- Home
- Entertainment
- TV Talk
- Amruthadhaare Serial Update: ಎಲ್ಲರಿಗೂ ಒಂದು ನ್ಯಾಯ, ಮಲ್ಲಿಗೆ ಮಾತ್ರ ಬೇರೆ ನ್ಯಾಯ? ಧರ್ಮಕ್ಕಾಗಿ ಬೇಡಿಕೆಯಿಟ್ಟ ವೀಕ್ಷಕರು!
Amruthadhaare Serial Update: ಎಲ್ಲರಿಗೂ ಒಂದು ನ್ಯಾಯ, ಮಲ್ಲಿಗೆ ಮಾತ್ರ ಬೇರೆ ನ್ಯಾಯ? ಧರ್ಮಕ್ಕಾಗಿ ಬೇಡಿಕೆಯಿಟ್ಟ ವೀಕ್ಷಕರು!
'ಅಮೃತಧಾರೆ' ಧಾರಾವಾಹಿಯಲ್ಲಿ ( Amruthadhaare Serial ) ಗೌತಮ್ ದಿವಾನ್ ತಂಗಿ ಸುಧಾ ಲೈಫ್ ಕೂಡ ಸರಿ ಹೋಯ್ತು. ಎಲ್ಲರೂ ಅವರವರ ಜೋಡಿಗಳ ಜೊತೆ ಚೆನ್ನಾಗಿದ್ದಾರೆ. ಆದರೆ ಮಲ್ಲಿ ಮಾತ್ರ ಕೋಟ್ಯಾಂತರ ರೂಪಾಯಿ ಹಣವಿದ್ದರೂ ಕೂಡ ಏಕಾಂಗಿ ಎನ್ನೋ ಥರ ಆಗಿದ್ದಾಳೆ.

ಶಕುಂತಲಾ ಫ್ರೆಂಡ್ಸ್ ಮನೆಗೆ ಬಂದು, ಮಲ್ಲಿಗೆ ಚುಚ್ಚು ಮಾತು ಆಡಿದ್ರು. ಭೂಮಿಕಾಗೆ ಮಗು ಆಯ್ತು, ಮಲ್ಲಿಗೆ ಮಗು ಆಗೋಕೆ ಗಂಡ ಇಲ್ಲ ಅಂತ ಹೀಯಾಳಿಸಿದ್ರು. ಇಂಥವರಿಗೆ ಭೂಮಿಕಾ ಸರಿಯಾಗಿ ಠಕ್ಕರ್ ಕೊಟ್ಟಳು. “ನಿಮಗೆ ಆದರೆ ಒಳ್ಳೆಯ ಮಾತನಾಡಿ, ಆಗಿಲ್ಲ ಅಂದರೆ ಸುಮ್ಮನಿರಿ. ಬೇರೆಯವರ ಲೈಫ್ ಬಗ್ಗೆ ಮಾತಾಡೋಕೆ ನಿಮಗೆ ಹಕ್ಕು ಕೊಟ್ಟೋರು ಯಾರು?” ಎಂದು ಭೂಮಿಕಾ ಸರಿಯಾಗಿ ಕ್ಲಾಸ್ ತಗೊಂಡಿದ್ದಾಳೆ.
ಮಲ್ಲಿಗೆ ಈಗ ತಂದೆ ರಾಜೇಂದ್ರ ಭೂಪತಿ ಆಸ್ತಿ ಸಿಕ್ಕಿದೆ. ಇಂಗ್ಲಿಷ್ ಕೂಡ ಕಲಿತಿರುವ ಅವಳು ಕೋಟ್ಯಾಂತರ ರೂಪಾಯಿ ಆಸ್ತಿಯ ಒಡತಿ. ಆದರೆ ಗಂಡ ಇಲ್ಲ, ಮಗು ಇಲ್ಲ. ಜಯದೇವ್ ಮಾಡಿದ ಮೋಸಕ್ಕೆ ಅವಳು ತನ್ನ ಮಗುವನ್ನು ಕೂಡ ಕಳೆದುಕೊಂಡಳು. ಈಗ ಜಯದೇವ್, ದಿಯಾಳನ್ನು ಮದುವೆ ಆಗಿದ್ದಾನೆ. ಹೀಗಾಗಿ ಅವಳು ಏನು ಮಾಡ್ತಾಳೆ ಎಂದು ಕಾದು ನೋಡಬೇಕಿದೆ.
ಮಲ್ಲಿ ಹೊಟ್ಟೆ ಉರಿಸೋದು ಅಂದ್ರೆ ಜಯದೇವ್ ಎರಡನೇ ಪತ್ನಿ ದಿಯಾಗೆ ತುಂಬ ಇಷ್ಟ. ಆದರೆ ಪ್ರತಿ ಸಲ ಮಲ್ಲಿ ವಿರುದ್ಧ ಏನಾದರೂ ಮಾಡಬೇಕು ಅಂತ ಹೊರಟಾಗೆಲ್ಲ ಅವಳಿಗೆ ಎಲ್ಲವೂ ಉಲ್ಟಾ ಬಂದಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಏನಾಗಲಿದೆ ಎಂದು ಕಾದು ನೋಡಬೇಕಿದೆ.
ಎಲ್ಲರ ಜೀವನವನೂ ಅವರ ಸಂಗಾತಿ ಜೊತೆ ಚೆನ್ನಾಗಿದ್ದಾಗ, ಮಲ್ಲಿ ಲೈಫ್ ಹೀಗಾಯ್ತು ಎಂದು ವೀಕ್ಷಕರಿಗೆ ಬೇಸರ ಆಗಿದೆ. ಮಲ್ಲಿಗೆ ನ್ಯಾಯ ಕೊಡಿಸಿ ಎಂದು ಅವರು ಬೇಡಿಕೆ ಇಡುತ್ತಿದ್ದಾರೆ. ಜಯದೇವ್ ಬುದ್ಧಿ ಸರಿಹೋಗೋದೂ ಇಲ್ಲ. ಹೀಗಾಗಿ ಅವನ ಬದಲು ಬೇರೆ ಹುಡುಗನ ಜೊತೆ ಮಲ್ಲಿಗೆ ಮದುವೆ ಮಾಡಿಸಬಹುದಲ್ವಾ ಎಂದು ಕೆಲವರು ಪ್ರಶ್ನೆ ಮಾಡುತ್ತಿದ್ದಾರೆ.
ಒಟ್ಟಿನಲ್ಲಿ ಈ ಧಾರಾವಾಹಿಯ ಎಪಿಸೋಡ್‌ಗಳು ಭಾರೀ ರೋಚಕತೆಯಿಂದ ಮೂಡಿ ಬರುತ್ತಿವೆ. ಗೌತಮ್ ದಿವಾನ್ ಪಾತ್ರದಲ್ಲಿ ರಾಜೇಶ್ ನಟರಂಗ, ಭೂಮಿ ಪಾತ್ರದಲ್ಲಿ ಛಾಯಾ ಸಿಂಗ್, ಶಕುಂತಲಾ ಪಾತ್ರದಲ್ಲಿ ವನಿತಾ ವಾಸು, ಮಲ್ಲಿ ಪಾತ್ರದಲ್ಲಿ ಅನ್ವಿತಾ ಸಾಗರ್ ಮುಂತಾದವರು ನಟಿಸುತ್ತಿದ್ದಾರೆ.