- Home
- Entertainment
- TV Talk
- ಹೊಟ್ಟೆ ದಪ್ಪ ಆದ್ರು, ಹಂಚಿಕಡ್ಡಿ ಅಂತಿರೋದ್ಯಾಕೆ? ನಾಟಿ ಟೀಚರ್ ಬಗ್ಗೆ ಗೌತಮ್‌ಗೆ ಕನ್ಫ್ಯೂಸ್
ಹೊಟ್ಟೆ ದಪ್ಪ ಆದ್ರು, ಹಂಚಿಕಡ್ಡಿ ಅಂತಿರೋದ್ಯಾಕೆ? ನಾಟಿ ಟೀಚರ್ ಬಗ್ಗೆ ಗೌತಮ್‌ಗೆ ಕನ್ಫ್ಯೂಸ್
ಅಮೃತಧಾರೆ ಧಾರಾವಾಹಿಯಲ್ಲಿ ಗರ್ಭಿಣಿ ಭೂಮಿಕಾ ಮತ್ತು ಗೌತಮ್ ನಡುವಿನ ತಮಾಷೆಯ ಸಂಭಾಷಣೆಯನ್ನು ಇಂದಿನ ಪ್ರೋಮೋದಲ್ಲಿ ತೋರಿಸಲಾಗಿದೆ. ಗೌತಮ್ ಭೂಮಿಕಾಳ ದಪ್ಪ ಆಗದ ಹೊಟ್ಟೆಯ ಬಗ್ಗೆ ತಮಾಷೆ ಮಾಡುತ್ತಾರೆ, ಭೂಮಿಕಾ ಸಹ ತಮಾಷೆಯಾಗಿ ಪ್ರತಿಕ್ರಿಯಿಸುತ್ತಾರೆ.

ಅಮೃತಧಾರೆ ಸೀರಿಯಲ್ ನಲ್ಲಿ ಭಾಗಶಃ ಎಲ್ಲವೂ ಚೆನ್ನಾಗಿದೆ. ಗರ್ಭಿಣಿ ಭೂಮಿಕಾ ಆರೈಕೆಯಲ್ಲಿ ಗೌತಮ್ ಬ್ಯುಸಿಯಾಗಿದ್ದಾರೆ. ಪತ್ನಿಯನ್ನು ಆರೈಕೆ ಮಾಡುವ ಸುಂದರವಾದ ಪ್ರೋಮೋ ಸಹ ಬಿಡುಗಡೆಯಾಗಿತ್ತು. ಇಂದು ಬಿಡುಗಡೆಯಾಗಿರುವ ಪ್ರೋಮೋದಲ್ಲಿ ಗೌತಮ್-ಭೂಮಿಕಾ ನಡುವಿನ ತಮಾಷೆಯ ಸಂಭಾಷಣೆಯನ್ನು ತೋರಿಸಲಾಗಿದೆ.
ಇಂದಿನ ಪ್ರೋಮೋದಲ್ಲಿ ಗೌತಮ್-ಭೂಮಿಕಾ ನಡುವಿನ ಸಂಭಾಷಣೆಯನ್ನು ನೋಡಿ ವೀಕ್ಷಕರು ಸಹ ತಮಾಷೆಯಾಗಿ ಕಮೆಂಟ್ ಮಾಡಿದ್ದಾರೆ. ಹಾಗಾದ್ರೆ ಇಬ್ಬರ ನಡುವಿನ ಸಂಭಾಷಣೆ ಏನಾಗಿತ್ತು ಎಂದು ನೋಡೋಣ ಬನ್ನಿ.
ಗೌತಮ್: ನಿಮ್ಮ ಹೊಟ್ಟೆ ಮಾತ್ರ ದಪ್ಪ ಆಗ್ತಿದೆ. ನೀವು ಮಾತ್ರ ದಪ್ಪ ಆಗ್ತಾನೇ ಇಲ್ಲ. ಹಾಗೆ ಹಂಚಿಕಡ್ಡಿ ತರಾನೇ ಇದ್ದೀರಾ? ಈ ಮಗ ಆನಂದ್‌ಗೆ ಫೋನ್ ಮಾಡಿ ಕೋಚಿಂಗ್ ತೊಗೊತ್ತೀನಿ. ಈ ವಿಷಯದಲ್ಲಿ ಅವನು ಎಕ್ಸ್‌ಪೀರಿಯನ್ಸ್ ಅಂತೆ.
ಭೂಮಿಕಾ: ನೀವು ಎಕ್ಸ್‌ಪಿರೀಯನ್ಸ್ ಹ್ಯಾಂಡ್ ಬಿಡಿ ಎಂದು ಹೇಳಿ ಭೂಮಿಕಾ ನಗುತ್ತಾರೆ.
ಗೌತಮ್: ಏನ್ ರೀ, ಡಬಲ್ ಮೀನಿಂಗಾ? ನಾಟಿ ಟೀಚರ್ ಎಂದು ಗೌತಮ್ ಪತ್ನಿಯ ಕೆನ್ನೆಯನ್ನ ಹಿಂಡುತ್ತಾನೆ. ಕೆನ್ನೆ ಹಿಂಡುತ್ತಿದ್ದಂತೆ ಭೂಮಿಕಾ ನೋವು ಆಯ್ತೆಂದು ಹೇಳ್ತಾರೆ. ಇದಕ್ಕೆ ಗೌತಮ್ Sorry ಕೇಳ್ತಾರೆ.
ಭೂಮಿಕಾ: ಇದಕ್ಕೆ ಪರವಾಗಿಲ್ಲ. ನಾನು ಸಹ ಡ್ರಾಮಾ ಮಾಡ್ತೀನಿ.
ನೆಟ್ಟಿಗರ ಕಮೆಂಟ್ ಏನು?
ಇಷ್ಟು ದೊಡ್ಡದಾಗಿ ಹೊಟ್ಟೆ ಬಂದಿದೆ ಅಂದ್ರೆ ಭೂಮಿಕಾಗೆ ಇವತ್ತೂ ನಾಳೆನೋ ಮಗು ಆಗುತ್ತೆ ಅನ್ನಿಸುತ್ತೆ. WELCOME ಮಾಡೋಕ್ಕೆ ವೀಕ್ಷಕರೆಲ್ಲ ಕಾಯುತ್ತಿದ್ದಾರೆ. ಇದು ಧಾರಾವಾಹಿ ರಿಯಲ್ ಅಲ್ಲ. ಭೂಮಿಕಾ ಹೊಟ್ಟೆ ಒಳಗಡೆ ಪಿಲ್ಲೋ ಇಟ್ಕೊಂಡಿದ್ದಾಳೆ ಎಂದು ತಮಾಷೆಯಾಗು ಕಮೆಂಟ್ ಮಾಡಿದ್ದಾರೆ.