Zee Kannada Amruthadhaare Tv Serial: 'ಅಮೃತಧಾರೆ' ಧಾರಾವಾಹಿಯಲ್ಲಿ ಭೂಮಿಕಾ ಮಾನಸಿಕ ಆರೋಗ್ಯ ಹಾಳಾಗಿರೋ ವಿಷಯ ಈಗ ಕೇಡಿ ಶಕುಂತಲಾಗೆ ಗೊತ್ತಾಗಿದೆ. ಅವಳು ಈಗ ಸುಮ್ನೆ ಇರ್ತಾಳಾ? 

'ಅಮೃತಧಾರೆ' ಧಾರಾವಾಹಿಯಲ್ಲಿ ( Amruthadhaare Serial ) ತನಗೊಬ್ಬಳು ಮಗಳಿದ್ದಳು, ಆ ಮಗಳು ಕಿಡ್ನ್ಯಾಪ್‌ ಆಗಿದ್ದಾಳೆ ಎನ್ನೋ ವಿಷಯ ಭೂಮಿಕಾಗೆ ಗೊತ್ತಾದರೆ ಅವಳ ಪ್ರಾಣಕ್ಕೆ ಅಪಾಯ ಆಗೋದಂತೂ ಪಕ್ಕಾ ಎನ್ನೋದು ಗೌತಮ್‌ಗೆ ಗೊತ್ತಾಗಿದೆ. ಈಗ ಇದನ್ನೇ ಶಕುಂತಲಾ ಬಂಡವಾಳ ಮಾಡಿಕೊಳ್ಳೋ ಚಾನ್ಸ್‌ ಇದೆ.

ಭೂಮಿಕಾ ಮಗಳು ಕಾಣಿಸಲೇ ಇಲ್ಲ!

ಹೌದು, ಆಸ್ಪತ್ರೆಯಲ್ಲಿ ಭೂಮಿಕಾ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಳು. ಮೊದಲು ಮಗಳು ಹುಟ್ಟಿದ್ದಳು. ಆಗ ತಾನೇ ಜನ್ಮ ಕೊಟ್ಟ ಮಗಳನ್ನು ಕ್ಲೀನ್‌ ಮಾಡೋಕೆ ನರ್ಸ್‌ ಎತ್ತಿಕೊಂಡು ಹೋದಾಗ ಜಯದೇವ್‌ ಬಂದು, ಚಾಕು ತೋರಿಸಿ ಆ ಪುಟ್ಟ ಕಂದನನ್ನು ಎತ್ತಿಕೊಂಡು ಹೋದನು. ಅಷ್ಟೇ ಅಲ್ಲದೆ ಕಾಡಿನಲ್ಲಿ ಎಸೆದು ಬಿಟ್ಟನು. ಆಗ ರಾತ್ರಿ, ಅದು ಕಾಡು, ಎಲ್ಲಿಯೂ ಏನೂ ಕಾಣಿಸುತ್ತಿರಲಿಲ್ಲ. ಗೌತಮ್‌, ಆನಂದ್‌ ಎಷ್ಟೇ ಹುಡುಕಿದರೂ ಮಗು ಕಾಣಲಿಲ್ಲ. ಭೂಮಿಕಾ ಆರೋಗ್ಯ ತಿಳಿಯಲು ಅವರು ಆಸ್ಪತ್ರೆಗೆ ಬಂದರು.

ಶಾಕಿಂಗ್‌ ವಿಷಯ ಗೊತ್ತಾದರೆ ಭೂಮಿ ಪ್ರಾಣಕ್ಕೆ ಅಪಾಯ!

ಆಗ ಇನ್ನೊಂದು ಮಗು ಭೂಮಿಕಾ ಹೊಟ್ಟೆಯಲ್ಲಿದೆ ಎನ್ನೋದು ಗೊತ್ತಾಯ್ತು. ಭೂಮಿ ಗಂಡು ಮಗುವಿಗೆ ಜನ್ಮ ನೀಡಿದಳು. ಮಗಳನ್ನು ಹುಡುಕಿದ ಬಳಿಕವೇ ಈ ವಿಷಯವನ್ನು ಮನೆಯಲ್ಲಿ ತಿಳಿಸೋಣ ಅಂತ ಗೌತಮ್‌ ಸುಮ್ಮನಿದ್ದಾನೆ. ಈಗ ಭೂಮಿಕಾ ಮಾನಸಿಕ ಆರೋಗ್ಯ ಕೂಡ ಚೆನ್ನಾಗಿಲ್ಲ, ಶಾಕಿಂಗ್‌ ವಿಷಯ ಗೊತ್ತಾದರೆ ಅವಳ ಪ್ರಾಣಕ್ಕೆ ಅಪಾಯ ಆಗುವುದು ಅಂತ ಡಾಕ್ಟರ್‌ ಕೂಡ ಹೇಳಿದ್ದಾರೆ. ಹೀಗಾಗಿ ಗೌತಮ್‌ ಸುಮ್ಮನಿದ್ದಾನೆ.

ಭೂಮಿಯನ್ನು ಸಾಯಿಸ್ತಾಳಾ ಶಕುಂತಲಾ?

ಆಸ್ಪತ್ರೆಯಲ್ಲಿ ಶಕುಂತಲಾ ಕೂಡ ಇದ್ದಳು. ಅವಳಿ ಮಕ್ಕಳ ವಿಷಯ ಅವಳಿಗೂ ಗೊತ್ತಿದೆ. ಮಗಳ ಕಿಡ್ನ್ಯಾಪ್‌ ವಿಷಯ ಗೊತ್ತಾದರೆ, ಭೂಮಿಕಾಗೆ ಪ್ರಾಣಾಪಾಯ ಆಗಬಹುದು ಅಂತ ಶಕುಂತಲಾಗೆ ಅರ್ಥ ಆಗಿದೆ. ಇದನ್ನೇ ಇಟ್ಕೊಂಡು ಅವಳು ಭೂಮಿಯನ್ನು ಸಾಯಿಸಿದರೂ ಆಶ್ಚರ್ಯ ಇಲ್ಲ.

ಶಕುಂತಲಾ ಈ ಚಾನ್ಸ್‌ ಮಿಸ್‌ ಮಾಡಿಕೊಳ್ಳಲ್ಲ!

ಭೂಮಿಯನ್ನು ಸಾಯಿಸಬೇಕು, ಭೂಮಿಕಾ ಮಗುವನ್ನು ಸಾಯಿಸಬೇಕು ಅಂತ ಕೇಡಿ ಅಮ್ಮ-ಮಗ ( ಶಕುಂತಲಾ, ಜಯದೇವ್‌ ) ತುಂಬ ಪ್ರಯತ್ನಪಟ್ಟರು. ಆದರೆ ಪದೇ ಪದೇ ಭೂಮಿ ಬಚಾವ್‌ ಆಗುತ್ತ ಬಂದಳು. ಈಗ ಕೇವಲ ಮಾತಿನಲ್ಲೇ ಭೂಮಿಯನ್ನು ಕೊಲ್ಲಬಹುದು ಎನ್ನೋದು ಶಕುಂತಲಾಗೆ ಅರ್ಥ ಆಗಿದೆ. ಈ ಅವಕಾಶವನ್ನು ಅವಳು ಮಿಸ್‌ ಮಾಡಿಕೊಳ್ಳೋದಿಲ್ಲ.

ಸತ್ಯ ಗೊತ್ತಾದರೆ ಏನಾಗಬಹುದು?

ಮಗಳು ಕಿಡ್ನ್ಯಾಪ್‌ ಆಗಿರೋ ವಿಷಯ ಗೊತ್ತಾದರೆ ಭೂಮಿಗೆ ಅಪಾಯ ಆಗೋದು ಪಕ್ಕಾ. ಇದರ ಜೊತೆಗೆ ವಿಷಯ ಮುಚ್ಚಿಟ್ಟರು ಅಂತ ಅವಳು ಗೌತಮ್‌ನಿಂದ ದೂರ ಆದರೂ ಕೂಡ ಆಶ್ಚರ್ಯವಿಲ್ಲ. ಒಟ್ಟಿನಲ್ಲಿ ಮುಂಬರುವ ಎಪಿಸೋಡ್‌ಗಳು ಭಾರೀ ರೋಚಕತೆಯಿಂದ ಕೂಡಿವೆ.

ಧಾರಾವಾಹಿ ಕಥೆ ಏನು?

ಗೌತಮ್‌ ದಿವಾನ್‌ಗೆ ಶಕುಂತಲಾ ಎಂಬ ಮಲತಾಯಿಯಿದ್ದಾಳೆ. ಶಕುಂತಲಾ ಹಾಗೂ ಅವಳ ಮಗ ಜಯದೇವ್‌ಗೆ ಗೌತಮ್‌ ಆಸ್ತಿ ಬೇಕಿದೆ. ಹೀಗಾಗಿ ಅವರು ಯಾವ ಮಟ್ಟಕ್ಕೆ ಬೇಕಿದ್ರೂ ಇಳಿಯುತ್ತಾರೆ. ವಿಧಿಯ ಆಸೆಯಂತೆ ಗೌತಮ್‌ ಹಾಗೂ ಭೂಮಿಕಾ ಮದುವೆಯಾಗಿದ್ದಾರೆ. ಇವರಿಗೆ ಅವಳಿ ಮಕ್ಕಳಾಗಿದ್ದು, ಓರ್ವ ಮಗಳು ಕಿಡ್ನ್ಯಾಪ್‌ ಆಗಿದ್ದಾಳೆ. ಭೂಮಿಕಾಗೆ ಈ ವಿಷಯ ಗೊತ್ತಾದರೆ ಏನಾಗುವುದೋ ಏನೋ. ಅಂದಹಾಗೆ ಶಕುಂತಲಾಳ ಕುತಂತ್ರದ ಬಗ್ಗೆ ದಿವಾನ್‌ ಕುಟುಂಬಕ್ಕೆ ಗೊತ್ತೇ ಇಲ್ಲ. ಅದು ರಿವೀಲ್‌ ಆಗಬೇಕಿದೆ.

ಪಾತ್ರಧಾರಿಗಳು

ಗೌತಮ್‌ ದಿವಾನ್‌ ಪಾತ್ರಕ್ಕೆ ರಾಜೇಶ್‌ ನಟರಂಗ, ಭೂಮಿಕಾ ಪಾತ್ರಕ್ಕೆ ಛಾಯಾ ಸಿಂಗ್‌, ಜಯದೇವ್‌ ಪಾತ್ರಕ್ಕೆ ರಾಣವ್‌, ಶಕುಂತಲಾ ಪಾತ್ರಕ್ಕೆ ವನಿತಾ ವಾಸು ಅವರು ನಟಿಸುತ್ತಿದ್ದಾರೆ.