- Home
- Entertainment
- TV Talk
- Amruthadhaare Serial: ಕಂಡೋರ ಗಂಡನ ಬುಟ್ಟಿಗೆ ಹಾಕುವ ಬುದ್ದಿ.... ಮಲ್ಲಿ ಕೊಟ್ಟ ತಿರುಗೇಟಿಗೆ ತತ್ತರಿಸಿದ ಶಾಕುಂತಲಾ
Amruthadhaare Serial: ಕಂಡೋರ ಗಂಡನ ಬುಟ್ಟಿಗೆ ಹಾಕುವ ಬುದ್ದಿ.... ಮಲ್ಲಿ ಕೊಟ್ಟ ತಿರುಗೇಟಿಗೆ ತತ್ತರಿಸಿದ ಶಾಕುಂತಲಾ
ಅಮೃತಧಾರೆ ಧಾರಾವಾಹಿಯಲ್ಲಿ ಜಬರ್ ದಸ್ತ್ ಎಪಿಸೋಡ್ ಪ್ರಸಾರವಾಗಲಿದೆ. ತನ್ನನ್ನು ಅವಮಾನ ಮಾಡಿದ ಅತ್ತೆ ಶಾಕುಂತಲಾಗೆ ಭರ್ಜರಿ ತಿರುಗೇಟು ಕೊಟ್ಟಿದ್ದಾಳೆ ಮಲ್ಲಿ. ಇನ್ನು ಮುಂದೆ ಶುರುವಾಗಲಿದೆ ಮಾರಿ ಹಬ್ಬ.

ಅಮೃತಧಾರೆ ಧಾರಾವಾಹಿಯಲ್ಲಿ ಇನ್ನು ಮುಂದೆ ಶಾಕುಂತಲಾಗೆ ಇಬ್ಬರು ಸೊಸೆಯರಿಂದ ಮಾರಿ ಹಬ್ಬವೇ ನಡೆಯಲಿದೆ. ಒಂದರ ಹಿಂದೆ ಮತ್ತೊಂದರಂತೆ ಪ್ರೊಮೋಗಳು ರಿಲೀಸ್ ಆಗಿದ್ದು, ಭೂಮಿಕಾ ಮತ್ತು ಮಲ್ಲಿ ಎದುರೇಟಿಗೆ ಶಾಕುಂತಲಾ ತತ್ತರಿಸಿ ಹೋಗಿದ್ದಾಳೆ. ಸದ್ಯದಲ್ಲೇ ಶಾಕುಂತಲಾ ಮುಖವಾಡ ಗೌತಮ್ ಎದುರು ಕಳಚಿಕೊಳ್ಳುವ ಎಲ್ಲಾ ಲಕ್ಷಣಗಳು ಸಿಗುತ್ತಿವೆ. ಅಷ್ಟಕ್ಕೂ ಈ ಹೊಸ ಪ್ರೊಮೋದಲ್ಲಿ ಆಗಿರೋದಾದರೂ ಏನು.
ಹಿಂದಿನ ಎಪಿಸೋಡ್ ನಲ್ಲಿ ಮಗ ಜೈದೇವ್ ಮತ್ತು ಹೊಸ ಸೊಸೆ ದಿಯಾಳನ್ನು ಮನೆಗೆ ಆಹ್ವಾನಿಸುವ ಭರದಲ್ಲಿ, ಅದನ್ನು ತಡೆಯಲು ಬಂದ ಮಲ್ಲಿಗೆ ನೀನು ಔಟ್ ಹೌಸಲ್ಲಿ ಇದ್ದೋರು, ಈ ಮನೆಯ ಕೆಲಸದವಳು, ನೀನು ಇಷ್ಟ ಇಲ್ಲ ಅಂತಾನೆ ಅವನು ಬೇರೆ ಮದುವೆಯಾಗಿ ನೆಮ್ಮದಿಯಾಗಿರೋದು ಎಂದು ಹೇಳಿದ್ದಳು. ಇದೀಗ ಮಲ್ಲಿ ಅದಕ್ಕೆ ತಿರುಗೇಟು ನೀಡಿದ್ದಾಳೆ.
ನಿನ್ನೆ ಏನು ಹೇಳಿದ್ರಿ ಅತ್ತೆ, ನಾನು ಈ ಮನೆ ಕೆಲಸದವಳು, ಔಟ್ ಹೌಸಲ್ಲಿ ಇದ್ದವಳು ಅಂತಾ ಅಲ್ವಾ? ನೀವೆಲ್ಲಿಂದ ಉಧ್ಬವ ಆದ್ರಿ ಅತ್ತೆ? ನೀವು ಎಲ್ಲಿದ್ರಿ? ನೀವು ಒಂದು ಕಾಲದಲ್ಲಿ ಹೇಗಿದ್ರಿ? ನಿಮ್ಮ ಸ್ಟೇಟಸ್ ಏನು ಅಂತ ಎಲ್ಲರಿಗೂ ಚೆನ್ನಾಗಿ ಗೊತ್ತಿದೆ ಅತ್ತೆ ಎನ್ನುತ್ತಾಳೆ. ಇದರಿಂದ ರೊಚ್ಚಿಗೆದ್ದ ಶಾಕುಂತಲಾ ಏನು ಬಾಯಿಗೆ ಬಂದ ಹಾಗೆ ಮಾತಾಡ್ತೀಯಾ ಅಂದ್ರೆ, ಮಲ್ಲಿ ಅದಕ್ಕೂ ಪ್ರತ್ಯುತ್ತರ ಕೊಟ್ಟು ಧ್ವನಿ ಏರಿಸಿ ಮಾತನಾಡೋದಕ್ಕೆ ನನಗೂ ಬರುತ್ತೆ ಎನ್ನುತ್ತಾಳೆ.
ನಿಮಗೆ ಮರ್ಯಾದೆ ಕೊಡ್ತಿದ್ದೀವಿ ಅಂತ ಅಂದ್ರೆ, ನೀವು ಮರ್ಯಾದೆ ಕಳಿಬೋದು ಅಂತ ಅಂದುಕೋಬೇಡಿ. ಇಲ್ಲಿ ಎಲ್ಲರ ಬಂಡವಾಳ ಎಲ್ಲರಿಗೂ ಗೊತ್ತಿದೆ. ಭಾವನ ಮುಖ ನೋಡಿ ಎಲ್ಲರೂ ಸುಮ್ಮನೆ ಇರ್ತಾರೆ. ಆದರೆ ನೀವು ಅದನ್ನೆ ಬಂಡವಾಳ ಮಾಡಿಕೊಂಡು ನಿಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದೀರಾ? ಅದನ್ನೇ ತಾನೇ ನೀವು ಇಷ್ಟು ದಿನ ಮಾಡಿಕೊಂಡು ಬಂದಿರೋದು ಎನ್ನುತ್ತಾಳೆ ಮಲ್ಲಿ.
ದಾರಿ ತಪ್ಪಿದ ಮಗನನ್ನು ಸರಿದಾರಿಗೆ ತರೋದು ಬಿಟ್ಟು ನೀನೇ, ಇಂದ್ರ ಚಂದ್ರ ಅಂತಿದ್ದೀರಲ್ಲ, ನಿಮಗೆ ಏನು ಹೇಳಬೇಕು ಅನ್ನೋದೆ ಗೊತ್ತಾಗ್ತಿಲ್ಲ. ಎಷ್ಟಾದ್ರೂ ನೀವೂ ಹೀಗೆ ಅಲ್ವಾ? ಕಂಡೋರು ಗಂಡಾನ ಬುಟ್ಟಿಗೆ ಹಾಕಿಕೊಂಡು ನೀವು ಇಲ್ಲಿ ಬಂದಿರೋದು. ನಿಮ್ಮ ಬುದ್ದಿನೆ ನಿಮ್ಮ ಮಗನಿಗೂ ಬಂದಿರೋದರಲ್ಲಿ ಏನೂ ಆಶ್ಚರ್ಯ ಇಲ್ಲ ಬಿಡಿ ಎಲ್ಲವೂ ರಕ್ತದಲ್ಲೇ ಬಂದಿದೆ ಎಂದು ಖಡಕ್ ಆಗಿ ಹೇಳುತ್ತಾಳೆ ಮಲ್ಲಿ.
ನಿಮ್ಮ ಗಂಡನಿಗೆ ಈಗಾಗಲೇ ಮದುವೆಯಾಗಿದೆ, ಅವರಿಗೆ ಮಕ್ಕಳು ಇದ್ದಾರೆ ಅನ್ನೋದು ಗೊತ್ತಾದ್ರೂನು ನೀವು ಅವರನ್ನ ಮದುವೆ ಆದ್ರಿ ಅಲ್ವಾ? ಆ ನಿಮ್ಮ ಸಂಸ್ಕಾರಾನೆ ನಿಮ್ಮ ಮಗನಿಗೂ ಬಂದಿರೋದು, ತಾಯಿಗೆ ತಕ್ಕ ಮಗ. ನಾಚಿಕೆ ಆಗ್ಬೇಕು ನಿಮಗೆ ಎಂದು ಹೇಳುತ್ತಾ ನಡೆದೇ ಬಿಡ್ತಾಳೆ ಮಲ್ಲಿ. ಮತ್ತೊಂದು ಕಡೆ ಭೂಮಿಯಿಂದಲೂ ಮಂಗಳಾರತಿ ಆಗುತ್ತೆ ಶಾಕುಂತಾಲಾಗೆ. ಇನ್ನು ಮುಂದೆ ಅಸಲಿ ಆಟ ಶುರುವಾಗಲಿದೆ.
ಸೀರಿಯಲ್ ಪ್ರೊಮೋ ನೋಡಿದ ವೀಕ್ಷಕರು ಸಿಕ್ಕಾಪಟ್ಟೆ ಖುಷಿಯಾಗಿದ್ದು, ಇನ್ಮೇಲೆ ಇಂದ ಶಕುಂತಲಾ ಆಟ ನಡಿಯಲ್ಲ ಇಬ್ರು ಸೊಸೆಯಂದ್ರು ರೊಚ್ಚಿಗೆದ್ದಾಯ್ತು , ಇದು ಇದು ಚೆನ್ನಾಗಿ ಇರೋದು ಡೈರೆಕ್ಟರ್ ಸರ್ ಬೆಂಕಿ ಬುಡಿ ನೀವು, ಮಲ್ಲಿ ಮಾತುಗಳು ಮೆಟ್ ನಲ್ಲಿ ಹೊಡೆದಂಗೆ ಇತ್ತು, ಮಲ್ಲಿ ಪವರ್,, ಮಲ್ಟಿ ಪವರ್... ಮಲ್ಲಿ ಮುಂದೆ ಸಿಲ್ಲಿ ಆಗಿ ಹೋದಳು ವಿಲ್ಲಿ ಶಕುಂತಲಾ. ಈ ವಾರದ ಕಿಚ್ಚನ ಚಪ್ಪಾಳೆ ನಮ್ಮ್ ಮಲ್ಲಿಗೆ. ಇದು ಉತ್ತರ ಅಂದ್ರೆ ಶಕುಂತಲಾ ದೇವಿಗೆ ಸೂಪರ್ ಮಲ್ಲಿ ಅಕ್ಕ ವಾಂಚ್ ಕೊಟ್ಟೆ ಎಂದಿದ್ದಾರೆ ಜನ.