- Home
- Entertainment
- TV Talk
- Annayya Serial ಜಿಮ್ ಸೀನನಿಂದ ಹಲ್ಲೆ: ಮಗನ ವಿರುದ್ಧ ಅಪ್ಪನ ದೂರು- ಪೊಲೀಸರಿಂದ ಅರೆಸ್ಟ್
Annayya Serial ಜಿಮ್ ಸೀನನಿಂದ ಹಲ್ಲೆ: ಮಗನ ವಿರುದ್ಧ ಅಪ್ಪನ ದೂರು- ಪೊಲೀಸರಿಂದ ಅರೆಸ್ಟ್
'ಅಣ್ಣಯ್ಯ' ಧಾರಾವಾಹಿ ಜಿಮ್ ಸೀನ ತನ್ನ ಪತ್ನಿ ಮೇಲೆ ಹಲ್ಲೆ ಮಾಡಿದ್ದಾನೆ. ಈ ಅನ್ಯಾಯವನ್ನು ಸಹಿಸದ ಸೀನನ ತಂದೆ ಸ್ವಂತ ಮಗನ ವಿರುದ್ಧವೇ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ಆತನನ್ನು ಬಂಧಿಸಿದ್ದಾರೆ. ಸೊಸೆಯನ್ನು ಮಗಳಂತೆ ಕಾಣಬೇಕು ಎಂದಿದ್ದಾನೆ ಅಪ್ಪ. ಆಗಿದ್ದೇನು ನೋಡಿ.

ಜಿಮ್ ಸೀನನಿಂದ ಹಲ್ಲೆ
ಅಣ್ಣಯ್ಯ ಸೀರಿಯಲ್ನಲ್ಲಿ ಗುಂಡಮ್ಮನ ಮೇಲೆ ಜಿಮ್ ಸೀನ ಹಲ್ಲೆ ಮಾಡಿದ್ದಾನೆ. ಇಷ್ಟವಿಲ್ಲದ ಮದುವೆ ಜೊತೆಗೆ ಪ್ರೇಮಿಯೊಬ್ಬಳ ಪ್ರೇಮಪಾಶದಲ್ಲಿ ಸಿಲುಕಿರೋ ಸೀನಾ ಇದೀಗ ಪತ್ನಿ ಮೇಲೆ ಹಲ್ಲೆ ಮಾಡಿದ್ದಾನೆ.
ಅಪ್ಪನಿಂದ ದೂರು
ತನ್ನ ಸೊಸೆಗೆ ಆಗಿರುವ ಅನ್ಯಾಯವನ್ನು ನೋಡಲಾಗದೇ ಖುದ್ದು ಅಪ್ಪ ಮಾದಪ್ಪನೇ ಈಗ ಮಗನನ್ನು ಅರೆಸ್ಟ್ ಮಾಡಿಸಿದ್ದಾನೆ. ಮಗನ ವಿರುದ್ಧ ಪೊಲೀಸರಿಗೆ ದೂರು ಕೊಟ್ಟಿದ್ದಾನೆ.
ಸೀನ ಅರೆಸ್ಟ್
ಪೊಲೀಸರು ಬಂದು ಜಿಮ್ ಸೀನನನ್ನು ಅರೆಸ್ಟ್ ಮಾಡಿಕೊಂಡು ಹೋಗಿದ್ದಾರೆ. ಸ್ವಂತ ಮಗ ಆದರೆ ಏನಾಯ್ತು? ಹೆಣ್ಣನ್ನು ಗೌರವಿಸಬೇಕು. ಹೆಣ್ಣು ಹೆತ್ತು ಗಂಡನ ಮನೆಗೆ ಕಳುಹಿಸಿರುವ ಪೋಷಕರಿಗೆ ನಾವು ಕಾವಲಾಗಿರಬೇಕು ಎಂದಿದ್ದಾನೆ ಮಾದಪ್ಪ.
ಮಗಳಾಗಿರೋ ಸೊಸೆ
ಅತ್ತೆ- ಮಾವನಾದವರು ಸೊಸೆಗೆ ಅಪ್ಪ-ಅಮ್ಮ ಆಗಿರಬೇಕು. ಆಕೆ ನಮಗೆ ಮಗಳಾಗಬೇಕು ಎಂದಿರುವ ಮಾದಪ್ಪನ ಮಾತಿಗೆ ವೀಕ್ಷಕರು ಭಾರಿ ಮೆಚ್ಚುಗೆ ಸೂಸಿದ್ದಾರೆ.
ಮಾದರಿ ಮಾದಪ್ಪ
ಈ ಘಟನೆಯ ಬಗ್ಗೆ ಸೀರಿಯಲ್ನ ಮಾರಿಗುಡಿ ವಾಣಿಯಲ್ಲಿ ಪ್ರಕಟ ಆಗಿರೋ ಈ ಸುದ್ದಿಯನ್ನು ಜೀ ಕನ್ನಡ ವಾಹಿನಿ ಶೇರ್ ಮಾಡಿಕೊಂಡಿದೆ.
ಪತ್ರಿಕೆಯಲ್ಲಿ ಪ್ರಕಟ
ಸೊಸೆ ಮೇಲೆ ಹಲ್ಲೆ, ಸ್ವಂತ ಮಗನ ಮೇಲೆ ದೂರು ನೀಡಿದ ತಂದೆ. ಮಾರಿಗುಡಿ ಮಾದಪ್ಪನ ಮಾದರಿ ನಿರ್ಧಾರ, ಜಿಮ್ ಸೀನನ ಬಂಧನ ಎಂದು ಹೆಡ್ಡಿಂಗ್ ಕೊಡಲಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

