Amruthadhaare: ಭೂಮಿಕಾ ಪತ್ತೇದಾರಿಕೆ ಶುರು! ಕೊನೆಗೂ ಮಲ್ಲಿಗೆ ಕೂಡಿಬಂತು ಕಂಕಣ ಭಾಗ್ಯ?
ಅಮೃತಧಾರೆ ಧಾರಾವಾಹಿಯಲ್ಲಿ, ಜೈದೇವನಿಂದ ಕಳುಹಿಸಲ್ಪಟ್ಟ ಸುನಿಲ್‌ನ ಪ್ರೀತಿಯಲ್ಲಿ ಮಲ್ಲಿ ಸಿಲುಕಿದ್ದಾಳೆ. ಮಲ್ಲಿಯ ಬದಲಾದ ನಡವಳಿಕೆಯನ್ನು ಗಮನಿಸಿದ ಭೂಮಿಕಾ, ಸತ್ಯವನ್ನು ಪತ್ತೆಹಚ್ಚಲು ಮುಂದಾಗಿದ್ದಾಳೆ. ಈ ಹೊಸ ಪ್ರೇಮಕಥೆ ಮಲ್ಲಿಯ ಮರುಮದುವೆಗೆ ದಾರಿ ಮಾಡಿಕೊಡಬಹುದೇ ಎಂಬ ಕುತೂಹಲ ಮೂಡಿದೆ.

ಮಲ್ಲಿ ಇನ್ ಲವ್
ಅಮೃತಧಾರೆ ಸೀರಿಯಲ್ನಲ್ಲಿ (Amruthadhaare Serial) ಮಲ್ಲಿ ಕೊನೆಗೂ ಮಿನಿ ರೌಡಿ ಸುನಿಲ್ ಮೋಹದ ಪಾಶದಲ್ಲಿ ಸಿಲುಕಿದ್ದಾಳೆ. ಜೈದೇವ ಅವನನ್ನು ಮೋಸ ಮಾಡಲು ಕಳಿಸಿದ್ದರೂ, ಸುನಿಲ್ ರಿಯಲ್ಲಾಗಿಯೂ ಮಲ್ಲಿಯನ್ನು ಲವ್ ಮಾಡ್ತಿದ್ದಾನೆ.
ನಿಜ ಏನು?
ಮಲ್ಲಿಗೆ ಇದಾಗಲೇ ಮದುವೆಯಾಗಿರುವುದು ಸುನಿಲ್ಗೆ ಗೊತ್ತಿದೆ. ಆಕೆ ತನಗಿಂತ ದೊಡ್ಡವಳು ಎನ್ನುವುದೂ ಗೊತ್ತು. ಹಾಗಿದ್ದರೂ ಅವನು ರಿಯಲ್ ಆಗಿ ಲವ್ ಮಾಡ್ತಿದ್ದಾನೋ ಅಥ್ವಾ ಜೈದೇವ ಹೇಳಿದಂತೆ ಕೇಳ್ತಿದ್ದಾನೋ ಎನ್ನುವ ಅನುಮಾನವೂ ಇದೆ.
ಮಲ್ಲಿಯ ಬದಲಾವಣೆ
ಅದೇ ಇನ್ನೊಂದೆಡೆ, ಮಲ್ಲಿಯಲ್ಲಿ ಆಗ್ತಿರೋ ಬದಲಾವಣೆಗಳನ್ನು ಇದಾಗಲೇ ಭೂಮಿಕಾ ಸೂಕ್ಷ್ಮವಾಗಿ ನೋಡುತ್ತಿದ್ದಾಳೆ. ಫೋನ್ ಬಂದಾಗ ಮಲ್ಲಿ ಕೊಡುವ ರಿಯಾಕ್ಷನ್ ನೋಡಿ ಅವಳಿಗೆ ಡೌಟ್ ಬಂದಿತ್ತು.
ಕಾಲೇಜಲ್ಲಿ ಬಂಡವಾಳ ಬಯಲು
ಇದೀಗ ಮಲ್ಲಿ ಊಟದ ಬ್ಯಾಗ್ ಬಿಟ್ಟು ಹೋದಳು ಎನ್ನುವ ಕಾರಣಕ್ಕೆ ಕಾಲೇಜ್ಗೆ ಕೊಡಲು ಬಂದಾಗ, ಆಕೆ ತುಂಬಾ ಕ್ಲಾಸ್ ಬಂಕ್ ಮಾಡ್ತಿರೋದು ತಿಳಿದಿದೆ. ಸುನಿಲ್ ಎನ್ನುವ ಹುಡುಗನ ಜೊತೆ ಆಕೆ ಕಾಣಿಸಿಕೊಳ್ತಿರೋ ಬಗ್ಗೆ ಎಲ್ಲರೂ ಮಾತನಾಡಿಕೊಳ್ತಿದ್ದಾರೆ ಎನ್ನುವುದು ತಿಳಿದಿದೆ.
ಭೂಮಿಕಾ ಪತ್ತೆದಾರಿಕೆ
ಇದೀಗ ಮಲ್ಲಿ ಆ ಹುಡುಗನನ್ನು ಮೀಟ್ ಆಗಲು ಬಸ್ ಸ್ಟಾಪ್ ಬಳಿ ಹೋಗಿರುವ ವಿಷ್ಯ ತಿಳಿಯುತ್ತಲೇ ಭೂಮಿಕಾ ಪತ್ತೆದಾರಿಕೆ ಶುರು ಮಾಡಿದ್ದಾಳೆ.
ಕೂಡಿ ಬಂತು ಕಂಕಣ ಭಾಗ್ಯ?
ಅಲ್ಲಿ ಮಲ್ಲಿ ಮತ್ತು ಸುನಿಲ್ ಮಾತನಾಡುತ್ತಿದ್ದಾರೆ. ಭೂಮಿಕಾಗೂ ಮಲ್ಲಿಗೆ ಇನ್ನೊಂದು ಲೈಫ್ ಕೊಡಬೇಕು ಎನ್ನುವ ಆಸೆ ಇದೆ. ಗೌತಮ್ ಕೂಡ ಮರು ಮದುವೆಯ ಬಗ್ಗೆ ಮಾತನಾಡಿದವನೇ. ಆದರೆ ಮಲ್ಲಿಯೇ ಇದಕ್ಕೆ ಒಪ್ಪುತ್ತಿರಲಿಲ್ಲ. ಇದೀಗ ಮಲ್ಲಿ ಲವ್ನಲ್ಲಿ ಬಿದ್ದಿರೋ ವಿಷಯ ಕೇಳಿದ್ರೆ ಖಂಡಿತವಾಗಿಯೂ ಇಬ್ಬರ ಮದುವೆ ಮಾಡಿಸುತ್ತಾರೆ.ಅಲ್ಲಿಗೆ ಮಲ್ಲಿಗೆ ಕಂಕಣ ಭಾಗ್ಯ ಕೂಡಿ ಬಂದಂತೇ ಸರಿ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

