- Home
- Entertainment
- TV Talk
- Amruthadhaare Serial ಅಂತ್ಯ? ಗೌತಮ್ ಎಂಟ್ರಿ ಕೊಟ್ಟಾಯ್ತು, ರಹಸ್ಯ ಬಯಲಾಯ್ತು, ಮುಗಿಯತ್ತಾ ಧಾರಾವಾಹಿ?
Amruthadhaare Serial ಅಂತ್ಯ? ಗೌತಮ್ ಎಂಟ್ರಿ ಕೊಟ್ಟಾಯ್ತು, ರಹಸ್ಯ ಬಯಲಾಯ್ತು, ಮುಗಿಯತ್ತಾ ಧಾರಾವಾಹಿ?
ಅಮೃತಧಾರೆ ಧಾರಾವಾಹಿಯು ಕುತೂಹಲಕಾರಿ ತಿರುವುಗಳೊಂದಿಗೆ ಅಂತಿಮ ಘಟ್ಟ ತಲುಪಿದೆ. ಆಸ್ತಿ ಲಪಟಾಯಿಸುವ ಶಕುಂತಲಾ ಮತ್ತು ಜೈದೇವ್ ಪ್ಲ್ಯಾನ್ ನಡುವೆ ಗೌತಮ್ ವಾಪಸ್ಸಾಗಿದ್ದಾನೆ. ಭೂಮಿಕಾಳನ್ನು ಸಾಯಿಸಲು ಯತ್ನಿಸಿದ ಸತ್ಯ ಗೌತಮ್‌ಗೆ ತಿಳಿದರೆ ಏನಾಗಲಿದೆ ಎಂಬ ರೋಚಕತೆಯೊಂದಿಗೆ ಕಥೆ ಅಂತ್ಯದತ್ತ ಸಾಗುತ್ತಿದೆ.

ಅಮೃತಧಾರೆ ಅಂತಿಮ ಘಟ್ಟದಲ್ಲಿ?
ಅಮೃತಧಾರೆ ಸೀರಿಯಲ್ (Amruthadhaare Serial) ಇನ್ನೇನು ಅಂತ್ಯ ಕಾಣುತ್ತದೆ ಎನ್ನುವಾಗಲೇ ಒಂದೊಂದು ಟ್ವಿಸ್ಟ್ ತಂದು ಸೀರಿಯಲ್ ಎಳೆಯುತ್ತಾ ಸಾಗಲಾಗಿದೆ. ಹೀಗೆ ಟ್ವಿಸ್ಟ್ ಮೇಲೆ ಟ್ವಿಸ್ಟ್ ತಂದರೂ ಸೀರಿಯಲ್ ಬೋರ್ ಆಗದಂತೆ, ಕುತೂಹಲ ಹೆಚ್ಚಿಸುತ್ತಾ ಸ್ಟೋರಿ ಎಳೆಯುತ್ತಿರುವುದರಿಂದ ಸೀರಿಯಲ್ ಇಂದಿಗೂ ವೀಕ್ಷಕರಿಗೆ ಫೆವರೆಟ್ ಎನ್ನಿಸಿದೆ.
ಮುಗಿಯತ್ತಾ ಸೀರಿಯಲ್?
ಇದೀಗ ಸೀರಿಯಲ್ ಮುಗಿಯುವ ಹಂತಕ್ಕೆ ಬಂದು ನಿಂತಂತೆ ಕಾಣಿಸುತ್ತಿದೆ. ಭೂಮಿಕಾ ಜಾಗದಲ್ಲಿ ಬಂದಿರೋ ದೀಪಿಕಾಗೆ ಅಸಲಿಯತ್ತು ಗೊತ್ತಾಗಿದೆ. ದೀಪಿಕಾ ಮತ್ತು ಭೂಮಿಕಾ ಅವಳಿ ಮಕ್ಕಳು ಎನ್ನೋದಷ್ಟೇ ಈಗ ತಿಳಿಯಬೇಕಿದೆ. ಅಷ್ಟಕ್ಕೂ ಎಲ್ಲಾ ಆಸ್ತಿಗೆ ದೀಪಿಕಾಳಿಂದ ಸಹಿ ಹಾಕಿಸಿಕೊಳ್ಳಲು ಶಕುಂತಲಾ ಮತ್ತು ಜೈದೇವ್ ಕಾತರದಿಂದ ಕಾಯುತ್ತಿದ್ದಾರೆ.
ಆಸ್ತಿ ಲಪಟಾಯಿಸುವ ಪ್ಲ್ಯಾನ್
ಆಸ್ತಿಗೆ ಸಹಿ ಬಿದ್ದರೆ ಅಲ್ಲಿಗೆ ಎಲ್ಲರನ್ನೂ ಬೀದಿಗೆ ತಳ್ಳಿ ಸುಖವಾಗಿ ಇರಬಹುದು ಎನ್ನೋದು ತಾಯಿ-ಮಗನ ಉದ್ದೇಶ. ಆದರೆ ಈಗ ದೀಪಿಕಾಗೆ ಎಲ್ಲಾ ಸತ್ಯಾಂಶ ತಿಳಿದಿರುವ ಹಿನ್ನೆಲೆಯಲ್ಲಿ ಸಹಿ ಹಾಕದೇ ಇರಲು ನೆಪವೊಡ್ಡಿ ದಿನ ಮುಂದೂಡುತ್ತಿದ್ದರೆ, ಅತ್ತ ಗೌತಮ್ ಬರುವುದರೊಳಗೆ ಎಲ್ಲಾ ಮುಗಿಸಿ, ಓಡಿಹೋಗುವ ಪ್ಲ್ಯಾನ್ ಮಾಡುತ್ತಿದ್ದಾರೆ ತಾಯಿ-ಮಗ.
ಫಾರಿನ್ನಿಂದ ಬಂದ ಗೌತಮ್
ಆದರೆ ಅಷ್ಟರಲ್ಲಿಯೇ ಗೌತಮ್ ಎಂಟ್ರಿಯಾಗಿದೆ. ದೀಪಿಕಾ ಅಂತೂ ಆಸ್ತಿಗೆ ಸಹಿ ಮಾಡಲ್ಲ. ಭೂಮಿಕಾ ಎಂಟ್ರಿ ಕೊಟ್ಟು ಎಲ್ಲಾ ವಿಷಯ ಹೇಳಿದರೆ ಅಲ್ಲಿಗೆ ಸ್ಟೋರಿ ದಿ ಎಂಡ್ ಆಗುತ್ತದೆ.
ತಾಯಿಯ ಮೇಲೆ ಪ್ರೀತಿ
ಮೊದಲಿನಿಂದಲೂ ತಾಯಿಯ ಮೇಲಿನ ಗೌರವದಿಂದ ಆಕೆ ಎಷ್ಟೇ ಕೆಟ್ಟದ್ದು ಮಾಡಿದ್ದರೂ, ಅದನ್ನು ನುಂಗಿಕೊಂಡು ಅಮ್ಮನ ಮೇಲೆ ಪ್ರೀತಿಯ ಧಾರೆಯನ್ನೇ ಹರಿಸುತ್ತಾ ಬಂದವನು ಗೌತಮ್. ಆದರೆ ಈಗ ಆಸ್ತಿಗಾಗಿ ತನ್ನ ಪ್ರೀತಿಯ ಪತ್ನಿ ಭೂಮಿಕಾಳನ್ನು ಇಬ್ಬರೂ ಸೇರಿ ಸಾಯಿಸಲು ಹೊರಟಿರುವ ಸತ್ಯ ಗೊತ್ತಾದರೆ ಗೌತಮ್ ಏನು ಮಾಡುತ್ತಾನೆ ಎನ್ನೋದು ಬೇರೆ ಹೇಳಬೇಕಿಲ್ಲ.
ತಾರ್ಕಿಕ ಅಂತ್ಯ
ಸದ್ಯದ ಸ್ಟೋರಿ ನೋಡುತ್ತಿದ್ದರೆ, ಸೀರಿಯಲ್ ಮತ್ತೆ ಎಳೆಯುವಂತೆ ಕಾಣಿಸುತ್ತಿಲ್ಲ. ಎಲ್ಲವೂ ಒಂದು ತಾರ್ಕಿತ ಅಂತ್ಯಕ್ಕೆ ಬಂದಿರುವ ಹಿನ್ನೆಲೆಯಲ್ಲಿ, ಅಮೃತಧಾರೆ ಮುಗಿಯುತ್ತದೆ ಎಂದೇ ಹೇಳಲಾಗುತ್ತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

