- Home
- Entertainment
- TV Talk
- ವರ್ಷಗಳ ಬಳಿಕ ಕಿರುತೆರೆಗೆ ಎಂಟ್ರಿ ಕೊಡುತ್ತಿದ್ದಾರೆ ‘ನಮ್ಮನೆ ಯುವರಾಣಿ’ ನಟಿ ಅಂಕಿತಾ ಅಮರ್
ವರ್ಷಗಳ ಬಳಿಕ ಕಿರುತೆರೆಗೆ ಎಂಟ್ರಿ ಕೊಡುತ್ತಿದ್ದಾರೆ ‘ನಮ್ಮನೆ ಯುವರಾಣಿ’ ನಟಿ ಅಂಕಿತಾ ಅಮರ್
Ankita Amar: ‘ನಮ್ಮನೆ ಯುವರಾಣಿ’ ಖ್ಯಾತಿಯ ಕನ್ನಡ ಕಿರುತೆರೆ ನಟಿ ಅಂಕಿತಾ ಅಮರ್ ಇದೀಗ ವರ್ಷಗಳ ಬಳಿಕ ಮತ್ತೆ ಕನ್ನಡ ಕಿರುತೆರೆಗೆ ಎಂಟ್ರಿ ಕೊಡಲಿದ್ದಾರೆ. ಈ ಬಾರಿ ಹೊಸ ಸೀರಿಯಲ್ ಮೂಲಕ ಅಥವಾ ಕಾರ್ಯಕ್ರಮದ ಮೂಲಕ ಯಾವುದರ ಮೂಲಕ ಕಿರುತೆರೆ ಪ್ರೇಕ್ಷಕರ ಮುಂದೆ ಕಾಣಿಸಿಕೊಳ್ಳಲಿದ್ದಾರೆ ನೀವೆ ನೋಡಿ.

ಅಂಕಿತಾ ಅಮರ್
ನಟಿ ಅಂಕಿತಾ ಅಮರ್ ಕನ್ನಡ ಕಿರುತೆರೆಯ ಜನಪ್ರಿಯ ನಟಿಯರಲ್ಲಿ ಒಬ್ಬರು. ‘ನಮ್ಮನೆ ಯುವರಾಣಿ’ ಧಾರಾವಾಹಿಯಲ್ಲಿ ಮೀರಾ ಪಾತ್ರದ ಮೂಲಕ ಜನಪ್ರಿಯತೆ ಪಡೆದ ನಟಿ ಇವರು. ಇವತ್ತಿನ ಇವರನ್ನ ಜನ ಕೋಳಿಮರಿ ಎಂದು ಕರೆಯೋರೆ ಹೆಚ್ಚು. ಆದರೆ ಸದ್ಯ ಕಿರುತೆರೆಯಿಂದ ದೂರ ಉಳಿದು ಹಿರಿತೆರೆಯಲ್ಲಿ ನಟಿ ಬ್ಯುಸಿಯಾಗಿದ್ದಾರೆ.
ಸಿನಿಮಾಗಳಲ್ಲಿ ನಟಿ ಬ್ಯುಸಿ
‘ನಮ್ಮನೆ ಯುವರಾಣಿ’ ಧಾರಾವಾಹಿಯಿಂದ ಅರ್ಧಕ್ಕೆ ಹೊರ ಬಂದಿದ್ದ ನಟಿ ಅಂಕಿತಾ ತೆಲುಗು ಧಾರಾವಾಹಿಯಲ್ಲೂ ನಟಿಸಿದ್ದರು. ಬಳಿಕ ಕನ್ನಡ ಸಿನಿಮಾಗಳನ್ನು ಭರ್ಜರಿ ಅವಕಾಶವನ್ನು ಪಡೆದುಕೊಂಡಿದ್ದರು. ಹಾಗಾಗಿ ಕಿರುತೆರೆಯಿಂದ ನಟಿ ದೂರವೇ ಉಳಿದಿದ್ದರು. ಈಗಾಗಲೇ ಅಂಕಿತಾ ಎರಡು ಸಿನಿಮಾಗಳಲ್ಲಿ ನಟಿಸಿದ್ದಾರೆ.
ಮೊದಲ ಚಿತ್ರಕ್ಕೆ ಪ್ರಶಸ್ತಿಗಳ ಸುರಿಮಳೆ
ಅಂಕಿತಾ, ಹೀರೋ, ಇಬ್ಬನಿ ತಬ್ಬಿದ ಇಳಿಯಲಿ ಹಾಗೂ ಜಸ್ಟ್ ಮ್ಯಾರೀಡ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಷ್ಟೇ ಅಲ್ಲದೇ ‘ಇಬ್ಬನಿ ತಬ್ಬಿದ ಇಳಿಯಲಿ’ ಸಿನಿಮಾದಲ್ಲಿನ ಅದ್ಭುತ ಅಭಿನಯಕ್ಕಾಗಿ ಅತ್ಯುತ್ತಮ ನಟಿ ವಿಭಾಗದಲ್ಲಿ ಸೈಮಾ ಅವಾರ್ಡ್ ಹಾಗೂ ಫಿಲಂ ಫೇರ್ ಅವಾರ್ಡ್ ಸಹ ಗಳಿಸಿದ್ದಾರೆ.
ಮತ್ತೆ ಕಿರುತೆರೆಗೆ ಬರಲಿದ್ದಾರೆ ಅಂಕಿತಾ
ಇದೀಗ ಅಂಕಿತ ಅಮರ್ ಅಭಿಮಾನಿಗಳು ಖುಷಿ ಪಡುವಂತಹ ಸುದ್ದಿ ಒಂದು ತಿಳಿದು ಬಂದಿದೆ. ಹಲವು ವರ್ಷಗಳ ಬಳಿಕ ಮತ್ತೆ ಕಿರುತೆರೆಗೆ ಬರೋದಕ್ಕೆ ಸಜ್ಜಾಗಿದ್ದಾರೆ ಎನ್ನುವ ಮಾಹಿತಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಹಾಗಿದ್ರೆ ಮತ್ತೊಂದು ಸೀರಿಯಲ್ ಮೂಲಕ ಅಂಕಿತಾ ಕಿರುತೆರೆಗೆ ಬರುತ್ತಿದ್ದಾರೆಯೇ? ಖಂಡಿತಾ ಇಲ್ಲ, ಈ ಬಾರಿ ಕಾರ್ಯಕ್ರಮದ ನಿರೂಪಕಿಯಾಗಿ ಬರುತ್ತಿದ್ದಾರೆ.
ಉದಯ ಕನ್ನಡಿಗೆ ನಿರೂಪಕಿ
ಉದಯ ಕನ್ನಡಿಗೆ ಅವಾರ್ಡ್ಸ್ 2026 ನಿರೂಪಣೆ ಮಾಡುವ ಅವಕಾಶವನ್ನು ನಮ್ಮ ಹೆಮ್ಮೆಯ ಕನ್ನಡತಿ ಅಂಕಿತಾ ಅಮರ್ ಪಡೆದುಕೊಂಡಿದ್ದಾರೆ. ಕಳೆದ ಬಾರಿ ಶ್ವೇತಾ ಚೆಂಗಪ್ಪಾ ನಿರೂಪಣೆ ಮಾಡಿದ್ದರು, ಆದರೆ ಈ ಬಾರಿ ಅಂಕಿತಾ ಅಮರ್ ಮಾಡುತ್ತಿದ್ದಾರೆ. ಅಭಿಮಾನಿಗಳು ಈ ವಿಷಯ ತಿಳಿದು ತುಂಬಾನೆ ಖುಷಿಯಾಗಿದ್ದಾರೆ.
ಹೊಸ ಮ್ಯೂಸಿಕಲ್ ಆಲ್ಬಂನಲ್ಲಿ ಅಂಕಿತಾ
ಅಂದಹಾಗೇ ಅಂಕಿತಾ ಅಮರ್ ಇತ್ತೀಚೆಗೆ ರಿಲೀಸ್ ಆಗಿರುವ ಡಿವೈನ್ ಮ್ಯೂಸಿಕಲ್ ಆಲ್ಬಂ ‘ಗೆಜ್ಜೆ’ಯಲ್ಲಿ ಮೂಕಾಂಬಿಕೆಯಾಗಿ ಕಾಣಿಸಿಕೊಂಡಿದ್ದರು. ಇದು ಶಂಕರಾಚಾರ್ಯರು ತಾಯಿ ಮೂಕಾಂಬಿಕೆಯನ್ನು ಕೇರಳಕ್ಕೆ ಕರೆದುಕೊಂಡು ಹೋಗುವಾಗ, ಕೊಲ್ಲೂರಿನ ನೆಲೆಯಾದ ಸಂದರ್ಭದ ಕಥೆಯನ್ನು ಮ್ಯೂಸಿಕ್ ಮೂಲಕ ತೋರಿಸಿದ್ದಾರೆ. ಈ ಮ್ಯೂಸಿಕಲ್ ಆಲ್ಬಂ ಜನಮನ ಗೆದ್ದಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

