿ ಏನೆಲ್ಲಾ ಆಗಲಿದೆ ಎನ್ನುವುದನ್ನು ಕಾದು ನೋಡಬೇಕು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

