ಅಗ್ನಿಸಾಕ್ಷಿ ಮತ್ತು ಸತ್ಯ ಸೀರಿಯಲ್ ಖ್ಯಾತಿಯ ನಟಿ ಪ್ರಿಯಾಂಕಾ ಶಿವಣ್ಣ ತಮ್ಮ ಹೊಸ ಮನೆ ಕಟ್ಟುವ ಕನಸನ್ನು ನನಸು ಮಾಡಿಕೊಂಡಿದ್ದಾರೆ. ಇತ್ತೀಚೆಗೆ ಮದುಮಗಳ ಲುಕ್‌ನಲ್ಲಿ ಕಾಣಿಸಿಕೊಂಡಿದ್ದ ಅವರು, ಇದೀಗ ಮನೆ ಪತ್ರಗಳಿಗೆ ಸಹಿ ಹಾಕಿರುವ ಫೋಟೋ ಹಂಚಿಕೊಂಡಿದ್ದಾರೆ.

ಸತ್ಯ ಸೀರಿಯಲ್​ ಮುಗಿದು ವರ್ಷವೇ ಕಳೆದಿದ್ದರೂ ಸೀರಿಯಲ್​ ಪ್ರೇಮಿಗಳಿಗೆ ಈ ಸೀರಿಯಲ್​ ಮನಸ್ಸಿನಲ್ಲಿ ಸದಾ ನೆಲೆಸಿರುತ್ತದೆ. ಅದಕ್ಕೆ ಸತ್ಯಳ ಅಕ್ಕನಾಗಿ, ನೆಗೆಟಿವ್​ ರೋಲ್​ ದಿವ್ಯಾಳ ಪಾತ್ರವನ್ನು ವಿಭಿನ್ನ ಶೇಡ್​ಗಳಲ್ಲಿ ತೋರಿಸುತ್ತಲೇ ಎಲ್ಲರ ಮನಸ್ಸನ್ನು ಗೆದ್ದವರು ಪ್ರಿಯಾಂಕಾ ಶಿವಣ್ಣ. ಇವರು ತೆಲುಗು ಸೀರಿಯಲ್​ಗಳಲ್ಲಿ ಸಕ್ರಿಯರಾಗಿದ್ದಾರೆ. ಕನ್ನಡಿಗರಿಗೆ ಪರಿಚಯವಾದದ್ದು ಅಗ್ನಿಸಾಕ್ಷಿಯ ವಿಲನ್​ ಪ್ರಿಯಾಂಕಾ ಮೂಲಕ. ಮೊದಲು ಈ ಪಾತ್ರದಲ್ಲಿ ನಟಿಸುತ್ತಿದ್ದಾಕೆ ಅರ್ಧಕ್ಕೆ ಬಿಟ್ಟಾಗ ಆ ಅವಕಾಶ ಪ್ರಿಯಾಂಕಾ ಅವರಿಗೆ ಒದಗಿ ಬಂತು. ಈ ಸೀರಿಯಲ್​ನಲ್ಲಿ ನೆಗೆಟಿವ್​ ರೋಲ್​ ಮೂಲಕ ಎಲ್ಲರ ಮನೆ ಮಾತಾದರು ಪ್ರಿಯಾಂಕಾ. ಕೊನೆಗೆ ಸತ್ಯ ಸೀರಿಯಲ್​ನಲ್ಲಿಯೂ ನೆಗೆಟಿವ್​ ರೋಲ್​ನಲ್ಲಿ ಕಾಣಿಸಿಕೊಂಡಿದ್ದಾರೆ.

ಇಂತಿಪ್ಪ ನಟಿ ಪ್ರಿಯಾಂಕಾ ಅವರು ಗುಡ್​ನ್ಯೂಸ್​ ಕೊಟ್ಟಿದ್ದಾರೆ. ತಮ್ಮ ಬಹಳ ವರ್ಷಗಳ ಕನಸನ್ನು ನನಸು ಮಾಡಿಕೊಂಡಿದ್ದಾರೆ. ಅದು ಅವರ ಮನೆ ಕಟ್ಟುವ ಕನಸು. ಮನೆಯ ಕಾಗದ ಪತ್ರಗಳ ಮೇಲೆ ಸಹಿ ಮಾಡುವ ಫೋಟೋಗಳನ್ನು ಅವರು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ಮನೆ ಕಟ್ಟಿದರೆ ಬದುಕು ಕಟ್ಟಿದಂತೆ, ಸಾಧನೆಗೆ ಒಳ್ಳೆ ಮನಸು ಹಠಮಾರಿ ಕನಸು ಇದ್ದರೆ ಸಾಕು ಎಂದು ನಟಿ ಬರೆದುಕೊಂಡಿದ್ದಾರೆ. ಈ ಮೂಲಕ ತಾವು ಮನೆ ಕಟ್ಟುತ್ತಿರುವುದಾಗಿ ತಿಳಿಸಿದ್ದಾರೆ.

ನಟಿಯ ಕುರಿತು

ಇನ್ನು ನಟಿ ಪ್ರಿಯಾಂಕಾ ಕುರಿತು ಹೇಳುವುದಾದರೆ, ಅಗ್ನಿಸಾಕ್ಷಿ, ತೆಲುಗಿನ ಕೃಷ್ಣ ತುಳಸಿ, ತಮಿಳಿನ ಪಿರಿಯಾದ್ ವರಂ ವೆಂಡಂ ಮುಂತಾದ ಸೀರಿಯಲ್‌ಗಳಲ್ಲಿ ನಟಿಸಿದ್ದು, ಜೂಮ್ ಹಾಗೂ ಫ್ಯಾಂಟಸಿ ಎಂಬ ಸಿನಿಮಾದಲ್ಲೂ ನಟಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ 500ಕ್ಕೂ ಹೆಚ್ಚು ಫಾಲೋವರ್‌ಗಳನ್ನು ಹೊಂದಿರುವ ಇವರು ಮಾಡೆಲ್ ಕೂಡ. ಹಲವು ಪ್ರಸಿದ್ಧ ಬ್ರಾಂಡ್‌ಗಳಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ಇನ್ನು ಇವರ ಶಿಕ್ಷಣದ ಕುರಿತು ಹೇಳುವುದಾದರೆ, ಬೆಂಗಳೂರಿನ ಕೇಂಬ್ರಿಡ್ಜ್ ಗಲ್ಸ್‌ ಸ್ಕೂಲ್‌ನಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ ಬಳಿ ಅಳ್ವಾಸ್‌ ಕಾಲೇನಲ್ಲಿ ಓದಿರುವ ಪ್ರಿಯಾಂಕಾ, ಎಸ್‌ಡಿಎಂ ಕಾಲೇಜಿನಿಂದ ಬ್ಯುಸಿನೆಸ್ ಮ್ಯಾನೇಜ್ಮೆಂಟ್ ವಿಷಯದಲ್ಲಿ ಪದವಿ ಪಡೆದಿದ್ದಾರೆ. ಇದರ ಜೊತೆಗೆ ಬಿಗ್‌ಬಾಸ್ ಕನ್ನಡ ಸೀಸನ್ 7ರಲ್ಲಿ ಸ್ಪರ್ಧಿಯಾಗಿಯೂ ಅವರು ಭಾಗವಹಿಸಿದ್ದರು. 2013ರಲ್ಲಿ ಅಗ್ನಿಸಾಕ್ಷಿ ಸೀರಿಯಲ್‌ ಮೂಲಕ ಕಿರುತೆರೆ ಲೋಕಕ್ಕೆ ಕಾಲಿರಿಸಿದ ಇವರು ಇದೀಗ ಸೀರಿಯಲ್​ಗಳಲ್ಲಿ ಸಕತ್​ ಡಿಮಾಂಡ್​ ಇರುವ ನಟಿ. 19 ವರ್ಷಕ್ಕೆ ಮಾಡೆಲಿಂಗ್ ಆರಂಭಿಸಿದ ಪ್ರಿಯಾಂಕಾಗೆ ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಅಗ್ನಿಸಾಕ್ಷಿ ಸೀರಿಯಲ್ ಒಳ್ಳೆ ಬ್ರೇಕ್ ನೀಡಿದೆ.

ಮದುಮಗಳ ಲುಕ್​ನಲ್ಲಿ ಮಿಂಚಿಂಗ್​

ಕೆಲ ದಿನಗಳ ಹಿಂದಷ್ಟೇ ನಟಿ, ಈಗ ಮದುಮಗಳ ಲುಕ್​ನಲ್ಲಿ ಮಿಂಚಿದ್ದರು. . ವಿಡಿಯೋ ಒಂದನ್ನು ಅವರು ಶೇರ್​ ಮಾಡಿಕೊಂಡಿದ್ದ ಅವರು, ಅದರಲ್ಲಿ ಏನೂ ಬರೆದಿರಲಿಲ್ಲ. ಆದರೆ ಈ ವಿಡಿಯೋ ನೋಡಿದವರು, ಪ್ರಿಯಾಂಕಾ ಮದುವೆಯಾಗುತ್ತಿದೆ, ಎಂಗೇಜ್​ಮೆಂಟ್​ ಆಗುತ್ತಿದೆ ಎಂದೆಲ್ಲಾ ತಿಳಿದು ಕಮೆಂಟ್ಸ್​ ಹಾಕಿದ್ದರು. ಅಸಲಿಗೆ ಇದು ಪ್ರಿಯಾಂಕಾ ಅವರ ಮದುವೆ ಅಥವಾ ಎಂಗೇಜ್​ಮೆಂಟ್​ ವಿಡಿಯೋ ಇದ್ದಂತೆ ತೋರುತ್ತಿಲ್ಲ. ಅವರು ಇದಾಗಲೇ ಸಾಕಷ್ಟು ಪ್ರಮೋಷನ್​ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದು ಕೂಡ ಜ್ಯುವೆಲ್ಲರಿ ಒಂದು ಪ್ರಮೋಷನ್​ ಜಾಹೀರಾತು ಅಷ್ಟೇ. ಮದುವೆಗೆ ಆಭರಣ ಖರೀದಿ ಮಾಡಬೇಕು ಎಂದರೆ ಈ ಅಂಗಡಿಯಲ್ಲಿ ಖರೀದಿಸಿ, ಇಂತಿಷ್ಟು ಆಫರ್​ ಇದೆ ಎಂದು ಇನ್ನೊಂದು ವಿಡಿಯೋ ಮಾಡಿದ್ದರು ನಟಿ.